2023ರ ಫೆಬ್ರುವರಿಯಲ್ಲಿ ಭಾರತದ ಅತಿ ದೊಡ್ಡ ಡಿಜಿಟಲ್ ಪಾವತಿ ವೇದಿಕೆಯಾಗಿರುವ ಯೂನಿಫೈಡ್ ಪೇಮೆಂಟ್ ಎಂಟರ್ಪ್ರೈಸ್ (UPI) ಪಾವತಿಸುವ ವಿಶಿಷ್ಟವನ್ನು ಬಳಕೆದಾರರಿಗೆ ಪರಿಚಯಿಸಿದೆ.
ಈ ಮೂಲಕ ವಿದೇಶದಲ್ಲಿ ಯುಪಿಐ ಮೂಲಕ ಹಣ ಬಳಕೆಗೆ (Cross Border UPI Payments) ಅವಕಾಶ ಕಲ್ಪಿಸಿದ ಭಾರತದ ಮೊದಲ ಡಿಜಿಟಲ್ ಪಾವತಿ ಸಂಸ್ಥೆ ಎಂಬ ಹೆಗ್ಗಳಿಕೆಗೆ ಫೋನ್ ಪೇ ಪಾತ್ರವಾಗಿದೆ.ವಿದೇಶಿ ಪ್ರಯಾಣ ಕೈಗೊಳ್ಳುವ ಭಾರತೀಯರಿಗೆ ನೆರವಾಗಲಿದ್ದು, ಬಳಕೆದಾರರ ಖಾತೆಯಿಂದ ಸ್ಥಳೀಯ ಕರೆನ್ಸಿ ರೂಪದಲ್ಲಿ ಅಲ್ಲಿನ ವ್ಯಾಪಾರಿಗಳಿಗೆ ಹಣ ಪಾವತಿಯಾಗಲಿದೆ.
ಅಂತರಾಷ್ಟ್ರೀಯ ಡೆಬಿಟ್ ಕಾರ್ಡ್ ರೂಪದಲ್ಲಿ, ಈ ಯುಪಿಐ ವಹಿವಾಟು ನಡೆಸಲಿದ್ದು, ಮೊದಲ ಹಂತದಲ್ಲಿ ಯುಎಇ, ಸಿಂಗಾಪುರ್, ಮಾರಿಷಸ್, ನೇಪಾಳ, ಭೂತಾನ್ ದೇಶಗಳಲ್ಲಿ ಇದು ಅನುಷ್ಠಾನಕ್ಕೆ ಬರಲಿದೆ. 2015 ರಲ್ಲಿ ಬೆಂಗಳೂರಿನಲ್ಲಿ ಆರಂಭವಾದ ಫೋನ್ ಪೇ ಸಂಸ್ಥೆಯ ಸ್ಥಾಪಕ ಮತ್ತು ಸಿಇಒ ಸಮೀರ್ ನಿಗಮ್ ಆಗಿದ್ದಾರೆ.
Tags:
News special