Healthy Food: ಶ್ರಾವಣದಲ್ಲಿ ನಾನ್​ವೆಜ್​ ತಿನ್ನಬಾರದು ಅನ್ನೋದು ಶಾಸ್ತ್ರವಷ್ಟೇ ಅಲ್ಲ; ಇದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ!

Healthy Food: ಶ್ರಾವಣದಲ್ಲಿ ನಾನ್​ವೆಜ್​ ತಿನ್ನಬಾರದು ಅನ್ನೋದು ಶಾಸ್ತ್ರವಷ್ಟೇ ಅಲ್ಲ; ಇದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ!

 ಈ ತಿಂಗಳಲ್ಲಿ ಹೆಚ್ಚಿನ ಜನರು ಮಾಂಸಾಹಾರದಿಂದ ದೂರವಿರುತ್ತಾರೆ. ಮನೆಯ ಹಿರಿಯರು ತಮ್ಮ ಮನೆ ಮಂದಿಗೆಲ್ಲ ಈ ಒಂದು ತಿಂಗಳು ನಾನ್ ವೆಜ್ ತಿನ್ನಬೇಡಿ ಎಂದು ಸಲಹೆ ನೀಡುತ್ತಾರೆ.

 ಶ್ರಾವಣ ಮಾಸವನ್ನು ಶಿವನ ಆರಾಧನೆಗೆ ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಹಿಂದೂಗಳು ಶ್ರಾವಣ ಮಾಸವನ್ನು ತುಂಬಾ ಪವಿತ್ರವಾಗಿ ಕಾಣುತ್ತಾರೆ. ಅಲ್ಲದೇ ಹಲವಾರು ವ್ರತ, ಉಪವಾಸ, ಕಟ್ಟು ನಿಟ್ಟಿನ ಪೂಜಾ ಕ್ರಮಗಳನ್ನು ಕೈಗೊಳ್ಳುತ್ತಾರೆ.

ಶ್ರಾವಣ ಮಾಸವನ್ನು ಶಿವನ ಆರಾಧನೆಗೆ ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಹಿಂದೂಗಳು ಶ್ರಾವಣ ಮಾಸವನ್ನು ತುಂಬಾ ಪವಿತ್ರವಾಗಿ ಕಾಣುತ್ತಾರೆ. ಅಲ್ಲದೇ ಹಲವಾರು ವ್ರತ, ಉಪವಾಸ, ಕಟ್ಟು ನಿಟ್ಟಿನ ಪೂಜಾ ಕ್ರಮಗಳನ್ನು ಕೈಗೊಳ್ಳುತ್ತಾರೆ.

 ಹಾಗಾಗಿ ಈ ತಿಂಗಳಲ್ಲಿ ಹೆಚ್ಚಿನ ಜನರು ಮಾಂಸಾಹಾರದಿಂದ ದೂರವಿರುತ್ತಾರೆ. ಮನೆಯ ಹಿರಿಯರು ತಮ್ಮ ಮನೆ ಮಂದಿಗೆಲ್ಲ ಈ ಒಂದು ತಿಂಗಳು ನಾನ್ ವೆಜ್ ತಿನ್ನಬೇಡಿ ಎಂದು ಸಲಹೆ ನೀಡುತ್ತಾರೆ.

ಹಾಗಾಗಿ ಈ ತಿಂಗಳಲ್ಲಿ ಹೆಚ್ಚಿನ ಜನರು ಮಾಂಸಾಹಾರದಿಂದ ದೂರವಿರುತ್ತಾರೆ. ಮನೆಯ ಹಿರಿಯರು ತಮ್ಮ ಮನೆ ಮಂದಿಗೆಲ್ಲ ಈ ಒಂದು ತಿಂಗಳು ನಾನ್ ವೆಜ್ ತಿನ್ನಬೇಡಿ ಎಂದು ಸಲಹೆ ನೀಡುತ್ತಾರೆ.

ಆದರೆ, ಈ ಸಂಪ್ರದಾಯದ ಹಿಂದೆ ಧಾರ್ಮಿಕ ಮಾತ್ರವಲ್ಲ ವೈಜ್ಞಾನಿಕ ಕಾರಣವೂ ಇದೆ ಎಂಬ ಬಗ್ಗೆ ತಿಳಿದರೆ ನೀವು ಕೂಡ ಶಾಕ್ ಆಗ್ತೀರಿ. ಹಾಗಾದ್ರೆ ಶ್ರಾವಣ ಮಾಸದಲ್ಲಿ ಮಾಂಸಾಹಾರವನ್ನು ಏಕೆ ಸೇವಿಸಬಾರದು? ಅದನ್ನು ಸೇವಿಸುವುದರಿಂದ ನಿಮ್ಮ ಆರೋಗ್ಯದ ಮೇಲೆ ಏನು ಪರಿಣಾಮ ಬೀರುತ್ತದೆ ಎಂದು ತಿಳಿಯೋಣ ಬನ್ನಿ.

ಸಾಮಾನ್ಯವಾಗಿ ಮಳೆಗಾಲದಲ್ಲಿ ಕ್ರಿಮಿ ಕೀಟಗಳ ಕಾಟ ಹೆಚ್ಚಾಗಿರುತ್ತದೆ. ಇದರಿಂದ ಹಲವಾರು ರೋಗಗಳು ಬರುತ್ತದೆ. ಮಳೆಗಾಲದಲ್ಲಿ ಕೋಳಿಗಳು ಹಲವಾರು ರೀತಿಯ ಕೀಟಗಳನ್ನು ಸಹ ಸೇವಿಸುತ್ತದೆ. ಇದರಿಂದಾಗಿ ಅವು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ವೇಳೆ ಮನುಷ್ಯರು ಮಾಂಸಹಾರವನ್ನು ಸೇವಿಸುವುದರಿಂದ ಸೋಂಕು ಮನುಷ್ಯರನ್ನು ತಲುಪುತ್ತದೆ.

ಶ್ರಾವಣ ಮಾಸದಲ್ಲಿ ಮೀನಿನಂತಹ ಸಮುದ್ರಾಹಾರವನ್ನು ತಿನ್ನುವುದು ಸಹ ಹಾನಿಕಾರಕವಾಗಿದೆ. ಏಕೆಂದರೆ ಈ ಸಮಯದಲ್ಲಿ ಮೀನುಗಳು ಮೊಟ್ಟೆಗಳನ್ನು ಇಡುತ್ತವೆ. ಇದರಿಂದಾಗಿ ಅವುಗಳ ದೇಹದಲ್ಲಿ ಅನೇಕ ಹಾರ್ಮೋನ್ ಬದಲಾವಣೆಗಳು ಆಗುತ್ತದೆ. ಈ ಸಮಯದಲ್ಲಿ ಸಮುದ್ರಾಹಾರವನ್ನು ತಿನ್ನುವುದು ಸರಿಯಲ್ಲ. ಏಕೆಂದರೆ ಅದು ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.

ಒಟ್ಟಾರೆ ಶ್ರಾವಣ ಮಾಸದಲ್ಲಿ ಬೀಳುವ ಮಳೆಯಿಂದಾಗಿ ವಾತಾವರಣದಲ್ಲಿ ತೇವಾಂಶ ಉಳಿಯುತ್ತದೆ. ಇದು ನಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಜೀರ್ಣಕ್ರಿಯೆ ದುರ್ಬಲಗೊಳ್ಳುತ್ತದೆ.

ಸಸ್ಯಾಹಾರಕ್ಕೆ ಹೋಲಿಸಿದರೆ ಮಾಂಸಾಹಾರವು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ದುರ್ಬಲವಾದ ಜೀರ್ಣಕಾರಿ ಶಕ್ತಿಯಿಂದ, ಮಾಂಸಾಹಾರವು ಕರುಳಿನ ಮೇಲೆ ಪರಿಣಾಮ ಬೀರುತ್ತದೆ ಮತ್ತು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. news18ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)

Post a Comment

Previous Post Next Post
CLOSE ADS
CLOSE ADS
×