ಕೃಷಿ ಯಂತ್ರೋಪಕರಣ ಖರೀದಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ಕೃಷಿ ಯಂತ್ರೋಪಕರಣ ಖರೀದಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ನಮಸ್ಕಾರ ಗೆಳೆಯರೇ ರಾಜ್ಯ ಸರ್ಕಾರದಿಂದ ರಾಜ್ಯದ ರೈತರಿಗೆ ಇದೊಂದು ಗುಡ್ ನ್ಯೂಸ್. ಯಾವ ರೈತರ ಮನೆಯಲ್ಲಿ ಟ್ರ್ಯಾಕ್ಟರ್ ಇದೆಯೋ ಅವರಿಗಂತು ಸಿಹಿ ಸುದ್ದಿ. ರಾಜ್ಯ ಸರ್ಕಾರ ಕೃಷಿ ಯಂತ್ರೋಪಕರಣಗಳನ್ನು ಕೊಂಡುಕೊಳ್ಳಲು ಸಹಾಯಧನಕ್ಕಾಗಿ ಅರ್ಜಿಯನ್ನು ಅವಹಾನಿಸಲಾಗಿದೆ.



2023-2024ನೇ ಸಾಲಿನಲ್ಲಿ ಕೃಷಿ ಯಾಂತ್ರೀಕರಣ ಉಪ ಅಭಿಯಾನದ ತೋಟಗಾರಿಕೆಯಲ್ಲಿ ಯಾಂತ್ರಿಕೀಕರಣದ ಕಾರ್ಯಕ್ರಮದಡಿ ರೈತರು ಕೊಂಡುಕೊಳ್ಳುವ ಅತ್ಯುತ್ತಮ ಗುಣಮಟ್ಟದ ಯಂತ್ರೋಪಕರಣಗಳನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ.


ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಸಣ್ಣ ರೈತರು ಮತ್ತು ಅತಿ ಸಣ್ಣ ರೈತರು ಹಾಗೂ ಮಹಿಳಾ ಆಕಾಂಕ್ಷಿಗಳಿಗೆ ಶೇಕಡಾ 45 ರಿಂದ 50 ರಷ್ಟು ಸಹಾಯಧನ ಸಿಗಲಿದೆ. ಇತರೆ ಅಥವಾ ಸಾಮಾನ್ಯ ವರ್ಗದ ಆಕಾಂಕ್ಷಿಗಳಿಗೆ 35 ರಿಂದ 40 ರಷ್ಟು ಸಹಾಯಧನ ಸಿಗಲಿದೆ ಎಂದು ಈ ಯೋಜನೆ ತಿಳಿಸುತ್ತಿದೆ.

ನೀವು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಇದೇ ತಿಂಗಳು ಒಳಗೆ ಅರ್ಜಿಯನ್ನು ಸಲ್ಲಿಸಬೇಕು ಯಾವ ಯಾವ ತಾರೀಕು ಕೊನೆಯ ದಿನ ಎಂದು ನಾನು ಈ ಆರ್ಟಿಕಲ್ ತಿಳಿಸುತ್ತೇನೆ ಓದುತ್ತಾ ಸಾಗಿ. ಈ ಕೃಷಿ ಯಂತ್ರೋಪಕರಣ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ದಿನಾಂಕ 25 ಸೆಪ್ಟಂಬರ್ 2023 ಕೊನೆಯ ದಿನಾಂಕ ವಾಗಿರುತ್ತದೆ ಈ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸಿ ಸಹಾಯಧನದ ಸದುಪಯೋಗಪಡಿಸಿಕೊಳ್ಳಿ.


ಈ ಯೋಜನೆಯ ಸಹಾಯ ಪಡೆಯಬೇಕೆಂದರೆ ರೈತರು ಇಲಾಖೆಯಿಂದಲೇ ಅನುಮೋದನೆಗೊಂಡ ಯಂತ್ರೋಪಕರಣದ ಉತ್ಪಾದಕರು ಮತ್ತು ಸರಬರಾಜುದಾರರಿಂದ ಕೊಂಡುಕೊಂಡರೆ ಮಾತ್ರ ಸಹಾಯಧನ ಸಿಗುತ್ತದೆ ಎಂದು ಇಲಾಖೆ ಖಚಿತಪಡಿಸಿದೆ.


ನೀವೇನಾದರೂ ಈ ಯೋಜನೆಯ ಸಹಾಯಧನ ಬೇಕೆಂದರೆ ಅಥವಾ ಯಂತ್ರೋಪಕರಣಗಳನ್ನು ಕೊಂಡುಕೊಳ್ಳಲು ಬಯಸಿದರೆ ಎಲ್ಲಿ ಕೊಳ್ಳಬೇಕು ಎಂಬ ಅನುಮಾನ ಇದ್ದರೆ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡು ನಂತರ ಈ ಸಹಾಯಧನವನ್ನು ಸದುಪಯೋಗ ಪಡಿಸಿಕೊಳ್ಳಬಹುದು.


ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳು ಅಥವಾ ಜಿಲ್ಲಾ ಪಂಚಾಯತ್ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದೆಂದು ಜಿಲ್ಲಾ ಪಂಚಾಯತ್ ನ ಹಿರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಸರ್ಕಾರದ ಈ ಯೋಜನೆಯನ್ನು ಸದುಪಯೋಗಪಡಿಸಿಕೊಂಡು ರೈತರು ತಮ್ಮ ಜಮೀನಿನಲ್ಲಿ ಈ ಕೃಷಿ ಯಂತ್ರೋಪಕರಣಗಳಿಂದ ಉಳುಮೆ ಮಾಡಿ ಮತ್ತು ಇನ್ನಿತರ ಕೆಲಸಗಳನ್ನು ಮಾಡಿ ಕೃಷಿಯನ್ನು ಮಾಡಬಹುದು. ಆದ್ದರಿಂದ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ ವಿಚಾರಿಸಿಕೊಂಡು ನಿಮಗೆ ಬೇಕಾದಂತಹ ಯಂತ್ರೋಪಕರಣಗಳನ್ನು ಕೊಂಡುಕೊಳ್ಳಬಹುದು.


ಗೆಳೆಯರೇ ನಾವು ಸರ್ಕಾರದ ಎಲ್ಲಾ ರೈತ ಯೋಜನೆಗಳನ್ನು ನಮ ಈ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡುತ್ತಿರುತ್ತೇವೆ ಆದ್ದರಿಂದ ನಮ್ಮ ವೆಬ್ಸೈಟ್ ಅನ್ನು ಪ್ರತಿದಿನವೂ ಚೆಕ್ ಮಾಡುತ್ತಲೇ ಇರಿ.ಮತ್ತು ನಮ್ಮ ವೆಬ್ಸೈಟ್ ಅನ್ನು ಸಬ್ಸ್ಕ್ರೈಬ್ ಕೂಡ ಮಾಡಿಕೊಳ್ಳಬಹುದು. ಮತ್ತು ನಮ್ಮ ಆರ್ಟಿಕಲ್ ನಲ್ಲಿ ವಾಟ್ಸಪ್ ಗ್ರೂಪ್ ಜಾಯಿನ್ ಬಟನ್ ಇರುತ್ತದೆ ನಮ್ಮ ವಾಟ್ಸಪ್ ಗ್ರೂಪ್ ಕೂಡ ಜಾಯಿನ್ ಆಗಬಹುದು ಜಾಯಿನ್ ಆದರೆ ನಾವು ಅಪ್ಲೋಡ್ ಮಾಡುವ ಪ್ರತಿಯೊಂದು ಲೇಖನದ ಲಿಂಕ್ ಅನ್ನು ವಾಟ್ಸಾಪ್ ಗ್ರೂಪಿಗೆ ಶೇರ್ ಮಾಡುತ್ತಿರುತ್ತೇವೆ.




Post a Comment

Previous Post Next Post

Top Post Ad

CLOSE ADS
CLOSE ADS
×