PM Kisan Scheme ಕೇಂದ್ರದ ಮೋದಿ ಸರ್ಕಾರ ರೈತರಿಗೆ 14 ಕಂತುಗಳಲ್ಲಿ ತಲಾ ಎರಡು ಸಾವಿರ ರೂಪಾಯಿ ನೀಡುತ್ತಿದೆ. ದೀಪಾವಳಿ ಅಥವಾ ನವರಾತ್ರಿಗೂ ಮೊದಲೇ ರೈತರ ಖಾತೆಗೆ 15ನೇ ಕಂತು ಜಮೆ ಆಗುವ ಸಾಧ್ಯತೆಗಳಿವೆ.
Bank Account ಪಿಎಂ ಕಿಸಾನ್ ಯೋಜನೆಯಡಿ ಹಣ ಪಡೆಯತ್ತಿರೋ ರೈತರು ಈ ಒಂದು ಕೆಲಸವನ್ನು ಸೆಪ್ಟೆಂಬರ್ 30ರೊಳಗೆ ಮಾಡಿಕೊಳ್ಳಿ. ಇಲ್ಲವಾದ್ರೆ ನಿಮ್ಮ ಖಾತೆಗೆ ಹಣ ಜಮೆ ಆಗಲ್ಲ.
ಕೇಂದ್ರ ಸರ್ಕಾರ ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ಅರ್ಹ ರೈತರಿಗೆ ವಾರ್ಷಿಕವಾಗಿ ಆರು ಸಾವಿರ ರೂಪಾಯಿಯನ್ನು ಮೂರು ಕಂತುಗಳಲ್ಲಿ ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡುತ್ತದೆ.
ಈಗಾಗಲೇ ಕೇಂದ್ರ ಸರ್ಕಾರ ರೈತರಿಗೆ 14 ಕಂತುಗಳಲ್ಲಿ ಹಣ ನೀಡಿದೆ. ಈಗ 15ನೇ ಕಂತು ಬರಲಿದೆ. ನವೆಂಬರ್ನಲ್ಲಿಯೇ ರೈತರ ಖಾತೆಗೆ 15ನೇ ಕಂತಿನ 2 ಸಾವಿರ ರೂಪಾಯಿ ಜಮೆ ಆಗಲಿದೆ ಎಂದು ವರದಿಗಳು ಪ್ರಕಟವಾಗಿವೆ. (ಸಾಂದರ್ಭಿಕ ಚಿತ್ರ)
ಕೆಲವು ವರದಿಗಳ ಪ್ರಕಾರ ಮುಂದಿನ ತಿಂಗಳು ಅಂದ್ರೆ ನವರಾತ್ರಿ ಅಥವಾ ದೀಪಾವಳಿಗೂ ಮುನ್ನವೇ ರೈತರ ಖಾತೆಗೆ 15ನೇ ಕಂತಿನ 2 ಸಾವಿರ ರೂಪಾಯಿ ಜಮೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. (ಸಾಂದರ್ಭಿಕ ಚಿತ್ರ)
15ನೇ ಕಂತಿನ ಹಣ ನಿಮ್ಮ ಖಾತೆಗೆ ಜಮೆ ಆಗಬೇಕಾದ್ರೆ ಈ ತಿಂಗಳಾಂತ್ಯಕ್ಕೆ ನೀವು ಒಂದು ಕೆಲಸ ಮಾಡಲೇಬೇಕು. ಸರ್ಕಾರ ಹಲವು ದಿನಗಳಿಂದ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಿ ಎಂದು ಹೇಳುತ್ತಿದೆ. ಒಂದು ವೇಳೆ ಕೆವೈಸಿ ಪೂರ್ಣವಾಗದಿದ್ರೆ ಹಣ ಜಮೆ ಆಗೋದು ಬಹುತೇಕ ಅನುಮಾನ ಎಂದು ಹೇಳಲಾಗುತ್ತಿದೆ.
ಒಂದು ವೇಳೆ ನೀವು ಕೆವೈಸಿ ಪೂರ್ಣ ಮಾಡಿದ್ರೆ ಯಾವುದೇ ಭಯ ಬೇಡ. ಇಲ್ಲವಾದ್ರೆ ಸೆಪ್ಟೆಂಬರ್ 30ರೊಳಗೆ ನಿಮ್ಮ ಬ್ಯಾಂಕ್ಗೆ ತೆರಳಿ ಕೆವೈಸಿ ಪೂರ್ಣಗೊಳಿಸಿಕೊಳ್ಳಿ.
ರಾಜಸ್ಥಾನ ಸರ್ಕಾರ ತನ್ನ ರಾಜ್ಯದೇ ರೈತರಿಗೆ ಸೆಪ್ಟೆಂಬರ್ 30 ರ ಮೊದಲು IKYC ಪೂರ್ಣಗೊಳಿಸುವಂತೆ ಸಲಹೆ ನೀಡಿದೆ. ಇಲ್ಲಾವಾದ್ರೆ ನಿಮ್ಮ ಖಾತೆಗೆ ಹಣ ಜಮೆ ಆಗಲ್ಲ ಎಂದು ಹೇಳಿದೆ. (ಸಾಂದರ್ಭಿಕ ಚಿತ್ರ
PM ಕಿಸಾನ್ ವೆಬ್‌ಸೈಟ್ ಅಥವಾ ಅಪ್ಲಿಕೇಶನ್ ಮೂಲಕ KYC ಪ್ರಕ್ರಿಯೆಯನ್ನು ಪೂರ್ಣಗೊಳಿಸಕೊಳ್ಳಬಹುದಾಗಿದೆ. ಒಟಿಪಿ ಮತ್ತು ಫಿಂಗರ್‌ಪ್ರಿಂಟ್ ಮೂಲಕ ಮಾತ್ರವಲ್ಲದೆ ಮುಖದ ದೃಢೀಕರಣದ ಮೂಲಕವೂ ಮಾಡಬಹುದು. (ಸಾಂದರ್ಭಿಕ ಚಿತ್ರ)