ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ಬೆಳೆ ವಿಮೆ ಮಾಡಿಸಲು ಇನ್ನೂ ಮೂರು ದಿನ ಉಳಿದಿದೆ. ಯಾರು ಇನ್ನೂ ಬೆಳೆ ವಿಮೆ ಮಾಡಿಸಿಲ್ಲವೋ ಆ ರೈತರು ಆಗಸ್ಟ್ 16 ರೊಳಗೆ ವಿಮೆ ಮಾಡಿಸಬಹುದು. ಹಾಗಾದರೆ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬೇಕು? ನಮ್ಮ ಜಿಲ್ಲೆಯಲ್ಲಿ ಯಾವ ಬೆಳೆಗೆ ವಿಮೆ ಮಾಡಿಸಲು ಆಗಸ್ಟ್ 16 ಕೊನೆಯ ದಿನಾಂಕವಾಗಿದೆ ಎಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.
ಮುಂಗಾರು ಹಂಗಾಮಿನ ಬೆಳೆಗಳಿಗೆ ವಿಮೆ ಮಾಡಿಸಲು ಅರ್ಜಿ ಆಹ್ವಾನಿಸಲಾಗಿದೆ. ಈಗಾಗಲೇ ಹೆಸರು, ಉದ್ದು, ತೊಗರಿ, ಶೇಂಗಾ ಸೇರಿದಂತೆ ಇನ್ನಿತರ ಬೆಳೆಗಳ ವಿಮೆ ಮಾಡಿಸುವ ಅವಧಿ ಕೆಲವು ಜಿಲ್ಲೆಗಳಲ್ಲಿ ಮುಗಿದಿದೆ. ಆದರೆ ಇನ್ನೂ ಕೆಲವು ಜಿಲ್ಲೆಗಳಲ್ಲಿ ಈ ಬೆಳೆಗಳಿಗೆ ವಿಮೆ ಮಾಡಿಸಲು ಕಾಲಾವಕಾಶವಿದೆ. ಈಗಾಗಲೇ ದಿನಾಂಕ ವಿಸ್ತರಣೆ ಸಹ ಮಾಡಿಸಲಾಗಿತ್ತು. ಆದರೂ ಇನ್ನೂ ಕೆಲವು ಜಿಲ್ಲೆಗಳಿಗೆ ಕೆಲವು ಬೆಳೆಗಳ ವಿಮೆ ಮಾಡಿಸಲು ಅವಕಾಶವಿದೆ. ಇದನ್ನು ನೀವು ಮನೆಯಲ್ಲಿಯೇ ಕುಳಿತು ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ಚೆಕ್ ಮಾಡಬಹುದು.
ಯಾವ್ಯಾವ ಬೆಳೆಗಳಿಗೆ ಆಗಸ್ಟ್ 16 ರೊಳಗೆ ವಿಮೆ ಮಾಡಿಸಲು ಅರ್ಜಿ ಆಹ್ವಾನಿಸಲಾಗಿದೆ?
ರೈತರು ಯಾವ ಯಾವ ಬೆಳೆಗಳಿಗೆ ಆಗಸ್ಟ್ 16 ರವರೆಗೆ ವಿಮೆ ಮಾಡಿಸಲು ಕಾಲಾವಕಾಶ ನೀಡಲಾಗಿದೆ ಎಂಬುದನ್ನು ಚೆಕ್ ಮಾಡಲು ಈ
https://samrakshane.karnataka.gov.in/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಬೆಳೆ ವಿಮೆಯ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಮುಂದೆ / Go ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಫಾರ್ಮರ್ಸ್ ಕಾಲಂ ಕೆಳಗಡೆ Premium Calculator, Crop you can insure, check status, Know Your Insruance co, Find Gram Panchayat, Crop insurance Detail on Survey No ಹಾಗೂ View Cut off Dates ಎಂಬ ಆಯ್ಕೆಗಳು ಕಾಣಿಸುತ್ತವೆ. ಅದರಲ್ಲಿ ನೀವು View cut off Dates ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ನೀವು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಆಗ ನಿಮ್ಮ ಜಿಲ್ಲೆಯಲ್ಲಿ ಯಾವ ಯಾವ ಬೆಳೆಗಳಿಗೆ ಆಗಸ್ಟ್16 ರೊಳಗೆ ವಿಮೆ ಮಾಡಿಸಲು ಅವಕಾಶವಿದೆ ಎಂಬ ಪಟ್ಟಿ ಕಾಣಿಸುತ್ತದೆ. ಅದರ ಪ್ರಕಾರ ನೀವು ಅಲ್ಲಿ ತೋರಿಸಿದ ಬೆಳೆ ಬಿತ್ತಣಿಕೆ ಮಾಡಿದ್ದರೆ ಆ ಕಾಲಾವಧಿಯೊಳಗೆ ವಿಮೆ ಮಾಡಿಸಬಹುದು.
ಯಾವ ಜಿಲ್ಲೆಯಲ್ಲಿ ಯಾವ್ಯಾವ ಬೆಳೆಗಳಿಗೆ ವಿಮೆ ಮಾಡಿಸಲು ಆಗಸ್ಟ್ 16 ಕೊನೆಯ ದಿನಾಂಕವಾಗಿದೆ?
ನೀವು ಬಾಗಲಕೋಟೆ ಜಿಲ್ಲೆಯವರಾಗಿದ್ದರೆ ಸೂರ್ಯಕಾಂತಿ, ಈರುಳ್ಳಿ, ಹಾಗೂ ಕೆಂಪು ಮೆಣಸಿನ ಕಾಯಿಗೆ ಆಗಸ್ಟ್ 16 ರೊಳಗೆ ವಿಮೆ ಮಾಡಿಸಬಹುದು.
ನೀವು ಬಳ್ಳಾರಿ ಜಿಲ್ಲೆಯವರಾಗಿದ್ದರೆ ಭತ್ತ, ಸಜ್ೆ, ರಾಗಿ, ತೊಗರಿ ಹಾಗೂ ಶೇಂಗಾ, ನವಣೆ ಹಾಗೂ ಹುರುಳಿ ಬೆಳೆಗಳನ್ನು ಆಗಸ್ಟ್ 16 ರೊಳಗೆ ವಿಮೆ ಮಾಡಿಸಬಹುದು.
ಬೆಂಗಳೂರು ಜಿಲ್ಲೆಗೆ ಭತ್ತ, ಮುಸುಕಿನ ಜೋಳ, ರಾಗಿ, ಹುರುಳಿ ಬೆಳೆಗಳಿಗೆ ವಿಮೆ ಮಾಡಿಸಲು ಅವಕಾಶವಿದೆ. ಇದೇ ರೀತಿ ನಿಮ್ಮ ಜಿಲ್ಲೆಯಲ್ಲಿಯಾವ ಯಾವ ಬೆಳೆಗಳನ್ನು ವಿಮೆ ಮಾಡಿಸಲು ಮೂರು ದಿನ ಬಾಕಿಯಿದೆ ಎಂಬುದನ್ನು ಚೆಕ್ ಮಾಡಿಕೊಂಡು ವಿಮೆ ಮಾಡಿಸಬಹುದು.
ಬೆಳೆ ವಿಮೆ ಹಣ ಎಲ್ಲಿ ಪಾವತಿಸಬೇಕು?
ಬೆಳೆ ವಿಮೆ ಮಾಡಿಸಲಿಚ್ಚಿಸುವ ರೈತರು ತಮ್ಮ ಹತ್ತಿರದ ಗ್ರಾಮ ಒನ್, ಸಿ.ಎಸ್.ಸಿ ಕೇಂದ್ರ ಹಾಗೂ ಬ್ಯಾಂಕಿನಲ್ಲಿ ಬೆಳೆ ವಿಮೆ ಹಣ ಪಾವತಿಸಬಹುದು. ಬೆಳೆ ವಿಮೆ ಪಾವತಿಸುವ ಮೊದಲು ಯಾವ ಬೆಳೆಗೆ ವಿಮೆ ಮಾಡಿಸುತ್ತಿದ್ದೀರೆಂಬುದನ್ನು ತಿಳಿದುಕೊಳ್ಳಬೇಕು. ನಿಮ್ಮ ತಾಲೂಕಿನ ವಿಮಾ ಕಂಪನಿಯ ಸಿಬ್ಬಂದಿ ನಂಬರ್ ಸಹ ತೆಗೆದುಕೊಳ್ಳಬೇಕು. ಬೆಳೆ ಹಾನಿಯಾದಾಗ ವಿಮೆಯ ಹಣ ಜಮೆಯಾಗಲು ವಿಮಾ ಕಂಪನಿಯ ಸಿಬ್ಬಂದಿಗೆ ತಿಳಿಸಬೇಕಾಗುತ್ತದೆ.