ನಮಸ್ಕಾರ ಸ್ನೇಹಿತರೇ.., ನೀವು ಸರ್ಕಾರದ ಸಹಾಯಧನದ ಮೂಲಕ ಜಮೀನ ಖರೀದಿ ಮಾಡಬೇಕೆ? ಕರ್ನಾಟಕ ಸರ್ಕಾರದ 25 ಲಕ್ಷ ರೂ., 20 ಲಕ್ಷ ರೂ. ಸಬ್ಸಿಡಿ ಮತ್ತು ಸಾಲಸೌಲಭ್ಯ ಪಡೆಯಬೇಕೇ? ಭೂ ಒಡೆತನ ಯೋಜನೆ (Land Purchase Scheme 2023) ಯ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಈ ಯೋಜನೆಯ ಬಗ್ಗೆ ಮಾಹಿತಿ ಪಡೆದು ಪ್ರಯೋಜನ ಪಡೆದುಕೊಳ್ಳಿ.
ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ತಮ್ಮ ವಾಸ ಸ್ಥಳದಿಂದ 10 ಕಿ.ಮೀ ವ್ಯಾಪ್ತಿಯೊಳಗೆ ಕೃಷಿಯೋಗ್ಯವಾದ 02 ಎಕರೆ ಖುಷ್ಕ ಅಥವಾ 01 ಎಕರೆ ತರಿ ಜಮೀನು ಖರೀದಿಸಲು ಸಹಾಯಧನ ಮತ್ತು ಸಾಲ ನೀಡಲಾಗುತ್ತದೆ. ಭೂ ಒಡೆತನ ಯೋಜನೆಯಡಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ರಾಮನಗರ ಜಿಲ್ಲೆಗಳಿಗೆ ನಿಗದಿಪಡಿಸಿರುವ ಘಟಕ ವೆಚ್ಚ ರೂ. 25 ಲಕ್ಷ ಹಾಗೂ ಇನ್ನೂಳಿದ ಜಿಲ್ಲೆಗಳಿಗೆ ರೂ. 20 ಲಕ್ಷ ನೀಡಲಾಗುತ್ತದೆ. ಇದರಲ್ಲಿ ಶೇ 50% ರಷ್ಟು ಸಹಾಯಧನ ಮತ್ತು ಇನ್ನೂಳಿದ ಶೇ 50% ಸಾಲ ನೀಡುತ್ತಾರೆ.
Land Purchase Scheme 2023 Karnataka ಮಾಹಿತಿ:
ಯೋಜನೆಯ ಹೆಸರು: ಭೂ ಒಡೆತನ ಯೋಜನೆ (Land Purchase Scheme)
ಸಹಾಯಧನ ಮೊತ್ತ: 25 ಲಕ್ಷ ರೂ. ಹಾಗೂ 20 ಲಕ್ಷ ರೂ. ಇದರಲ್ಲಿ ಶೇ 50% ರಷ್ಟು ಸಹಾಯಧನ ಮತ್ತು ಶೇ 50% ಸಾಲ ಸೌಲಭ್ಯ
Land Purchase Scheme ಬೇಕಾಗುವ ದಾಖಲೆಗಳು:
ಭಾವಚಿತ್ರ
ಜಾತಿ ಪ್ರಮಾಣಪತ್ರ (Caste Certificate)
ಆದಾಯ ಪ್ರಮಾಣಪತ್ರ (Income Certificate)
ಆಧಾರ್ ಕಾರ್ಡ್ ಪ್ರತಿ (ನಿವಾಸದ ಪುರಾವೆ)
ಕೃಷಿ ಕಾರ್ಮಿಕರ ದೃಡೀಕರಣ ಪತ್ರ
Bhoo Odetana Yojane Karnataka 2023: ಯಾರು ಅರ್ಜಿ ಸಲ್ಲಿಸಬಹುದು?
ಭೂ ಒಡೆತನ ಯೋಜನೆಗೆ ಈ ಕೆಳಗಿನ ನಿಗಮಗಳ ವ್ಯಾಪ್ತಿಯಲ್ಲಿ ಬರುವ ಸಮುದಾಯದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ,
ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ,
ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ,
ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ,
ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗದು,
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮ.
2023-2024ನೇ ಸಾಲಿನಲ್ಲಿ ಪರಿಶಿಷ್ಟ ಜಾತಿಗಳ ಆರ್ಥಿಕ ಅಭಿವೃದ್ಧಿಗಾಗಿ ಭೂ ಒಡೆತನ ಯೋಜನೆಯ ಅರ್ಜಿ ಆಹ್ವಾನಿಸಲಾಗುತ್ತಿದೆ.
Land Purchase Scheme 2023 Karnataka ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಸೇವಾ ಸಿಂಧು ಪೊರ್ಟಲ್ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆ ಲಿಂಕ್‌ನ್ನು ಕೇಳಗೆ ನೀಡಲಾಗಿದೆ.
ಪ್ರಮುಖ ದಿನಾಂಕಗಳು:
ಭೂ ಒಡೆತನ ಯೋಜನೆ ಯೋಜನೆಗೆ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: -10-2023 (Update Soon)
Bhoo Odethana Yojane Karnataka 2023 Application Link:
ಆನ್‌ಲೈನ್ ಅರ್ಜಿ ಲಿಂಕ್: ಇಲ್ಲಿ ಕ್ಲಿಕ್ ಮಾಡಿ (Available Soon)
ಅಧಿಕೃತ ವೆಬ್‌ಸೈಟ್:
ವಿಷೇಶ ಸೂಚನೆಗಳು:
2022-2023ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿದವರು ಮತ್ತೋಮ್ಮೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.
ಸರ್ಕಾರದ ಸಾಂಸ್ಥಿಕ ಕೋಟಾ ಮತ್ತು ಮಂಡಳಿ ಕೋಟಾದಡಿ ಸೌಲಭ್ಯ ಪಡೆಯಲು ಇಚ್ಚಿಸುವ ಫಲಾಪೇಕ್ಷಿಗಳು ಸಹ ಸೇವಾ ಸಿಂಧು ಪೊರ್ಟಲ್ʼನಲ್ಲಿ ಅರ್ಜಿ ಸಲ್ಲಿಸುವುದು.
ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು. ನಂತರ ಬಂದ ಅರ್ಜಿಗಳನ್ನು ಪರಿಗಣಿಸುವುದಿಲ್ಲ.
ಫಲಾಪೇಕ್ಷಿಗಳು ‘ಗ್ರಾಮಒನ್ʼ, ʼಬೆಂಗಳೂದುಒನ್ʼ, ʼಕರ್ನಾಟಕಒನ್ʼ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು.
ನಿಯಮಗಳು: ಮಂಜೂರಾತಿ ಪಡೆದ ಫಲಾನುಭವಿಯು ಅನರ್ಹರೆಂದು ಕಂಡು ಬಂದಲ್ಲಿ ಮಂಜೂರಾತಿಯನ್ನು ಯಾವುದೇ ಹಂತದಲ್ಲಿ ರದ್ದು ಪಡಿಸಲಾಗುತ್ತದೆ.