ಹಬ್ಬಕ್ಕೆ ಖಾಸಗಿ ಬಸ್‌ ಮಾತ್ರವಲ್ಲ, ಕೆಎಸ್‌ಆರ್‌ಟಿಸಿ ಬಸ್‌ ದರವೂ ಏರಿಕೆ; ವಿಶೇಷ ಬಸ್‌ ಟಿಕೆಟ್‌ ಶೇ.20 ರವರೆಗೆ ಹೆಚ್ಚಳ

 KSRTC Bus Ticket Fare Hike : 



  • ಹಬ್ಬಕ್ಕೆ ಕೇವಲ ಖಾಸಗಿ ಬಸ್‌ಗಳು ಟಿಕೆಟ್‌ ದರ ಹೆಚ್ಚಳ ಮಾಡಿ ಪ್ರಯಾಣಿಕರ ಸುಲಿಗೆ ಮಾಡುತ್ತಿಲ್ಲ. ಕೆಎಸ್‌ಆರ್‌ಟಿಸಿ ಬಸ್‌ಗಳು ಕೂಡಾ ಟಿಕೆಟ್‌ ದರ ಹೆಚ್ಚಿಸಿವೆ. ಹಬ್ಬಕ್ಕೆಂದು ಬಿಟ್ಟ 1200 ವಿಶೇಷ ಬಸ್‌ಗಳ ಟಿಕೆಟ್‌ ದರ ಶೇ 18 ರಿಂದ 20 ರಷ್ಟು ಹೆಚ್ಚಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
  • ಗಣೇಶ ಹಬ್ಬಕ್ಕೆ ಕೇವಲ ಖಾಸಗಿ ಬಸ್‌ಗಳು ಮಾತ್ರವಲ್ಲ, ಕೆಎಸ್‌ಆರ್‌ಟಿಸಿ ಕೂಡಾ ತನ್ನ ವಿಶೇಷ ಬಸ್‌ಗಳ ಪ್ರಯಾಣ ದರವನ್ನು ಶೇ. 20 ರಷ್ಟು ಹೆಚ್ಚಳ.
  • ಸಾಮಾನ್ಯ ಬಸ್‌ಗಳ ದರಕ್ಕಿಂತ ವಿಶೇಷ ಬಸ್‌ಗಳ ಟಿಕೆಟ್‌ ದರವು ಶೇ. 18 ರಿಂದ 20 ರಷ್ಟು ಹೆಚ್ಚಿದೆ.
  • ಗಣೇಶ ಹಬ್ಬದ ಪ್ರಯುಕ್ತ ಕೆಎಸ್‌ಆರ್‌ಟಿಸಿ ಹೆಚ್ಚುವರಿಯಾಗಿ 1200 ಬಸ್‌ಗಳನ್ನು ಬೆಂಗಳೂರಿನಿಂದ ವಿವಿಧ ಭಾಗಗಳಿಗೆ ಓಡಿಸುತ್ತಿದೆ
  • ಗಣೇಶ ಹಬ್ಬಕ್ಕೆ ಕೇವಲ ಖಾಸಗಿ ಬಸ್‌ಗಳು ಮಾತ್ರವಲ್ಲ, ಕೆಎಸ್‌ಆರ್‌ಟಿಸಿ ಕೂಡಾ ತನ್ನ ವಿಶೇಷ ಬಸ್‌ಗಳ ಪ್ರಯಾಣ ದರವನ್ನು ಶೇ. 20 ರಷ್ಟು ಹೆಚ್ಚಳ ಮಾಡಿದೆ
  • ಹೌದು, ಈ ಬಾರಿಯ ಗಣೇಶ ಹಬ್ಬದ ಸಂದರ್ಭದಲ್ಲಿ ಒಂದೆಡೆ ಖಾಸಗಿ ಬಸ್‌ಗಳು ಟಿಕೆಟ್‌ ದರ ಹೆಚ್ಚಿಸಿ ಸುಲಿಗೆ ಮಾಡುತ್ತಿದ್ದು, ಸಾರಿಗೆ ಇಲಾಖೆ ಕೇವಲ ಎಚ್ಚರಿಕೆ ನೀಡುವುದಕ್ಕೆ ಸೀಮಿತವಾಗಿದೆ. ಇನ್ನೊಂದೆಡೆ ರಾಜ್ಯದ ಜೀವನಾಡಿಗಳು ಎಂದು ಕರೆಯುವ ಕೆಎಸ್‌ಆರ್‌ಟಿಸಿ ಕೂಡಾ ತನ್ನ ವಿಶೇಷ ಬಸ್‌ಗಳ ಟಿಕೆಟ್‌ ದರವನ್ನು ಕೂಡ ಶೇ. 20 ರಷ್ಟು ಹೆಚ್ಚಳ ಮಾಡಿದೆ. ಈ ಮೂಲಕ ಪ್ರಯಾಣಿಕರು ಖಾಸಗಿ ಆಗಲಿ ಕೆಎಸ್‌ಆರ್‌ಟಿಸಿ ಆಗಲಿ ಹೆಚ್ಚಿನ ದರ ಪಾವತಿಸಿಯೇ ತಮ್ಮ ಊರುಗಳಿಗೆ ತೆರಳಬೇಕಾಗಿದೆ.

ಶೇ. 18 ರಿಂದ 20 ರಟ್ಟು ಹೆಚ್ಚಳ

ಸದ್ಯ ಬೆಂಗಳೂರಿನಿಂದ ವಿವಿಧ ಊರುಗಳಿಗೆ ತೆರಳುವ ಕೆಎಸ್‌ಆರ್‌ಟಿಸಿ ಬಸ್‌ಗಳ ಟಿಕೆಟ್‌ ದರವನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಚೆಕ್‌ ಮಾಡಲಾಗಿದೆ. ಅಲ್ಲಿ ಸಾಮಾನ್ಯ ಬಸ್‌ಗಳ ದರಕ್ಕಿಂತ ವಿಶೇಷ ಬಸ್‌ಗಳ ಟಿಕೆಟ್‌ ದರವು ಶೇ. 18 ರಿಂದ 20 ರಷ್ಟು ಹೆಚ್ಚಿದೆ. ಉದಾಹರಣೆಗೆ ಬೆಂಗಳೂರಿನಿಂದ ದಾವಣಗೆರೆಗೆ ರಾಜಹಂಸ ಸಾಮಾನ್ಯ ಬಸ್‌ ದರ 505 ರೂಪಾಯಿ ಇದೆ. ಇದೇ ಮಾರ್ಗದ ರಾಜಹಂಸ ಹಬ್ಬದ ವಿಶೇಷ ಬಸ್‌ ಟಿಕೆಟ್‌ ದರ 591 ರೂಪಾಯಿ ಇದೆ.

ಬೆಂಗಳೂರು ಹುಬ್ಬಳ್ಳಿ ಸ್ಲೀಪರ್‌ ದರ 200 ರೂಪಾಯಿ ಹೆಚ್ಚಳ

ಬೆಂಗಳೂರು ಹುಬ್ಬಳ್ಳಿ ಎಸಿ ಸ್ಲೀಪರ್‌ ದರವು 1159 ರೂಪಾಯಿ ಇದೆ. ಇದೇ ಮಾರ್ಗದ ಹಬ್ಬದ ವಿಶೇಷ ಬಸ್‌ ದರವು 1365 ರೂಪಾಯಿ ಇದೆ. ನಾನ್‌ ಎಸಿ ಸ್ಲೀಪರ್‌ 975 ರೂಪಾಯಿ ಇದ್ದರೆ. ಹಬ್ಬದ ವಿಶೇಷ ಬಸ್‌ ದರ 1148 ರೂಪಾಯಿ ಇದೆ. ಊರಿಗೆ ಹೋಗಬೇಕೆಂದವರು ಹೆಚ್ಚುರಿ ಹಣ ನೀಡಲೇಬೇಕಾದ ಅನಿವಾರ್ಯತೆ ಇದೆ.

ಪ್ರತಿ ವರ್ಷದಂತೆ ಹೆಚ್ಚಳ ಎಂದ ಕೆಎಸ್‌ಆರ್‌ಟಿ ಅಧಿಕಾರಿಗಳು

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಎಸ್‌ಆರ್‌ಟಿಸಿ ಅಧಿಕಾರಿಗಳು, ಹಬ್ಬದ ಸಂದರ್ಭದ ವಿಶೇಷ ಬಸ್‌ಗಳ ದರವನ್ನು ಹೆಚ್ಚಳ ಮಾಡುತ್ತೇವೆ. ಈ ಹಿಂದಿನ ಹಬ್ಬಗಳಲ್ಲಿಯೂ ದರ ಹೆಚ್ಚಿಸಿದ್ದೆವು. ಸಾಮಾನ್ಯ ಬಸ್‌ಗಳ ದರ ಎಂದಿನಂತೆಯೇ ಇದೆ ಎಂದು ಹೇಳುತ್ತಾರೆ.

1200 ವಿಶೇಷ ಬಸ್‌

ಗಣೇಶ ಹಬ್ಬದ ಪ್ರಯುಕ್ತ ಹೆಚ್ಚುವರಿಯಾಗಿ 1200 ಬಸ್‌ಗಳನ್ನು ಕೆಎಸ್‌ಆರ್‌ಟಿಸಿ ಬೆಂಗಳೂರಿನಿಂದ ವಿವಿಧ ಭಾಗಗಳಿಗೆ ಓಡಿಸುತ್ತಿದೆ. ಸೆ. 15ರಿಂದ ಸೆ. 17ರವರೆಗೆ 1200 ಹೆಚ್ಚುವರಿ ಬಸ್‌ ಹಾಗೂ ರಾಜ್ಯ ಮತ್ತು ಹೊರರಾಜ್ಯಗಳಿಂದ ಬೆಂಗಳೂರಿಗೆ ಸೆ. 18 ರಂದು ಬಸ್‌ ವ್ಯವಸ್ಥೆ ಕಲ್ಪಿಸಿದೆ. ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಪ್ರಯಾಣಿಕರು ಮುಂಗಡ ಟಿಕೆಟ್‌ ಕಾಯ್ದಿರಿಸಿದಲ್ಲಿ ಶೇ. 5ರಷ್ಟು ರಿಯಾಯಿತಿ ಸಿಗಲಿದೆ. ಹೋಗಿಬರುವ ಪ್ರಯಾಣದ ಟಿಕೆಟ್‌ ಕಾಯ್ದಿರಿಸಿದರೆ, ಹಿಂದಿರುಗುವ ಪ್ರಯಾಣ ದರದಲ್ಲಿ ಶೇ. 10ರಿಯಾಯಿತಿ ನೀಡಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಎಲ್ಲಿಂದ ಯಾವ ಭಾಗಕ್ಕೆ ಬಸ್‌?

ಕೆಂಪೇಗೌಡ ಬಸ್‌ ನಿಲ್ದಾಣ- ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ, ತಿರುಪತಿ, ವಿಜಯವಾಡ, ಹೈದರಾಬಾದ್‌ ಮುಂತಾದ ಕಡೆ ಸಂಚಾರ.

ಮೈಸೂರು ರಸ್ತೆಯ ಸ್ಯಾಟಲೈಟ್‌ - ಮೈಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿ ಕಡೆ ಸಂಚಾರ.

ಶಾಂತಿನಗರ ನಿಲ್ದಾಣ - ಮದುರೈ, ಕುಂಭಕೋಣಂ, ಚೆನ್ನೈ, ಕೊಯಮತ್ತೂರು, ತಿರುಚಿ, ಪಾಲಕ್ಕಾಡ್‌, ತ್ರಿಶೂರ್‌, ಎರ್ನಾಕುಲಂ, ಕ್ಯಾಲಿಕಟ್‌ಗೆ ಐಷಾರಾಮಿ ಬಸ್‌ಗಳ ಸಂಚಾರ.

Previous Post Next Post