ಪಡಿತರ ಚೀಟಿ ತಿದ್ದುಪಡಿಗೆ ಮೂರು ಲಕ್ಷಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದ್ದು, 93 ಸಾವಿರಕ್ಕೂ ಅಧಿಕ ಅರ್ಜಿಗಳು ತಿರಸ್ಕೃತಗೊಂಡಿವೆ.
ಅನ್ನಭಾಗ್ಯ ಗೃಹಜೋತಿ ಯೋಜನೆಗಳ ಕಾರಣದಿಂದ ಹೊಸ ಪಡಿತರ ಚೀಟಿಗೆ ಮತ್ತು ತಿದ್ದುಪಡಿಗೆ ಒಂದು ತಿಂಗಳ ಅವಧಿಯಲ್ಲಿ 3.18 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದೆ.
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ವತಿಯಿಂದ ಫಲಾನುಭವಿಗಳ ಮಾಹಿತಿಯ ತಿದ್ದುಪಡಿ ಹೊಸ ಕುಟುಂಬ ಸದಸ್ಯರ ಹೆಸರು ಸೇರ್ಪಡೆ ವಿಳಾಸ ಬದಲಾವಣೆ ಮೊದಲಾದವುಗಳಿಗೆ ಆನ್ನೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು.
ಸರ್ವರ್ ಸಮಸ್ಯೆಯಿಂದ ಅರ್ಜಿ ಸಲ್ಲಿಕೆಗೆ ತೊಂದರೆಯಾದ ಕಾರಣಕ್ಕೆ ದಿನಾಂಕ ವಿಸ್ತರಿಸಲಾಗಿತ್ತು. 3.18 ಲಕ್ಷ ಅರ್ಜಿಗಳು ತಿದ್ದುಪಡಿಗೆ ಬಂದಿದ್ದು, 1,47,646 ಅರ್ಜಿಗಳು ಪುರಸ್ಕೃತಗೊಂಡಿವೆ. 93,362 ಅರ್ಜಿಗಳು ತಿರಸ್ಕೃತಗೊಂಡಿವೆ.
Status ಚೆಕ್ ಮಾಡುವ ವಿಧಾನ
ನಂತರ ಮುಖಪುಟದ ಎಡಭಾಗದಲ್ಲಿರುವ 3 ಗೆರೆಗಳ ಮೇಲೆ ಕ್ಲಿಕ್ ಮಾಡಿ
ನಂತರ ಕೆಳಗಡೆ ಇರುವ e-status ಮೇಲೆ ಕ್ಲಿಕ್ ಮಾಡಿ
ನಂತರ ಕೆಳಗಡೆ ಇರುವ Amendment requests ಮೇಲೆ ಕ್ಲಿಕ್ ಮಾಡಿ
ನಂತರ ಕೆಳಗೆ ಕೊಟ್ಟಿರುವ ಜಿಲ್ಲೆಗಳ ಪಟ್ಟಿಯಲ್ಲಿ ನಿಮ್ಮ ಜಿಲ್ಲೆಯನ್ನು select ಮಾಡಿ
ನಂತರ ಪಡಿತರ ಚೀಟಿಯ ಬದಲಾವಣೆ ಕೋರಿಕೆ ಸ್ಥಿತಿ ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ರೇಷನ್ ಕಾರ್ಡ್ ನಂಬರ್ ಅಥವಾ Acknowledgment ನಂಬರ್ ಹಾಕಿ Go ಮೇಲೆ ಕ್ಲಿಕ್ ಮಾಡಿ
ನಂತರ ಈ ಕೆಳಗನಂತೆ ಆಹಾರ ಇಲಾಖೆಗೆ ಸಲ್ಲಿಸಲಾಗಿದೆ ಹಾಗೂ ಆಹಾರ ನೀರಿಕ್ಷರಿಂದ ಪ್ರಕ್ರಿಯೆಗೆ ಕಾಯುತ್ತಿದೆ ಎಂದು ತೋರಿಸಿದರೆ ನಿಮ್ಮ ತಿದ್ದುಪಡಿ ಅರ್ಜಿ ಇನ್ನೂ ಬಾಕಿ ಇದೆ ಎಂದು ಅರ್ಥ
ಈ ಕೆಳಗಿನಂತೆ ತೋರಿಸಿದರೆ ನಿಮ್ಮ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ಅರ್ಥ
(ಸೂಚನೆ-ಆಹಾರ ವೆಬ್ಲೈಟ್ ಓಪನ್ ಆಗದಿದ್ದರೆ,10 ಗಂಟೆಯ ನಂತರ ಪ್ರಯತ್ನಿಸಿ)