ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಎಸ್ಎಸ್ಎಲ್ಸಿ, ಪಿಯುಸಿ, ಐಟಿಐ, ಡಿಗ್ರಿ ಪಾಸಾದ ಅಭ್ಯರ್ಥಿಗಳಿಂದ ವಿವಿಧ ಕಂಪನಿಗಳಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಹೌದು, ಜೂನ್ 9 ರಂದು 10.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕಲಬುರಗಿ ಸರ್ಕಾರಿ ಐಟಿಐ ಕಾಲೇಜು ಹಿಂದುಗಡೆಯಿರುವ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನೇರ ಸಂದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಉದ್ಯೋಗ ಮೇಳದಲ್ಲಿ ಭಾಗವಹಿಸುವ ಕಂಪನಿಗಳ ವಿವರ
ಕಿರಣ ಇನ್ಫೋಟೆಕ್ ದಲ್ಲಿ ಸೇಲ್ಸ್ ಮ್ಯಾನೇಜರ್ / ಲೀಡ್ ಮ್ಯಾನೇಜರ್ ಹುದ್ದಗೆ ಬಿಕಾಂ, ಬಿಬಿಎ, ಎಮ್.ಬಿ.ಎ, ಎಂಕಾಂ ಹಾಗೂ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 30 ವಯೋಮಾನದೊಳಗಿರಬೇಕು. ಟ್ಯಾಲಿ, ಇಂಗ್ಲೀಷ್ ಹಾಗೂ ಕನ್ನಡ ಬರಬೇಕು. 0 ರಿಂದ 3 ವರ್ಷದ ಕೆಲಸದ ಅನುಭವ ಹೊಂದಿರಬೇಕು.
ಚಿರಾಯು ಆಸ್ಪತ್ರೆಯಲ್ಲಿ ಸೆಕ್ಯುರಿಟಿ (ಮಹಿಳಾ ಹಾಗೂ ಪುರುಷ) ಹುದ್ದೆಗೆ ಎಸ್ಎಸ್ಎಲ್ಸಿ / ಪಿಯುಸಿ ವಿದ್ಯಾರ್ಹತೆ ಹೊಂದಿರಬೇಕು. ವಾರ್ಡ್ ಬಾಯ್, ಆಯಾ, ಹೌಸ್ ಕೀಪಿಂಗ್ ಹುದ್ದೆಗೆ 7ನೇ ತರಗತಿ, ಎಸ್ಎಸ್ಎಲ್ಸಿ ವಿದ್ಯಾರ್ಹತೆ ಹೊಂದಿರಬೇಕು. ಫಾರ್ಮಸಿಸ್ಟ್ ಹುದ್ದೆಗೆ ಡಿಎಮ್ಎಲ್ಟಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 30 ವರ್ಷದೊಳಗಿರಬೇಕು.
ಎ.ಜಿ. ರೆಡಿಮೆಡ್ ಗಾರ್ಮೆಂಟ್ ದಲ್ಲಿ ಹೊಲಿಗೆ, ಬಟ್ಟೆ ಕತ್ತರಿಸುವುದು, ಕಸೂತಿ ಎಂಬ್ರಾಯಡರಿ, ಕಂಪ್ಯೂಟರ್ ನೆರವಿನ ವಿನ್ಯಾಸ, ಪ್ಯಾಕಿಂಗ್, ಮಾರಾಟ ಕಾರ್ಯನಿರ್ವಾಹಕ, ಕಂಪ್ಯೂಟರ್ ಆಪರೇಟರ್, ಅಕೌಂಟೆಂಟ್ ಕಚೇರಿ ಕೆಲಸ ಹುದ್ದೆಗೆ ಎಸ್ಎಸ್ಎಲ್ಸಿ, ಪಿಯುಸಿ ಹಾಗೂ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 30 ವಯೋಮಾನದೊಳಗಿರಬೇಕು.
ದೇವಾನಂದ ಅಟೋಮೊಬೈಲ್ಸ್ ದಲ್ಲಿ ಸೇಲ್ಸ್ ಮ್ಯಾನೇಜರ್, ಸರ್ವಿಸ್ ಮ್ಯಾನೇಜರ್, ಟೆಕ್ನಿಶಿಯನ್ ಮೆಕ್ಯಾನಿಕ್, ಎಲೆಕ್ಟ್ರಿಶಿಯನ್, ಹೆಲ್ಪರ್, ಸೂಪರ್ ವೈಸರ್, ಸರ್ವಿಸ್ ಅಡ್ವೈಸರ್ ಹುದ್ದೆಗೆ ಎಸ್ಎಸ್ಎಲ್ಸಿ, ಐಟಿಐ, ಡಿಪ್ಲೋಮಾ, ಯಾವುದೇ ಪದವಿ, ಎಂಬಿಎ ಹಾಗೂ ಬಿಇ (ಮೆಕ್ಯಾನಿಕಲ್) ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 30 ವರ್ಷದೊಳಗಿರಬೇಕು.
ಸ್ವತಂತ್ರ ಮೈಕ್ರೋ ಫೈನಾನ್ಸ್ ದಲ್ಲಿ ಫೀಲ್ಡ್ ಆಫೀಸರ್, ಸೀನಿಯರ್ ಫೀಲ್ಡ್ ಆಫೀಸರ್, ಬ್ರ್ಯಾಂಚ್ ಮ್ಯಾನೇಜರ್, ಏರಿಯಾ ಬ್ರ್ಯಾಂಚ್ ಮ್ಯಾನೇಜರ್ ಹಾಗೂ ರಿಸ್ಕ್ ಆಫೀಸರ್ ಹುದ್ದೆಗೆ ಪಿಯುಸಿ ಹಾಗೂ ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ 20 ರಿಂದ 34 ವರ್ಷದೊಳಗಿರಬೇಕು.
ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ಎಲ್ಲಾ ಅಂಕಪಟ್ಟಿಗಳ ಝರಾಕ್ಸ್ ರೆಸ್ಯೂಮ್ (ಬಯೋಡಾಟಾ) ಭಾವಚಿತ್ರಗಳು ಹಾಗೂ ಆಧಾರ್ ಕಾರ್ಡ್ ದೊಂದಿಗೆ ಮೇಲ್ಕಂಡ ದಿನದಂದು ನಡೆಯುವ ಮಿನಿ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು.
ನೇರ ಸಂದರ್ಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆ ನೀಡಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472 274846, ಮೊಬೈಲ್ ನಂಬರ್ 9620095270ಗೆ ಸಂಪರ್ಕಿಸಲು ಕೋರಲಾಗಿದೆ.
ಗದಗದಲ್ಲಿ 9 ರಂದು ಉದ್ಯೋಗ ಮೇಳ
ಇನ್ಶ್ ಫೈರಾ ಟೆಕ್ನಾಲಜೀಸ್ ಸಂಸ್ಥೆಯಿಂದ ಜೂನ್ 9 ರಂದು ಉದ್ಯೋಗ ಮೇಳ ಆಯೋಜಿಸಲಾಗಿದೆ. ಉದ್ಯೋಗ ಮೇಳದಲ್ಲಿ ಸುಮಾರು 8 ಕಂಪನಿಗಳು ಪಾಲ್ಗೊಳ್ಳುತ್ತಿವೆ. ಈ ಮೇಳದಲ್ಲಿ ಎಸ್ಎಸ್ಎಲ್ಸಿ, ಪಿಯುಸಿ, ಐಟಿಐ, ಯಾವುದೇ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದವರು ಪಾಲ್ಗೊಳ್ಳಬಹುದು.. ಸುಮಾರು 350 ರಿಂದ 400 ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಲಾಗುವುದು. ಆಸಕ್ತ ಅಭ್ಯರ್ಥಿಗಳು ಸಂಸ್ಥೆಯ ಕಚೇರಿಯಲ್ಲಿ ತಮ್ಮ ಹೆಸರು ನೋಂದಣಿ ಮಾಡಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಚಂದ್ರಶೇಖರ 9148237743, ಅಕ್ಷತಾ 7619531919, ಜ್ಯೋತಿ 7619531616 ಈ ದೂರವಾಣಿಗಳನ್ನು ಸಂಪರ್ಕಿಸಲು ಕೋರಲಾಗಿದೆ.
ಯಾದಗಿರಿಯಲ್ಲಿ ನೇರ ಸಂದರ್ಶನ
ಯಾದಗಿರಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಜೂನ್ 9 ರಂದು ನೇರ ಸಂದರ್ಶನ ಆಯೋಜಿಸಲಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಉದ್ಯೋಗಾಧಿಕಾರಿ ತಿಳಿಸಿದ್ದಾರೆ.
ಬೆಳಗ್ಗೆ 10.30 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಸಂದರ್ಶನ ಇರಲಿದೆ. ಎಸ್ಎಸ್ಎಲ್ಸಿ,, ಪಿಯುಸಿ, ಐಟಐ ಹಾಗೂ ಯಾವುದೇ ಪದವಿ ಪಾಸ್ ಆಗಿರಬೇಕು. ಕ್ರೆಡಿಟ್ ಆಕ್ಸೇಸ್ ಗ್ರಾಮೀಣ ಪ್ರೈವೆಟ್ ಲಿಮಿಟೆಡ್ ನಲ್ಲಿ 30 ಹುದ್ದೆ ಇದ್ದು, ಟ್ರೇನಿ ಕೇಂದ್ರ ಮ್ಯಾನೇಜರ್ ಹುದ್ದೆಗೆ ಎಸ್ಎಸ್ಎಲ್ಸಿ, ಪಿಯುಸಿ, ಐಟಿಐ ಹಾಗೂ ಯಾವುದೇ ಪದವಿ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹತಿಗೆ ದೂರವಾಣಿ ಸಂಖ್ಯೆ 08473 253718 ಗೆ ಸಂಪರ್ಕಿಸಲು ಕೋರಲಾಗಿದೆ.