ಫೋನ್ ನಂಬರ್ (Phone Number) ತಪ್ಪಿದ್ದರೆ, ರೇಷನ್ ಕಾರ್ಡ್ (Ration Card), ಆಧಾರ್ ಕಾರ್ಡ್ (Aadhaar Card) ಮತ್ತು ಬ್ಯಾಂಕ್ ಅಕೌಂಟ್ ಮಾಹಿತಿ ತಪ್ಪಿದ್ದರು ಹಣ ಬಂದಿಲ್ಲ
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದಕ್ಕಿಂತ ಮೊದಲೇ ರಾಜ್ಯದ ಜನರಿಗಾಗಿ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಭರವಸೆ ನೀಡಿತ್ತು. ಇದೀಗ ಕಾಂಗ್ರೆಸ್ ಸರ್ಕಾರವು ಅಧಕಾರದಲ್ಲಿದ್ದು, ಜನರಿಗೆ ನೀಡಿದ್ದ ಯೋಜನೆಗಳನ್ನು ಜಾರಿಗೆ ತರುತ್ತಿದೆ. ನಮಗೆಲ್ಲ ಗೊತ್ತಿರುವ ಹಾಗೆ ಈಗಾಗಲೇ 4 ಯೋಜನೆಗಳು ಜಾರಿಗೆ ಬಂದಿದೆ.
ರಾಜ್ಯದ ಎಲ್ಲಾ ಮಹಿಳೆಯರು ಉಚಿತವಾಗಿ ಓಡಾಡುವುದಕ್ಕೆ ಶಕ್ತಿ ಯೋಜನೆಯನ್ನು (Shakti Scheme) ಜಾರಿಗೆ ತರಲಾಯಿತು. ಮಹಿಳೆಯರು ಶಕ್ತಿ ಯೋಜನೆಯ ಮೂಲಕ ಇಡೀ ರಾಜ್ಯದಲ್ಲಿ ಉಚಿಯವಾಗಿ ಪ್ರಯಾಣ (Free Bus Facility) ಮಾಡುತ್ತಿದ್ದಾರೆ.
ಇನ್ನು ಅನ್ನಭಾಗ್ಯ ಯೋಜನೆಯಲ್ಲಿ (Annabhagya Yojane) 10 ಕೆಜಿ ಅಕ್ಕಿ ನೀಡುವುದಾಗಿ ತಿಳಿಸಿದ್ದ ಸರ್ಕಾರ, ಅಕ್ಕಿ ಪೂರೈಕೆ ಆಗದೆ 5 ಕೆಜಿ ಅಕ್ಕಿ ಜೊತೆಗೆ ಇನ್ನು 5ಕೆಜಿ ಅಕ್ಕಿ ಬದಲು ಹಣ ನೀಡುವ ನಿರ್ಧಾರ ಮಾಡಿದೆ. ಇನ್ನು ಗೃಹಜ್ಯೋತಿ ಯೋಜನೆಯ (Gruha Jyothi Scheme) ಮೂಲಕ ಉಚಿತ ವಿದ್ಯುತ್ (Free Electricity) ಸೌಲಭ್ಯವನ್ನು ಜನರು ಪಡೆಯುತ್ತಿದ್ದಾರೆ.
ಇನ್ನು ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ರಾಜ್ಯದ ಗೃಹಲಕ್ಷ್ಮಿಯರಿಗೆ ತಿಂಗಳಿಗೆ ₹2000 ನೀಡುವ ಯೋಜನೆ ಇದಾಗಿದ್ದು, ಇನ್ನು ಸಾಕಷ್ಟು ಮಹಿಳೆಯರ ಬ್ಯಾಂಕ್ ಖಾತೆಗೆ (Bank Account) ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ.
ಯುವನಿಧಿ ಈ ಡಿಸೆಂಬರ್ ನಲ್ಲಿ ಜಾರಿಗೆ ಬರಲಿದೆ. ಈ ವೇಳೆ ಗೃಹಲಕ್ಷ್ಮಿ ಯೋಜನೆಯ (Gruha Lakshmi Yojana) ಹಣ ಬಂದಿಲ್ಲದೆ ಇರುವವರು ಗೊಂದಲಕ್ಕೆ ಒಳಗಾಗಿದ್ದಾರೆ. ಯಾವ ಕಾರಣಕ್ಕೆ ಗೃಹಲಕ್ಷ್ಮಿ ಯೋಜನೆಯ ಹಣ ಬ್ಯಾಂಕ್ ಅಕೌಂಟ್ ಗೆ ಇನ್ನು ಬಂದಿಲ್ಲ ಎಂದು ನೋಡುವುದಾದರೆ..
ಬ್ಯಾಂಕ್ ಅಕೌಂಟ್ ನಲ್ಲಿ ತೊಂದರೆ ಆಗಿದ್ದು ಅಂಥವರಿಗೆ ಹಣ ಬಂದಿಲ್ಲ, ರೇಷನ್ ಕಾರ್ಡ್ ನಲ್ಲಿ EKYC ಮಾಡಿಸದೆ ಇರುವವರಿಗೆ ಕೂಡ ಹಣ ಬಂದಿಲ್ಲ. ರೇಷನ್ ಕಾರ್ಡ್ ನಲ್ಲಿ ಮನೆಯ ಮುಖ್ಯಸ್ಥರ ಹೆಸರಲ್ಲಿ ಮಹಿಳೆಯ ಹೆಸರು ಇಲ್ಲದೆ ಇದ್ದರೆ ಅಂಥವರಿಗೂ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ.
ರೇಷನ್ ಕಾರ್ಡ್ ekyc ಅಪ್ಡೇಟ್ ಆಗಿಲ್ಲ ಎಂದರೂ ಬಂದಿಲ್ಲ. ಫೋನ್ ನಂಬರ್ (Phone Number) ತಪ್ಪಿದ್ದರೆ, ರೇಷನ್ ಕಾರ್ಡ್ (Ration Card), ಆಧಾರ್ ಕಾರ್ಡ್ (Aadhaar Card) ಮತ್ತು ಬ್ಯಾಂಕ್ ಅಕೌಂಟ್ ಮಾಹಿತಿ ತಪ್ಪಿದ್ದರು ಹಣ ಬಂದಿಲ್ಲ, ಹಾಗಾಗಿ ಇದೆಲ್ಲವನ್ನು ಕೂಡ ನೀವು ನೋಡಿಕೊಳ್ಳಬೇಕಾಗುತ್ತದೆ..
ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆಯಲು ಈ ಕೆಲಸಗಳನ್ನು ತಪ್ಪದೇ ಮಾಡಿಸಿ..
- ಈ ಪ್ರಯೋಜನ ಪಡೆಯಲು, ಆಧಾರ್ ಸೀಡಿಂಗ್ ಆಗಿದ್ಯಾ ಎನ್ನುವುದನ್ನು ಚೆಕ್ ಮಾಡಬೇಕಾಗುತ್ತದೆ. DBT ಮೂಲಕ ನಿಮಗೆ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಈ ಎರಡು ಯೋಜನೆಯ ಹಣ ಬರುತ್ತದೆ, ಹಾಗಾಗಿ ಆಧಾರ್ ಸೀಡಿಂಗ್ ಮತ್ತು NCPI Mapping ಮುಖ್ಯ ಆಗಿದ್ದು, ಈ ಎರಡು ಆಗಿದ್ಯಾ ಎನ್ನುವುದನ್ನು ಚೆಕ್ ಮಾಡಿಸಿಕೊಳ್ಳಿ.
- ಒಂದು ವೇಳೆ ನಿಮ್ಮ ಬ್ಯಾಂಕ್ ಅಕೌಂಟ್ ಆಕ್ಟಿವ್ ಆಗಿಲ್ಲ ಎಂದರೆ ಆಗಲು ಸಮಸ್ಯೆ ಆಗಬಹುದು. ಹಾಗಾಗಿ ನಿಮ್ಮ ಬ್ಯಾಂಕ್ ಅಕೌಂಟ್ ಆಕ್ಟಿವ್ ಆಗಿದ್ಯಾ ಎನ್ನುವುದನ್ನು ಚೆಕ್ ಮಾಡಿ. ಆಕ್ಟಿವ್ ಇಲ್ಲ ಎಂದರೆ ಸರಿಪಡಿಸಿಕೊಳ್ಳಬಹುದು. UIDAI ವೆಬ್ಸೈಟ್ ಗೆ ಭೇಟಿ ನೀಡಿ, ನಿಮ್ಮ ಅಪ್ಲಿಕೇಶನ್ ಸ್ಟೇಟಸ್ ಚೆಕ್ ಮಾಡಿ, ಸರಿ ಮಾಡಬಹುದು..
- ಒಂದು ವೇಳೆ ನಿಮ್ಮ ಬ್ಯಾಂಕ್ ಅಕೌಂಟ್ ಅಥವಾ ಬೇರೆ ಡಾಕ್ಯುಮೆಂಟ್ ಗಳಲ್ಲಿ ಹೆಸರಿನ ಸ್ಪೆಲ್ಲಿಂಗ್ ತಪ್ಪಿದ್ದರೂ ಈ ಸಮಸ್ಯೆ ಆಗಬಹುದು. ಹಾಗಾಗಿ ಚೆಕ್ ಮಾಡಿ.
ಮಾಹಿತಿ ತಪ್ಪಾಗಿದ್ದರೆ ಹಾಗೂ ಅಪ್ಲೈ ಮಾಡಿರುವ ವಿಧಾನ ತಪ್ಪಾಗಿದ್ದರೆ ಈ ಸಮಸ್ಯೆ ಉಂಟಾಗಬಹುದು