ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲ ಅಂದ್ರೆ ಯಾರನ್ನ ಭೇಟಿ ಆಗ್ಬೇಕು ಗೊತ್ತಾ? ಹೊಸ ಅಪ್ಡೇಟ್ ಹೊರಡಿಸಿದ ಸರ್ಕಾರ

ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ಆರಂಭವಾಗಿ ಎರಡು ವಾರಗಳ ಕಳೆದರೂ ಕೂಡ ಸಾಕಷ್ಟು ಜನರ ಖಾತೆಗೆ (Bank Account) ಎರಡು ಸಾವಿರ ರೂಪಾಯಿಗಳ ವರ್ಗಾವಣೆ ಆಗಿಲ್ಲ



ಗೃಹಲಕ್ಷ್ಮಿ ಹಣ ಕೈ ಸೇರುತ್ತೆ ಅಂತ ಎಷ್ಟು ಉತ್ಸಾಹದಿಂದ ಗೃಹಿಣಿಯರು ಹೋಗಿ ಅರ್ಜಿ ಸಲ್ಲಿಸಿದ್ದರು, ಈಗ ಆ ಉತ್ಸಾಹ ಎಲ್ಲರಲ್ಲಿಯೂ ಕಾಣುತ್ತಿಲ್ಲ ಇದಕ್ಕೆ ಮುಖ್ಯವಾದ ಕಾರಣ ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ಆರಂಭವಾಗಿ ಎರಡು ವಾರಗಳ ಕಳೆದರೂ ಕೂಡ ಸಾಕಷ್ಟು ಜನರ ಖಾತೆಗೆ (Bank Account) ಎರಡು ಸಾವಿರ ರೂಪಾಯಿಗಳ ವರ್ಗಾವಣೆ ಆಗಿಲ್ಲ.

ಸ್ಪಷ್ಟನೆ ನೀಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್:

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಆಗಿರುವ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಗೃಹಲಕ್ಷ್ಮಿ ಹಣ ಎಲ್ಲರ ಖಾತೆಗೆ ಇನ್ನೂ ಸಂದಾಯವಾಗಿಲ್ಲ ಇದರಲ್ಲಿ ಹಲವು ಗೊಂದಲಗಳು ಇವೆ, ಸುಮಾರು ಎಂಟು ಲಕ್ಷ ಮಹಿಳೆಯರ ಖಾತೆಯಲ್ಲಿ ಸಮಸ್ಯೆ ಇದೆ ಅವೆಲ್ಲವನ್ನು ಪರಿಹರಿಸಿಕೊಂಡು ಹಣ ವರ್ಗಾವಣೆ (Money Transfer) ಮಾಡುವುದಕ್ಕೆ ಸ್ವಲ್ಪ ವಿಳಂಬವಾಗುತ್ತದೆ ಎಂದು ತಿಳಿಸಿದ್ದಾರೆ.

ಹಣ ಸಂದಾಯವಾಗುವುದಕ್ಕೆ ವಿಳಂಬ ಆಗುತ್ತಿರಲು ಕಾರಣವೇನು?

ಗೃಹಲಕ್ಷ್ಮಿ ಯೋಜನೆ ಆರಂಭವಾಗಿದ್ದು ಆಗಸ್ಟ್ 30ರಂದು, ಈ ದಿನ ಚಾಲನೆ ಕೊಡುತ್ತಿದ್ದ ಹಾಗೆ ಮನೆಯ ಒಡತಿಯ ಖಾತೆಗೆ 2,000ಗಳನ್ನು ಜಮಾ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಈಗಾಗಲೇ ಹಲವರ ಖಾತೆಗೆ ಡಿ ಬಿ ಟಿ (DBT) ಕೂಡ ಮಾಡಲಾಗಿದೆ.


ಆದರೂ ಸಾಕಷ್ಟು ಜನರ ಖಾತೆಗೆ ಹಣ ಬಂದಿಲ್ಲ, ಇದರ ಬಗ್ಗೆ ಸಚಿವೆ ಸ್ಪಷ್ಟನೆ ನೀಡಿದ್ದಾರೆ, ಹಣವನ್ನು ನೇರವಾಗಿ ನಗದು ವರ್ಗಾವಣೆ ಮಾಡುವ ಮೊದಲ ಯೋಜನೆ ಇದು, ರಾಜ್ಯದಲ್ಲಿ ಇಂತಹ ಯೋಜನೆ ಮೊದಲ ಬಾರಿಗೆ ಆರಂಭವಾಗಿದ್ದು ಆರ್‌ಬಿಐ (RBI) ಮೂಲಕ ಹಂತ ಹಂತವಾಗಿ ಹಣ ವರ್ಗಾವಣೆ ಮಾಡಲಾಗುತ್ತದೆ. ಆದ್ದರಿಂದ ಮೊದಲ ತಿಂಗಳು ಎಲ್ಲರ ಖಾತೆಗೆ ಹಣ ಬರುವಲ್ಲಿ ಸ್ವಲ್ಪ ಸಮಯ ಹಿಡಿಯಬಹುದು ಎಂದು ತಿಳಿಸಿದ್ದಾರೆ.


1.20 ಕೋಟಿ ಗೃಹಿಣಿಯರು ಅರ್ಜಿ ಸಲ್ಲಿಸಿದ್ದು ಈಗಾಗಲೇ 63 ಲಕ್ಷ ಗೃಹಿಣಿಯರ ಖಾತೆಗೆ ಹಣ ಹೋಗಿದೆ ಇನ್ನೂ ಶೇಕಡ 45ರಷ್ಟು ಅರ್ಜಿಗಳಿಗೆ ಹಣ ಬರಬೇಕಿದೆ. ಮುಂದಿನ ತಿಂಗಳಿನಿಂದ ಯಾವ ಸಮಸ್ಯೆಯೂ ಇರುವುದಿಲ್ಲ. ಮುಂದಿನ ತಿಂಗಳಿನಿಂದ ಪ್ರತಿ ತಿಂಗಳ ಹಣ 15ನೇ ತಾರೀಖಿನ ಒಳಗೆ ಖಾತೆಗೆ ನೇರವಾಗಿ ವರ್ಗಾವಣೆ ಆಗುತ್ತದೆ ಎಂದಿದ್ದಾರೆ.

ಇನ್ನು ಸಚಿವೆ ಹೇಳಿರುವಂತೆ ತಾಂತ್ರಿಕ ಕಾರಣದಿಂದ (Technical Issue) ಸುಮಾರು 25 ಸಾವಿರ ಗೃಹಿಣಿಯರಿಗೆ ಹಣ ವರ್ಗಾವಣೆ ಆಗಿಲ್ಲ. ರಾಜ್ಯದ 1.28 ಲಕ್ಷ ಗೃಹಿಣಿಯರಲ್ಲಿ 1.20 ಕೋಟಿ ಅರ್ಜಿಗಳು ಮಾತ್ರ ಸಂದಾಯವಾಗಿವೆ. ಅವುಗಳಲ್ಲಿ 8 ಲಕ್ಷ ಜನರಿಗೆ ಹಣ ಬರುವುದು ಬಾಕಿ ಇದೆ.


ಇವರಿಗೆ ಯಾರೆಲ್ಲಾ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿಲ್ಲವೋ ಅವರಿಗೆ ಯೋಜನೆಯ ಬಗ್ಗೆ ಅರ್ಥ ಮಾಡಿಸಲು ಹಾಗೂ ಈವರೆಗೆ ಯಾರಿಗೆ ಹಣ ಬಂದಿಲ್ಲವೋ ಅವರ ಖಾತೆಯಲ್ಲಿ ಏನು ಸಮಸ್ಯೆ ಇದೆ ಎಂಬುದನ್ನು ತಿಳಿದುಕೊಳ್ಳಲು ಸ್ಥಳೀಯ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರ ಸಹಾಯವನ್ನು ಪಡೆದುಕೊಳ್ಳಲಾಗುತ್ತದೆ


ಅವರನ್ನು ಮನೆ ಮನೆಗೆ ಕಳುಹಿಸಿ ಮಾಹಿತಿಯನ್ನು ಪಡೆದುಕೊಂಡು ಯಾರ ಖಾತೆಯಲ್ಲಿ ಸಮಸ್ಯೆ ಇದ್ದರೂ ಅವುಗಳನ್ನು ಪರಿಹರಿಸಿ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ, ಜೊತೆಗೆ ಸಹಾಯವಾಣಿ ಕರೆ ಸಂಖ್ಯೆಯನ್ನು (Helpline) ಕೂಡ ಕೊಡಲಾಗುತ್ತದೆ. ಹಾಗಾಗಿ ಅದರ ಮೂಲಕ ಯಾವುದೇ ಮಾಹಿತಿ ಬೇಕಿದ್ದರೂ ತಿಳಿದುಕೊಳ್ಳಬಹುದು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ.


Previous Post Next Post