ಈ ಪ್ರಾಣಿಯ ಹಾಲಿನಲ್ಲಿ ಬಿಯರ್​, ವಿಸ್ಕಿಗಿಂತಲೂ ಹೆಚ್ಚು ಆಲ್ಕೋಹಾಲ್ ಇದೆ! 2 ಗುಟುಕು ಕುಡಿದ್ರೂ ಮೂರ್ಛೆ ಹೋಗ್ತಾರೆ

ಈ ಪ್ರಾಣಿಯ ಹಾಲಿನಲ್ಲಿ ಬಿಯರ್​, ವಿಸ್ಕಿಗಿಂತಲೂ ಹೆಚ್ಚು ಆಲ್ಕೋಹಾಲ್ ಇದೆ! 2 ಗುಟುಕು ಕುಡಿದ್ರೂ ಮೂರ್ಛೆ ಹೋಗ್ತಾರೆ

 ಟೀ ಅಥವಾ ಕಾಫಿ ರೂಪದಲ್ಲಾಗಿರಬಹುದು ಹೆಚ್ಚಿನ ಜನರು ತಮ್ಮ ದಿನವನ್ನು ಆರಂಭಿಸುವುದೇ ಹಾಲು ಸೇವನೆಯಿಂದ. ಹಾಲು ಉತ್ತಮ ಆಹಾರವಾಗಿದ್ದು, ಪೌಷ್ಟಿಕಾಂಶಗಳ ಆಗರವಾಗಿದೆ. ಹೆಚ್ಚಿನ ಜನರು ಹಸು, ಎಮ್ಮೆ ಅಥವಾ ಮೇಕೆ ಹಾಲನ್ನು ಬಳಸುತ್ತಾರೆ. ಇದರಲ್ಲಿ ಪ್ರೋಟೀನ್​ ಮತ್ತು ವಿಟಮಿನ್​ಗಳು ಸಮೃದ್ಧವಾಗಿವೆ. ಆದರೆ, ಹಾಲಿನಲ್ಲಿ ಆಲ್ಕೋಹಾಲ್ ಇರುವ ಪ್ರಾಣಿ ಒಂದಿದೆ ಎಂದರೆ ನೀವು ನಂಬುತ್ತಿರಾ? ನಂಬಲೇಬೇಕು. ಎಷ್ಟರಮಟ್ಟಿಗೆ ಆಲ್ಕೋಹಾಲ್ ಎಂದರೆ ಅದು ಬಿಯರ್ ಅಥವಾ ವಿಸ್ಕಿಗಿಂತ ಹೆಚ್ಚು ಅಮಲೇರಿಸುತ್ತದೆ. ಇದನ್ನು ಕೇಳಿದ ನಂತರ ಅದು ಯಾವ ಪ್ರಾಣಿಯ ಹಾಲು ಎಂದು ನೀವು ಯೋಚಿಸುತ್ತಿರಬಹುದು. ಯಾರಾದರೂ ಈ ಪ್ರಾಣಿಯ ಹಾಲು ಕುಡಿದರೆ, ಅವರಿಗೆ ತಕ್ಷಣ ಅಮಲೇರಿಬಿಡುತ್ತದೆ. ಅದು ಯಾವ ಪ್ರಾಣಿ ಮತ್ತು ಹಾಲಿನಲ್ಲಿ ಎಷ್ಟು ಆಲ್ಕೋಹಾಲ್ ಇದೆ ಎಂದು ನಾವೀಗ ತಿಳಿಯೋಣ.



ಹಾಲಿನ ಸೇವನೆಯು ನಿತ್ಯದ ಆಹಾರದ ಪ್ರಮುಖ ಭಾಗವಾಗಿದೆ ಮತ್ತು ಇದು ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸಲು ಸಹಾಯ ಮಾಡುತ್ತದೆ. ಹಾಲು ಕುಡಿಯಲು ಇಷ್ಟಪಡುವವರು ಹೆಚ್ಚಾಗಿ ಹಸು ಅಥವಾ ಎಮ್ಮೆ ಹಾಲನ್ನು ಆನಂದಿಸುತ್ತಾರೆ. ಆದರೆ, ಕೆಲವರು ಈ ಪ್ರಾಣಿಯ ಹಾಲು ಆಗುವುದಿಲ್ಲ. ಈ ಸಂದರ್ಭದಲ್ಲಿ ಮೇಕೆ ಹಾಲನ್ನು ಕುಡಿಯಲು ಸಲಹೆ ನೀಡುತ್ತಾರೆ. ಹಾಲಿನಲ್ಲಿ ಪ್ರೋಟೀನ್​ಗಳು ಮತ್ತು ವಿಟಮಿನ್​ಗಳು ಸಮೃದ್ಧವಾಗಿರುತ್ತವೆ. ಆದರೆ ಹಾಲಿನಲ್ಲಿ ವಿಸ್ಕಿ, ಬಿಯರ್ ಅಥವಾ ವೈನ್‌ಗಿಂತ ಹೆಚ್ಚು ಆಲ್ಕೋಹಾಲ್ ಹೊಂದಿರುವ ಪ್ರಾಣಿ ಇದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಆ ಪ್ರಾಣಿ ಯಾವುದೆಂದರೆ ಹೆಣ್ಣು ಆನೆ. ಆನೆ ಹಾಲಿನಲ್ಲಿ ಶೇಕಡಾ 60ರಷ್ಟು ಆಲ್ಕೋಹಾಲ್ ಇರುತ್ತದೆ.

ವೈಜ್ಞಾನಿಕ ಸಂಶೋಧನೆಯ ಪ್ರಕಾರ ಆನೆಗಳು ಕಬ್ಬನ್ನು ತಿನ್ನಲು ಇಷ್ಟಪಡುತ್ತವೆ. ಕಬ್ಬು ದೊಡ್ಡ ಪ್ರಮಾಣದಲ್ಲಿ ಆಲ್ಕೋಹಾಲ್ ರೂಪಿಸುವ ಅಂಶಗಳನ್ನು ಒಳಗೊಂಡಿದೆ. ಆನೆಯ ಹಾಲಿನಲ್ಲಿ ಆಲ್ಕೋಹಾಲ್ ಪ್ರಮಾಣವು ಹೆಚ್ಚಿರುವುದಕ್ಕೆ ಇದೇ ಕಾರಣ.


ಆನೆ ಹಾಲು ಮನುಷ್ಯರಿಗೆ ಉಪಯುಕ್ತವಲ್ಲ. ಹಾಲಿನಲ್ಲಿ ಕಂಡುಬರುವ ರಾಸಾಯನಿಕಗಳು ಅಪಾಯಕಾರಿ. ಈ ಹಾಲಿನಲ್ಲಿ ಬೀಟಾ ಕ್ಯಾಸೀನ್ ಇದ್ದು, ಹಾಲಿನಲ್ಲಿ ಹೆಚ್ಚಿನ ಮಟ್ಟದ ಲ್ಯಾಕ್ಟೋಸ್ ಇರುತ್ತದೆ. ಸಂಶೋಧನೆಯ ಪ್ರಕಾರ, ಆಫ್ರಿಕನ್ ಹೆಣ್ಣು ಆನೆಗಳು ಹೆಚ್ಚಿನ ಮಟ್ಟದ ಲ್ಯಾಕ್ಟೋಸ್ ಮತ್ತು ಆಲಿಗೋಸ್ಯಾಕರೈಡ್‌ಗಳನ್ನು ಹೊಂದಿರುತ್ತವೆ. ಆನೆಗಳು ದಿನಕ್ಕೆ 12 ರಿಂದ 18 ಗಂಟೆಗಳ ಕಾಲ ಹುಲ್ಲು, ಎಲೆಗಳು ಮತ್ತು ಹಣ್ಣುಗಳನ್ನು ತಿನ್ನುತ್ತವೆ. ಆನೆಯು ದಿನಕ್ಕೆ ಸರಾಸರಿ 150 ಕೆಜಿ ಆಹಾರವನ್ನು ತಿನ್ನುತ್ತದೆ. ಅಂತಹ ಬೃಹತ್ ಸೇವನೆಯಿಂದ, ಪ್ರಾಣಿಯಿಂದ ಉತ್ಪತ್ತಿಯಾಗುವ ಹಾಲಿನಲ್ಲಿ ಪೋಷಕಾಂಶಗಳು ದಟ್ಟವಾಗಿರುತ್ತದೆ. ಹೀಗಾಗಿ ಇದನ್ನು ಜೀರ್ಣಿಸಿಕೊಳ್ಳಲು ಮತ್ತು ಮಾನವನ ಕರುಳಿನಿಂದ ಹೀರಿಕೊಳ್ಳಲು ಸಾಧ್ಯವಿಲ್ಲ.

2015ರಲ್ಲಿ ‘ಜರ್ನಲ್ ಆಫ್ ಡೈರಿ ಸೈನ್ಸ್’ ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಆನೆಯ ಹಾಲಿನಲ್ಲಿ ಕಂಡುಬರುವ ರಾಸಾಯನಿಕಗಳು ಯಾವುದೇ ಪ್ರಾಣಿ ಅಥವಾ ಜಾತಿಗಳಲ್ಲಿ ಕಂಡುಬರುವುದಕ್ಕಿಂತ ಹೆಚ್ಚು ಇದೆ. ಇದು ಆಲಿಗೋಸ್ಯಾಕರೈಡ್ ಎಂಬ ದೊಡ್ಡ ಪ್ರಮಾಣದ ಕಾರ್ಬೋಹೈಡ್ರೇಟ್ ಅನ್ನು ಹೊಂದಿರುತ್ತದೆ. ಇದು ಡೈರಿ ಪ್ರಾಣಿಗಳಲ್ಲಿ ತುಲನಾತ್ಮಕವಾಗಿ ಕಡಿಮೆಯಾಗಿದೆ. ಈ ಕಾರ್ಬೋಹೈಡ್ರೇಟ್‌ನ ಹೆಚ್ಚಿನ ಪ್ರಮಾಣವು ಮಾನವರು ಸೇವಿಸಿದಾಗ ಉಬ್ಬುವುದು, ಅನಿಲ ಮತ್ತು ಅತಿಸಾರಕ್ಕೆ ಕಾರಣವಾಗಬಹುದು ಎಂದು ವರದಿ ಹೇಳಿದೆ. (ಏಜೆನ್ಸೀಸ್​)

Post a Comment

Previous Post Next Post

Top Post Ad

CLOSE ADS
CLOSE ADS
×