New jio Phone Launch: ದೇಶದಲ್ಲಿ ಜಿಯೋ ಅತಿ ಹೆಚ್ಚು ಗ್ರಾಹಕರನ್ನು ಹೊಂದಿದ್ದು ಪ್ರಮುಖ ಟೆಲಿಕಾಂ ಕಂಪನಿಯಾಗಿದೆ. ಜಿಯೋ (Jio) ಇದೀಗ 5G ನೆಟ್ ವರ್ಕ್ ನೊಂದಿಗೆ ಹೆಚ್ಚಿನ ಗ್ರಾಹಕರನ್ನು ಸೆಳೆಯುತ್ತಿದೆ. ಜಿಯೋ ರಿಲಯನ್ಸ್ ಗ್ರಾಹಕರಿಗೆ ಹೆಚ್ಚಿನ ಅನುಕೂಲವನ್ನು ಮಾಡಿಕೊಟ್ಟಿದೆ.
ಇನ್ನು ಈಗಾಗಲೇ ಜಿಯೋ ಫೋನ್ ಕೂಡ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಲಕ್ಷಾಂತರ ಜನರು ಜಿಯೋ ಫೋನ್ ಅನ್ನು ಬಳಸುತ್ತಿದ್ದಾರೆ. ಇದೀಗಾ ಜಿಯೋ ರಿಲಯನ್ಸ್ ಮತ್ತೊಂದು ಅತ್ಯಾಕರ್ಷಕ ಜಿಯೋ ಫೋನ್ ಅನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿದೆ.
ಶೀಘ್ರದಲ್ಲೇ ಲಾಂಚ್ ಆಗಲಿದೆ ಹೊಸ ಜಿಯೋ ಫೋನ್
ಮಾರುಕಟ್ಟೆಯಲ್ಲಿ ಹೊಸ ಜಿಯೋ ಫೋನ್ ಬಿಡುಗಡೆಗೆ ಕಂಪನಿಯು ಸಂಪೂರ್ಣ ಸಿದ್ಧತೆ ನಡೆಸುತ್ತಿದೆ. ಹೊಸ ಜಿಯೋ ಫೋನ್ ಬಿಐಎಸ್ ಪ್ರಮಾಣೀಕರಣವನ್ನು ಪಡೆದಿದ್ದು ಸದ್ಯದಲ್ಲೇ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಇನ್ನು ಜಿಯೋ ಫೋನ್ ನ ಬಗ್ಗೆ ಹೆಚ್ಚಿನ ಅಪ್ಡೇಟ್ ಇಲ್ಲದಿದ್ದರೂ ಈ ಫೋನ್ ಬ್ಯುರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ (BIS) ನಿಂದ ಪ್ರಮಾಣೀಕರಣವನ್ನು ಪಡೆದಿರುವುದು ವಿಶೇಷವಾಗಿದೆ. ಇನ್ನು ಆಗಸ್ಟ್ 28 ರಂದು ರಿಲಯನ್ಸ್ ಜಿಯೋ ಹೊಸ ಫೋನ್ ನ ಅನಾವರದ ಬಗ್ಗೆ ಮಾಹಿತಿ ನೀಡಲಿದೆ.
ಜಿಯೋ ಫೋನ್ ನ ವಿಶೇಷತೆ
ಈ ನೂತನ ಜಿಯೋ ಫೋನ್ 4GB RAM ಮತ್ತು 32GB ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದ್ದು, ಸ್ನ್ಯಾಪ್ ಡ್ರಾಗನ್ 480 SoC ನಿಂದ ಚಾಲಿತವಾಗಿದೆ. ಜಿಯೋ ಫೋನ್ ಬಿಐಎಸ್ ಪ್ರಮಾಣೀಕರಣವನ್ನು ಸ್ಕರ್ರೆನ್ ಶಾಟ್ ಹಂಚಿಕೊಳ್ಳುವ ಮೂಲಕ ಲೀಕರ್ ಮುಕುಲ್ ಶರ್ಮಾ ಹಂಚಿಕೊಂಡಿದ್ದಾರೆ. JBV161W1 ಮತ್ತು JBV162W1 ಮಾದರಿ ಸಂಖ್ಯೆಗಳನ್ನು ಹೊಂದಿರುವ ಸಾಧನಗಳು ಆಗಸ್ಟ್ 11 ರಂದು BIS ಅನುಮೋದನೆಯನ್ನು ಪಡೆದುಕೊಂಡಿರುವ ಬಗ್ಗೆ ಮಾಹಿತಿ ಲಭಿಸಿದೆ.
ಜಿಯೋ ಫೋನ್ ಬ್ಯಾಟರಿ ಸಾಮರ್ಥ್ಯ
ಜಿಯೋ ಫೋನ್ 5G ಹ್ಯಾಂಡ್ ಸೆಟ್ ನಲ್ಲಿ 32GB ಸ್ಟೋರೇಜ್ ಸಂಗ್ರಹಣೆಯೊಂದಿಗೆ 13 ಮೆಗಾಪಿಕ್ಸೆಲ್ ಡ್ಯುಯಲ್ ರಿಯರ್ ಕ್ಯಾಮೆರಾ ಇರುವೆಕೆಯ ಬಗ್ಗೆ ವರದಿಯಾಗಿದೆ. ಈ ಫೋನ್ ಆಂಡ್ರಾಯ್ಡ್ 12 ನಲ್ಲಿ ಚಾಲಿತವಾಗಿದೆ. ಹಾಗೂ 90Hz ರಿಫ್ರೆಶ್ ದರದೊಂದಿಗೆ 6 .5 ಇಂಚಿನ HD +LCD ಡಿಸ್ ಪ್ಲೇ ಅನ್ನು ಹೊಂದಿದ್ದು, ಸೆಲ್ಫಿಗಾಗಿ 8 ಮೆಗಾಫೈಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇನ್ನು 18W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 50000 mAh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ