Gruha Jyothi Scheme: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿರುವ ಪಂಚ ಗ್ಯಾರಂಟಿಗಳಲ್ಲಿ ಗೃಹಜ್ಯೋತಿ ಯೋಜನೆ ಕೂಡ ಒಂದಾಗಿದೆ. ಇದೀಗ ಈ ಯೋಜನೆಯಡಿ ಉಚಿತ ವಿದ್ಯುತ್ ಪಡೆಯುತ್ತಿದ್ದವರಿಗೆ ಬಿಗ್ ಶಾಕ್‌ವೊಂದು ಎದುರಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
| ಕರ್ನಾಟಕದ ಗೃಹಜ್ಯೋತಿ ಯೋಜನೆ ಫಲಾನುಭವಿಗಳು ವಿದ್ಯುತ್ ಬಳಕೆ ಮಿತಿ, ಬಿಲ್ ವಿವರ ಹಾಗೂ ಹೊಸ ನಿಯಮಗಳ ಬಗ್ಗೆ ತಿಳಿದುಕೊಳ್ಳುವುದು ಅತ್ಯಗತ್ಯ. |
'ಗೃಹ ಜ್ಯೋತಿ' ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಇದರಡಿಯಲ್ಲಿ ಉಚಿತ ವಿದ್ಯುತ್ ಪಡೆಯುತ್ತಿರುವ ಇಂತಹ ಫಲಾನುಭವಿಗಳಿಗೆ ಇಂಧನ ಇಲಾಖೆಯಿಂದ ಶಾಕಿಂಗ್ ಸುದ್ದಿ ಎದುರಾಗಿದೆ. ರಾಜ್ಯದಲ್ಲಿ ನಡೆಯುತ್ತಿರುವ ಮನೆ-ಮನೆ ಸಮೀಕ್ಷೆಯಲ್ಲಿ ಅಗತ್ಯ ದಾಖಲೆಗಳು ಮತ್ತು ಮಾಹಿತಿಯನ್ನು ನೀಡದ ಫಲಾನುಭವಿಗಳು ಈ ಯೋಜನೆಯಿಂದ ಹೊರಗುಳಿಯುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಎಷ್ಟು ಜನ ಫಲಾನುಭವಿಗಳಿದ್ದಾರೆ?
ಯೋಜನೆಯ ಲಾಭವು ಕೇವಲ ಅರ್ಹ ಮತ್ತು ನಿಜವಾದ ಫಲಾನುಭವಿಗಳಿಗೆ ಮಾತ್ರ ತಲುಪುತ್ತಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಹಾಗೂ ಡೇಟಾವನ್ನು ನವೀಕರಿಸಲು ಸರ್ಕಾರವು ಈ ಸಮೀಕ್ಷೆಯನ್ನು ನಡೆಸುತ್ತಿದೆ. ಇಂಧನ ಇಲಾಖೆಯ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ 1.65 ಕೋಟಿಗೂ ಹೆಚ್ಚು ಫಲಾನುಭವಿಗಳಿದ್ದಾರೆ. 2026ರ ಆಗಸ್ಟ್ 2ರ ವೇಳೆಗೆ ಸುಮಾರು 91.50 ಲಕ್ಷ ಮನೆಗಳ ಸಮೀಕ್ಷೆ ಪೂರ್ಣಗೊಂಡಿದ್ದರೆ, ಇನ್ನುಳಿದ 73.80 ಲಕ್ಷಕ್ಕೂ ಹೆಚ್ಚು ಮನೆಗಳ ಮಾಹಿತಿ ಸಂಗ್ರಹ ಆಗಬೇಕಿದೆ.
ಫಲಾನುಭವಿಗಳಿಗೆ ಎಚ್ಚರಿಕೆ ಸಂದೇಶ
ಸಮೀಕ್ಷೆ ವೇಳೆ ಗ್ರಾಹಕರು ಮನೆಯಲ್ಲಿ ಇಲ್ಲದಿದ್ದರೆ ಅಥವಾ ಮಾಹಿತಿ ನೀಡಲು ನಿರಾಕರಿಸಿದರೆ ಅವರ ಮಾಹಿತಿಯನ್ನು ಸಂಗ್ರಹಿಸಲು ಸಾಧ್ಯ ಆಗುವುದಿಲ್ಲ. ಆದ್ದರಿಂದ ಅವರು ಯೋಜನೆಯ ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂದು ಎಚ್ಚರಿಕೆಯನ್ನು ಇಲಾಖೆ ನೀಡಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ರಾಜ್ಯದ ಎಲ್ಲಾ ಎಸ್ಕಾಂ ಕಚೇರಿಗಳಲ್ಲಿ ವಿಶೇಷ ಸಮೀಕ್ಷಾ ಶಿಬಿರಗಳನ್ನು ನಡೆಸಲು ಸರ್ಕಾರದ ಅನುಮತಿ ಕೋರಲಾಗಿದೆ.
ಈ ಶಿಬಿರಗಳಲ್ಲಿ ಫಲಾನುಭವಿಗಳು ಸ್ವತಃ ಹಾಜರಾಗಿ ತಮ್ಮ ದಾಖಲೆಗಳು ಮತ್ತು ಮಾಹಿತಿಯನ್ನು ಸಲ್ಲಿಕೆ ಮಾಡಹುದಾಗಿದೆ. ಅಲ್ಲದೆ ಮೊದಲ ಬಾರಿ ಮನೆಗೆ ಭೇಟಿ ನೀಡಿದಾಗ ಫಲಾನುಭವಿಗಳು ಸಿಗದಿದ್ದರೆ ಅಥವಾ ಮಾಹಿತಿ ನೀಡದಿದ್ದರೆ, ಮೀಟರ್ ರೀಡರ್‌ಗಳು ಮತ್ತೊಮ್ಮೆ ಮನೆಗಳಿಗೆ ಭೇಟಿ ನೀಡುವಂತೆ ಸೂಚನೆ ನೀಡಲಾಗಿದೆ.
ಈ ನಡುವೆವೆಯೇ ಬೆಂಗಳೂರಿನ ಕೆಲವು ಪ್ರದೇಶಗಳ ದೊಡ್ಡ ಅಪಾರ್ಟ್‌ಮೆಂಟ್‌ಗಳಲ್ಲಿ ಮೀಟರ್ ರೀಡರ್‌ಗಳಿಗೆ ಪ್ರವೇಶ ನೀಡುತ್ತಿಲ್ಲ ಎಂಬ ದೂರುಗಳು ಕೇಳಿಬಂದಿವೆ. ಕೆಲವರು ತಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಸಮೀಕ್ಷೆಗೆ ಅಡಚಣೆ ಉಂಟಾಗುತ್ತಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ. ಈ ಬಗ್ಗೆ ಮೀಟರ್ ರೀಡರ್‌ಗಳು ಬೆಸ್ಕಾಂ ಮುಖ್ಯ ಕಚೇರಿಯ ಗಮನಕ್ಕೂ ತಂದಿದ್ದಾರೆ ಎನ್ನುವವ ಮಾಹಿತಿ ತಿಳಿದುಬಂದಿದೆ.
ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ ಎನ್ ಅವರು ಈ ಬಗ್ಗೆ ಮಾತನಾಡಿದ್ದು, 'ಕೆಲವರು ತಮ್ಮ ಮಾಹಿತಿಯನ್ನು ಹಂಚಿಕೊಳ್ಳಲು ಆಸಕ್ತಿ ತೋರದಿರುವುದು ನಿಜ. ಅಂತಹ ಸಂದರ್ಭಗಳಲ್ಲಿ ಆ್ಯಪ್‌ನಲ್ಲಿ ಮಾಹಿತಿ ನೀಡಲು ನಿರಾಕರಿಸಿದ್ದಾರೆ ಎಂಬ ಆಯ್ಕೆ ಇದೆ ಮತ್ತು ಫಲಾನುಭವಿಯಿಂದ ಸಹಿಯನ್ನೂ ಪಡೆಯಲಾಗುತ್ತದೆ. ಈವರೆಗೆ ಯಾವುದೇ ಫಲಾನುಭವಿಯನ್ನು ಪಟ್ಟಿಯಿಂದ ಕೈಬಿಡಲಾಗಿಲ್ಲ. ಯೋಜನೆಯಿಂದ ಯಾರನ್ನಾದರೂ ಹೊರಗಿಡುವ ಕುರಿತು ಅಂತಿಮ ನಿರ್ಧಾರವನ್ನು ಸರ್ಕಾರವೇ ತೆಗೆದುಕೊಳ್ಳಲಿದೆ,' ಎಂದು ಸ್ಪಷ್ಟಪಡಿಸಿದ್ದಾರೆ.
ಸಮೀಕ್ಷೆಗೆ ಯಾವೆಲ್ಲಾ ದಾಖಲೆಗಳು ಬೇಕು?
* ಆಧಾರ್ ಕಾರ್ಡ್
* ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ
* ಮತದಾರರ ಗುರುತಿನ ಚೀಟಿ
* ಪ್ಯಾನ್ ಕಾರ್ಡ್
* ಬಾಡಿಗೆ ಅಥವಾ ಲೀಸ್ ಒಪ್ಪಂದ ಪತ್ರ (ಅಗತ್ಯ ಇದ್ದರೆ)
* ಪಡಿತರ ಚೀಟಿ
* ಜಾತಿ ಪ್ರಮಾಣಪತ್ರ
FAQ (ಪದೇ ಪದೇ ಕೇಳಲಾಗುವ ಪ್ರಶ್ನೆಗಳು)
1. ಗೃಹಜ್ಯೋತಿ ಯೋಜನೆ ಎಂದರೇನು?
ಗೃಹ ಬಳಕೆಯ ವಿದ್ಯುತ್ ಗ್ರಾಹಕರಿಗೆ ಸರ್ಕಾರ ನಿಗದಿತ ಮಿತಿಯೊಳಗೆ ಉಚಿತ ವಿದ್ಯುತ್ ಸೌಲಭ್ಯ ನೀಡುವ ಯೋಜನೆಯೇ ಗೃಹಜ್ಯೋತಿ ಯೋಜನೆ.
2. ಗೃಹಜ್ಯೋತಿ ಯೋಜನೆಯ ಪ್ರಯೋಜನ ಪಡೆಯಲು ಏನು ಮಾಡಬೇಕು?
ಅರ್ಹ ಗ್ರಾಹಕರು ಸೇವಾ ಸಿಂಧು (Seva Sindhu) ಮೂಲಕ ಅರ್ಜಿ ಸಲ್ಲಿಸಿ, ಅಗತ್ಯ ದಾಖಲೆಗಳನ್ನು ಒದಗಿಸಬೇಕು.
3. ಯೋಜನೆಯ ಫಲಾನುಭವಿಗಳು ಯಾವ ಮಾಹಿತಿಯನ್ನು ಪರಿಶೀಲಿಸುತ್ತಿರಬೇಕು?
ವಿದ್ಯುತ್ ಬಳಕೆ ಮಿತಿ, ಬಿಲ್ ವಿವರ, ಖಾತೆ ಮಾಹಿತಿ ಹಾಗೂ ಯೋಜನೆಗೆ ಸಂಬಂಧಿಸಿದ ಸರ್ಕಾರದ ಹೊಸ ಸೂಚನೆಗಳನ್ನು ನಿಯಮಿತವಾಗಿ ಪರಿಶೀಲಿಸಬೇಕು.
4. ವಿದ್ಯುತ್ ಬಳಕೆ ಮಿತಿಯನ್ನು ಮೀರಿದರೆ ಏನಾಗುತ್ತದೆ?
ನಿಗದಿತ ಉಚಿತ ಬಳಕೆ ಮಿತಿಯನ್ನು ಮೀರಿದ ಘಟಕಗಳಿಗೆ ಅನ್ವಯಿಸುವ ವಿದ್ಯುತ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
5. ಗೃಹಜ್ಯೋತಿ ಯೋಜನೆಯ ಸ್ಥಿತಿಯನ್ನು ಎಲ್ಲಿ ಪರಿಶೀಲಿಸಬಹುದು?
ಸೇವಾ ಸಿಂಧು ಪೋರ್ಟಲ್ ಅಥವಾ ಸಂಬಂಧಿತ ವಿದ್ಯುತ್ ಸರಬರಾಜು ಕಂಪನಿಯ (ESCOM) ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು.
ಪ್ರಮುಖ ಲಿಂಕ್‌ಗಳು
ಗೃಹಜ್ಯೋತಿ ಯೋಜನೆ ಕುರಿತು ಅಧಿಕೃತ ಮಾಹಿತಿ:- https://sevasindhu.karnataka.gov.in/
ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿ:- https://sevasindhuservices.karnataka.gov.in/
ಇನ್ನಷ್ಟು ಸರ್ಕಾರಿ ಯೋಜನೆಗಳ ಮಾಹಿತಿಗಾಗಿ: https://www.kannadapulse.in/