ರೇಷನ್ ಕಾರ್ಡ್ ಅನ್ನು ವಿತರಣೆ ಮಾಡಿದ ನಂತರ ಹೊಸ ಅರ್ಜಿಗಳ ಸ್ವೀಕರಣೆ ಪ್ರಾರಂಭಿಸುವುದಾಗಿ ಇದೀಗ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಇದೀಗ ಮಾಧ್ಯಮಗಳಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಆಧಾರ್ ಕಾರ್ಡ್ ಜೊತೆಗೆ ಕೆಲವು ಸರ್ಕಾರಿ ಕೆಲಸಗಳಿಗೆ ಪಡಿತರ ಚೀಟಿ ಬಹಳ ಮುಖ್ಯವಾದ ದಾಖಲೆಯಾಗಿದೆ. ಇನ್ನು ಸರ್ಕಾರದ ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ (Gruha Lakshmi Yojana) ಲಾಭ ಪಡೆಯಲು, ರೇಷನ್ ಕಾರ್ಡ್ (Ration Card) ಬಹಳ ಮುಖ್ಯ ಎನ್ನುವುದು ನಿಮ್ಮೆಲ್ಲರಿಗೂ ಗೊತ್ತಿರುವ ವಿಚಾರ.
ರೇಷನ್ ಕಾರ್ಡ್ ನಲ್ಲಿ ಮನೆಯ ಯಜಮಾನಿ ಮಹಿಳೆಯಾಗಿದ್ದರೆ ಮಾತ್ರ ಅಂತವರು ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯಲು ಸಾಧ್ಯ. ಇನ್ನು ಅನೇಕರು ತಮ್ಮ ರೇಷನ್ ಕಾರ್ಡ್ ನಲ್ಲಿ ಕೆಲವು ತಪ್ಪುಗಳಿದ್ದು, ಅದನ್ನು ತಿದ್ದು ಪಡಿ (Corrections) ಮಾಡಿಸಲು ಮತ್ತೊಮ್ಮೆ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಇನ್ನು ಅನೇಕರ ಬಳಿ ರೇಷನ್ ಕಾರ್ಡ್ ಇಲ್ಲದೆ ಇರುವುದನ್ನು ಸಹ ಸರ್ಕಾರ ಗಮನಿಸಿದೆ.
ಇನ್ನು ಹೊಸ ರೇಷನ್ ಕಾರ್ಡ್ ಗೆ ಅರ್ಜಿಗಳನ್ನು ಇನ್ನು ಪ್ರಾರಂಭಿಸಿಲ್ಲ. ಹೊಸ ರೇಷನ್ ಕಾರ್ಡ್ ಪಡೆಯಲು (Apply New Ration Card) ಅರ್ಜಿಗಳನ್ನು ಶೀಘ್ರದಲ್ಲೇ ಪ್ರಾರಂಭಿಸುವುದಾಗಿ ಇದೀಗ ಸರ್ಕಾರದ ಕಡೆಯಿಂದ ಮಾಹಿತಿ ದೊರಕಿದೆ.
ಹೊಸದಾಗಿ ಎಪಿಲ್ (APL) ಮತ್ತು ಬಿಪಿಲ್ (BPL) ರೇಷನ್ ಕಾರ್ಡ್ ಗಳಿಗೆ ಅರ್ಜಿಗಳನ್ನು ಸದ್ಯ ನಿಲ್ಲಿಸಲಾಗಿದೆ. ಈಗಾಗಲೇ ಅನೇಕರು ಹೊಸ ರೇಷನ್ ಕಾರ್ಡ್ ಗಾಗಿ ಅರ್ಜಿಗಳನ್ನು ಸಲ್ಲಿಸಿದ್ದು, ಆದರೂ ಸಹ ಅವರು ರೇಷನ್ ಕಾರ್ಡ್ ಇಲ್ಲದೆ ತುಂಬಾ ತೊಂದರೆಗಳನ್ನು ಎದುರಿಸುತ್ತಿದ್ದಾರೆ.
ಇನ್ನು ಇದೀಗ ಈ ಸಮಸ್ಯೆಗಳಿಗೆ ಇದೀಗ ಸರ್ಕಾರ ಕೊನೆಗೂ ಸ್ಪಂದಿಸಿದೆ. ಹೌದು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಶೀಘ್ರದಲ್ಲೇ ಹೊಸದಾಗಿ APL ಮತ್ತು BPL ಪಡಿತರ ಚೀಟಿಗೆ ಅರ್ಜಿಗಳನ್ನು ಪ್ರಾರಂಭಿಸುವುದಾಗಿ ಮಾಹಿತಿ ಹಂಚಿಕೊಂಡಿದ್ದಾರೆ.
ಗೃಹ ಲಕ್ಷ್ಮೀ ಹಾಗೂ ಅನ್ನಭಾಗ್ಯ ಯೋಜನೆಗಳ ಲಾಭ ಪಡೆಯಲು ರೇಷನ್ ಕಾರ್ಡ್ ಬಹಳ ಮುಖ್ಯವಾದ ದಾಖಲೆಯಾಗಿದೆ. ಕೆಲವರ ಬಳಿ ರೇಷನ್ ಕಾರ್ಡ್ ಇಲ್ಲದೆ ಇರುವುದು ಹಾಗೆ ಇನ್ನು ಕೆಲವರ ರೇಷನ್ ಕಾರ್ಡ್ ನಲ್ಲಿ ಮೃತ ಪಟ್ಟವರ ಹೆಸರು ಅಥವಾ ಮನೆಯ ಯಜಮಾನ ಪುರುಷನ ಹೆಸರು ಇರುವುದು ಈ ರೀತಿ ಅನೇಕ ತಪ್ಪುಗಳಿದ್ದು, ಇವೆಲ್ಲವನ್ನೂ ಸರಿ ಪಡಿಸಿಕೊಳ್ಳಲು ಆದಷ್ಟು ಬೇಗ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿಗಳನ್ನು ಪ್ರಾರಂಭಿಸುವ ಬಗ್ಗೆ ಅಧಿಕಾರಿಗಳು ಮಾತನಾಡಿದ್ದಾರೆ.
ಇನ್ನು ಈಗಾಗಲೇ ಅರ್ಜಿ ಸಲ್ಲಿಸಿದವರಿಗೆ, ಶೇಕಡಾ 75% ರಷ್ಟು ಅರ್ಜಿಗಳನ್ನು ಪರಿಶೀಲಿಸಿದ್ದು, ಇನ್ನು ಮಿಕ್ಕ 25% ಅರ್ಜಿಗಳನ್ನು ಸಹ ಪರಿಶೀಲಿಸಿ, ರೇಷನ್ ಕಾರ್ಡ್ ಅನ್ನು ವಿತರಣೆ ಮಾಡುವುದಾಗಿ ತಿಳಿಸಿದ್ದಾರೆ.
ಈಗಾಗಲೇ ಅರ್ಜಿಗಳನ್ನು ಸಲ್ಲಿಸಿದವರಿಗೆ ರೇಷನ್ ಕಾರ್ಡ್ ಅನ್ನು ವಿತರಣೆ ಮಾಡಿದ ನಂತರ ಹೊಸ ಅರ್ಜಿಗಳ ಸ್ವೀಕರಣೆ ಪ್ರಾರಂಭಿಸುವುದಾಗಿ ಇದೀಗ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಇದೀಗ ಮಾಧ್ಯಮಗಳಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಇನ್ನು ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಯನ್ನು ಪ್ರಾರಂಭಿಸುವವರೆಗೂ ರೇಷನ್ ಕಾರ್ಡ್ ಇಲ್ಲದೆ ಪರದಾಡುತ್ತಿರುವವರಿಗೆ ತೊಂದರೆ ತಪ್ಪಿದ್ದಲ್ಲ.
