ಮಹಿಳೆಯರು (women) ತಮ್ಮ ಜೀವನವನ್ನು ತಾವು ಕಟ್ಟಿಕೊಳ್ಳಬಹುದಾದಂತಹ ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳ (Govt Schemes) ಬಗ್ಗೆ ಇಲ್ಲಿದೆ ಮಾಹಿತಿ
ಮಹಿಳೆಯರ ಕಲ್ಯಾಣಕ್ಕಾಗಿ ಮಹಿಳೆಯರ ಆರ್ಥಿಕ ಲಾಭಕ್ಕಾಗಿ ಕೇಂದ್ರ ಸರ್ಕಾರ (Central government) ಕೆಲವು ಪ್ರಮುಖ ಯೋಜನೆಗಳನ್ನು (Scheme) ಜಾರಿಗೆ ತಂದಿದೆ. ಇಂತಹ ಯೋಜನೆಗಳಿಂದ ಮಹಿಳೆಯರ ಆರ್ಥಿಕ ಅಭಿವೃದ್ಧಿಯ ಜೊತೆಗೆ ಸ್ವಾವಲಂಬಿಯಾಗಿ ಮಹಿಳೆಯರು ಬದುಕಲು ಕೂಡ ಸಾಧ್ಯವಾಗುತ್ತೆ.
ಮಹಿಳೆಯರು (women) ತಮ್ಮ ಜೀವನವನ್ನು ತಾವು ಕಟ್ಟಿಕೊಳ್ಳಬಹುದಾದಂತಹ ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳ (Govt Schemes) ಬಗ್ಗೆ ಇಲ್ಲಿದೆ ಮಾಹಿತಿ.
ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಯೋಜನೆ
2023ರಲ್ಲಿ ನಿರ್ಮಲ ಸೀತಾರಾಮನ್ ಅವರು ಬಜೆಟ್ ಮಂಡಿಸುವಾಗ ಮಹಿಳೆ ಹಾಗೂ ಬಾಲಕಿಯರಿಗಾಗಿ ವಿಶೇಷ ಮಹಿಳಾ ಸಮ್ಮಾನ್ ಬಜೆಟ್ ಪತ್ರ ಯೋಜನೆ ಅಥವಾ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಯೋಜನೆಯನ್ನು (Mahila Samman Saving Scheme) ಘೋಷಿಸಿದ್ದಾರೆ. ಇದು ಮಹಿಳೆಯರಿಗೆ ಸಾಕಷ್ಟು ಆರ್ಥಿಕ ಬಲ ಒದಗಿಸುತ್ತದೆ.
ಬ್ಯಾಂಕುಗಳಲ್ಲಿ ಅಥವಾ ಪೋಸ್ಟ್ ಆಫೀಸ್ ನಲ್ಲಿ (Post Office) ಈ ಸಣ್ಣ ಉಳಿತಾಯ ಯೋಜನೆ ಆರಂಭಿಸಬಹುದು, ಇಲ್ಲಿ ಒಮ್ಮೆ ಠೇವಣಿ (Fixed Deposit) ಮಾಡಿದರೆ ನಿಮಗೆ ಯೋಜನೆ ಮುಗಿಯುವ ಹಂತಕ್ಕೆ ಕೈ ತುಂಬಾ ಹಣ ಸಿಗುತ್ತದೆ. ಗರಿಷ್ಠ ಎರಡು ಲಕ್ಷ ರೂಪಾಯಿಗಳವರೆಗೆ ಠೇವಣಿ ಮಾಡಬಹುದು ಹಾಗೂ ಠೇವಣಿ ಮಾಡಿರುವ ಹಣಕ್ಕೆ 7.5% ನಷ್ಟು ಬಡ್ಡಿ ಸಿಗುತ್ತದೆ.
ಸುಕನ್ಯಾ ಸಮೃದ್ಧಿ ಯೋಜನೆ
ಹತ್ತು ವರ್ಷ ಹಾಗೂ ಅದಕ್ಕಿಂತ ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳಿಗಾಗಿ ಈ ಯೋಜನೆಯನ್ನು ಪಾಲಕರು ಆರಂಭಿಸಬಹುದು, ಅತಿ ಕಡಿಮೆ ವಯಸ್ಸಿನಲ್ಲಿ ಹೆಣ್ಣು ಮಕ್ಕಳಿಗೋಸ್ಕರ ಖಾತೆ ತೆರೆದು ಈ ಯೋಜನೆಯಲ್ಲಿ (Sukanya Samriddhi Yojana) ಹೂಡಿಕೆ ಮಾಡಿದರೆ ಹೆಣ್ಣು ಮಕ್ಕಳ ಭವಿಷ್ಯಕ್ಕೆ ಆಧಾರವಾಗುತ್ತದೆ. ಕನಿಷ್ಠ 250 ರೂಪಾಯಿಗಳಿಂದ ಗರಿಷ್ಠ 1,50,000 ರೂ. ವರೆಗೂ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
ಮಹಿಳಾ ಶಕ್ತಿ ಕೇಂದ್ರ ಯೋಜನೆ
ಈ ಯೋಜನೆಯು ಶಿಕ್ಷಣ ಆರೋಗ್ಯ ರಕ್ಷಣೆ ಕೆಲಸದ ಪ್ರಗತಿ ರಾಜಕೀಯ ಮತ್ತು ಆರ್ಥಿಕ ನಿರ್ಧಾರವನ್ನು ತೆಗೆದುಕೊಳ್ಳಲು ಮಹಿಳೆಯರಿಗೆ ಪುರುಷರಷ್ಟೇ ಸಮಾನವಾಗಿ ಅವಕಾಶವನ್ನು ಒದಗಿಸುವ ಯೋಜನೆಯಾಗಿದೆ. ಹಾಗಾಗಿ ಈ ಯೋಜನೆಯ ಅಡಿಯಲ್ಲಿ ಕೌಶಲಾಭಿವೃದ್ಧಿ ತರಬೇತಿ, ಉದ್ಯೋಗ, ಸಾಕ್ಷರತೆ ಆರೋಗ್ಯ ಮೊದಲಾದ ವಿಷಯಗಳಿಗೆ ಸಂಬಂಧಪಟ್ಟ ಹಾಗೆ ಗ್ರಾಮೀಣ ಮಹಿಳೆಯರನ್ನು ಸಬಲೀಕರಣ ಗೊಳಿಸಲು ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ.
ಮಹಿಳಾ ಸಹಾಯವಾಣಿ ಯೋಜನೆ
ಮಹಿಳೆ ಇನ್ನು ಮುಂದೆ ದೌರ್ಜನ್ಯಕ್ಕೆ ಒಳಗಾದರೆ ಸುಮ್ಮನೆ ಕುಳಿತುಕೊಳ್ಳುವಂತಿಲ್ಲ, ಅದರ ಬದಲು 24 ಗಂಟೆಗಳ ಒಳಗೆ ತುರ್ತು ಸಹಾಯವನ್ನು ಪಡೆದುಕೊಳ್ಳುವ ಸಲುವಾಗಿ ಟೋಲ್ ಫ್ರೀ ಸಂಖ್ಯೆ (Toll-free no.) 181 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ರಕ್ಷಣೆಯನ್ನು ಪಡೆದುಕೊಳ್ಳಬಹುದಾಗಿದೆ. ಯಾವುದೇ ಖಾಸಗಿ ಅಥವಾ ಸಾರ್ವಜನಿಕ ಸ್ಥಳದಲ್ಲಿ ದೌರ್ಜನ್ಯಕ್ಕೆ ಒಳಗಾದರೆ ಮಹಿಳೆ ತಕ್ಷಣ ಈ ನಂಬರ್ಗೆ ಕರೆ ಮಾಡಿ ಸಹಾಯ ಪಡೆದುಕೊಳ್ಳಬಹುದು.
ಸಖಿ ನಿವಾಸ
ಕೆಲಸದಲ್ಲಿರುವ ಉದ್ಯೋಗಸ್ಥ ಮಹಿಳೆಯರಿಗೆ ಹಾಸ್ಟೆಲ್ (Hostel) ಒದಗಿಸಿ ಕೊಡುವ ಯೋಜನೆ ಇದಾಗಿದೆ. ನಗರ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಸ್ಥ ಮಹಿಳೆಯರಿಗೆ ಹಾಸ್ಟೆಲ್ ಸೌಲಭ್ಯವನ್ನು ಒದಗಿಸುವ ಸಲುವಾಗಿ ಹಾಸ್ಟೆಲ್ ನಡೆಸಲು ಅನುದಾನವನ್ನು ಈ ಯೋಜನೆಯ ಅಡಿಯಲ್ಲಿ ನೀಡಲಾಗುತ್ತದೆ. ಬಾಡಿಗೆಗೆ ಹಾಸ್ಟೆಲ್ ಸೌಲಭ್ಯವನ್ನು ಪಡೆದುಕೊಂಡು ಉದ್ಯೋಗಸ್ಥ ಮಹಿಳೆಯರು ಹಾಗೂ ಮಕ್ಕಳು ಉಳಿದುಕೊಳ್ಳಬಹುದು.