ತೆಂಗಿನಕಾಯಿ ಬಳಸಿ ಭೂಮಿ ಅಡಿಯಲ್ಲಿ ನೀರು ಇದೆಯೇ ತಿಳಿಯುವುದು ಹೇಗೆ?: ವೈರಲ್ ವೀಡಿಯೋ

ಇಲ್ಲೊಬ್ಬ ವ್ಯಕ್ತಿ ತೆಂಗಿನಕಾಯಿ ಹಿಡಿದು ಅಂತರ್ಜಲವಿದೆ ಎಂದು ತಿಳಿದುಕೊಳ್ಳಬಹುದು ಎಂದು ಪ್ರಾಕ್ಟಿಕಲ್‌ ಆಗಿ ತಿಳಿಸಿರುವ ವೀಡಿಯೋ ಸಾಮಾಜಿಕ ತಾಣದಲ್ಲಿ ತುಂಬಾನೇ ವೈರಲ್ ಆಗಿದೆ.



ನಾವು ಒಂದು ನೆಲ ಖರೀದಿಸುತ್ತೇವೆ, ಅದರಲ್ಲಿ ಬೆಳೆ ಬೆಳೆಯಬೇಕೆಂದು ನಿರ್ಧರಿಸಿ ಬಾವಿನೋ, ಬೋರ್‌ವೆಲ್‌ ಕೊರಿಯಲು ತೀರ್ಮಾನಿಸಿ ಬಾವಿ ತೋಡಿದರೆ ಅಥವಾ ಬೋರ್‌ವೆಲ್ ಕೊರಿದರೆ ನೀರು ಸಿಗುವುದಿಲ್ಲ, ಅಷ್ಟು ಶ್ರಮವೂ ವ್ಯರ್ಥವಾಗುತ್ತದೆ. ಆದ್ದರಿಂದ ಬಾವಿ ಅಥವಾ ಬೋರ್‌ವೆಲ್‌ ಕೊರಿಯುವ ಮೊದಲು ಆ ಭಾಗದಲ್ಲಿ ಅಂತರ್ಜಲವಿದೆಯೇ ಎಂದು ಪರೀಕ್ಷಿಸುವುದು ಒಳ್ಳೆಯದು.

ಅಂತರ್ಜಲವಿದೆಯೇ ಎಂದು ತಿಳಿಯಲು ವೈಜ್ಞಾನಿಕ ವಿಧಾನಗಳಿವೆ, ವೈಜ್ಞಾನಿಕ ವಿಧಾನಗಳನ್ನು ನಂಬಿ ಬಾವಿ ಅಥವಾ ಬೋರ್‌ವೆಲ್‌ ತೋಡಿದವರಿಗೆ ನೀರು ಸಿಗದೇ ಇರುವ ಎಷ್ಟೋ ಉದಾಹರಣೆಗಳಿವೆ. ಕೆಲವರಿಗೆ ತುಂಬಾ ಆಳವಾಗಿ ಭೂಮಿಯನ್ನು ಕೊರಿದಾಗ ಸ್ವಲ್ಪ ನೀರು ಸಿಗಬಹುದು, ಆದರೆ ಅಷ್ಟು ನೀರು ನಮ್ಮ ಅವಶ್ಯಕತೆಗೆ ಸಾಕಾಗುವುದಿಲ್ಲ. ಇನ್ನು ಕೆಲವು ಬಾವಿಗಳಲ್ಲಿ ಮಳೆಗಾಲದಲ್ಲಿ ಮಾತ್ರ ನೀರು ಇರುತ್ತದೆ, ಮಳೆಗಾಲದಲ್ಲಿ ನೀರು ಸಿಗುವುದಿಲ್ಲ, ಬೇಸಿಗೆಯಲ್ಲಿ ನೀರು ಬೇಕಾಗಿರುತ್ತೆ. ಆದರೆ ಆವಾಗ ನೀರಿಲ್ಲ ಎಂದರೆ ಬಾವಿ, ಬೋರ್‌ವೆಲ್ ಇದ್ದು ಏನು ಪ್ರಯೋಜನ ಅಲ್ವಾ?

ಆದರೆ ನಮ್ಮ ಹಿರಿಯರು ಬಾವಿ ತೋಡುವಾಗ ಕೆಲವೊಂದು ವಿಧಾನ ಅನುಸರಿಸುತ್ತಿದ್ದರು. ಇದನ್ನು ಈಗಲೂ ಕೆಲವು ಅನುಸರಿಸುತ್ತಾರೆ. ಅದೇನೆಂದರೆ ತೆಂಗಿನಕಾಯಿ ಅಂಗೈಯಲ್ಲಿಟ್ಟು ಎಲ್ಲಿ ಅಂತರ್ಜಲ ಅಧಿಕವಿದೆ ಎಂದು ಮೆಲ್ಲನೆ ನಡೆಯುತ್ತಾ ಪರಿಶೀಲಿಸಲಾಗುವುದು. ಎಲ್ಲಿ ಅಂತರ್ಜಲವಿರುತ್ತದೋ ಆ ಸ್ಥಳಕ್ಕೆ ಬಂದಾಗ ತೆಂಗಿನಕಾಯಿ ಅಲುಗಾಡಲರಂಭಿಸುತ್ತದೆ ಅಲ್ಲದೆ ತೆಂಗಿನಕಾಯಿ ಜುಟ್ಟು ನೇರವಾಗಿ ನಿಲ್ಲುತ್ತದೆ, ಆ ಸ್ಥಳದಲ್ಲಿ ಭಾವಿ ತೋಡಿದರೆ ಖಂಡಿತ ನೀರು ಸಿಗುವುದು. ಈ ವೀಡಿಯೋ ನೋಡಿದವರು ಹಿಂದೆ ನಮ್ಮ ಹಿರಿಯರು ಅನುಸರಿಸುತ್ತಿದ್ದ ಕೆಲವೊಂದು ವಿಧಾನಗಳು ಬರೀ ನಂಬಿಕೆಯಲ್ಲ ಅದರಲ್ಲಿ ವೈಜ್ಞಾನಿಕ ಅಂಶವಿರುತ್ತದೆ.

Previous Post Next Post