Aadhaar: ಆಧಾರ್ ಅಪ್​ಡೇಶನ್; ಡೆಡ್​ಲೈನ್​ಗೆ ಕೆಲವೇ ದಿನ; ಜೂನ್ 14ರೊಳಗೆ ಹೇಗೆ ಮಾಡುವುದು? ಅಪ್​ಡೇಟ್ ಮಾಡದಿದ್ದರೆ ಮುಂದೇನು?

Aadhaar: ಆಧಾರ್ ಅಪ್​ಡೇಶನ್; ಡೆಡ್​ಲೈನ್​ಗೆ ಕೆಲವೇ ದಿನ; ಜೂನ್ 14ರೊಳಗೆ ಹೇಗೆ ಮಾಡುವುದು? ಅಪ್​ಡೇಟ್ ಮಾಡದಿದ್ದರೆ ಮುಂದೇನು?

 June 14 Deadline For Free Aadhaar Update: ಆಧಾರ್ ಕಾರ್ಡ್ ಅನ್ನು ಯಾವುದೇ ಶುಲ್ಕ ಇಲ್ಲದೇ ಅಪ್​ಡೇಟ್ ಮಾಡಬೇಕೆನ್ನುವವರಿಗೆ ಜೂನ್ 14ರವರೆಗೂ ಕಾಲಾವಕಾಶ ಕೊಡಲಾಗಿದೆ. ಮೈ ಆಧಾರ್ ಪೋರ್ಟಲ್​ನಲ್ಲಿ ಮಾತ್ರ ಈ ಸೌಲಭ್ಯ ಇದೆ



ಬೆಂಗಳೂರು: 10 ವರ್ಷಕ್ಕಿಂತ ಹೆಚ್ಚು ಕಾಲದಿಂದ ಅಪ್​ಡೇಟ್ ಆಗದೇ ಇರುವ ಆಧಾರ್ ಕಾರ್ಡನ್ನು ಅಪ್​ಡೇಟ್ (Aadhaar Card Updation) ಮಾಡುವಂತೆ ಸರ್ಕಾರ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಕೋಟ್ಯಂತರ ಜನರು ಆಧಾರ್ ಕಾರ್ಡ್​ನಲ್ಲಿರುವ ತಮ್ಮ ಮಾಹಿತಿಯನ್ನು ನವೀಕರಿಸುವ ಕೆಲಸ ಮಾಡುತ್ತಿದ್ದಾರೆ. 

ಆಧಾರ್ ಕೇಂದ್ರಕ್ಕೆ ಹೋಗಿ 50 ರೂ ಕೊಟ್ಟು ನಮ್ಮ ಡೆಮಾಗ್ರಾಫಿಕ್ ಮಾಹಿತಿ ಅಪ್​ಡೇಟ್ ಮಾಡಬಹುದು. ಆದರೆ, ಹೆಚ್ಚಿನ ಜನರು ಶೀಘ್ರದಲ್ಲಿ ಈ ಅಪ್​ಡೇಟ್ ಮಾಡಲು ಸಾಧ್ಯವಾಗುವಂತೆ ಆನ್​ಲೈನ್​ನಲ್ಲೂ ಅವಕಾಶ ಮಾಡಿಕೊಡಲಾಗಿದೆ. ಜೂನ್ 14ರವರೆಗೂ ನೀವು ಆನ್​ಲೈನ್​ನಲ್ಲಿ ಉಚಿತವಾಗಿ ಆಧಾರ್ ಅಪ್​ಡೇಟ್ ಮಾಡಬಹುದು. ಯಾವುದೇ ಶುಲ್ಕ ಪಾವತಿಸಬೇಕಿಲ್ಲ. ಇದು ಯುಐಡಿಎಐನ ಅಧಿಕೃತ ವೆಬ್​ಸೈಟ್​ನಲ್ಲಿ (UIDAI Website) ಇರುವ ಆಫರ್. ಇನ್ನೈದು ದಿನದಲ್ಲಿ ಈ ಆಫರ್ ಮುಗಿಯುತ್ತದೆ. ಜೂನ್ 14ರವರೆಗೂ ಉಚಿತವಾಗಿ ನಮ್ಮ ಆಧಾರ್​ನ ಡೆಮೋಗ್ರಾಫಿಕ್ ವಿವರಗಳನ್ನು ಅಪ್​ಡೇಟ್ ಮಾಡಬಹುದು. ಡೆಮಾಗ್ರಾಫಿಕ್ ವಿವರ ಎಂದರೆ ನಮ್ಮ ವಿಳಾಸ, ಹೆಸರು, ಜನ್ಮದಿನಾಂಕ ಇತ್ಯಾದಿ. ಆದರೆ, ಈ ಉಚಿತ ಸೇವೆ ಕೇವಲ ಮೈ ಆಧಾರ್ ಪೋರ್ಟಲ್​ನಲ್ಲಿ ಮಾತ್ರವೇ.

10 ವರ್ಷ ಬಳಿಕ ಅಧಾರ್ ಕಾರ್ಡ್ ಅಪ್​ಡೇಟ್ ಆಗಬೇಕು ಎಂದಿದೆ ಸರ್ಕಾರ

ನಮ್ಮಲ್ಲಿ ಹೆಚ್ಚಿನ ಜನರು ಆಧಾರ್ ಕಾರ್ಡ್ ಮಾಡಿಸಿದಾಗಿನಿಂದ ಒಮ್ಮೆಯೂ ಅಪ್​ಡೇಟ್ ಮಾಡಿಲ್ಲ. 10 ವರ್ಷಗಳಿಂದ ಅಪ್​ಡೇಟ್ ಆಗದ ಆಧಾರ್ ಕಾರ್ಡ್ ಅನ್ನು ಅಪ್​ಡೇಟ್ ಮಾಡಬೇಕೆಂದು ಸರ್ಕಾರ ಜನಸಾಮಾನ್ಯರಿಗೆ ಸೂಚಿಸಿದೆ. ಐಡಿ ಪ್ರೂಫ್, ಅಡ್ರೆಸ್ ಪ್ರೂಫ್ ದಾಖಲೆಗಳನ್ನು ಆಧಾರ್​ಗೆ ಮತ್ತೊಮ್ಮೆ ಸಲ್ಲಿಸಬೇಕಾಗುತ್ತದೆ. ಇದರಿಂದ ಆಧಾರ್ ಡಾಟಾಬೇಸ್​ನಲ್ಲಿ ಸಮರ್ಪಕ ಮಾಹಿತಿ ಸಂಗ್ರಹವಾಗಿರುತ್ತದೆ.


ಜೂನ್ 14ರೊಳಗೆ ಆಧಾರ್ ಅಪ್​ಡೇಟ್ ಮಾಡದಿದ್ದರೆ…?

ಜೂನ್ 14ರೊಳಗೆ ಆಧಾರ್ ಕಾರ್ಡ್ ಅಪ್​ಡೇಟ್ ಮಾಡದೇ ಹೋದರೆ ಉಚಿತ ಎಂಬುದು ರದ್ದಾಗುವುದು ಬಿಟ್ಟರೆ ಬೇರೇನೂ ವ್ಯತ್ಯಾಸವಾಗದು. ಮಾಮೂಲಿಯ ರೀತಿಯಲ್ಲಿ ನೀವು ಆಧಾರ್ ಸೆಂಟರ್​ಗೆ ಹೋಗಿ ಆಧಾರ್ ವಿವರ ಅಪ್​ಡೇಟ್ ಮಾಡಿಸಬೇಕೆಂದರೆ 50 ರೂ ಶುಲ್ಕ ಪಾವತಿಸಲೇಬೇಕು. ಜೂನ್ 14ರ ನಂತರ ಮೈ ಆಧಾರ್ ಪೋರ್ಟಲ್​ನಲ್ಲೂ ನೀವು 50 ರೂ ಶುಲ್ಕ ಪಾವತಿಸಿಯೇ ಆಧಾರ್ ಅಪ್​ಡೇಶನ್ ಮಾಡಬೇಕಾಗುತ್ತದೆ.

ಆನ್​ಲೈನ್​ನಲ್ಲಿ ಉಚಿತವಾಗಿ ಆಧಾರ್ ಅಪ್​ಡೇಟ್ ಮಾಡುವುದು ಹೇಗೆ?

ಮೈ ಆಧಾರ್​ನ ಅಧಿಕೃತ ಪೋರ್ಟಲ್​ myaadhaar.uidai.gov.inಗೆ ಹೋಗಿ ಆಧಾರ್ ನಂಬರ್ ಬಳಸಿ ಲಾಗಿನ್ ಅಗಬೇಕು.

ಪ್ರೊಸೀಡ್ ಟು ಅಪ್​ಡೇಟ್ ಅಡ್ರೆಸ್ ಎಂಬ ಅಯ್ಕೆ ಆರಿಸಿಕೊಳ್ಳಿ

ಈಗ ನಿಮ್ಮ ಅಧಾರ್ ನೊಂದಾಯಿತ ಮೊಬೈಲ್​ಗೆ ಓಟಿಪಿ ಬರುತ್ತದೆ.

ಒಟಿಪಿ ಹಾಕಿದ ಬಳಿಕ ಡಾಕ್ಯುಮೆಂಟ್ ಅಪ್​ಡೆಟ್ ಮೇಲೆ ಕ್ಲಿಕ್ ಮಾಡಿ.

ಈಗ ವ್ಯಕ್ತಿಯ ವಿವರ ಕಾಣಿಸುತ್ತದೆ. ಅದು ಸರಿಯಾಗಿದ್ದರೆ ಮುಂದಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

ಬಳಿಕ ಐಡಿ ಮತ್ತು ಅಡ್ರೆಸ್ ಪ್ರೂಫ್ ದಾಖಲೆಗಳನ್ನು ಆಯ್ದುಕೊಳ್ಳಿ.

ನೀವು ಸ್ಕ್ಯಾನ್ ಮಾಡಿದ ಈ ದಾಖಲೆಗಳ ಪ್ರತಿತಿಯನ್ನು ಅಪ್​ಲೋಡ್ ಮಾಡಿ

ಈಗ ನಿಮ್ಮ ಮನವಿ ಸ್ವೀಕೃತವಾಗುತ್ತದೆ. 14 ಅಂಕಿಗಳ ಯುಆರ್​ಎನ್ ನಂಬರ್ ಜನರೇಟ್ ಆಗುತ್ತದೆ.

ಕೆಲ ದಿನಗಳ ಬಳಿಕ ಆಧಾರ್ ಕಾರ್ಡ್​ನಲ್ಲಿ ನಿಮ್ಮ ಹೊಸ ಮಾಹಿತಿ ಅಪ್​ಡೇಟ್ ಆಗಿರುತ್ತದೆ. ಅದನ್ನು ನೀವು ಯುಆರ್​ಎನ್ ನಂಬರ್ ಬಳಸಿ ಟ್ರ್ಯಾಕ್ ಮಾಡಬಹುದು. ಅಪ್​ಡೇಟ್ ಆದ ಆಧಾರ್ ಕಾರ್ಡ್​ನ ಪ್ರಿಂಟೌಟ್ ಪಡೆದು ನಿಮ್ಮ ಬಳಿ ಇಟ್ಟುಕೊಳ್ಳಿ.

Post a Comment

Previous Post Next Post

Top Post Ad

CLOSE ADS
CLOSE ADS
×