ರಾಜ್ಯ ಸರ್ಕಾರವು ಗೃಹ ಲಕ್ಷ್ಮಿ ಯೋಜನೆಯ ಅಡಿಯಲ್ಲಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2000 ರೂಗಳನ್ನು ನೀಡುವಂತೆ ಘೋಷಿಸಿತ್ತು. ಇನ್ನು ಈಗಾಗಲೇ ಈ ಯೋಜನೆಗಾಗಿ ಅರ್ಜಿ ಸಲ್ಲಿಕೆಯನ್ನು ಸರ್ಕಾರ ಶುರು ಮಾಡಿದ್ದು, ಈಗಾಗಲೇ ಲಕ್ಷಗಳಲ್ಲಿ ಮಹಿಳೆಯರು ಅರ್ಜಿಗಳನ್ನು ಸಲ್ಲಿಸಿದ್ದಾರೆ.
ರಾಜ್ಯ ಸರ್ಕಾರದ ಐದು ಗ್ಯಾರೆಂಟಿ ಯೋಜನೆಗಳ ಪೈಕಿ ಇದೀಗ ಹಲವಾರು ಯೋಜನೆಗಳನ್ನು (Govt Schemes) ಜಾರಿಗೆ ತರುವ ಮೂಲಕ ಇದೀಗ ಸರ್ಕಾರ ಜನರ ಮುಖದಲ್ಲಿ ಸಂತಸ ತಂದಿದೆ. ಈ ಐದು ಗ್ಯಾರೆಂಟಿ ಯೋಜನೆಗಳ ಪೈಕಿ ಒಂದಾಗಿರುವ ಗೃಹ ಲಕ್ಷ್ಮಿ ಯೋಜನೆಯ ಕುರಿತು ಇದೀಗ ದಿನಕ್ಕೊಂದು ವಿಷಯ ಹೊರ ಬೀಳುತ್ತಿದೆ.
ರಾಜ್ಯ ಸರ್ಕಾರವು ಗೃಹ ಲಕ್ಷ್ಮಿ ಯೋಜನೆಯ (Gruha Lakshmi Scheme) ಅಡಿಯಲ್ಲಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2000 ರೂಗಳನ್ನು ನೀಡುವಂತೆ ಘೋಷಿಸಿತ್ತು. ಇನ್ನು ಈಗಾಗಲೇ ಈ ಯೋಜನೆಗಾಗಿ ಅರ್ಜಿ ಸಲ್ಲಿಕೆಯನ್ನು ಸರ್ಕಾರ ಶುರು ಮಾಡಿದ್ದು, ಈಗಾಗಲೇ ಲಕ್ಷಗಳಲ್ಲಿ ಮಹಿಳೆಯರು ಅರ್ಜಿಗಳನ್ನು ಸಲ್ಲಿಸಿದ್ದಾರೆ.
ಇನ್ನು ಈ ಯೋಜನೆಯ ಅಡಿಯಲ್ಲಿ ಸಿಗುವ ಲಾಭ ಪಡೆಯಲು ರಾಜ್ಯದ ಮಹಿಳೆಯರು ಕಾದು ಕುಳಿತಿದ್ದಾರೆ. ಗೃಹ ಲಕ್ಷ್ಮಿ ಯೋಜನೆಯ (Gruha Lakshmi Yojane) ಅಡಿಯಲ್ಲಿ ಪ್ರತಿಯೊಬ್ಬ ಮಹಿಳೆಗೂ 2000 ರೂಪಾಯಿಗಳನ್ನು ಪ್ರತಿ ತಿಂಗಳು ಮನೆಯ ಮಹಿಳಾ ಯಜಮಾನಿಯ ಖಾತೆಗೆ ನೇರವಾಗಿ ಜಮಾ ಮಾಡುವಂತೆ ಸರ್ಕಾರ ಈ ಹಿಂದೆ ಘೋಷಿಸಿತ್ತು.
ಆದರೆ ಈ ಯೋಜನೆಯ ಲಾಭವನ್ನು ಕೇವಲ ಈ ಮಹಿಳೆಯರು ಮಾತ್ರ ಪಡೆಯಲಿದ್ದಾರೆ ಎಂದು ಇದೀಗ ಸರ್ಕಾರದ ಮಾಹಿತಿಯೊಂದು ಹೊರಬಿದ್ದಿದೆ. ಹಾಗಾದರೆ ಏನಿದು ಸುದ್ದಿ, ಈ ಬಗ್ಗೆ ಸಂಪೂರ್ಣವಾದ ಮಾಹಿತಿ ನೀಡುತ್ತೇವೆ, ಈ ಪುಟವನ್ನು ಪೂರ್ತಿಯಾಗಿ ಓದಿ….
ಗೃಹ ಲಕ್ಷ್ಮಿ ಯೋಜನೆಯ ಮೂಲಕ ರಾಜ್ಯದ ಮಹಿಳೆಯರ ಆರ್ಥಿಕ ಪರಿಸ್ಥಿತಿಯನ್ನು ಸ್ಥಿರಗೊಳಿಸಲು ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿತು. ಇನ್ನು ಈ ಯೋಜನೆಯ ಅಡಿಯಲ್ಲಿ ಮಹಿಳಾ ಯಜಮಾನಿಗೆ ಪ್ರತಿ ತಿಂಗಳು ತಮ್ಮ ಖಾತೆಗೆ ನೇರವಾಗಿ 2000 ಹಣ ಜಮಾ (Bank Account) ಮಾಡುವುದಾಗಿ ಈ ಹಿಂದೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೋಷಿಸಿದರು.
ಇನ್ನು ಇದೆ ಆಗಸ್ಟ್ 30 ರಂದು ಈ ಯೋಜಯ ಚಾಲನೆ ಆಗಲಿದ್ದು, ಈ ದಿನ ಎಲ್ಲಾ ಮಹಿಳಾ ಯನಮಾನಿಯ ಖಾತೆಗೆ 2000 ಹಣ ಜಮಾ ಆಗಲಿದೆ ಎಂದಿದ್ದರು.
ಇನ್ನು ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆಗೆ (Apply Gruha Lakshmi Scheme) ಸರ್ಕಾರ ಯಾವುದೇ ಶುಲ್ಕವನ್ನು ಸಹ ವಿಧಿಸಿಲ್ಲ. ಹೌದು, ಗೃಹಲಕ್ಷ್ಮಿ ಯೋಜನೆಯ ಅರ್ಜಿಗಳನ್ನು ನೀವು ಉಚಿತವಾಗಿ ಸಲ್ಲಿಸಬಹುದು. ಇನ್ನು ನಿಮ್ಮ ಹತ್ತಿರದ ಯಾವುದೇ ಕರ್ನಾಟಕ ಒನ್, ಅಥವಾ ಗ್ರಾಮ ಒನ್ ಗಳಿಗೆ ಭೇಟಿ ನೀಡಿ ನೀವು ಸುಲಭವಾಗಿ ಅರ್ಜಿಗಳನ್ನು ಸಲ್ಲಿಸಬಹುದು.
ಇನ್ನು ಈ ಯೋಜನೆಯ ಲಾಭವನ್ನು ಈ ಮಹಿಳೆಯರು ಪಡೆಯಲು ಸಾಧ್ಯವಿಲ್ಲ ಎನ್ನುವ ಹೊಸ ಮಾಹಿತಿಯೊಂದು ಇದೀಗ ಹೊರ ಬಿದ್ದಿದೆ.
ಗೃಹ ಲಕ್ಷ್ಮಿ ಯೋಜನೆಯ ಲಾಭವನ್ನು ಇಂತಹ ಮಹಿಳೆಯರು ಪಡೆಯಲು ಸಾಧ್ಯವಾಗುವುದಿಲ್ಲ:
ಆಶಾ ಕಾರ್ಯಕರ್ತೆಯರು ಹಾಗೆ ಅಂಗನವಾಡಿ ಕಾರ್ಯಕರ್ತೆಯರು ಗೃಹ ಲಕ್ಷ್ಮಿ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಾಗುವುದಿಲ್ಲ.
ಇನ್ನು ವೈಟ್ ಬೋರ್ಡ್ ಕಾರ್ (White Board Car) ಅನ್ನು ಹೊಂದಿರುವ ಮನೆಯ ಮಹಿಳೆಯರು ಈ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಾಗುವುದಿಲ್ಲ.
ಏಳು ಎಕ್ಕರೆಗಿಂತ ಅಧಿಕ ಭೂಮಿ (Land or Property) ಹೊಂದಿರುವ ಮಹಿಳೆಯರು ಈ ಲಾಭವನ್ನು ಪಡೆಯಲು ಅರ್ಹರಲ್ಲ.
ಸರ್ಕಾರಿ ಹುದ್ದೆಗಳು (Government Job) ಹಾಗೂ ಪೆನ್ಶನ್ (Pension) ಪಡೆಯುವ ಮಹಿಳೆಯರು ಈ ಯೋಜನೆಯ ಅಡಿಯಲ್ಲಿ 2000 ಹಣ ಪಡೆಯುವುದಿಲ್ಲ.