ಕೇಂದ್ರ ಸಿಬ್ಬಂದಿ ಆಯೋಗವು (SSC) ವಿವಿಧ ವಿಭಾಗಗಳಲ್ಲಿ ಖಾಲಿ ಇರುವ 50,000ಕ್ಕೂ ಹೆಚ್ಚು ಕಾನ್’ಸ್ಟೇಬಲ್ ಹುದ್ದೆಗಳ ನೇಮಕಾತಿಯನ್ನು ಶೀಘ್ರದಲ್ಲಿ ಮಾಡಿಕೊಳ್ಳಲಿದೆ. ಹುದ್ದೆಗಳ ವಿವರ ಮತ್ತು ಅರ್ಜಿ ಸಲ್ಲಿಕೆ ಸಂಪೂರ್ಣ ಮಾಹಿತಿ ಇಲ್ಲಿದೆ…
SSC 50,000 Constable recruitment 2023:
ಕೇಂದ್ರ ಸಿಬ್ಬಂದಿ ಆಯೋಗವು ಕೇಂದ್ರ ಸಶಸ್ತ್ರ ಪಡೆ, ರಾಷ್ಟ್ರೀಯ ತನಿಖಾ ಸಂಸ್ಥೆ, ಅಸ್ಸಾಂ ರೈಫಲ್ಸ್, ಸಶಸ್ತ್ರ ಸೀಮಾ ಬಲ ಮತ್ತು ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋಗಳಲ್ಲಿ ಖಾಲಿ ಇರುವ ಕಾನ್ಸ್’ಟೇಬಲ್ ಹುದ್ದೆಗಳ ನೇಮಕಾತಿಯನ್ನು ಶೀಘ್ರವೇ ಮಾಡಿಕೊಳ್ಳಲಿದೆ. ಈ ನೇಮಕಾತಿಯ ಶೈಕ್ಷಣಿಕ ವಿದ್ಯಾರ್ಹತೆ, ಸಂಬಳ-ಸವಲತ್ತು, ವಯೋಮಿತಿ, ಪರಿಕ್ಷಾ ಕೇಂದ್ರಗಳ ವಿವರ, ಅಧಿಕೃತ ಜಾಲತಾಣ, ಸಹಾಯವಾಣಿ ಮತ್ತು ಪ್ರಮುಖ ದಿನಾಂಕಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
ಹುದ್ದೆಗಳ ವಿವರ
ಕೇಂದ್ರ ಸಿಬ್ಬಂದಿ ಆಯೋಗವು (SSC) ಪ್ರತಿ ವರ್ಷವೂ ಹೆಚ್ಚಿನ ಮಟ್ಟದಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿದ್ದು, ಕಳೆದ ವರ್ಷ 45,000ಕ್ಕೂ ಅಧಿಕ ಹುದ್ದೆಗಳ ನೇಮಕಾತಿ ಮಾಡಿಕೊಂಡಿತ್ತು ಮತ್ತು 2015ರಲ್ಲಿ ಅತೀ ಹೆಚ್ಚು ಅಂದರೆ 62,390 ನೇಮಕಾತಿ ಮಾಡಿಕೊಂಡಿತ್ತು. 2018ರಲ್ಲಿ 45,593 ನೇಮಕ ಮಾಡಲಾಗಿತ್ತು. ಇದೀಗ ಈ ವರ್ಷ 50,000ಕ್ಕೂ ಹೆಚ್ಚು ಕಾನ್ಸ್’ಟೇಬಲ್ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು ತಯಾರಿ ನಡೆಸುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ಈ ಕೆಳಗಿನ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸಲು ನೇಮಕಾತಿ ಮಾಡಿಕೊಳ್ಳಲಾಗುವುದು :
- ಸಶಸ್ತ್ರ ಪೊಲೀಸ್ ಪಡೆ
- ರಾಷ್ಟ್ರೀಯ ತನಿಖಾ ಸಂಸ್ಥೆ
- ಸಶಸ್ತ್ರ ಸೀಮಾ ಬಲ
- ಆಸ್ಸಾಂ ರೈಫಲ್ಸ್
- ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋ
- ವಿದ್ಯಾರ್ಹತೆ ಮತ್ತು ವಯೋಮಿತಿ ವಿವರ
ಕಾನ್ಸ್’ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿ೦ದ SSLC ಮುಗಿಸಿರಬೇಕು ಮತ್ತು 18ರಿಂದ 23 ವರ್ಷದೊಳಗಿರುವವರು ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.
ಮಾಸಿಕ ಸಂಬಳ ಮತ್ತು ಆಯ್ಕೆ ವಿಧಾನ ಹೇಗೆ?
ಕಾನ್ಸ್’ಟೇಬಲ್ ಆಗಿ ಆಯ್ಕೆಯಾದವರಿಗೆ ಪ್ರತಿ ತಿಂಗಳು 21,700 ರೂಪಾಯಿಯಿಂದ 69,100 ರೂಪಾಯಿ ವರೆಗೆ ಸಂಬಳ ಇರುತ್ತದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳಿಗೆ ಮೊದಲನೆಯ ಹಂತದಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ನಡೆಸಲಾಗುತ್ತದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆಯು ಜನರಲ್ ಇಂಟೆಲಿಜೆನ್ಸ್ ಮತ್ತು ರೀಸನಿಂಗ್, ಜನರಲ್ ನಾಲೆಜ್ ಮತ್ತು ಅವರ್ನೆಸ್, ಎಲಿಮೆಂಟರಿ ಮ್ಯಾಥೆಮ್ಯಾಟಿಕ್ಸ್ ಮತ್ತು ಇಂಗ್ಲಿಷ್ ವಿಷಯದ 4 ಪತ್ರಿಕೆಗಳಿರುತ್ತವೆ. ಈ ಪರೀಕ್ಷೆಯಲ್ಲಿ ಪಾಸಾಗಿ ಅರ್ಹತೆ ಪಡೆದವರಿಗೆ ದೈಹಿಕ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಅಂತಿಮವಾಗಿ ಆಯ್ಕೆ ಮಾಡಿಕೊಳ್ಳಲಾಗುವುದು.
SSC Constable recruitment 2023 ಕರ್ನಾಟಕದಲ್ಲಿರುವ ಪರೀಕ್ಷಾ ಕೇಂದ್ರಗಳು
ರಾಜ್ಯದ ಬೆಂಗಳೂರು, ಹುಬ್ಬಳ್ಳಿ, ಮೈಸೂರು, ಮಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಒಟ್ಟು 8 ಜಿಲ್ಲಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಅವಕಾಶವಿದೆ. ವಿಶೇಷವೆಂದರೆ ಇನ್ನು ಮುಂದೆ ಕೇಂದ್ರ ಸಿಬ್ಬಂದಿ ಆಯೋಗವು ನಡೆಸುವ ಎಲ್ಲಾ ಪರೀಕ್ಷೆಯನ್ನು ಕನ್ನಡ ಭಾಷೆಯಲ್ಲಿ ಕೂಡ ಬರೆಯಬಹುದು.ಈ ನೇಮಕಾತಿಯ ಅಧಿಕೃತ ಅಧಿಸೂಚನೆಯನ್ನು ಕೇಂದ್ರ ಸಿಬ್ಬಂದಿ ಆಯೋಗವು ಶೀಘ್ರದಲ್ಲಿಯೇ ಪ್ರಕಟಿಸಲಿದೆ. ನೇಮಕಾತಿಗೆ ಸಂಬAಧಿಸಿದ ನಿಖರ ಮಾಹಿತಿಯನ್ನು ಪಡೆಯಲು ಈ ಜಾಲತಾಣಕ್ಕೆ ಭೇಟಿ ನೀಡಿ.
ನೇಮಕಾತಿಯ ಪ್ರಮುಖ ದಿನಾಂಕಗಳು
- ಅಧಿಸೂಚನೆ ಪ್ರಕಟಿಸುವ ದಿನಾಂಕ :
- 24-11-2023
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :
- 28-12-2023
- ನೇಮಕಾತಿ ಪರೀಕ್ಷೆ ದಿನಾಂಕ :
- ಫೆಬ್ರುವರಿ 2024
ನೇಮಕಾತಿಗೆ ಸಂಬ೦ಧಿಸಿದ ಪ್ರಮುಖ ಲಿಂಕುಗಳು
ಅಧಿಕೃತ ಜಾಲತಾಣ : https://ssc.nic.in/
ಸಹಾಯವಾಣಿ : 080-25502520