ರಾಜ್ಯದ ನಿರುದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್! ಯುವ ನಿಧಿ ಯೋಜನೆಯ ಪ್ರಮುಖ ಘೋಷಣೆ

ಡಿಪ್ಲೋಮೋ ಹಾಗೂ ಪದವೀಧರ ನಿರುದ್ಯೋಗಿ ಯುವಕ ಯುವತಿಯರಿಗೆ ಪ್ರತಿ ತಿಂಗಳು ಅವರ ಖಾತೆಗೆ (Bank Account) ಸಾವಿರದ ಐದುನೂರು ರೂಪಾಯಿಗಳನ್ನು ಹಾಕುವ ಪ್ರಕ್ರಿಯೆ ಸದ್ಯದಲ್ಲಿ ಆರಂಭವಾಗಲಿದೆ



ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ (Congress government) ಅಧಿಕಾರಕ್ಕೆ ಬರುವುದಕ್ಕೂ ಮೊದಲು ಪ್ರಣಾಳಿಕೆಯಲ್ಲಿ ಹೊರಡಿಸಿದ್ದ 5 ಗ್ಯಾರಂಟಿ ಗಳೇ (guarantee schemes) ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕೂಡ ಕಾರಣವಾಗಿರಬಹುದು.

ತಾವು ನುಡಿದಂತೆ ಕಾಂಗ್ರೆಸ್ ಸರ್ಕಾರ ಈಗಾಗಲೇ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದರಿಂದ ರಾಜ್ಯದಲ್ಲಿ ಲಕ್ಷಾಂತರ ಜನರು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.

ಇನ್ನು ಬಾಕಿ ಇರುವುದು ಯುವನಿಧಿ ಯೋಜನೆ (Yuva Nidhi schemes) ಮಾತ್ರ. ಯುವ ನಿಧಿ ಯೋಜನೆಯ ಅಡಿಯಲ್ಲಿ ಡಿಪ್ಲೋಮಾ (diploma) ಹಾಗೂ ಪದವಿ (Degree) ಮುಗಿಸಿದ ನಿರುದ್ಯೋಗಿಗಳಿಗೆ (unemployment) ಭತ್ಯೆ ನೀಡುವುದು ಸರ್ಕಾರದ ಉದ್ದೇಶ.


ಯುವನಿಧಿ ಯೋಜನೆ ಜಾರಿಗೊಳಿಸುವುದಾಗಿ ತಿಳಿಸಿದ ಸಿಎಂ:

ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಪ್ರಯುಕ್ತ ಕಲಬುರ್ಗಿಯ ಪೊಲೀಸ್ ಪರೇಡ್ ಮೈದಾನದಲ್ಲಿ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ್ದ ಸಿಎಂ ಸಿದ್ದರಾಮಯ್ಯ (CM siddaramaiah) ಅವರು ತಾವು ತಂದಿರುವ ಯಶಸ್ವಿ ಯೋಜನೆಗಳ ಬಗ್ಗೆ ಮತ್ತೊಮ್ಮೆ ಹೇಳಿದ್ದಾರೆ. ಇದರ ಜೊತೆಗೆ ಮುಂದಿನ ಐದನೇ ಯೋಜನೆಗೆ ಸದ್ಯದಲ್ಲಿಯೇ ಚಾಲನೆ ಸಿಗಲಿದೆ ಎಂಬುದಾಗಿಯೂ ತಿಳಿಸಿದ್ದಾರೆ.


ಸಿಎಂ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬರುವ ಮೊದಲು ನೀಡಿದ ಭರವಸೆಯಂತೆ ಈಗಾಗಲೇ ಐದು ಗ್ಯಾರಂಟಿ ಯೋಜನೆಗಳು ಜಾರಿಗೆ ಬಂದಿವೆ. ತಾವು ಭರವಸೆ ಕೊಟ್ಟಂತೆ ನಡೆದುಕೊಂಡಿದ್ದೇವೆ ಪ್ರತಿದಿನ 50ರಿಂದ 60 ಲಕ್ಷ ಮಹಿಳೆಯರು ಉಚಿತ ಬಸ್ (free bus) ನಲ್ಲಿ ಶಕ್ತಿ ಯೋಜನೆ (Shakti scheme) ಯ ಅಡಿಯಲ್ಲಿ ಪ್ರಯಾಣಿಸುವಂತಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರ ವಾರ್ಷಿಕ 40,000 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ.


ಅದೇ ರೀತಿ ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಯ (Annabhagya scheme) ಅಡಿಯಲ್ಲಿ 4.42 ಕೋಟಿ ಜನರಿಗೆ 5 ಕೆಜಿ ಉಚಿತ ಅಕ್ಕಿಯ ಜೊತೆಗೆ ಐದು ಕೆಜಿ ಅಕ್ಕಿಯ ಬದಲು ಹಣವನ್ನು ಹಾಕುವ ಪ್ರಕ್ರಿಯೆ ನಡೆಯುತ್ತಿದ್ದು ಇದಕ್ಕಾಗಿ ವಾರ್ಷಿಕ 10,000 ಕೋಟಿ ಮೀಸಲಿಟ್ಟಿದ್ದೇವೆ.


ಇನ್ನು ಗೃಹ ಜ್ಯೋತಿ ಯೋಜನೆ (grahaJyothi scheme) ಯ ಅಡಿಯಲ್ಲಿ 2.14 ಕೋಟಿ ಗ್ರಾಹಕರು ಉಚಿತ ವಿದ್ಯುತ್ (Free Electricity) ಅನ್ನು ಕೂಡ ಪಡೆದುಕೊಳ್ಳುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ 1.28 ಕೋಟಿ ಫಲಾನುಭವಿಗಳು ಇದ್ದು ಇದಕ್ಕಾಗಿಯೂ ಸಾವಿರಾರು ಕೋಟಿ ಮೀಸಲಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಕನಸಿನ ಯೋಜನೆ ಆಗಿರುವ ಶಕ್ತಿ ಯೋಜನೆ ಗೃಹ ಲಕ್ಷ್ಮಿ ಯೋಜನೆ, ಗೃಹ ಜ್ಯೋತಿ ಯೋಜನೆ ಅನ್ನಭಾಗ್ಯ ಯೋಜನೆ ಈ ನಾಲ್ಕು ಯೋಜನೆಗಳು ಯಶಸ್ವಿಯಾಗಿರುವ ಕುರಿತು ಮಾತನಾಡಿದ್ದಾರೆ.


ಯುವನಿಧಿ ಯೋಜನೆಯಲ್ಲಿ ಯಾರಿಗೆ ಎಷ್ಟು ಹಣ?


ವೃತ್ತಿಪರ ಕೋರ್ಸ್ ಸೇರಿದಂತೆ ಪದವಿ ಪಡೆದಿರುವ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು 3000 ರೂ. ಹಾಗೂ ಡಿಪ್ಲೋಮೋ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು 1500 ರೂ.ಗಳನ್ನು ಯುವನಿಧಿ ಯೋಜನೆಯ ಅಡಿಯಲ್ಲಿ ವಿತರಿಸಲಾಗುವುದು.


2022 23ನೇ ಸಾಲಿನಲ್ಲಿ ಉತ್ತೀರ್ಣರಾಗಿ ಆರು ತಿಂಗಳವರೆಗೆ ಉದ್ಯೋಗ ಸಿಗದೇ ಇರುವ ನಿರುದ್ಯೋಗಿಗಳಿಗೆ, ಎರಡು ವರ್ಷಗಳವರೆಗೆ ಅಂದರೆ ಉದ್ಯೋಗ ಸಿಗುವವರೆಗೆ ಈ ನಿರುದ್ಯೋಗ ಭತ್ಯೆ ಸಿಗಲಿದೆ.

ಯುವನಿಧಿ ಯೋಜನೆ ಸದ್ಯದಲ್ಲಿಯೇ ಜಾರಿ:

ಉಳಿದ ನಾಲ್ಕು ಯೋಜನೆಗಳಂತೆ ಡಿಪ್ಲೋಮೋ ಹಾಗೂ ಪದವೀಧರ ನಿರುದ್ಯೋಗಿ ಯುವಕ ಯುವತಿಯರಿಗೆ ಪ್ರತಿ ತಿಂಗಳು ಅವರ ಖಾತೆಗೆ (Bank Account) ಸಾವಿರದ ಐದುನೂರು ರೂಪಾಯಿಗಳನ್ನು ಹಾಕುವ ಪ್ರಕ್ರಿಯೆ ಸದ್ಯದಲ್ಲಿ ಆರಂಭವಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.


ಸೆಪ್ಟೆಂಬರ್ ನಿಂದಲೇ ಯುವ ನಿಧಿ ಯೋಜನೆಗೂ ಕೂಡ ಚಾಲನೆ ಸಿಗುವ ಸಾಧ್ಯತೆ ಇದೆ. ಆದ್ದರಿಂದ ಗೃಹಲಕ್ಷ್ಮಿ ಯೋಜನೆಯ ಹಣದ ಜೊತೆಗೆ ಅದೇ ಕುಟುಂಬದ ನಿರುದ್ಯೋಗಿ ಯುವಕ ಯುವತಿಯರಿಗೂ ಕೂಡ ಸದ್ಯದಲ್ಲಿಯೇ ಸರ್ಕಾರದಿಂದ ಗುಡ್ ನ್ಯೂಸ್ ಸಿಗಲಿದೆ.



Previous Post Next Post