ಶಿವಮೊಗ್ಗದಲ್ಲಿ ಉದ್ಯೋಗವಕಾಶ, ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಡಿಟೇಲ್ಸ್‌

By SVR Creations

ಶಿವಮೊಗ್ಗ: ಜಿಲ್ಲೆಯಾದ್ಯಂತ ವೈದ್ಯಕೀಯ ಕೇಂದ್ರಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ವಿಲೇವಾರಿ ಮಾಡುವ ಸಂಸ್ಥೆ ದಿ ಶುಶ್ರುತ ಬಯೋ-ಮೆಡಿಕಲ್ ವೇಸ್ಟ್ ಮ್ಯಾನೇಜ್‌ಮೆಂಟ್ ಸೊಸೈಟಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.

ಮಾಚೇನಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿರುವ ಸಂಸ್ಥೆಯು ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿದೆ.

ಯಾವ್ಯಾವ ಹುದ್ದೆ? ಏನೆಲ್ಲ ಅರ್ಹತೆ?

ಅಕೌಂಟೆಂಟ್ ಅಥವಾ ಸೂಪರ್‌ವೈಸರ್: 1 ಸ್ಥಾನವಿದ್ದು, ಬಿ.ಕಾಂ ಅಥವಾ ಬಿ.ಬಿ.ಎಂ ಪದವಿ ಜೊತೆಗೆ ಟ್ಯಾಲಿ ಜ್ಞಾನ ಮತ್ತು 5 ವರ್ಷ ಅನುಭವವಿರಬೇಕು.

ಎಲೆಕ್ಟ್ರಿಷಿಯನ್: 1 ಸ್ಥಾನವಿದ್ದು, ಐಟಿಐ ಅಥವಾ ಡಿಪ್ಲೊಮಾ ಜತೆಗೆ 3 ವರ್ಷಗಳ ಅನುಭವ ಅಗತ್ಯ.

ಡ್ರೈವರ್: 3 ಹುದ್ದೆಗಳಿವೆ. ಎಸ್‌ಎಸ್‌ಎಲ್‌ಸಿ ಅಥವಾ ಮೇಲ್ಪಟ್ಟ ವಿದ್ಯಾಭ್ಯಾಸದೊಂದಿಗೆ ಬ್ಯಾಡ್ಜ್ ಹೊಂದಿರಬೇಕು. 5 ವರ್ಷಗಳ ಅನುಭವ ಕಡ್ಡಾಯ.

ಸಹಾಯಕ ಕೆಲಸಗಾರರು: 3 ಹುದ್ದೆಗಳಿವೆ.

ಆಸಕ್ತ ಅಭ್ಯರ್ಥಿಗಳು 15 ದಿನಗಳ ಒಳಗಾಗಿ ಅರ್ಜಿಗಳನ್ನು ಸಲ್ಲಿಸಬೇಕು. ಮ್ಯಾನೇಜಿಂಗ್ ಕಮಿಟಿಯು ಅರ್ಜಿಗಳನ್ನು ಪರಿಶೀಲಿಸಿ ನಂತರ ಮೌಖಿಕ ಸಂದರ್ಶನಕ್ಕೆ ಆಹ್ವಾನಿಸಲಿದೆ. ಅರ್ಜಿಗಳನ್ನು ದಿ ಶುಶ್ರುತ ಬಯೋ-ಮೆಡಿಕಲ್ ವೇಸ್ಟ್ ಮ್ಯಾನೇಜ್‌ಮೆಂಟ್ ಸೊಸೈಟಿ (ರಿ.), ಸೈಟ್ ನಂ.31/ಸಿ, ಕೆ.ಐ.ಡಿ.ಬಿ. ಕೈಗಾರಿಕಾ ಪ್ರದೇಶ, ಮಾಚೇನಹಳ್ಳಿ – 577 222. ಅಥವಾ shushruthasmg@gmail.com ಗೆ ಈ ಮೇಲ್‌ ಮಾಡಬಹುದು.