1 ರಿಂದ 10ನೇ ಕ್ಲಾಸ್‌ ವಿದ್ಯಾರ್ಥಿಗಳಿಗೆ Rs.2000 ವರೆಗೆ ಶಿಕ್ಷಣಕ್ಕಾಗಿ ಆರ್ಥಿಕ ಅನುದಾನ: ಅರ್ಜಿ ಆಹ್ವಾನ

ಕೇಂದ್ರ ಸರ್ಕಾರದ ಲೇಬರ್ ಮತ್ತು ಎಂಪ್ಲಾಯ್ಮೆಂಟ್ ಮಿನಿಸ್ಟ್ರಿ ಅಡಿಯಲ್ಲಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ಆರ್ಥಿಕ ಅನುದಾನ ನೀಡಲು, ಇದೀಗ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ. ವಿವರಗಳು ಇಲ್ಲಿವೆ ನೋಡಿ



ಬೀಡಿ, ಸುಣ್ಣಕಲ್ಲು ಮತ್ತು ಡಾಲೊಮೈಟ್ ಕಬ್ಬಿಣದ ಗಣಿಗಳು, ಕ್ರೋಮ್, ಮ್ಯಾಂಗನೀಸ್ ಅದಿರಿನ ಗಣಿಗಳು ಮತ್ತು ಚಲನಚಿತ್ರ ಕ್ಷೇತ್ರ ಇವುಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಮಕ್ಕಳಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಣಕ್ಕಾಗಿ ಆರ್ಥಿಕ ಅನುದಾನ ನೀಡಲಾಗುತ್ತಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಿದೆ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಬೆಂಗಳೂರು ಕಚೇರಿ.
ಮೆಟ್ರಿಕ್‌ ಪೂರ್ವ ವಿಭಾಗದಲ್ಲಿ- 1 ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳು 1000 ದಿಂದ 2000 ವರೆಗೆ ಆರ್ಥಿಕ ನೆರವು ಪಡೆಯಬಹುದು. ಅರ್ಹರು ನಿಗಧಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಿ.

ಆರ್ಥಿಕ ನೆರವಿನ ವಿವರಗಳು

1 ರಿಂದ 4 ನೇ ಕ್ಲಾಸ್ ವರೆಗೆ : ರೂ.1000
5 ರಿಂದ 8 ನೇ ಕ್ಲಾಸ್ ವರೆಗೆ : ರೂ.1500.
9 ರಿಂದ 10 ನೇ ಕ್ಲಾಸ್ ವರೆಗೆ : ರೂ.2000.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ :

 30-11-2023

ಅರ್ಜಿ ಸಲ್ಲಿಸುವ ವಿಧಾನ

ನ್ಯಾಷನಲ್ ಸ್ಕಾಲರ್‌ಶಿಪ್‌ ಪೋರ್ಟಲ್‌ನಲ್ಲಿ ಆನ್‌ಲೈನ್‌ ವಿಧಾನದ ಮೂಲಕ ಮಾತ್ರವೇ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌ ವಿಳಾಸ https://scholarships.gov.in ಗೆ ಭೇಟಿ ನೀಡಿ.

ವಿದ್ಯಾರ್ಥಿಗಳು ಆಧಾರ್‌ ದೃಢೀಕೃತ ಡೈರೆಕ್ಟ್‌ ಬೆನಿಫಿಟ್‌ ಟ್ರಾನ್ಸ್‌ಫರ್ ಸ್ಕೀಮ್ ಅಥವಾ ನ್ಯಾಷನಲ್ ಸ್ಕಾಲರ್‌ಶಿಪ್‌ ಪೋರ್ಟಲ್‌ನಲ್ಲಿ ಆನ್‌ಲೈನ್‌ ಪ್ರಕ್ರಿಯೆಯ ಎನ್‌ಇಎಫ್‌ಟಿ ಮೂಲಕ ಡಿಬಿಟಿಯಲ್ಲಿ ಬೀಡಿ / ಐಓಎಂಸಿ / ಎಲ್‌ಎಸ್‌ಡಿ / ಸಿನಿ ಕಾರ್ಮಿಕರ ಮಕ್ಕಳು ಸ್ಕಾಲರ್‌ಶಿಪ್‌ ಅನ್ನು ಪಡೆದುಕೊಳ್ಳಬಹುದು.

ಅರ್ಜಿ ಸಲ್ಲಿಸುವ ವಿಧಾನ

- ನ್ಯಾಷನಲ್ ಸ್ಕಾಲರ್‌ಶಿಪ್‌ ಸ್ಕೀಮ್‌ ವೆಬ್‌ಸೈಟ್‌ https://scholarships.gov.in/ ಗೆ ಭೇಟಿ ನೀಡಿ
ಓಪನ್ ಆಗುವ ವೆಬ್‌ಪೇಜ್‌ನಲ್ಲಿ 'Central Schemes >> Ministry of Labour and Employment' ಆಯ್ಕೆಗಳನ್ನು ಕ್ಲಿಕ್ ಮಾಡಿ.
- ನಂತರ ಈ ವಿಭಾಗದಡಿಯಲ್ಲಿ ಪ್ರೀ ಮೆಟ್ರಿಕ್‌ ಸ್ಕಾಲರ್‌ಶಿಪ್‌ ಗೆ ಅರ್ಜಿ ಲಿಂಕ್‌ ನೀಡಲಾಗುತ್ತದೆ.
- ಅರ್ಜಿ ಲಿಂಕ್ ಕ್ಲಿಕ್ ಮಾಡಿ, ಕೇಳಲಾದ ಮಾಹಿತಿಗಳನ್ನು ನೀಡಿ, ಅರ್ಜಿ ಸಲ್ಲಿಸಬಹುದು.

ಸೂಚನೆಗಳು

ಅರ್ಜಿ ಸಲ್ಲಿಸುವ ಮತ್ತು ಪರಿಶೀಲನೆಯ ಕೊನೆಯ ದಿನಾಂಕವನ್ನು ಯಾವುದೇ ಕಾರಣಕ್ಕೂ ವಿಸ್ತರಿಸಲಾಗುವುದಿಲ್ಲ. ಆದ್ದರಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿಯನ್ನು ಸಲ್ಲಿಸಿದ ನಂತರ ಪರಿಶೀಲನೆಯ ಹಂತದ ಬಗ್ಗೆ ವಿದ್ಯಾರ್ಥಿಗಳು ಶಾಲೆಗಳಲ್ಲಿ ಮಾಹಿತಿ ಪಡೆಯಲು ಸೂಚಿಸಲಾಗಿದೆ. ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಸಹಾಯ ಮಾಡುವಂತೆ ಶಾಲೆಗಳು, ಆಡಳಿತ ಮಂಡಳಿಗೆ ಸೂಚನೆ ನೀಡಲಾಗಿದೆ.

ಎನ್‌ಎಸ್‌ಪಿ ಯಲ್ಲಿ ಅರ್ಜಿಗಳನ್ನು ಸಲ್ಲಿಸಲು ಮತ್ತು ಅರ್ಜಿಗಳ ಪರಿಶೀಲನೆಗೆ ಸಂಬಂಧಿಸಿದಂತೆ ತಾಂತ್ರಿಕ ಸ್ಪಷ್ಟೀಕರಣಕ್ಕಾಗಿ ಇ-ಮೇಲ್ ಐಡಿ helpdesk@nsp.gov.in ಗೆ ಸಂಪರ್ಕಿಸಿ ಅಥವಾ ಸಹಾಯವಾಣಿ ಸಂಖ್ಯೆ 0120-6619540 ಗೆ ಕರೆ ಮಾಡಬಹುದು.
ಇತರೆ ಹೆಚ್ಚಿನ ಮಾಹಿತಿಗಾಗಿ ಮೇಲ್ಕಂಡ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಅಥವಾ ಇ-ಮೇಲ್ wclwoblr-ka@nic.in ಗೆ ಸಂಪರ್ಕಿಸಬಹುದು.

Previous Post Next Post