Weedicide: ರೈತರಿಗೆ ಇತೀಚಿನ ದಿನಗಳಲ್ಲಿ ಕಳೆ ನಿಯಂತ್ರಣ ಮಾಡುವುದು ಬಹು ದೊಡ್ಡ ಸಮಸ್ಯೆಯಾಗಿದೆ. ಇದಕ್ಕಾಗಿ ರೈತರು ರಾಸಾಯನಿಕ ಕಳೆನಾಶಕಗಳ ಮೊರೆ ಹೋಗಿದ್ದಾರೆ. ಇದನ್ನು ಹೊರತುಪಡಿಸಿ ರೈತರೇ ಹೇಗೆ ತಮ್ಮ ಮನೆಯಲ್ಲಿ ಕಳೆನಾಶಕ ತಯಾರಿಸಿಕೊಳ್ಳಬವುದು ಎಂದು ಈ ಅಂಕಣದಲ್ಲಿ ವಿವರಿಸಲಾಗಿದೆ.
ಮನೆಯಲ್ಲೇ ತಯಾರಿಸಿ ಪರಿಸರ ಸ್ನೇಹಿ ಕಳೆನಾಶಕ. ಇದು ಮಣ್ಣಿನ ಫಲವತ್ತತೆ ಹಾಳು ಮಾಡಲ್ಲ, ರೈತರ ಜೇಬಿಗೆ ಕನ್ನವೂ ಹಾಕಲ್ಲ. ಈ ಕಳೆನಾಶಕದ ತಯಾರಿಯೂ ಬಲು ಸುಲಭ, ಇದರ ಕಾರ್ಯನಿರ್ವಹಣೆ ಮಾತ್ರ ಪರಿಣಾಮಕಾರಿ.
ನೈಸರ್ಗಿಕ ಕಳೆನಾಶಕಗಳನ್ನು ಬಳಸುವುದರಿಂದ ನಿಮ್ಮ ಬೆಳೆ ಹಾಗೂ ಭೂಮಿಗೆ ಯಾವುದೇ ತೊಂದರೆಯಾಗದೆ ಕಳೆಯನ್ನು ನಾಶಮಾಡಬಹುದು.
Home made weedicide: ಕಳೆನಾಶಕ ತಯಾರಿಸುವ ವಿಧಾನ:
2 ಕೆ.ಜಿಯಷ್ಟು ಎಕ್ಕದ ಗಿಡದ ಎಲೆಯನ್ನು ಚೆನ್ನಾಗಿ ರುಬ್ಬಿಕೊಂಡು, 10 ಲೀಟರ್ ಗೋಮೂತ್ರಕ್ಕೆ ಬೆರೆಸಬೇಕು. ನಂತರ ಅರ್ಧ ಕೆ.ಜಿ.ಯಷ್ಟು ಸುಣ್ಣದ ನೀರು( ಕಲ್ಲು ಸುಣ್ಣ) ಮಿಕ್ಸ್ ಮಾಡಬೇಕು, 2 ಕೆ.ಜಿ.ಯಷ್ಟು ಹರಳು ಉಪ್ಪನ್ನು ಬೆರೆಸಬೇಕು. 20 ಲೀಟರ್ ನೀರಿನೊಂದಿಗೆ ಇದನ್ನು ಮಿಶ್ರಣ ಮಾಡಿ, ಗಡಿಯಾರದ ಮುಳ್ಳಿನ ರೀತಿಯಲ್ಲಿ ತಿರುಗಿಸಬೇಕು. ಡ್ರಮ್ ಅನ್ನು ಗಾಳಿ ಆಡದ ಹಾಗೆ ಗೋಣಿಚೀಲದೊಂದಿಗೆ ಮುಚ್ಚಿ 1 ವಾರದವರೆಗೆ ಹಾಗೆಯೇ ಬಿಡಬೇಕಾಗುತ್ತದೆ.
1 ವಾರದ ಬಳಿಕ ಚೆನ್ನಾಗಿ ಕಳಿತಿರುವ ಈ ಮಿಶ್ರಣಕ್ಕೆ ಎರಡು ದೊಡ್ಡದಾದ ನಿಂಬೆ ಹಣ್ಣಿನ ರಸವನ್ನು ಹಿಂಡಬೇಕು. ನಂತರ 1 ಲೀಟರ್ ಕಳೆನಾಶಕಕ್ಕೆ, 9 ಲೀಟರ್ ನೀರನ್ನು ಮಿಕ್ಸ್ ಮಾಡಿ ಸ್ಪ್ರೇ ಮಾಡುವುದರಿಂದ ಯಾವುದೇ ಕೆಮಿಕಲ್ ಇಲ್ಲದೆಯೇ ಕಳೆ ನಿರ್ವಹಣೆ ಮಾಡಬಹುದು.
ಮುಖ್ಯವಾಗಿ ಗಮನಿಸಿ:
ಆದರೆ ನೆನಪಿರಲಿ ಕಳೆನಾಶಕ ಸ್ಪ್ರೇ ಮಾಡುವಾಗ ಮುಖ್ಯ ಬೆಳೆಗೆ ತಾಕದಂತೆ ಎಚ್ಚರ ವಹಿಸಬೇಕು. ಯಾವುದೇ ಕಾರಣಕ್ಕೂ ಮುಖ್ಯ ಬೆಳೆಗೆ ಕಳೆನಾಶಕ ತಾಗಬಾರದು.
ಇತರೆ ಕಳೆನಾಶಕ ತಯಾರಿಕೆ ವಿಧಾನಗಳು:
ಒಂದು ಬಾಟಲಿನ ಅರ್ಧದಷ್ಟು ಬಿಳಿ ಡಿಸ್ಟಿಲ್ ವಿನೆಗರ್ (white distilled vinegar) ಕಾಲು ಭಾಗ ನೀರು, ಕಾಲು ಭಾಗ ಯಾವುದೇ ಡಿಶ್ವಾಶ್ (Dishwash) ಅನ್ನು ಮಿಶ್ರಣ ಮಾಡಿ ಕಳೆಗೆ ಸಿಂಪಡಣೆ ಮಾಡಿಯೂ ಕಳೆ ನಿರ್ವಹಣೆ ಮಾಡಬಹುದು.
ಒಂದು ಮಗ್ನಲ್ಲಿ ಉಗುರು ಬೆಚ್ಚಗಿನ ನೀರಿನಲ್ಲಿ ಹರಳು ಉಪ್ಪನ್ನು ಸೇರಿಸಿ ಕಳೆಗೆ ಸಿಂಪಡಣೆ ಮಾಡಬಹುದು.
ಪರಿಸರ ಸ್ನೇಹಿ ಕಳೆನಾಶಕ ತಯಾರಿಕೆ ಮತ್ತು ಸಿಂಪರಣೆ ವೀಡಿಯೋ: