ನಿಮ್ಮ ಬಳಿ ಈ ದಾಖಲೆ ಇದ್ರೆ ಸಾಕು, ಆಯುಷ್ಮಾನ್ ಕಾರ್ಡ್‌ಗೆ ಇ-ಕೆವೈಸಿ ಮಾಡೋದು ಸುಲಭ

By SVR Creations

ನಿಮ್ಮ ಬಳಿ ಆಯುಷ್ಮಾನ್ ಭಾರತ್ ಕಾರ್ಡ್ ಇದ್ದರೆ ಆರ್ಥಿಕವಾಗಿ ಹಿಂದುಳಿದವರು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ವರ್ಷಕ್ಕೆ 5 ಲಕ್ಷ ರೂಪಾಯಿವರೆಗೆ ನಗದು ರಹಿತ ಆರೋಗ್ಯ ಸೇವೆಯನ್ನು ಪಡೆಯಬಹುದಾಗಿದೆ. ಇದೊಂದು ಸರ್ಕಾರಿ ಯೋಜನೆಯಾಗಿದ್ದು, ಈ ಯೋಜನೆ ಪಡೆಯಲು ನೀವು ಇ- ಕೆವೈಸಿ ಮಾಡಿಸಲೇಬೇಕು. ಈ ಕುರಿತಾದ ಮಾಹಿತಿ ಇಲ್ಲಿದೆ.

ಆಯುಷ್ಮಾನ್ ಕಾರ್ಡ್ e-KYC ಮಾಡಲು ಬೇಕಾದ ದಾಖಲೆ ಮತ್ತು ಆನ್‌ಲೈನ್ ಪ್ರಕ್ರಿಯೆ

ಆಯುಷ್ಮಾನ್ ಕಾರ್ಡ್ e-KYC: ಅಗತ್ಯ ದಾಖಲೆ ಹೊಂದಿದ್ದರೆ ಆನ್‌ಲೈನ್‌ನಲ್ಲಿ ಸುಲಭವಾಗಿ KYC ಪೂರ್ಣಗೊಳಿಸಬಹುದು

ಆಯುಷ್ಮಾನ್ ಭಾರತ್ ಯೋಜನೆ ವಿಶ್ವದ ಅತಿ ದೊಡ್ಡ ಆರೋಗ್ಯ ವಿಮೆಯಾಗಿದೆ
ಈ ಯೋಜನೆಯಡಿ 5 ಲಕ್ಷ ರೂವರೆಗೆ ನಗದು ರಹಿತ ಆರೋಗ್ಯ ಸೇವೆಯನ್ನು ಪಡೆಯಬಹುದು
ಮನೆಯಲ್ಲೇ ಆಯುಷ್ಮಾನ್ ಕಾರ್ಡ್‌ಗೆ ಇ- ಕೆವೈಸಿ ಮಾಡಬಹುದು.
ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆಯ (PM-JAY) ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಇದು ವಿಶ್ವದ ಅತಿ ದೊಡ್ಡ ಆರೋಗ್ಯ ವಿಮೆಯಾಗಿದೆ. ಈ ಯೋಜನೆಯಡಿಯಲ್ಲಿ ಆರ್ಥಿಕವಾಗಿ ದುರ್ಬಲವಿರುವ ಕುಟುಂಬವೂ ಸರಿಸುಮಾರು 5 ಲಕ್ಷ ರೂವರೆಗೆ ನಗದು ರಹಿತ ಆರೋಗ್ಯ ಸೇವೆಯನ್ನು ಪಡೆಯಬಹುದು. ನೀವು ಈ ಆಯುಷ್ಮಾನ್ ಭಾರತ್ ಕಾರ್ಡ್ ಹೊಂದಿದ್ದರೆ, ನೀವು ಕೆವೈಸಿಯನ್ನು ಪೂರ್ಣಗೊಳಿಸುವುದು ಕಡ್ಡಾಯ. ಆಧಾರ್ ಕಾರ್ಡ್ ಇದ್ದರೆ ಮನೆಯಿಂದಲೇ ನಿಮ್ಮ ಮೊಬೈಲ್ ಮೂಲಕ  ಇ-ಕೆವೈಸಿ ಮಾಡುವುದು ಸುಲಭ.

ಮನೆಯಲ್ಲೇ ಆಯುಷ್ಮಾನ್ ಭಾರತ್ ಕಾರ್ಡ್‌ಗೆ ಇ ಕೆವೈಸಿ ಮಾಡುವುದು ಹೇಗೆ?

ಹಂತ 1: ಮೊದಲಿಗೆ ಮೊಬೈಲ್‌ನಲ್ಲಿ ಅಯುಷ್ಮಾನ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಹಂತ 2: ನಿಮ್ಮ ಮೊಬೈಲ್ ಸಂಖ್ಯೆ ಹಾಕಿ ಲಾಗಿನ್ ಆಗಿ.

ಹಂತ 3: ನಿಮ್ಮ ರಾಜ್ಯ, ಜಿಲ್ಲೆ ಮತ್ತು ಆಧಾರ್ ಅಥವಾ ಕುಟುಂಬದ ಐಡಿ ಬಳಸಿ ಫಲಾನುಭವಿಗಳ ಹೆಸರನ್ನು ಹುಡುಕಿ.

ಹಂತ 4: ಆಧಾರ್ ನಂಬರ್ ನಮೂದಿಸಿ ಬರುವ ಒಟಿಪಿ ಅಥವಾ ಬಯೋಮೆಟ್ರಿಕ್‌ ಅಥವಾ ಮುಖದ ದೃಢೀಕರಣವನ್ನು ಪೂರ್ಣಗೊಳಿಸಿ.

ಹಂತ 5: ಲೈವ್ ಫೋಟೋ ಮೇಲೆ ಕ್ಲಿಕ್ ಮಾಡಿ ಸಬ್ಮಿಟ್ ಮಾಡಿ. ಇ-ಕೆವೈಸಿ ಯಶಸ್ವಿಯಾದ ಬಳಿಕ ನಿಮ್ಮ ಹೊಸ ಆಯುಷ್ಮಾನ್ ಕಾರ್ಡ್ ಡೌನ್‌ಲೋಡ್ ಮಾಡಿಟ್ಟುಕೊಳ್ಳಿ.

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ಆಯುಷ್ಮಾನ್ ಭಾರತ್ ಕಾರ್ಡ್ ಎಂದರೇನು?

ಉತ್ತರ: ಆಯುಷ್ಮಾನ್ ಭಾರತ್ ಕಾರ್ಡ್ ಇದು ಭಾರತ ಸರ್ಕಾರವು ನೀಡುವ ಉಚಿತ ಆರೋಗ್ಯ ವಿಮಾ ಕಾರ್ಡ್ ಆಗಿದೆ. ಅರ್ಹ ಬಡ ಕುಟುಂಬಗಳಿಗೆ ಪ್ರತಿವರ್ಷ 5 ಲಕ್ಷ ರೂವರೆಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಬಹುದು

ಪ್ರಶ್ನೆ: ಆಯುಷ್ಮಾನ್ ಭಾರತ್ ಕಾರ್ಡ್ ಇ-ಕೆವೈಸಿ ಯಾಕೆ ಮುಖ್ಯ?

ಉತ್ತರ: ಫಲಾನುಭವಿಗಳು ತಮ್ಮ ಗುರುತನ್ನು ಖಚಿತಪಡಿಸಲು, 5 ಲಕ್ಷ ರೂ ವಾರ್ಷಿಕ ಉಚಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯವನ್ನು ಪಡೆಯಲು ಆಯುಷ್ಮಾನ್ ಭಾರತ್ ಕಾರ್ಡ್ ಇ-ಕೆವೈಸಿ ಅಗತ್ಯವಾಗಿದೆ.

ಪ್ರಶ್ನೆ: ಆಯುಷ್ಮಾನ್ ಭಾರತ್ ಕಾರ್ಡ್ ಇ-ಕೆವೈಸಿ ಮಾಡಲು ಯಾವೆಲ್ಲಾ ದಾಖಲೆಗಳು ಬೇಕು?

ಉತ್ತರ: ಆಯುಷ್ಮಾನ್ ಭಾರತ್ ಕಾರ್ಡ್ ಇ-ಕೆವೈಸಿ ಮಾಡಲು ಆಧಾರ್ ಕಾರ್ಡ್, ಆಧಾರ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಬೇಕು

ಆಯುಷ್ಮಾನ್ ಕಾರ್ಡ್ e-KYC – ಪ್ರಮುಖ ಲಿಂಕ್‌ಗಳು



ಆಯುಷ್ಮಾನ್ ಭಾರತ್ – PM-JAY ಅಧಿಕೃತ ವೆಬ್‌ಸೈಟ್-PM-JAY ಅಧಿಕೃತ ವೆಬ್‌ಸೈಟ್
Beneficiary Portal-Ayushman Beneficiary Portal
National Health Authority (NHA)-National Health Authority