Chitradurga DCC Bank Recruitment 2023:
ಚಿತ್ರದುರ್ಗ ಜಿಲ್ಲಾ ಸಹಕಾರಿ ಕೇಂದ್ರೀಯ ಬ್ಯಾಂಕ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 68 ಸೆಕೆಂಡ್ ಡಿವಿಶನ್ ಅಸಿಸ್ಟೆಂಟ್, ಡ್ರೈವರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಅಕ್ಟೋಬರ್ 16, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಚಿತ್ರದುರ್ಗದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಬ್ಯಾಂಕಿಂಗ್ ಉದ್ಯೋಗ ಹುಡುಕುತ್ತಿರುವ ಸ್ಥಳೀಯ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.
ಅಕ್ಟೋಬರ್ 16, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಚಿತ್ರದುರ್ಗದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ
ಚಿತ್ರದುರ್ಗ ಜಿಲ್ಲಾ ಸಹಕಾರಿ ಕೇಂದ್ರೀಯ ಬ್ಯಾಂಕ್
ಹುದ್ದೆ
ಸೆಕೆಂಡ್ ಡಿವಿಶನ್ ಅಸಿಸ್ಟೆಂಟ್, ಡ್ರೈವರ್
ಒಟ್ಟು ಹುದ್ದೆ
68
ವಿದ್ಯಾರ್ಹತೆ
10ನೇ ತರಗತಿ, ಪದವಿ, ಸ್ನಾತಕೋತ್ತರ ಪದವಿ
ವೇತನ
ಮಾಸಿಕ ₹ 40,900-78,200
ಉದ್ಯೋಗದ ಸ್ಥಳ
ಚಿತ್ರದುರ್ಗ
ಅರ್ಜಿ ಸಲ್ಲಿಸಲು ಕೊನೆಯ ದಿನ
ಅಕ್ಟೋಬರ್ 16, 2023
ಹುದ್ದೆಯ ಮಾಹಿತಿ:
ಅಸಿಸ್ಟೆಂಟ್ ಜನರಲ್ ಮ್ಯಾನೇಜರ್- 6
ಪ್ರಥಮ ದರ್ಜೆ ಸಹಾಯಕ (FDA)- 9
ದ್ವಿತೀಯ ದರ್ಜೆ ಸಹಾಯಕ (SDA)- 35
ಕಂಪ್ಯೂಟರ್ ಎಂಜಿನಿಯರ್- 2
ಡ್ರೈವರ್- 2
ಅಟೆಂಡರ್- 14
ವಿದ್ಯಾರ್ಹತೆ:
ಅಸಿಸ್ಟೆಂಟ್ ಜನರಲ್ ಮ್ಯಾನೇಜರ್- ಸ್ನಾತಕೋತ್ತರ ಪದವಿ
ಪ್ರಥಮ ದರ್ಜೆ ಸಹಾಯಕ (FDA)- ಪದವಿ
ದ್ವಿತೀಯ ದರ್ಜೆ ಸಹಾಯಕ (SDA)- ಪದವಿ
ಕಂಪ್ಯೂಟರ್ ಎಂಜಿನಿಯರ್- ಕಂಪ್ಯೂಟರ್ ಸೈನ್ಸ್ನಲ್ಲಿ ಬಿ.ಎಸ್ಸಿ, ಬಿಇ, ಬಿಸಿಎ
ಡ್ರೈವರ್- 10ನೇ ತರಗತಿ
ಅಟೆಂಡರ್- 10ನೇ ತರಗತಿ
ವಯೋಮಿತಿ:
ಚಿತ್ರದುರ್ಗ ಜಿಲ್ಲಾ ಸಹಕಾರಿ ಕೇಂದ್ರೀಯ ಬ್ಯಾಂಕ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಅಕ್ಟೋಬರ್ 16, 2023ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ:
ಪ್ರವರ್ಗ-2ಎ/2ಬಿ/3ಎ &3ಬಿ ಅಭ್ಯರ್ಥಿಗಳು- 3 ವರ್ಷ
SC/ST/ ಪ್ರವರ್ಗ-1 ಅಭ್ಯರ್ಥಿಗಳು- 5 ವರ್ಷ
PH/ ವಿಧವಾ ಅಭ್ಯರ್ಥಿಗಳು- 10 ವರ್ಷ
ವೇತನ:
ಅಸಿಸ್ಟೆಂಟ್ ಜನರಲ್ ಮ್ಯಾನೇಜರ್- ಮಾಸಿಕ ₹ 40,900-78,200
ಪ್ರಥಮ ದರ್ಜೆ ಸಹಾಯಕ (FDA)- ಮಾಸಿಕ ₹ 37,900- 70,850
ದ್ವಿತೀಯ ದರ್ಜೆ ಸಹಾಯಕ (SDA)- ಮಾಸಿಕ ₹ 30,350-58,250
ಕಂಪ್ಯೂಟರ್ ಎಂಜಿನಿಯರ್- ಮಾಸಿಕ ₹ 30,350- 58,250
ಡ್ರೈವರ್- ಮಾಸಿಕ ₹ 27,650-52,650
ಅಟೆಂಡರ್- ಮಾಸಿಕ ₹ 23,500-47,650
ಅರ್ಜಿ ಶುಲ್ಕ:
SC/ST/ ಪ್ರವರ್ಗ-1/PH/ವಿಧವಾ & ಮಾಜಿ ಸೈನಿಕ ಅಭ್ಯರ್ಥಿಗಳು- 750 ರೂ.
ಸಾಮಾನ್ಯ/ ಪ್ರವರ್ಗ-2ಎ/2ಬಿ/3ಎ & 3ಬಿ ಅಭ್ಯರ್ಥಿಗಳು- 1500 ರೂ.
ಪಾವತಿಸುವ ಬಗೆ- ಆನ್ಲೈನ್
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ಉದ್ಯೋಗದ ಸ್ಥಳ:
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 15/09/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಅಕ್ಟೋಬರ್ 16, 2023
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ದೂರವಾಣಿ ಸಂಖ್ಯೆ 9019796412 ಗೆ ಕರೆ ಮಾಡಿ.