ಈ ಬಾರಿಯ ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋ ಗೆ ಭರ್ಜರಿ ತಯಾರಿ ನಡೆಯುತ್ತಿದ್ದು, ಬಿಗ್ ಬಾಸ್ ಸೀಸನ್ ಹತ್ತರ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯನ್ನು ವೈರಲ್ ಮಾಡಲಾಗಿದೆ. ಇದರೊಂದಿಗೆ ಸೀಸನ್ ಹತ್ತರಲ್ಲಿ ಯಾರೆಲ್ಲಾ ಸ್ಪರ್ಧಿಗಳು ಭಾಗಿಯಾಗಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ.
ಬೆಂಗಳೂರು: ಈ ಬಾರಿಯ ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋ ಗೆ ಭರ್ಜರಿ ತಯಾರಿ ನಡೆಯುತ್ತಿದ್ದು, ಬಿಗ್ ಬಾಸ್ ಸೀಸನ್ ಹತ್ತರ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯನ್ನು ವೈರಲ್ ಮಾಡಲಾಗಿದೆ.
ಈಗಾಗಲೇ ಈಗ ಬಿಗ್ ಬಾಸ್ ಕನ್ನಡ ಸೀಸನ್ ಹತ್ತಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಇದಕ್ಕಾಗಿ ಚಾನೆಲ್ ಗಳು ಭರ್ಜರಿ ತಯಾರಿಯನ್ನು ನಡೆಸುತ್ತಿವೆ.
ಬಿಗ್ ಬಾಸ್ ಕನ್ನಡ ಸೀಸನ್ 10 ಕಾರ್ಯಕ್ರಮದ ಆರಂಭದ ನಿರೀಕ್ಷೆಯಲ್ಲಿ ಕನ್ನಡಿಗರು ಸಹ ಇದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ಗಳು ವೈರಲ್ ಆಗುತ್ತಿದ್ದು, ಒಟಿಟಿ ಸೀಸನ್ ಮೊದಲ ಬಾರಿ ಮಾಡಿದ್ದು ಇದಾದ ನಂತರ ಟಿವಿ ಶೋನ ಹತ್ತನೇ ಸೀಸನ್ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ.
ಅದರಂತೆ ಸೆಪ್ಟೆಂಬರ್ 30ರಂದು ಓ ಟಿ ಟಿ ಸೀಸನ್ 2 ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ
ಬಿಗ್ ಬಾಸ್ ಸೀಸನ್ 10 ಈ ಬಾರಿಯೂ ಒಟಿಪಿ ಸೀಸನ್ 2 ರ ನಂತರ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ಸೆಪ್ಟೆಂಬರ್ ಮೊದಲ ವಾರದಲ್ಲಿ ಅನುಬಂಧ ಅವಾರ್ಡ್ ಶೂಟಿಂಗ್ ನಡೆಯಲಿದ್ದು ಈ ಕಾರ್ಯಕ್ರಮವನ್ನು ಸೆಪ್ಟೆಂಬರ್ ಮೂರನೇ ವಾರದಲ್ಲಿ ಕಲರ್ಸ್ ಕನ್ನಡ ಪ್ರಸಾರ ಮಾಡಲು ನಿರ್ಧರಿಸಿದೆ.
ಇದಾದ ನಂತರ ಬಿಗ್ ಬಾಸ್ ಸೆಪ್ಟೆಂಬರ್ ಅಂತ್ಯಕ್ಕೆ ಶುರುವಾಗಲಿದೆ ಎಂದು ಹೇಳಲಾಗುತ್ತಿದೆ.
ಸ್ಪರ್ಧಿಗಳ ಹೆಸರು ಹೇಲೋದಾದ್ರೆ ನಾಗಿಣಿ 2 ದಾರಾವಾಹಿ ಜೋಡಿ ನಿನಾದ್ ಹರಿತ್ಸ ಮತ್ತು ನಮೃತ ಗೌಡ, ಕಿರುತೆರೆಯ ಜನಪ್ರಿಯ ನಟಿ ಮೇಘ ಶೆಟ್ಟಿ, ದಿವಂಗತ ಬುಲೆಟ್ ಹಾಸ್ಯ ನಟ ಪ್ರಕಾಶ್ ರವರ ಪುತ್ರ ರಕ್ಷಕ್, ಎಕ್ಸ್ ಕ್ಯೂಸ್ ಮಿ ಸಿನಿಮಾ ಖ್ಯಾತಿಯ ಸುನಿಲ್ ರಾವ್, ಹುಚ್ಚು ಸಿನಿಮಾ ನಟಿ ರೇಖಾ, ರಾಪರ್ ಸಿಂಗರ್ ಇಶಾನಿ, ನಟಿ ಆಶಾ ಭಟ್ ಮತ್ತು ರೀಲ್ಸ್ ಗಳಲ್ಲಿ ಖ್ಯಾತಿ ಪಡೆದಿರುವಂತಹ ಭೂಮಿಕ ಹೆಸರುಗಳು ಹಾಗೂ ಹಲವರ ಹೆಸರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ
ಅದೇನೆ ಇದ್ದರೂ ಸಹ ದೊಡ್ಮನೆಗೆ ಆಡಿಶನ್ ನಡೆದು ಶೋ ಆರಂಭವಾದ ನಂತರವೇ ಯಾರು ಬರಲಿದ್ದಾರೆ ಎಂಬ ಸ್ಪಷ್ಟ ಚಿತ್ರಣ ಸಂಪೂರ್ಣ ಸಿಗಲಿದೆ.
