Drought Relief - 27 ಲಕ್ಷ ರೈತರಿಗೆ ಸದ್ಯದಲ್ಲೇ ಬರ ಪರಿಹಾರ ಹಣ ಕೊಡುವುದಾಗಿ ಸರ್ಕಾರ ಹೇಳಿಕೆ

Drought Relief :- ಬರಗಾಲ ಪರಿಹಾರ



ರಾಜ್ಯದಲ್ಲಿ ಈಗಾಗಲೇ ಬರ ಪರಿಹಾರ ನೀಡಲು ಸರ್ಕಾರದಿಂದ ಹಲವು ತಾಲೂಕುಗಳ ಹೆಸರನ್ನು ತಿಳಿಸಿದೆ ಸದ್ಯ 27 ಲಕ್ಷ ರೈತರಿಗೆ ಬರ ಪರಿಹಾರದ ಹಣ ಸಿಗಲಿದ್ದು ಪರಿಹಾರ ನೀಡಲು ಸರ್ಕಾರದಿಂದ ರೈತರ ಮಾಹಿತಿಗಳನ್ನು ಪಡೆಯಲಾಗುತ್ತಿದೆ. ಬರ ಪರಿಹಾರ ಕೃಷಿ ರೈತರಿಗೆ ಅತ್ಯಂತ ಮಹತ್ವದ್ದಾಗಿದೆ ಅದಕ್ಕಾಗಿ ಅವರು ಪ್ರತಿ ವರ್ಷ ಬೆಳೆಗಳನ್ನು ಕುಯ್ಯಲು ಮತ್ತು ಉತ್ತಮ ಫಲಿತಾಂಶಗಳನ್ನು ಪಡೆಯಲು ಕಾಯುತ್ತಾರೆ. ಆದರೆ ಕೆಲವೊಮ್ಮೆ ಪ್ರವಾಹ ಬರಗಾಳಿಗಳು ಮುಂತಾದ ನೈಸರ್ಗಿಕ ವಿಕೋಪಗಳು ಬೆಳೆಗಳ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ ಆ ಬೆಳೆಯಿಂದ ರೈತರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದಾಗ ಸರ್ಕಾರವು ರೈತರಿಗೆ ನೆರವನ್ನು ನೀಡಲು ಪ್ರಾರಂಭಿಸಿದೆ ನೀವು ಸಹ ಸರ್ಕಾರದಿಂದ ಉಚಿತ ನೆರವನ್ನು ಪಡೆಯಲು ಬಯಸಿದ್ದರೆ ಅಂದರೆ ಸರ್ಕಾರದ ಈ ಬೆಳೆ ಪರಿಹಾರದ ಹಣವನ್ನು ಪಡೆಯಲು ಬಯಸಿದ್ದರೆ ಲೇಖನವನ್ನು ಪೂರ್ತಿಯಾಗಿ ಓದಿ.

ರಾಜ್ಯದ 27 ಲಕ್ಷ ರೈತರಿಗೆ ಸಿಗಲಿದೆ ಎಕರೆಗೆ ರೂ.9,423 ರೂಪಾಯಿ ಬರ ಪರಿಹಾರ.?

ಕರ್ನಾಟಕ ರಾಜ್ಯ ಸರ್ಕಾರವು ಈ ವರ್ಷ ರಾಜ್ಯದಲ್ಲಿ ಮಳೆ ಇಲ್ಲದಿರುವ ಕಾರಣ ಹಲವು ಜಿಲ್ಲೆಗಳಿಗೆ ಬರ ಪರಿಹಾರ ನೀಡಲು ಆದರೆ ಬೆಳೆ ನಾಶದಿಂದಾಗಿ ರೈತರಿಗೆ ಉಂಟಾಗಿರುವ ನಷ್ಟವನ್ನು ನೀಡುವುದಾಗಿ ಸರ್ಕಾರ ಈಗಾಗಲೇ ಆದೇಶ ನೀಡಿದೆ ಈಗಾಗಲೇ ಕೆಲವು ತಾಲೂಕುಗಳ ಹೆಸರನ್ನು ಆದೇಶಿಸಿದ್ದು ಆ ತಾಲೂಕಿನಲ್ಲಿ ಬೆಳೆ ಹಾನಿ ಉಂಟಾಗಿರುವ ರೈತರಿಗೆ ಅವರ ಜಮೀನಿನ ಆಧಾರದ ಮೇಲೆ ಅವರಿಗೆ ಬರ ಪರಿಹಾರ ನೀಡುವುದಾಗಿ ತಿಳಿಸಿದೆ.

ಇನ್ನು ಡ್ಯಾಮ ಗಳಲ್ಲಿ ಇರುವ ನೀರು ಕೂಡ ಬತ್ತಿ ಹೋಗಿದ್ದು ಕಾವೇರಿ ನೀರು ಕೂಡ ತಮಿಳುನಾಡು ಪಾಲಾಗಿದ್ದು ರಾಜ್ಯದಲ್ಲಿ ಮಳೆ ಬರುವ ಸಮಯದಲ್ಲಿ ಮಳೆ ಬರದಿರುವುದರಿಂದ ರೈತರಿಗೆ ಮತ್ತಷ್ಟು ಕಷ್ಟಗಳನ್ನು ಹೆಚ್ಚಿಸಿದೆ ಇದರಿಂದ ಈ ಬಾರಿಯ ಬೆಲೆ ಕೂಡ ನಾಶ ಆಗಿದೆ ಹಾಗೂ ಮುಂದಿನ ಬೆಳೆಯಲು ನೀರು ಇಲ್ಲದಂತಾಗಿದೆ ಆದ್ದರಿಂದ ಸರ್ಕಾರ ರೈತರ ಬೆಳೆಹಾನಿಗೆ ನಷ್ಟ ಬರೆಸಿಕೊಡಲು ರೈತರ ಜಮೀನಿನ ಆಧಾರದ ಮೇಲೆ ಅಂದರೆ ಎಕ್ಕರೆಗೆ 9,423/- ರೂಪಾಯಿಗಳ ಬರ ಪರಿಹಾರ ನೀಡಲಿದೆ, ಈಗಾಗಲೇ ಸರ್ಕಾರ ಆದೇಶ ನೀಡಿರುವ ತಾಲೂಕುಗಳ ರೈತರ ಜಮೀನಿನ ವಿವರಗಳನ್ನು ಪಡೆದು ಸರ್ಕಾರ ಮುಂದಿನ ಕೆಲವೇ ದಿನಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲು ನಿರ್ಧರಿಸಿದೆ.

ಸರ್ಕಾರದ ಬೆಳೆ ಪರಿಹಾರದ ಹಣವನ್ನು ರೈತ ಪಡೆಯುವುದು ಹೇಗೆ.?

ಸರ್ಕಾರ ಈಗಾಗಲೇ ತಿಳಿಸಿರುವ ಹಾಗೆ ಪ್ರತಿಯೊಬ್ಬ ರೈತರು ಕೂಡ ಅವರ ಪಹಣಿ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯವಾಗಿ ಮಾಡಿಸಿರಬೇಕು ಎಂದು ತಿಳಿಸಲಾಗಿದೆ ಏಕೆಂದರೆ ಇಂತಹ ಸಮಯದಲ್ಲಿ ಅವರ ಆಧಾರ್ ಕಾರ್ಡ್ ಮೂಲಕ ಅವರ ಹೆಸರಿನಲ್ಲಿ ಎಷ್ಟು ಕೃಷಿ ಜಮೀನು ಹೊಂದಿದ್ದಾರೆ ಎಂಬ ಬಗ್ಗೆ ಮಾಹಿತಿ ಪಡೆದು ಆ ಕೃಷಿ ಜಮೀನಿಗೆ ಇಂತಹ ಬೆಳೆ ಪರಿಹಾರ ಅಥವಾ ಬರ ಪರಿಹಾರದ ಸಮಯದಲ್ಲಿ ಆಧಾರ್ ಕಾರ್ಡ್ ಮೂಲಕ ಡಿಬಿಟಿ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ನೇರವಾಗಿ ಹಣವನ್ನು ಜಮಾ ಮಾಡಲಾಗುತ್ತದೆ.

ಇನ್ನು ಈಗಾಗಲೇ ತಿಳಿಸಿರುವ ಹಾಗೆ ಆಧಾರ್ ಕಾರ್ಡ್ ನಲ್ಲಿ ಲಿಂಕ್ ಆಗಿರುವ ಜಮೀನಿನ ಪಹಣಿ ಆಧಾರದ ಮೇಲೆ ರೈತರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡದಿದ್ದು ಎಕರೆಗೆ 9,423/- ರೂಪಾಯಿಗಳನ್ನು ಜಮಾ ಮಾಡುವುದಾಗಿ ತಿಳಿಸಿದೆ ಇನ್ನು ಕೆಲವು ತಾಲೂಕುಗಳಿಗೆ ಈ ಹಣ ಬದಲಾವಣೆ ಆಗಲಿದೆ ಎಂದು ಕೂಡ ಸೂಚನೆಯನ್ನು ನೀಡಲಾಗಿದೆ ಏಕೆಂದರೆ ಕೆಲವು ತಾಲೂಕುಗಳಲ್ಲಿ ಕೆಲವು ರೀತಿಯ ಬೆಳೆಗಳನ್ನು ಬೆಳೆಯಲಾಗಿದೆ ಆ ಬೆಳೆಗಳಿಗೆ ಖರ್ಚು ಕೂಡ ಹೆಚ್ಚು ಕಡಿಮೆ ಇರುತ್ತದೆ ಆದ್ದರಿಂದ ಕೆಲವು ತಾಲೂಕುಗಳ ರೈತರಿಗೆ ಬೆಳೆ ಪರಿಹಾರದಲ್ಲಿ ವ್ಯತ್ಯಾಸ ಆಗಲಿದೆ ಎಂದು ತಿಳಿಸಲಾಗಿದೆ.

ಯಾವ ತಾಲೂಕು ರೈತರಿಗೆ ಎಷ್ಟು ಬೆಳೆ ಪರಿಹಾರ ಸಿಗಲಿದೆ??

ಈ ಬಗ್ಗೆ ಸರ್ಕಾರದಿಂದ ಕೇವಲ ಇಂತಹ ಕೆಲವು ತಾಲೂಕುಗಳಿಗೆ ಬೆಳೆ ಪರಿಹಾರ ನೀಡುವುದಾಗಿ ಸೂಚನೆ ನೀಡಿದ್ದು ಇದೀಗ ಎಕ್ಕರೆಗೆ ಹಿಂತಿಷ್ಟು ಬೆಳೆ ಪರಿಹಾರ ನೀಡುವುದಾಗಿ ಆದೇಶ ಹೊರಡಿಸಿದೆ ಆದರೆ ಇಂತಹದ್ದೇ ಬೆಳೆಗೆ ಇಂತಿಷ್ಟು ಬೆಳೆ ಪರಿಹಾರ ನೀಡಲಾಗುತ್ತದೆ ಎಂಬ ಬಗ್ಗೆ ಲಿಸ್ಟ್ ಬಿಡುಗಡೆ ಆಗಬೇಕಾಗಿದೆ ಸದ್ಯ ಇದೀಗ ಆಯಾ ತಾಲೂಕುಗಳ ಭೂಮಿ ಇಲಾಖೆಗಳಿಂದ ಮಾಹಿತಿಗಳನ್ನು ಪಡೆಯಲಾಗುತ್ತಿದ್ದು ಆ ಮಾಹಿತಿಗಳ ಪ್ರಕಾರ ರೈತರಿಗೆ ಹಣವನ್ನು ಜಮಾ ಮಾಡಲಾಗುತ್ತದೆ

ರೈತರು ಸರ್ಕಾರದ ಈ ಬೆಳೆ ಪರಿಹಾರ ಪಡೆಯಲು ಕಡ್ಡಾಯವಾಗಿ ಈ ಕೆಲಸ ಮಾಡಲೇಬೇಕು ಅದೇ ನಿಮ್ಮ ಕೃಷಿ ಭೂಮಿಯ ಪಹಣಿಗೆ ಕಡ್ಡಾಯವಾಗಿ ಆಧಾರ್ ಕಾರ್ಡ್ ಲಿಂಕ್ ಮಾಡಿಸಿರಬೇಕು ಏಕೆಂದರೆ ಈಗಾಗಲೇ ತಿಳಿಸಿದ ಹಾಗೆ ಈ ಬರ ಪರಿಹಾರವೂ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಲಿಂಕ್ ಆಗಿರುವ ಪಹಣಿ ಅಥವಾ ಕೃಷಿ ಜಮೀನಿಗೆ ಮಾತ್ರ ಪರಿಹಾರ ಸಿಗಲಿದೆ ಆದ್ದರಿಂದ ಒಂದು ವೇಳೆ ನಿಮ್ಮ ಜಮೀನಿನ ಪಹಣಿ ಆಧಾರ್ ಕಾರ್ಡಿಗೆ ಲಿಂಕ್ ಆಗಿಲ್ಲದಿದ್ದರೆ ಹತ್ತಿರದ ನಾಡಕಚೇರಿ ಅಥವಾ ತಾಲೂಕು ಕಚೇರಿಗೆ ಭೇಟಿ ನೀಡಿ ಲಿಂಕ್ ಮಾಡಿಸಿಕೊಳ್ಳಲು ಸೂಚಿಸಲಾಗಿದೆ ಧನ್ಯವಾದಗಳು..

ಮಧ್ಯಂತರ ಬೆಳೆ ವಿಮೆ ಬಿಡುಗಡೆ:-

ನಮಸ್ಕಾರ ಆತ್ಮೀಯ ರೈತ ಬಾಂಧವರೇ,ಈ ಜಿಲ್ಲೆಯ ರೈತರಿಗೆ ಶೇಕಡ 25 ರಷ್ಟು ಮಧ್ಯಂತರ ಬೆಳೆವಿಮೆ (bele vime)ಬಿಡುಗಡೆ ಮಾಡಲು ಸರ್ಕಾರವು ಇನ್ಸೂರೆನ್ಸ್ ಕಂಪನಿಗೆ ಆದೇಶಿಸಿದೆ. ಅನಾವೃಷ್ಟಿಯ ಕಾರಣದಿಂದಾಗಿ ಈ ಬಾರಿ ಕರ್ನಾಟಕ ರಾಜ್ಯದಲ್ಲಿ, ಬಹುತೇಕ ಬೆಳೆಗಳು ಹಾನಿಯಾಗಿದ್ದು ಮಳೆ ಇಲ್ಲದೆ ರೈತನ ಜೀವನ ಸಂಕಷ್ಟದಲ್ಲಿದೆ.

ಎರಡು ಮೂರು ಬಾರಿ ಬಿತ್ತನೆ ಮಾಡಿದರು, ಬೀಜ, ಗೊಬ್ಬರ,ಎಣ್ಣೆ ಹೀಗೆ ರೈತ ಹಣ ಖರ್ಚು ಮಾಡಿ ಎಂದು ಸರಿಯಾದ ಬೆಳೆ ಇಲ್ಲದೆ ಕಷ್ಟದಲ್ಲಿದ್ದಾನೆ, ಇದಕ್ಕಾಗಿ ಸ್ಪಂದಿಸಿರುವಂತಹ ಸರ್ಕಾರವು ಈಗಾಗಲೇ ರಾಜ್ಯದಲ್ಲಿ 195 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದು ಈ ತಾಲೂಕುಗಳಿಗೆ ಸದ್ಯದಲ್ಲಿಯೇ ಬೆಳೆ ಪರಿಹಾರವನ್ನು ನೀಡಲಾಗುವುದು.

ಇನ್ನೂ ಬೆಳೆ ವಿಮೆ ಮಾಡಿಸಿದಂತಹ ರೈತರಿಗೆ ಶೇಕಡ 25% ರಷ್ಟು ಮಧ್ಯಂತರ ಬೆಳೆ ವಿಮೆ ಬಿಡುಗಡೆಗೆ ಸರ್ಕಾರ ಆದೇಶಿಸಿದೆ. ಹಾವೇರಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಮಧ್ಯಂತರ ಬೆಳೆವಿಮೆ ಬಿಡುಗಡೆಗೆ ಆದೇಶಿಸಲಾಗಿದೆ ಎಂದು ಹಾನಗಲ್ ಶಾಸಕರಾದಂತಹ ಶ್ರೀನಿವಾಸ್ ಮಾನೆ ಅವರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಹಾಗೂ ಸರ್ಕಾರಿ ಯೋಜನೆಗಳಿಗೆ ಎಲ್ಲ ಮಾಹಿತಿಯನ್ನು ಪಡೆಯಲು ನಮ್ಮ ಜಾಲತಾಣದ ಸಂಪರ್ಕದಲ್ಲಿರಿ. ನಾವು ಯಾವುದೇ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ ನಾವು ಬರೆದಿರುವ ಲೇಖನವು ಅರ್ಥಪೂರ್ಣವಾಗಿದ್ದು ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. 

ಬರಗಾಲ ಪರಿಹಾರ :-

ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಬರಗಾಲ ಪರಿಹಾರ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ

Previous Post Next Post