ರೇಷನ್ ಕಾರ್ಡ್ ತಿದ್ದುಪಡಿ ಮಾಡಿದ್ರೆ ಅದು ಸಕ್ಸಸ್ ಆಗಿದ್ಯೋ ಇಲ್ವೋ ತಿಳಿದುಕೊಳ್ಳಲು ಹೀಗೆ ಮಾಡಿ

ಆಧಾರ್ ಕಾರ್ಡ್ ಬ್ಯಾಂಕ್ ಖಾತೆ (Bank Account) ಹಾಗೂ ರೇಷನ್ ಕಾರ್ಡ್ ನಲ್ಲಿ (Ration Card) ಇರುವ ಹೆಸರು ಒಂದೇ ರೀತಿಯ ದಾಗಿರಬೇಕು ಅಂದರೆ ಹೆಸರುಗಳಿಗೆ ಹೋಲಿಕೆ ಆಗಬೇಕು.



Ration card Correction Status :

 ಎಲ್ಲರಿಗೂ ಗೊತ್ತಿರುವ ಹಾಗೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಿಗೆ ಬಿಪಿಎಲ್ ಕಾರ್ಡ್ ದಾರರು (BPL Card Holders) ಹೆಚ್ಚಿನ ಫಲಾನುಭವಿಗಳಾಗಿರುತ್ತಾರೆ.

ಅನ್ನಭಾಗ್ಯ ಯೋಜನೆ (Annabhagya Yojana) ಅಡಿಯಲ್ಲಿ ಅಕ್ಕಿ ಅಥವಾ ಹಣ ಪಡೆಯುವುದು ಇರಬಹುದು ಅಥವಾ ಗೃಹಲಕ್ಷ್ಮಿ ಯೋಜನೆಯ (Gruha lakshmi Scheme) ಅಡಿಯಲ್ಲಿ 2,000ಗಳನ್ನು ಗೃಹಿಣಿಯರ ಖಾತೆಗೆ ಜಮಾ ಮಾಡುವುದು ಇರಬಹುದು. ಎರಡು ಯೋಜನೆಗಳಲ್ಲಿ ಬಿಪಿಎಲ್ ರೇಷನ್ ಕಾರ್ಡ್ (BPL Ration card) ಹೊಂದಿರುವುದು ಬಹಳ ಮುಖ್ಯ.

ಇಲ್ಲಿಯವರೆಗೆ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದ್ದರು ಕೂಡ ಅದೆಷ್ಟೋ ಜನ ಅದರಲ್ಲಿ ಯಾವುದೇ ರೀತಿಯ ತಿದ್ದುಪಡಿ ಮಾಡುವುದಕ್ಕೆ ಯೋಚನೆ ಮಾಡಿರಲಿಲ್ಲ. ಹಲವರ ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ (Aadhaar Card link) ಕೂಡ ಆಗಿಲ್ಲ

ಅಷ್ಟೇ ಅಲ್ಲದೆ ರೇಷನ್ ಕಾರ್ಡ್ ನಲ್ಲಿ ಹೆಸರು ವಿಳಾಸ ಮತ್ತು ವಿವರಗಳು ಕೂಡ ತಪ್ಪಾಗಿ ಮುದ್ರಿತವಾಗಿರುತ್ತದೆ. ಈಗ ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆದುಕೊಳ್ಳಲು ಇಂತಹ ಯಾವ ತಪ್ಪುಗಳು ಕೂಡ ನಿಮ್ಮ ರೇಷನ್ ಕಾರ್ಡ್ ನಲ್ಲಿ ಇರುವ ಹಾಗಿಲ್ಲ

ಅದರಲ್ಲೂ ಮುಖ್ಯವಾಗಿ ರೇಷನ್ ಕಾರ್ಡ್ ನಲ್ಲಿ ಮುಖ್ಯಸ್ಥೆ ಅಥವಾ ಮನೆ ಯಜಮಾನ ಹೆಸರು ಪ್ರಮುಖ ಸದಸ್ಯನಾಗಿ ಕಾಣಿಸಬೇಕು ಅಂದರೆ ರೇಷನ್ ಕಾರ್ಡ್ ನಲ್ಲಿ ಮೊದಲ ಹೆಸರು ಮನೆಯ ಯಜಮಾನಿಯದ್ದೇ ಆಗಿರಬೇಕು.

ರೇಷನ್ ಕಾರ್ಡ್ ಬದಲಾವಣೆಗೆ ಅವಕಾಶ

ಇನ್ನು ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಆಗಿದ್ದರೂ ಕೂಡ ಹಲವರ ಖಾತೆಗೆ ಬಂದು ತಲುಪಿಲ್ಲ, ಇದಕ್ಕೆ ಸಾಕಷ್ಟು ಕಾರಣಗಳು ಕೂಡ ಇವೆ ಅದರಲ್ಲೂ ರೇಷನ್ ಕಾರ್ಡ್ ನಲ್ಲಿ ಮಹಿಳೆಯ ಹೆಸರು ಯಜಮಾನಿ ಸ್ಥಾನದಲ್ಲಿ ಇರುವುದು ಕಡ್ಡಾಯವಾಗಿದೆ.

ಜೊತೆಗೆ ನಿಮ್ಮ ಆಧಾರ್ ಕಾರ್ಡ್ ಬ್ಯಾಂಕ್ ಖಾತೆ (Bank Account) ಹಾಗೂ ರೇಷನ್ ಕಾರ್ಡ್ ನಲ್ಲಿ (Ration Card) ಇರುವ ಹೆಸರು ಒಂದೇ ರೀತಿಯ ದಾಗಿರಬೇಕು ಅಂದರೆ ಹೆಸರುಗಳಿಗೆ ಹೋಲಿಕೆ ಆಗಬೇಕು. ಹಾಗಾಗಿ ನಿಮ್ಮ ಹೆಸರುಗಳನ್ನು ರೇಷನ್ ಕಾರ್ಡ್ ನಲ್ಲಿ ಬದಲಾಯಿಸಿಕೊಳ್ಳಬಹುದು. ಇದಕ್ಕೆ ಇನ್ನೂ ಕೇವಲ ಎರಡು ದಿನಗಳ ಅವಕಾಶ ಮಾತ್ರ ಬಾಕಿ.

ರೇಷನ್ ಕಾರ್ಡ್ ಸ್ಟೇಟಸ್ ಚೆಕ್ ಮಾಡುವುದು ಹೇಗೆ (How Check ration Card Status)

ಒಂದು ವೇಳೆ ನೀವು ಸರ್ಕಾರದ ಮಾಹಿತಿಯಂತೆ ನಿಮ್ಮ ರೇಷನ್ ಕಾರ್ಡ್ ನಲ್ಲಿ ಅಗತ್ಯ ಇರುವ ಎಲ್ಲಾ ಬದಲಾವಣೆಗಳನ್ನು ಕೂಡ ಮಾಡಿಕೊಂಡಿದ್ದರೆ ಅದು ಸರಿಯಾಗಿ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ತಿಳಿದುಕೊಳ್ಳಲು ಯಾವುದೇ ಸೇವ ಕೇಂದ್ರಕ್ಕೆ ಮತ್ತೆ ಅಲೆಯುವ ಅಗತ್ಯವಿಲ್ಲ, ಆನ್ಲೈನ್ ಮೂಲಕವೇ ಸುಲಭವಾಗಿ ತಿಳಿದುಕೊಳ್ಳಬಹುದು.

ಹೌದು ನಿಮ್ಮ ರೇಷನ್ ಕಾರ್ಡ್ ಸ್ಟೇಟಸ್ ಅನ್ನು ಆನ್ಲೈನ್ ಮೂಲಕ ತಿಳಿದುಕೊಳ್ಳಬಹುದು ಅದಕ್ಕಾಗಿ ನೀವು ಈ https://mahitikanaja.karnataka.gov.in/FCS/MyRationCard?ServiceId=1036&Type=TABLE&DepartmentId=1010 ಲಿಂಕ್ ಮೇಲೆ ಕ್ಲಿಕ್ ಮಾಡಿ ಮಾಹಿತಿ ಕಣಜದ ಈ ವೆಬ್ಸೈಟ್ನಲ್ಲಿ ನೀವು ನಿಮ್ಮ ರೇಷನ್ ಕಾರ್ಡ್ ಸ್ಥಿತಿಯನ್ನು ತಿಳಿದುಕೊಳ್ಳಬಹುದು.

ಮೊದಲಿಗೆ ನಿಮ್ಮ ಜಿಲ್ಲೆಯ ಹೆಸರನ್ನು ಹಾಕಿ ನಂತರ ನಿಮ್ಮ ರೇಷನ್ ಕಾರ್ಡ್ ನಂಬರ್ (RC number) ನಮೂದಿಸಬೇಕು. ನಂತರ ಗೋ ಎನ್ನುವ ಬಟನ್ ಮೇಲೆ ಕ್ಲಿಕ್ ಮಾಡಿ.

ಈಗ ನಿಮ್ಮ ರೇಷನ್ ಕಾರ್ಡ್ ನಲ್ಲಿ ಬದಲಾಯಿಸಿದ ಹೆಸರು ಅಂದರೆ ಯಜಮಾನಿಯ ಹೆಸರಿನಲ್ಲಿ ರೇಷನ್ ಕಾರ್ಡ್ ತಿದ್ದುಪಡಿ ಆಗಿದೆಯೋ ಇಲ್ಲವೋ ಎಂಬುದು ಗೊತ್ತಾಗುತ್ತದೆ.

ಒಂದು ವೇಳೆ ನಿಮ್ಮ ತಿದ್ದುಪಡಿಯ ಹೆಸರು ಕಾಣಿಸದೆ ಇದ್ದಲ್ಲಿ ಸರ್ಕಾರದ ಸರ್ವರ್ ನಲ್ಲಿ ಅಪ್ ಡೇಟ್ ಆಗಿಲ್ಲ ಎಂದು ಅರ್ಥ. ಅದಕ್ಕೆ ಸ್ವಲ್ಪ ಸಮಯ ಕಾಯಿರಿ ಅಥವಾ ಪುನಃ ರೇಷನ್ ಕಾರ್ಡ್ ತಿದ್ದುಪಡಿ ಕೇಂದ್ರದಲ್ಲಿ ಮರು ಪರಿಶೀಲನೆ ಮಾಡಿ.



Previous Post Next Post