ನಿಮ್ಮ ಸ್ಮಾರ್ಟ್‌ಫೋನ್ ಏಕಾಏಕಿ ದೊಡ್ಡ ಬೀಪ್ ಸೌಂಡ್ ಮಾಡುತ್ತಿದೆಯೇ, ಜೋರಾಗಿ ವೈಬ್ರೆಟ್ ಆಯ್ತಾ. ಏನಾಯ್ತಪ್ಪ ಈ ಮೊಬೈಲ್‌ಗೆ ಅಂತಾ ಗಾಬರಿಯಾಗಬೇಡಿ. ಯಾಕಂದ್ರೇ ಭಾರತ ಸರ್ಕಾರದ ದೂರ ಸಂಪರ್ಕ ಇಲಾಖೆ ಎಮರ್ಜೆನ್ಸಿ ಅಲರ್ಟ್ ವ್ಯವಸ್ಥೆಯ ಪರೀಕ್ಷಾರ್ಥ ಪ್ರಯೋಗ ನಡೆಸುತ್ತಿದ್ದು, ಗುರುವಾರ ಈ ಅಲರ್ಟ್ ಸೇವೆಯ ಪ್ರಯೋಗ ನಡೆಯುತ್ತಿದೆ.
ಹೌದು, ಭೂಕಂಪ, ಪ್ರವಾಹ ಸೇರಿ ಅನೇಕ ನೈಸರ್ಗಿಕ ವಿಕೋಪದಂತಹ ಸಂದರ್ಭದಲ್ಲಿ ಜನರಿಗೆ ತ್ವರಿತಗತಿಯಲ್ಲಿ ಎಚ್ಚರಿಕೆ ನೀಡುವ ಉದ್ದೇಶದಿಂಂದ ಎಮರ್ಜೆನ್ಸಿ ಅಲರ್ಟ್ ಸೇವೆಯನ್ನು ದೂರ ಸಂಪರ್ಕ ಇಲಾಖೆ ಪರಿಚಯಿಸುತ್ತಿದೆ. ಇದಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಕೈಜೋಡಿಸಿದೆ. ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಜನರಿಗೆ ಎಚ್ಚರಿಕೆ ಸಂದೇಶ ನೀಡಿ ಅವರನ್ನು ಸುರಕ್ಷಿತವಾಗಿರುವಂತೆ ಮಾಡುವ ಉದ್ದೇಶವನ್ನು ಈ ಸೇವೆ ಹೊಂದಿದೆ.
Emergency Alert Message With Sound And Vibration, See The Government Advisory
ಎಮರ್ಜೆನ್ಸಿ ಅಲರ್ಟ್ ಸೇವೆಯ ಪರೀಕ್ಷಾರ್ಥ ಪ್ರಯೋಗವೂ ಈಗಾಗಲೇ ಹಲವು ದೇಶಗಳಲ್ಲಿ ನಡೆದಿದ್ದು, ಕರ್ನಾಟಕದಲ್ಲಿ ಅಕ್ಟೋಬರ್ 12 (ಗುರುವಾರ) ಈ ಪ್ರಯೋಗ ನಡೆಯಲಿದೆ. ಭಾರೀ ಶಬ್ಧ ಮತ್ತು ವೈಬ್ರೆಟ್‌ನೊಂದಿಗೆ ಜನರು ಟೆಸ್ಟ್ ಎಮರ್ಜೆನ್ಸಿ ಅಲರ್ಟ್‌ಗಳನ್ನು ಸ್ಮಾರ್ಟ್‌ಫೋನ್‌ನಲ್ಲಿ ಬಂದಿದೆ. ಈ ಅಲರ್ಟ್ ಮೊದಲೇ ನಿಗದಿಪಡಿಸಿದ್ದು, ಯಾವುದೇ ತುರ್ತು ಪರಿಸ್ಥಿತಿ ಇರುವುದಿಲ್ಲ. ನಾಗರೀಕರು ಕೂಡ ಯಾವುದೇ ಆತಂಕಕ್ಕೊಳಗಾಗಬಾರದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಯಾಂಪಲ್ ಮೆಸೇಜ್ ಹೇಗಿರುತ್ತದೆ?
ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ ಸೆಲ್ ಬ್ರಾಡ್ಕ್ಯಾಸ್ಟಿಂಗ್ ಸಿಸ್ಟಂ ಮೂಲಕ ಕಳುಹಿಸಲಾದ ಸ್ಯಾಂಪಲ್ ಟೆಸ್ಟಿಂಗ್ ಮೆಸೇಜ್ ಇದು. ಈ ಸಂದೇಶಕ್ಕೆ ಸ್ಪಂದಿಸದೆ ನಿರ್ಲಕ್ಷಿಸಿ. ರಾಷ್ಟ್ರೀಯ ವಿಪತ್ತು ನಿರ್ವಹಣೆ ಪ್ರಾಧಿಕಾರ ಜಾರಿಗೆ ತರಲಾಗುತ್ತಿರುವ ಭಾರತದಾದ್ಯಂತದ ಎಮರ್ಜೆನ್ಸಿ ಅಲರ್ಟ್ ಸಿಸ್ಟಂ ಅನ್ನು ಪರೀಕ್ಷಿಸಲು ಈ ಸಂದೇಶ ಕಳುಹಿಸಲಾಗಿದೆ. ತುರ್ತು ಸಂದರ್ಭದಲ್ಲಿ ಸಕಾಲಕ್ಕೆ ಅಲರ್ಟ್ ನೀಡಲು ಮತ್ತು ಸಾರ್ವಜನಿಕ ಸುರಕ್ಷತೆ ಹೆಚ್ಚಿಸುವ ಉದ್ದೇಶದಿಂದ ಈ ವ್ಯವಸ್ಥೆ ರೂಪಿಸಲಾಗಿದೆ.
ಬೇರೆ ಬೇರೆ ದೇಶಗಳಲ್ಲಿ ಹಿಂದಿ ಮತ್ತು ಇಂಗ್ಲೀಷ್ನಲ್ಲಿ ಈ ಮೆಸೇಜ್ ಬಂದಿದೆ, ಇನ್ನೂ ಕರ್ನಾಟಕದಲ್ಲಿ ಇಂಗ್ಲೀಷ್ ಹಾಗೂ ಕನ್ನಡದಲ್ಲೂ ಈ ಸಂದೇಶ ಬಂದಿದೆ. ಹಲವು ಮಂದಿಗೆ ಈಗಾಗಲೇ ಈ ರೀತಿಯ ಅಲರ್ಟ್ ಮೆಸೇಜ್ಗಳು ಬಂದಿವೆ. ಕೆಲವರು ತುರ್ತು ಸ್ಥಿತಿ ಏನಿರಬಹುದು ಎಂದು ಗಾಬರಿಪಟ್ಟು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಉದಾಹರಣೆಗಳಿವೆ
ಭೂಕಂಪ, ಭೂಕುಸಿತ, ಪ್ರವಾಹ, ಸುನಾಮಿ, ಚಂಡಮಾರುತ ಇತ್ಯಾದಿ ವಿಪತ್ತುಗಳು ಎದುರಾದಾಗ ಅಥವಾ ಎದುರಾಗುವ ಸಂಭವನೀಯತೆ ಇದ್ದಾಗ ನಿರ್ದಿಷ್ಟ ಪ್ರದೇಶಗಳಲ್ಲಿರುವ ಎಲ್ಲಾ ಜನರ ಮೊಬೈಲ್ಗಳಿಗೆ ಈ ಅಲರ್ಟ್ ಮೆಸೇಜ್ಗಳನ್ನು ಕಳುಹಿಸುವುದು ಈ ಅತ್ಯಾಧುನಿಕ ಸಿಸ್ಟಂನ ಉದ್ದೇಶವಾಗಿದೆ.
