310 ಅರಣ್ಯ ವೀಕ್ಷಕರ ನೇಮಕ: ಅರ್ಜಿ ಸಲ್ಲಿಸಲು ಕೊನೆ 3 ದಿನ ಬಾಕಿ

 ಕರ್ನಾಟಕ ಅರಣ್ಯ ಇಲಾಖೆಯ 310 ವೀಕ್ಷಕರ ಭರ್ತಿಗೆ ಸಂಬಂಧಿಸಿದಂತೆ, ಆನ್‌ಲೈನ್‌ ಅರ್ಜಿಗೆ ಕೊನೆ 3 ದಿನಗಳಷ್ಟೇ ಬಾಕಿ ಇವೆ. ಆಸಕ್ತರು ಕೊನೆ ಕ್ಷಣದವರೆಗೆ ಕಾಯದೇ ಬೇಗ ಬೇಗ ಅರ್ಜಿ ಸಲ್ಲಿಸಿ. ಅರ್ಜಿ ವಿಧಾನ, ಇತರೆ ಮಾಹಿತಿ ಇಲ್ಲಿದೆ



ಕರ್ನಾಟಕ ಅರಣ್ಯ ಇಲಾಖೆಯು ಸೆಪ್ಟೆಂಬರ್ ತಿಂಗಳಲ್ಲಿ ಅಧಿಸೂಚಿಸಿ, ರಾಜ್ಯದ ಒಟ್ಟು 13 ಅರಣ್ಯ ವೃತ್ತಗಳಲ್ಲಿ 310 ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿತ್ತು. ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆ ಮೂರು ದಿನಗಳಷ್ಟೇ ಬಾಕಿ ಇವೆ. ಅಧಿಸೂಚನೆ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ 26 ಕೊನೆ ದಿನವಾಗಿದೆ. ಆಸಕ್ತರು ಕೊನೆ ಕ್ಷಣದವರೆಗೆ ಕಾಯದೇ ಬೇಗ ಬೇಗ ಅರ್ಜಿ ಸಲ್ಲಿಸಿ. ಇನ್ನು ಯಾವ ವೃತ್ತದಲ್ಲಿ ಎಷ್ಟು ಹುದ್ದೆಗಳಿವೆ ಎಂದು ತಿಳಿದಿಲ್ಲ ಎಂದಲ್ಲಿ ಕೆಳಗಿನಂತೆ ಓದಿಕೊಳ್ಳಿ. ಅರ್ಜಿ ವಿಧಾನವನ್ನು ಸಹ ಇಲ್ಲಿ ನೀಡಲಾಗಿದೆ.

ಕರ್ನಾಟಕ ಅರಣ್ಯ ಇಲಾಖೆಯು 13 ಅರಣ್ಯ ವೃತ್ತಗಳಲ್ಲಿ ಒಟ್ಟು 310 ಫಾರೆಸ್ಟ್‌ ವಾಚರ್ / ಅರಣ್ಯ ವೀಕ್ಷಕ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಇದೀಗ ಆನ್‌fಲೈನ್‌ ಅರ್ಜಿಗೆ ಲಿಂಕ್‌ ಬಿಡುಗಡೆ ಮಾಡಿದೆ. ಆಸಕ್ತರು ಇಂದಿನಿಂದ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 26-10-2023. ಅರ್ಜಿ ಶುಲ್ಕ ಪಾವತಿಗೆ ಕೊನೆ ದಿನಾಂಕ 31-10-2023. ಆನ್‌ಲೈನ್‌ ಅರ್ಜಿ ಸಲ್ಲಿಸುವ ವಿಧಾನ ಹಾಗೂ ಅರ್ಜಿಗೆ ಡೈರೆಕ್ಟ್‌ ಲಿಂಕ್‌ ಅನ್ನು ಕೆಳಗಿನಂತೆ ನೀಡಲಾಗಿದೆ.

ಅರಣ್ಯ ವೃತ್ತವಾರು ಹುದ್ದೆಗಳ ವಿವರ

ಚಾಮರಾಜನಗರ ವೃತ್ತ: 32

ಶಿವಮೊಗ್ಗ ವೃತ್ತ: 30

ಬೆಂಗಳೂರು ವೃತ್ತ : 33

ಚಿಕ್ಕಮಗಳೂರು ವೃತ್ತ: 25

ಕೆನರಾ ವೃತ್ತ: 32

ಮೈಸೂರು ವೃತ್ತ: 32

ಬೆಳಗಾವಿ ವೃತ್ತ : 20

ಬಳ್ಳಾರಿ ವೃತ್ತ: 20

ಕಲಬುರ್ಗಿ ವೃತ್ತ: 23

ಮಂಗಳೂರು ವೃತ್ತ: 20

ಧಾರವಾಡ ವೃತ್ತ: 7

ಹಾಸನ ವೃತ್ತ: 20

ಕೊಡಗು ವೃತ್ತ: 16

ಆನ್‌ಲೈನ್‌ ಅರ್ಜಿ ಸಲ್ಲಿಸುವುದು ಹೇಗೆ?

- ವೆಬ್‌ಸೈಟ್‌ ವಿಳಾಸ https://kfdrecruitment.in/ ಗೆ ಭೇಟಿ ನೀಡಿ.

- ತೆರೆದ ಮುಖಪುಟದಲ್ಲಿ ಅರಣ್ಯ ವೀಕ್ಷಕ ಹುದ್ದೆಗಳ ಅರ್ಜಿಗೆ ಆನ್‌ಲೈನ್‌ ಲಿಂಕ್‌ ಇರುತ್ತದೆ.

- '2023 ನೇ ಸಾಲಿನ ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಅರಣ್ಯ ವೀಕ್ಷಕರ ನೇಮಕಾತಿಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ' ಎಂದಿರುತ್ತದೆ. ಈ ಲಿಂಕ್ ಕ್ಲಿಕ್ ಮಾಡಿ.

- ಅರಣ್ಯ ಇಲಾಖೆ ವೆಬ್‌ಸೈಟ್‌ನ ಮತ್ತೊಂದು ವೆಬ್‌ಪೇಜ್‌ ತೆರೆಯುತ್ತದೆ.

- ಈ ವೆಬ್‌ಪೇಜ್‌ನಲ್ಲಿ ಅರ್ಜಿ ನಮೂನೆ ಇದ್ದು, ಕೇಳಲಾದ ಮಾಹಿತಿಗಳನ್ನು ನೀಡಿ.

- ಮೊದಲಿಗೆ ಅರ್ಜಿ ಯಾವ ಅರಣ್ಯ ವೃತ್ತಕ್ಕೆ ಎಂದು ಆಯ್ಕೆ ಮಾಡಿಕೊಳ್ಳಿ.

- ಅಭ್ಯರ್ಥಿ ಹೆಸರು, ತಂದೆ/ತಾಯಿ ಹೆಸರು, ಆಧಾರ್, ಇ-ಮೇಲ್, ಮೊಬೈಲ್‌ ಸಂಖ್ಯೆ ಕೇಳಲಾಗುತ್ತದೆ. ಸರಿಯಾಗಿ ನೀಡಿರಿ.

- 'Submit' ಎಂದಿರುವಲ್ಲಿ ಕ್ಲಿಕ್ ಮಾಡಿ.

- ನಂತರ ರಿಜಿಸ್ಟ್ರೇಷನ್‌ ಐಡಿ ಮತ್ತು ಪಾಸ್‌ವರ್ಡ್‌ ಕ್ರಿಯೇಟ್‌ ಆಗುತ್ತದೆ

- ಈ ಡೀಟೇಲ್ಸ್‌ನೊಂದಿಗೆ ಮತ್ತೆ ಅರಣ್ಯ ಇಲಾಖೆ ವೆಬ್‌ಸೈಟ್‌ನಲ್ಲಿ ಲಾಗಿನ್‌ ಆಗಿ. ನಂತರ ಕೇಳಲಾದ ಇತರೆ ಮಾಹಿತಿಗಳನ್ನು ನೀಡಿ ಆನ್‌ಲೈನ್‌ ಅಪ್ಲಿಕೇಶನ್‌ ಪೂರ್ಣಗೊಳಿಸಿ.

- ಅರ್ಜಿ ಶುಲ್ಕ ಪಾವತಿಗೆ ಚಲನ್ ಜೆನೆರೇಟ್‌ ಮಾಡಿಕೊಂಡು, ಪಾವತಿಸಿ

ಅಪ್ಲಿಕೇಶನ್‌ ಶುಲ್ಕ ರೂ.200.

ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ / ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ.100.

ಶೈಕ್ಷಣಿಕ ಅರ್ಹತೆ :

ಎಸ್ಎಸ್‌ಎಲ್‌ಸಿ ಅಥವಾ ತತ್ಸಮಾನ ಪರೀಕ್ಷೆ ಉತ್ತೀರ್ಣ.

ಅರಣ್ಯ ವೀಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಪೂರೈಸಿರಬೇಕು. ಸಾಮಾನ್ಯ ಅಭ್ಯರ್ಥಿಗಳಿಗೆ 30 ವರ್ಷ, ಇತರೆ ಹಿಂದುಳಿದ ವರ್ಗದವರಿಗೆ 32 ವರ್ಷ, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ / ಪ್ರವರ್ಗ-1 ಅಭ್ಯರ್ಥಿಗಳಿಗೆ 33 ವರ್ಷ ಗರಿಷ್ಠ ವಯಸ್ಸು ಮೀರಿರಬಾರದು.

ಕರ್ನಾಟಕ ಅರಣ್ಯ ವೀಕ್ಷಕರ ಹುದ್ದೆಗಳಿಗೆ ಆಯ್ಕೆ ಆದವರಿಗೆ ವೃತ್ತಿ ಬುನಾದಿ ತರಬೇತಿ ಅವಧಿ 6 ತಿಂಗಳು ಇರುತ್ತದೆ. ಹಾಗೂ ಪರೀಕ್ಷಾರ್ಥ ಅವಧಿ (ತರಬೇತಿ ಅವಧಿ ಸೇರಿ) - 36 ತಿಂಗಳು ಇರುತ್ತದೆ. ಅರಣ್ಯ ವೀಕ್ಷಕರ ಹುದ್ದೆಗೆ ವೇತನ ಶ್ರೇಣಿ ರೂ.18600-32600 ಇರುತ್ತದೆ.

ಉದ್ಯೋಗ ವಿವರ

INR 18600 to 32600 /Month

ಹುದ್ದೆಯ ಹೆಸರು                ಅರಣ್ಯ ವೀಕ್ಷಕರ ನೇಮಕ

ವಿವರ                               ಕರ್ನಾಟಕ ಅರಣ್ಯ ಇಲಾಖೆ                                              ಅಧಿಸೂಚನೆ

ಪ್ರಕಟಣೆ ದಿನಾಂಕ               2023-09-27

ಕೊನೆ ದಿನಾಂಕ                    2023-10-26

ಉದ್ಯೋಗ ವಿಧ                  ಪೂರ್ಣಾವಧಿ

ಉದ್ಯೋಗ ಕ್ಷೇತ್ರ                 ಸರ್ಕಾರಿ ಉದ್ಯೋಗ

ಕೌಶಲ ಮತ್ತು ಶೈಕ್ಷಣಿಕ ಅರ್ಹತೆ

ಕೌಶಲ                      --

ವಿದ್ಯಾರ್ಹತೆ              ಎಸ್‌ಎಸ್‌ಎಲ್‌ಸಿ / ತತ್ಸಮಾನ                                          ಪರೀಕ್ಷೆ  ಪಾಸ್.

ಕಾರ್ಯಾನುಭವ        0 Years

ನೇಮಕಾತಿ ಸಂಸ್ಥೆ

ಸಂಸ್ಥೆಯ ಹೆಸರು               ಕರ್ನಾಟಕ ಅರಣ್ಯ ಇಲಾಖೆ

ವೆಬ್‌ಸೈಟ್‌ ವಿಳಾಸ https://www.recruitapp.in/fw2023/instruction

ಉದ್ಯೋಗ ಸ್ಥಳ

ವಿಳಾಸ                     ಕರ್ನಾಟಕದ ಅರಣ್ಯ ವೃತ್ತಗಳು

ಸ್ಥಳ                         13 ಅರಣ್ಯ ವೃತ್ತಗಳು

ಪ್ರದೇಶ                     ಕರ್ನಾಟಕ

ಅಂಚೆ ಸಂಖ್ಯೆ            560001

ದೇಶ                        IND


Previous Post Next Post