ಆಧಾರ್ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಈಗ 1000 ರೂಪಾಯಿ ದಂಡ ವಿಧಿಸಲಾಗುತ್ತದೆ. ಆದರೆ ಇನ್ನು 3 ತಿಂಗಳು ಪ್ಯಾನ್ ಆಧಾರ್ ಲಿಂಕ್ ಮಾಡಿಸುವುದಕ್ಕೆ 1000 ದಂಡ ಇಲ್ಲ ಉಚಿತವಾಗಿ ಮಾಡಿಸಬಹುದು ಅಂತ ಹೇಳಲಾಗ್ತಿದೆ.
ಇನ್ನೂ ಕೂಡ ಪ್ಯಾನ್-ಆಧಾರ್ ಲಿಂಕ್ ಮಾಡದೇ ಇರುವವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಇನ್ನುಂದೆ ಪ್ಯಾನ್-ಆಧಾರ್ ಲಿಂಕ್ ಮಾಡಿಸೋಕೆ ದುಡ್ಡು ಕೊಡಬೇಕಿಲ್ಲ ಅನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಈ ವೈರಲ್ ಸುದ್ದಿಯ ಅಸಲಿ ಮ್ಯಾಟರ್ ಏನು ಅಂತ ಈಗ ತಿಳಿದುಕೊಳ್ಳೋಣ.ಈಗಾಗಲೇ ಲಿಂಕ್ ಮಾಡಿಸದೇ ಇರುವವರ ಪ್ಯಾನ್ ಕಾರ್ಡ್ ನಿಷ್ಟ್ರಿಯವಾಗಿದೆ. ಇನ್ಮುಂದೆ ಇವರಿಗೆಲ್ಲಾ ಬ್ಯಾಂಕಿಂಗ್ ವ್ಯವಹಾರ ಸೇರಿದಂತೆ ಎಲ್ಲಾ ಆರ್ಥಿಕ ಚಟುವಟಿಕೆಗಳಿಗೆ ಸಮಸ್ಯೆಯಾಗಲಿದೆ.
ಬ್ಯಾಂಕ್ ಖಾತೆ ತೆರೆಯಲು, ನಿಗದಿತ ಠೇವಣಿಗಳಲ್ಲಿ ಹೂಡಿಕೆ ಮಾಡಲು, ಡಿಮ್ಯಾಂಡ್ ಅಕೌಂಟ್‍ಗಳನ್ನು ತೆರೆಯಲು ಪ್ಯಾನ್ ಕಾರ್ಡ್ ಅವಶ್ಯಕವಾಗಿದ್ದು, ಒಂದು ವೇಳೆ ಜೂನ್ 30ರೊಳಗೆ ಜೋಡಣೆ ಮಾಡದಿದ್ದರೆ ಈ ಎಲ್ಲಾ ಕೆಲಸಗಳನ್ನು ಮಾಡಲು ಸಾಧ್ಯವಾಗುವುದಿಲ್ಲ
ಈ ಮೊದಲು ಏಪ್ರಿಲ್ 2022 ಮತ್ತು 30 ಜೂನ್ 2022ರ ನಡುವೆ ಲಿಂಕ್ ಮಾಡಿದ್ದರೆ 500 ರೂ. ದಂಡವನ್ನು ಪಾವತಿಸಬೇಕಾಗಿತ್ತು. ಈಗ ಆಧಾರ್ ಮತ್ತು ಪ್ಯಾನ್ ಅನ್ನು ಲಿಂಕ್ ಮಾಡಲು 1000 ರೂ. ದಂಡ ಕಟ್ಟಬೇಕು ಎಂದು ಐಟಿ ಇಲಾಖೆ ಹೇಳಿದೆ.
ಆಧಾರ್ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಈಗ 1000 ರೂಪಾಯಿ ದಂಡ ವಿಧಿಸಲಾಗುತ್ತದೆ. ಆದರೆ ಇನ್ನು 3 ತಿಂಗಳು ಪ್ಯಾನ್ ಆಧಾರ್ ಲಿಂಕ್ ಮಾಡಿಸುವುದಕ್ಕೆ 1000 ದಂಡ ಇಲ್ಲ ಉಚಿತವಾಗಿ ಮಾಡಿಸಬಹುದು ಅಂತ ಹೇಳಲಾಗ್ತಿದೆ.
ಈ ರೀತಿಯ ಪೋಸ್ಟ್, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನೂ ಕೆಲವರು ಕೇಂದ್ರ ಸರ್ಕಾರ ಪ್ಯಾನ್-ಆಧಾರ್ ಲಿಂಕ್ ಮಾಡಿಸಲು ವಿನಾಯ್ತಿ ನೀಡಿದೆ ಅಂತ ಈ ಪೋಸ್ಟ್ಗಳನ್ನು ಶೇರ್ ಆಗುತ್ತಿವೆ.
ಈ ರೀತಿಯ ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ಕೇಂದ್ರ ಇಲಾಖೆಯ ಪಿಎನ್‌ಬಿ ಮಾಹಿತಿ ನೀಡಿದೆ. ಆದಷ್ಟು ಬೇಗೆ ನಿಮ್ಮ ಆಧಾರ್ -ಪ್ಯಾನ್ ಲಿಂಕ್ ಮಾಡಿಕೊಳ್ಳಿ ಅಂತ ತಿಳಿಸಿದೆ.