Gmail: ಡಿಸೆಂಬರ್ 31 ರಿಂದ ಜಿಮೇಲ್ ಇರುವ ಎಲ್ಲರಿಗೂ ಹೊಸ ರೂಲ್ಸ್! ತಪ್ಪದೇ ಈ ಕೆಲಸ ಮಾಡಿ

Gmail: ಡಿಸೆಂಬರ್ 31 ರಿಂದ ಜಿಮೇಲ್ ಇರುವ ಎಲ್ಲರಿಗೂ ಹೊಸ ರೂಲ್ಸ್! ತಪ್ಪದೇ ಈ ಕೆಲಸ ಮಾಡಿ

ಟೆಕ್ ದುನಿಯಾದಲ್ಲಿ ಗೂಗಲ್ (Google) ಎನ್ನುವುದು ಕುಂಭಕರ್ಣ ರೀತಿಯಲ್ಲಿ ಅತ್ಯಂತ ದಿಗ್ಗಜ ಹಾಗೂ ದೊಡ್ಡ ಕಂಪನಿಯಾಗಿದೆ. ಆದರೆ ಇದೇ ಮೇ ತಿಂಗಳಿನಲ್ಲಿ ಅಧಿಕೃತವಾಗಿ ಘೋಷಿಸಿರುವ ಪ್ರಕಾರ In Active ಆಗಿರುವಂತಹ ಗೂಗಲ್ ಖಾತೆಗಳನ್ನು ಡಿಲೀಟ್ ಮಾಡುವಂತಹ ನಿರ್ಧಾರಕ್ಕೆ ಬಂದಿದ್ದು ಇದನ್ನು ಡಿಸೆಂಬರ್ 30 ರಿಂದ ಪ್ರಾರಂಭ ಮಾಡಲಿದೆ ಎಂಬುದಾಗಿ ಅಧಿಕೃತವಾಗಿ ಕಂಪನಿ ಹೇಳಿಕೊಂಡಿದೆ. ಇದಕ್ಕೆ ಮತ್ತೊಂದು ಕಾರಣ ಇತ್ತೀಚಿನ ದಿನಗಳಲ್ಲಿ Scammers ಗಳು ಜಾಸ್ತಿ ಆಗಿರುವುದು ಕೂಡ ಒಂದು ಎಂದು ಹೇಳಬಹುದು.



Google ನ ಪ್ರಾಡಕ್ಟ್ ಮ್ಯಾನೇಜ್ಮೆಂಟ್ ಟೀಮ್ ಹೇಳಿರುವ ಪ್ರಕಾರ ಇಂತಹ ದೀರ್ಘಕಾಲಿಕ ಆಕ್ಟಿವ್ ಇಲ್ಲದೆ ಇರುವ ಅಕೌಂಟ್ ಗಳು ಹ್ಯಾಕ್ ಆಗಿರುವ ಸಾಧ್ಯತೆ ಹೆಚ್ಚಾಗಿರುತ್ತದೆ ಅಥವಾ ಇವುಗಳಿಗೆ 2 Factor Authentication ಮಾಡಿಲ್ಲ ಎಂಬುದಾಗಿ ಅರ್ಥವಾಗಿದೆ ಎಂದು ಹೇಳಿದೆ. ಇದೇ ಕಾರಣಕ್ಕಾಗಿ ಈ Gmail ಐಡಿಯನ್ನು ಬಳಸಿರುವಂತಹ ವ್ಯಕ್ತಿಯ ವೈಯಕ್ತಿಕ ಮಾಹಿತಿಗಳನ್ನು ಸೋರಿಕೆ ಮಾಡುವ ಸಾಧ್ಯತೆ ಕೂಡ ಹೆಚ್ಚಾಗಿದೆ ಎಂಬುದಾಗಿ ಹೇಳಿದ್ದಾರೆ. ಒಂದು ವೇಳೆ ನೀವು ಕಳೆದ ಎರಡು ವರ್ಷಗಳಿಂದ ನಿಮ್ಮ ಗೂಗಲ್ ಅಕೌಂಟ್ ಅನ್ನು ಸೈನ್ ಇನ್ ಮಾಡಿಲ್ಲ ಅಂದ್ರೆ ನಿಮ್ಮ ಅಕೌಂಟ್ ಡಿಲೀಟ್ ಆಗುವ ಸಾಧ್ಯತೆ ಹೆಚ್ಚಾಗಿದೆ.

Gmail, Docs, Gallery ಅಂತಹ ಮುಂತಾದ ಗೂಗಲ್ ಅಕೌಂಟಿಗೆ ಸಂಬಂಧ ಇರುವಂತಹ ಸೇವೆಗಳನ್ನು ಡಿಲೀಟ್ ಮಾಡುವ ಮುಂಚೆ ನಿಮಗೆ ಗೂಗಲ್ ಅಧಿಕೃತವಾಗಿ ನೋಟಿಫಿಕೇಶನ್ ಕಳುಹಿಸುತ್ತದೆ. ಇದರಲ್ಲಿ ನಿಮಗೆ ರಿಕವರಿ ಅಡ್ರೆಸ್ ಜೊತೆಗೆ ರಿಮೈಂಡರ್ ಅನ್ನು ಕೂಡ ಕಳುಹಿಸಲಾಗುತ್ತದೆ. ಒಂದು ಬಾರಿ ಡಿಲೀಟ್ ಆದ್ಮೇಲೆ ಯಾವುದೇ ಹೊಸ ಅಕೌಂಟ್ಗೆ ಸಂಬಂಧಿತ ಜಿಮೇಲ್ ಅಡ್ರೆಸ್ ಅನ್ನು ಉಪಯೋಗಿಸಲು ಸಾಧ್ಯವಿಲ್ಲ. ಹೀಗಾಗಿ ಆಗೊಮ್ಮೆ ಈಗೊಮ್ಮೆ ನೀವು Google Account ಅನ್ನು ಉಳಿಸಿಕೊಳ್ಳಬೇಕು ಎನ್ನುವ ಆಸೆ ಇದ್ರೆ ನೀವು ಎರಡು ವರ್ಷಕ್ಕೊಮ್ಮೆಯಾದರೂ ಈ ಅಕೌಂಟ್ ನಲ್ಲಿ ಲಾಗಿನ್ ಆಗಿರಬೇಕು ಎಂಬುದನ್ನು ನೆನಪಿಟ್ಟುಕೊಳ್ಳಿ. ಸಂದರ್ಭದಲ್ಲಿ ಮಾತ್ರ ನೀವು ಗೂಗಲ್ ನ In Active ಅಕೌಂಟ್ ಕ್ಯಾಟಗರಿಗೆ ನಿಮ್ಮ ಖಾತೆ ಬರುವುದಿಲ್ಲ.


ಇಂತಹ ಖಾತೆಗಳನ್ನು ನೀವು Mail ಕಳುಹಿಸುವ ಹಾಗು ಓದುವ ಕೆಲಸಗಳಿಗೆ ಮಾತ್ರವಲ್ಲದೆ Google Drive ಮಾದರಿಯ ಕೆಲಸಗಳಿಗೂ ಕೂಡ ಬಳಸಿಕೊಳ್ಳಬಹುದಾಗಿದೆ. ಕೇವಲ ಇಷ್ಟೇ ಯಾಕೆ ಯೌಟ್ಯೂಬ್ ನಲ್ಲಿ ಅಕೌಂಟ್ ಕ್ರಿಯೇಟ್ ಮಾಡಿ ವಿಡಿಯೋ ಸರ್ಚ್ ಮಾಡೋದಕ್ಕೆ ಕೂಡ ಇಂತಹ ಅಕೌಂಟ್ ಗಳನ್ನು ಬಳಸಿಕೊಳ್ಳಬಹುದು.

ವೆಬ್ ಸೈಟ್ ನಲ್ಲಿ ಕೂಡ ಲಾಗಿನ್ ಆಗುವುದಕ್ಕೆ ಇದನ್ನು ಬಳಸಬಹುದಾಗಿದೆ. ಹೀಗಾಗಿ ನಿಮ್ಮ ಗೂಗಲ್ ಖಾತೆ ಇನ್ ಆಕ್ಟಿವ್ ಆಗಿ ಡಿಲೀಟ್ ಆಗಬಾರದು ಎನ್ನುವ ಆಸೆ ಇದ್ದರೆ ನೀವು ಎರಡು ವರ್ಷಕ್ಕೊಮ್ಮೆ ಆದರೂ ಕೂಡ ಈ ಮೇಲೆ ಹೇಳಿರುವಂತಹ ಕೆಲಸಗಳಿಗೆ ನಿಮ್ಮ ಗೂಗಲ್ ಖಾತೆಯನ್ನು ಲಿಂಕ್ ಮಾಡಿ ಸಕ್ರಿಯರಾಗಿದ್ದರೆ ಸಾಕು ನಿಮ್ಮ ಗೂಗಲ್ ಖಾತೆ ಉಳಿದುಕೊಳ್ಳುತ್ತದೆ. ಹೀಗಾಗಿ ಈ ಮೂಲಕ ನೀವು ನಿಮ್ಮ ಗೂಗಲ್ ಖಾತೆಯನ್ನು ಡಿಲೀಟ್ ಆಗುವುದರಿಂದ ಬಚಾವ್ ಮಾಡಬಹುದಾಗಿದೆ.

Post a Comment

Previous Post Next Post
CLOSE ADS
CLOSE ADS
×