ಮನೆಯಲ್ಲಿ ಕುಳಿತು, ನಿಮ್ಮ ಬ್ಯಾಂಕ್ ಖಾತೆಯು ಆಧಾರ್ ಕಾರ್ಡ್ ಗೆ ಲಿಂಕ್ ಆಗಿದ್ಯಾ ,ಇಲ್ಲವೋ ಚೆಕ್ ಮಾಡಿ

ಮನೆಯಲ್ಲಿ ಕುಳಿತು, ನಿಮ್ಮ ಬ್ಯಾಂಕ್ ಖಾತೆಯು ಆಧಾರ್ ಕಾರ್ಡ್ ಗೆ ಲಿಂಕ್ ಆಗಿದ್ಯಾ ,ಇಲ್ಲವೋ ಚೆಕ್ ಮಾಡಿ

Bank Seeding Status Check Karnataka

ವಂದನೆಗಳು, ಇವತ್ತು ನಾವು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಇದೆಯೇ ಅಥವಾ ಇಲ್ಲವಾ ? (Aadhaar DBT Bank Seeding Status Check Karnataka) ಎಂಬುದನ್ನು ಹೇಗೆ ಚೆಕ್ ಮಾಡುವುದು ಎಂದು ಸರಳವಾಗಿ ಈ ಕೆಳಗೆ ವಿವರಿಸಲಾಗಿದೆ. ಈ ಮಾಹಿತಿ ಇಷ್ಟವಾದರೆ ನಿಮ್ಮ ಸ್ನೇಹಿತರಿಗೂ ತಪ್ಪದೇ ಶೇರ್ ಮಾಡಲು ಮರೆಯದಿರಿ.



ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಲಿಂಕ್ ಆಗಿದ್ದರೆ ಮಾತ್ರ ನೀವು ಅನ್ನ ಭಾಗ್ಯ, ಗೃಹ ಲಕ್ಷ್ಮಿ ಮುಂತಾದ ಯೋಜನೆಗಳ ಪ್ರಯೋಜನವನ್ನ ಪಡೆಯಲು ಸಾಧ್ಯವಾಗುತ್ತದೆ. ಆಧಾರ್ DBT ಸೀಡಿಂಗ್ ಸ್ಟೇಟಸ್ ಹೇಗೆ ಚೆಕ್(Bank Aadhar DBT Seeding Status Check Kannada) ಮಾಡುವುದು ತುಂಬಾ ಸುಲಭವಾಗಿ ಚೆಕ್ ಮಾಡಬಹದು. ಅದು ಹೇಗೆ ಎಂದು ಚಿತ್ರ ಸಮೇತ ಕೆಳಗೆ ನೀಡಲಾಗಿದೆ ಓದಿ ಅರ್ಥೈಸಿಕೊಳ್ಳಿ.

How to Check Aadhaar DBT Seeding Status

ಆಧಾರ್ ಬ್ಯಾಂಕ್ (Aadhaar DBT Status) ಸೀಡಿಂಗ್ ಸ್ಟೇಟಸ್ ಚೆಕ್ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಪರಿಶೀಲಿಸಿ.


  • ಮೊದಲನೇದಾಗಿ ಅಧಿಕೃತ ವೆಬ್ ಸೈಟ್ (myaadhaar.uidai.gov.in) ಗೆ ಭೇಟಿ ನೀಡಿ



  • ನಂತರ ಅಲ್ಲಿ “Login”ಮೇಲೆ ಕ್ಲಿಕ್ ಮಾಡಿ



  • “Enter Aadhaar” ಇರುವಲ್ಲಿ ನಿಮ್ಮ ಆಧಾರ್ ನಂಬರ್ ಹಾಕಿ
  • ಅಲ್ಲಿ ಮೇಲೆ ನೀಡಲಾದ “Enter Above Captcha” ಮೇಲೆ ಕ್ಲಿಕ್ ಮಾಡಿ, ಸರಿಯಾಗಿ ಭರ್ತಿ ಮಾಡಿ
  • ನಂತರ “Send OTP” ಮೇಲೆ ಕ್ಲಿಕ್ ಮಾಡಿ, ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಇರುವ ಮೊಬೈಲ್ ನಂಬರ್ (DBT Status Check with Mobile Number) ಗೆ OTP (One-time password) ಬರುತ್ತೆ, ಬಂದ ಒಟಿಪಿಯನ್ನ “Enter OTP” ಮೇಲೆ ಕ್ಲಿಕ್ ಮಾಡಿ ಸರಿಯಾಗಿ ಭರ್ತಿ ಮಾಡಿ.
  • ಕೊನೆಗೆ Login ಮೇಲೆ ಕ್ಲಿಕ್ ಮಾಡಿ
  • ಇವಾಗ ಮತ್ತೊಂದು ಪುಟ ಓಪನ್ ಆಗುತ್ತದೆ ಅಲ್ಲಿ ಲಭ್ಯವಿರುವ ಈ ಎಲ್ಲಾ ಸೌಲಭ್ಯಗಳು ಈ ಪುಟದಲ್ಲಿ ಲಭ್ಯವಿರುತ್ತದೆ.
  • ಅದರಲ್ಲಿ ನಿಮಗೆ ಬೇಕಾಗಿರುವುದು “Bank Aadhaar Seeding Status” ಮೇಲೆ ಕ್ಲಿಕ್ ಮಾಡಿ.



  • ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಇರುವ ಬ್ಯಾಂಕ್ ಖಾತೆಯ ಹೆಸರು(Bank Name) ಬ್ಯಾಂಕ್ ಸೀಡಿಂಗ್ ಸ್ಟೇಟಸ್ ಹಾಗು ಯಾವಾಗ ಅಪ್ಡೇಟ್ ಮಾಡಲಾಗಿದೆ ಎಂಬುದನ್ನು ಅಲ್ಲಿ ವಿವರವಾಗಿ ನೀಡಲಾಗಿರುತ್ತದೆ.

ಒಂದು ವೇಳೆ ಅಲ್ಲಿ ಬ್ಯಾಂಕ್ ಸೀಡಿಂಗ್ ಸ್ಟೇಟಸ್ In-active / No ಅಥವಾ ಅಲ್ಲಿ ನಿಮ್ಮ ಬ್ಯಾಂಕ್ ಖಾತೆಯ ಬಗ್ಗೆ ಅಲ್ಲಿ ಯಾವುದೇ ಮಾಹಿತಿ ಬಂದಿಲ್ಲವೆಂದರೆ, ನೀವು ನಿಮ್ಮ ಬ್ಯಾಂಕ್ ಪಾಸ್ ಜೊತೆಗೆ ಆಧಾರ್ ಕಾರ್ಡ್ ತೆಗೆದುಕೊಂಡು ನಿಮ್ಮ ಅಕೌಂಟ್‌ ಇರುವ ಬ್ಯಾಂಕ್‌ಗೆ ಹೋಗಿ ಆಧಾರ ಸೀಡಿಂಗ್ ಮಾಡಲು ಅರ್ಜಿ ಸಲ್ಲಿಸಬೇಕು.

Post a Comment

Previous Post Next Post
CLOSE ADS
CLOSE ADS
×