Tirupati: ತಿರುಪತಿಗೆ ಹೋದಾಗ ಮುಡಿ ದಾನವನ್ನೇಕೆ ಮಾಡಬೇಕು..? ಪ್ರಯೋಜನ ಗೊತ್ತೇ..?

 Tirupati hair donation: 

ತಿರುಪತಿಗೆ ಭೇಟಿ ನೀಡಿದ ಭಕ್ತರು ಮುಡಿದಾನ ಮಾಡುವುದು ವಾಡಿಕೆ. ತಿರುಪತಿಯಲ್ಲಿ ನಾವು ಮುಡಿದಾನ ಅಂದರೆ ತಲೆ ಕೂದಲನ್ನು ಏಕೆ ದಾನ ಮಾಡಬೇಕು..? ತಿರುಪತಿಯಲ್ಲಿ ಮುಡಿ ದಾನ ಮಾಡುವುದರ ಪ್ರಯೋಜನವೇನು ಗೊತ್ತೇ..?



ದೇಶದ ಶ್ರೀಮಂತ ದೇವಾಲಯಗಳ ಸಾಲಿನಲ್ಲಿ ತಿರುಮಲ ತಿರುಪತಿ ಸನ್ನಿಧಾನಕ್ಕೆ ಮೊದಲ ಸ್ಥಾನ. ಶ್ರೀಹರಿ ವಿಷ್ಣುವಿನ ರೂಪಗಳಲ್ಲಿ ಒಂದಾದ ತಿರುಪತಿ ಬಾಲಾಜಿಯನ್ನು ಈ ಸನ್ನಿಧಾನದಲ್ಲಿ ವೆಂಕಟೇಶ್ವರನಾಗಿ ಪೂಜಿಸಲಾಗುತ್ತದೆ. ಇಲ್ಲಿ ಸಾಕ್ಷಾತ್‌ ವಿಷ್ಣುವೇ ವೆಂಕಟೇಶ್ವರನ ರೂಪದಲ್ಲಿ ನೆಲೆಸಿದ್ದಾನೆ ಎನ್ನುವ ನಂಬಿಕೆಯಿದೆ. ಇಲ್ಲಿ ವಿಷ್ಣುವನ್ನು ವೆಂಕಟೇಶ್ವರನೆಂದು ಇಂದಿಗೂ ಪೂಜಿಸಲಾಗುತ್ತದೆ. ಈ ಪವಿತ್ರ ಸನ್ನಿಧಾನದಲ್ಲಿ ಅನೇಕ ಆಚರಣೆಗಳನ್ನು, ಸಂಪ್ರದಾಯಗಳನ್ನು ನಡೆಸಲಾಗುತ್ತದೆ. ಅವುಗಳಲ್ಲಿ ತಲೆ ಕೂದಲು ದಾನ ಅಥವಾ ಮುಡಿ ದಾನವೂ ಒಂದಾಗಿದೆ. ಇಲ್ಲಿ ಮುಡಿ ದಾನವನ್ನೇಕೆ ಮಾಡುತ್ತಾರೆ ಗೊತ್ತೇ..?

1. ತಿರುಪತಿಯಲ್ಲೇಕೆ ಮುಡಿ ದಾನ ಮಾಡಬೇಕು..?

ಸಾಮಾನ್ಯವಾಗಿ ತಿರುಪತಿಗೆ ಭೇಟಿ ನೀಡಿದ ತಿಮ್ಮಪ್ಪನ ಭಕ್ತರು ಮುಡಿ ದಾನ ಮಾಡುವ ಸಂಪ್ರದಾಯವನ್ನು ಹೊಂದಿರುತ್ತಾರೆ. ಇಲ್ಲಿ ಮುಡಿ ದಾನ ಮಾಡುವುದರಿಂದ ನಾವು ಅನೇಕ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ. ತಿರುಪತಿಯಲ್ಲಿ ಮುಡಿ ದಾನ ಮಾಡುವುದರಿಂದ ಲಕ್ಷ್ಮಿ ದೇವಿಯು ಸಂತುಷ್ಟಳಾಗುತ್ತಾಳೆ. ಇದರಿಂದ ನಿಮಗೆ ಲಕ್ಷ್ಮಿ ದೇವಿಯ ಆಶೀರ್ವಾದವು ಪ್ರಾಪ್ತವಾಗುತ್ತದೆ. ಇದರಿಂದ ಆ ವ್ಯಕ್ತಿಯು ಎಂದಿಗೂ ತನ್ನ ಜೀವನದಲ್ಲಿ ಹಣದ ಸಮಸ್ಯೆಗಳನ್ನು ಎದುರಿಸುವುದಿಲ್ಲ. ತಿರುಪತಿ ಮುಡಿ ದಾನ ಮಾಡುವುದರಿಂದ ವ್ಯಕ್ತಿಯ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರಾಗಿ, ಅಪಾರ ಸಂಪತ್ತನ್ನು ಪಡೆದುಕೊಳ್ಳುತ್ತಾರೆ.

ಹೆಚ್ಚಿನ ಜನರು ಇಲ್ಲಿ ತಲೆ ಕೂದಲು ಅಂದರೆ ಮುಡಿ ದಾನ ಮಾಡುವುದರಿಂದ ವಿಷ್ಣುವಿನ ಅಂದರೆ ವೆಂಕಟೇಶ್ವರ ಆಶೀರ್ವಾದ ಪ್ರಾಪ್ತವಾಗುತ್ತದೆ ಎಂದು ತಿಳಿದುಕೊಂಡಿರುತ್ತಾರೆ. ಆದರೆ, ಇದರಿಂದ ನೀವು ಕೇವಲ ವಿಷ್ಣುವಿನ ಮಾತ್ರವಲ್ಲ, ಲಕ್ಷ್ಮಿ ದೇವಿಯ ಆಶೀರ್ವಾದವನ್ನೂ ಪಡೆದುಕೊಳ್ಳುವಿರಿ

2. ತಿರುಪತಿಯಲ್ಲಿ ಮುಡಿ ನೀಡುವುದರ ಪ್ರಯೋಜನ:

- ತಿರುಪತಿ ಬಾಲಾಜಿ ದೇವಸ್ಥಾನದಲ್ಲಿ ಓರ್ವ ವ್ಯಕ್ತಿಯು ಮುಡಿ ದಾನ ಮಾಡುವುದರಿಂದ ಅವನು ತನ್ನ ಸಂಪಾದನೆಯಲ್ಲಿ 10 ಪಟ್ಟು ಹೆಚ್ಚು ಹಣವನ್ನು ಪಡೆದುಕೊಳ್ಳುತ್ತಾನೆ ಎಂದು ಹೇಳಲಾಗಿದೆ.

- ಲಕ್ಷ್ಮಿ ದೇವಿಯ ಆಶೀರ್ವಾದ

- ವಿಷ್ಣುವಿನ ಆಶೀರ್ವಾದ

- ಮನಸ್ಸಿನ ಚಿಂತೆಗಳು ದೂರ

3. ಮುಡಿ ದಾನ ಮಾಡುವುದರ ಹಿಂದಿನ ಕಥೆ:

ಸ್ವಾಮಿ ವೆಂಕಟೇಶ್ವರನು ಪದ್ಮಾವತಿಯನ್ನು ವಿವಾಹವಾದಾಗ, ವಿವಾಹ ಸಂಪ್ರದಾಯದ ಪ್ರಕಾರ, ವಿವಾಹಕ್ಕೂ ಮುನ್ನ ಶುಲ್ಕವನ್ನು ಕಡ್ಡಾಯವಾಗಿ ಪಾವತಿಸಬೇಕಾಗಿತ್ತು. ಈ ಕಾರಣಕ್ಕಾಗಿ ವೆಂಕಟೇಶ್ವರನು ಕುಬೇರನ ಬಳಿ ಸಾಲವನ್ನು ಪಡೆದುಕೊಂಡು ತೀರಿಸುವುದಾಗಿ ಭರವಸೆಯನ್ನು ನೀಡುತ್ತಾನೆ. ಅದೇ ಸಮಯದಲ್ಲಿ ಲಕ್ಷ್ಮಿ ದೇವಿಯು ಯಾವ ವ್ಯಕ್ತಿ ವೆಂಕಟೇಶ್ವರರ ಸಾಲವನ್ನು ತೀರಿಸಲು ಸಹಾಯ ಮಾಡುತ್ತಾರೋ ಅವರ ಸಂಪತ್ತು 10 ಪಟ್ಟು ಹೆಚ್ಚಾಗುತ್ತದೆ ಎಂದು ಹೇಳುತ್ತಾಳೆ. ಈ ಕಾರಣಕ್ಕಾಗಿ ಭಕ್ತರು ಈ ಸನ್ನಿಧಾನಕ್ಕೆ ಭೇಟಿ ನೀಡಿದಾಗಲೆಲ್ಲಾ ತಮ್ಮ ಮುಡಿಯನ್ನು ದಾನ ನೀಡುತ್ತಾರೆ.

4. ಮುಡಿ ದಾನಕ್ಕೆ ಸಂಬಂಧಿಸಿದ ನಂಬಿಕೆ:

ಇನ್ನು ಕಥೆಯನ್ನು ಹೊರತುಪಡಿಸಿ ನಂಬಿಕೆಯ ಪ್ರಕಾರ, ಯಾವ ವ್ಯಕ್ತಿ ಈ ಸ್ಥಳದಲ್ಲಿ ತನ್ನ ಮುಡಿಯನ್ನು ದಾನ ಮಾಡುತ್ತಾನೋ ಅವನ ಪಾಪಗಳೆಲ್ಲವೂ ಕಳೆಯುವುದು ಹಾಗೂ ಅವನ ಜೀವನದ ಸಂಕಷ್ಟಗಳೆಲ್ಲಾ ದೂರಾಗುವುದು ಎನ್ನುವ ನಂಬಿಕೆಯಿದೆ.

ಈ ಮೇಲಿನ ಕಾರಣಕ್ಕಾಗಿ ವೆಂಕಟೇಶ್ವರನ ಭಕ್ತರು ತಿರುಪತಿಗೆ ಭೇಟಿ ನೀಡಿದಾಗಲೆಲ್ಲಾ ತಮ್ಮ ಮುಡಿ ದಾನ ಮಾಡಿ ಬರುತ್ತಾರೆ. ಇದು ಅವರಿಗೆ ಪಾಪಗಳಿಂದ ಮುಕ್ತಿಯನ್ನು ಪಡೆದುಕೊಳ್ಳಲು ಹಾಗೂ ಲಕ್ಷ್ಮಿ ವೆಂಕಟೇಶ್ವರರ ಆಶೀರ್ವಾದವನ್ನು ಪಡೆದುಕೊಳ್ಳಲು ಸಹಾಯ ಮಾಡುತ್ತದೆ.

Previous Post Next Post