Health Tips: ಬಾಳೆಹಣ್ಣನ್ನು ಈ ರೀತಿ ತಿನ್ನುವುದು ಕೂಡ ಹಾನಿಕಾರಕ ಎಂಬುವುದು ನಿಮಗೆ ಗೊತ್ತಾ? ಹೌದು, ಬಾಳೆಹಣ್ಣನ್ನು ಯಾವಾಗ ಮತ್ತು ಹೇಗೆ ತಿನ್ನಬೇಕು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಏಕೆಂದರೆ ಇದರಿಂದ ನಿಮಗೆ ಅಗತ್ಯವಿರುವ ಸಂಪೂರ್ಣ ಪೋಷಕಾಂಶಗಳು ಮತ್ತು ಪ್ರಯೋಜನಗಳು ಸಿಗುತ್ತದೆ
ಬಾಳೆಹಣ್ಣು ಎಲ್ಲಾ ಸೀಸನ್ನಲ್ಲಿಯೂ ಸಿಗುವ ಒಂದು ಸೂಪರ್ ಫುಡ್ ಆಗಿದೆ. ಬಾಳೆಹಣ್ಣು ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಹಾಗಾಗಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ಬಾಳೆಹಣ್ಣನ್ನು ಕೊಯ್ದು , ಸಿಪ್ಪೆ ಸುಲಿದು ಬೇಕಾದಗೆಲ್ಲಾ ತಿನ್ನುತ್ತಾರೆ.

ಆದರೆ ಬಾಳೆಹಣ್ಣನ್ನು ಈ ರೀತಿ ತಿನ್ನುವುದು ಕೂಡ ಹಾನಿಕಾರಕ ಎಂಬುವುದು ನಿಮಗೆ ಗೊತ್ತಾ? ಹೌದು, ಬಾಳೆಹಣ್ಣನ್ನು ಯಾವಾಗ ಮತ್ತು ಹೇಗೆ ತಿನ್ನಬೇಕು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಏಕೆಂದರೆ ಇದರಿಂದ ನಿಮಗೆ ಅಗತ್ಯವಿರುವ ಸಂಪೂರ್ಣ ಪೋಷಕಾಂಶಗಳು ಮತ್ತು ಪ್ರಯೋಜನಗಳು ಸಿಗುತ್ತದೆ.

ಬೆಳಗ್ಗೆ ಬಾಳೆಹಣ್ಣು ತಿನ್ನುವುದು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಇದು ಹೆಚ್ಚಿನ ಪ್ರಮಾಣದ ಕಾರ್ಬೋಹೈಡ್ರೇಟ್ಗಳನ್ನು ಹೊಂದಿರುತ್ತದೆ. ಇದು ನಮಗೆ ತ್ವರಿತ ಶಕ್ತಿಯನ್ನು ನೀಡುತ್ತದೆ. ಹಾಗಾಗಿ ಬೆಳಗಿನ ಉಪಾಹಾರದ ಸಮಯದಲ್ಲಿ ಬಾಳೆಹಣ್ಣು ತಿನ್ನಲು ಉತ್ತಮ ಸಮಯ.
ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದೆ, ಇದು ಎಲೆಕ್ಟ್ರೋಲೈಟ್ ಆಗಿದೆ. ಇದು ಸ್ನಾಯುಗಳನ್ನು ಬಲವಾಗಿಡಲು ಸಹಾಯ ಮಾಡುತ್ತದೆ. ಆದ್ದರಿಂದ ವ್ಯಾಯಾಮಕ್ಕೂ ಮುನ್ನ ಅಥವಾ ನಂತರ ಬಾಳೆಹಣ್ಣು ತಿನ್ನುವುದು ಎಲೆಕ್ಟ್ರೋಲೈಟ್ಗಳನ್ನು ಮರುಪೂರಣಗೊಳಿಸಲು ಮತ್ತು ನಿಮ್ಮನ್ನು ಶಕ್ತಿಯುತವಾಗಿರಿಸಲು ಸಹಾಯ ಮಾಡುತ್ತದೆ.
ರಾತ್ರಿ ಬಾಳೆಹಣ್ಣು ತಿನ್ನುವುದರಿಂದ ದೇಹದಲ್ಲಿ ಸಿರೊಟೋನಿನ್ ಉತ್ಪತ್ತಿಯಾಗುತ್ತದೆ. ಸಿರೊಟೋನಿನ್ ಮೆದುಳಿನ ಹಾರ್ಮೋನ್ ಆಗಿದ್ದು, ಇದು ನಿಮ್ಮ ನಿದ್ರೆಯನ್ನು ಸುಧಾರಿಸುತ್ತದೆ. ಬಾಳೆಹಣ್ಣಿನಲ್ಲಿ ಟ್ರಿಪ್ಟೊಫಾನ್ ಎಂಬ ಅಮೈನೋ ಆಮ್ಲವೂ ಇದೆ, ಇದು ಸಿರೊಟೋನಿನ್ ಉತ್ಪಾದನೆಗೆ ಸಹಾಯ ಮಾಡುತ್ತದೆ. ಹಾಗಾಗಿ ರಾತ್ರಿ ಹೊತ್ತು ನೀವು ಬಾಳೆಹಣ್ಣು ತಿಂದರೆ, ನಿಮ್ಮ ನಿದ್ರೆಯ ಗುಣಮಟ್ಟ ಸುಧಾರಿಸುತ್ತದೆ.
ಹಾಗಾದರೆ ಬಾಳೆಹಣ್ಣನ್ನು ಯಾವಾಗ ತಿನ್ನಬಾರದು ಎಂದರೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬಾರದು. ಹಾಗೆಯೇ ನೀವು ಹಾಲಿನೊಂದಿಗೆ ಬಾಳೆಹಣ್ಣನ್ನು ತಿನ್ನಬಾರದು. ಏಕೆಂದರೆ ಇದು ತೂಕವನ್ನು ಹೆಚ್ಚಿಸುತ್ತದೆ.
ಜೊತೆಗೆ ಜೀರ್ಣಕಾರಿ ಸಮಸ್ಯೆಗಳು, ವಾಕರಿಕೆ ಮತ್ತು ವಾಂತಿಗೆ ಕಾರಣವಾಗುತ್ತದೆ. (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. news18ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)