Advertisement

Ujjwala Yojana: ಇನ್ಮುಂದೆ ವರ್ಷಕ್ಕೆ ನಾಲ್ಕೇ ಸಿಲಿಂಡರ್, ಫಲಾನುಭವಿಗಳಿಗೆ ಬಿಗ್ ಶಾಕ್

ಮಧ್ಯಪ್ರಾಚ್ಯದಲ್ಲಿ ಯುದ್ಧ ಶುರುವಾದಾಗಿನಿಂದಲೂ ತೈಲ ಬಿಕ್ಕಟ್ಟು, ಎಲ್ಪಿಜಿ ಕೊರತೆ ಎದುರಾಗಿದೆ. ಹೀಗಾಗಿ ಬೆಲೆ ಹೆಚ್ಚಳ ಮಾಡಲಾಗಿದೆ, ಇದರ ಜೊತೆಗೆ ಇದೀಗ ಪ್ರಧಾನ ಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ) ಫಲಾನುಭವಿಗಳಿಗೂ ದೊಡ್ಡ ಶಾಕ್ ಎದುರಾಗಿದೆ

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ಪರಿಣಾಮವಾಗಿ ಭಾರತದಲ್ಲಿ ಎಲ್‌ಪಿಜಿ (LPG) ಸಿಲಿಂಡರ್‌ಗಳ ಕೊರತೆ ಉಂಟಾಗಿದೆ. ಈ ಪರಿಸ್ಥಿತಿಯನ್ನು ನಿಭಾಯಿಸಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಒಂದು ಕಡೆ ಬೆಲೆ ಹೆಚ್ಳಳ ಮಾಡ್ತಿದ್ರೆ, ಮತ್ತೊಂದು ಕಡೆ ಮಿತವಾಗಿ ಬಳಸಿ ಎಂದು ಸಲಹೆ ನೀಡುತ್ತಿದ್ದಾರೆ. ಈ ಮಧ್ಯೆ ಮತ್ತೊಂದು ಕ್ರಮ ಕೈಗೊಂಡಿದ್ದಾರೆ.

ಹೌದು, ಎಲ್ಪಿಜಿ ಕೊರತೆಯಿಂದ ಒಂದು ಕಡೆ ಎಲ್‌ಪಿಜಿ ದರವನ್ನು ಹೆಚ್ಚಿಸುವ ಕೆಲಸ ನಡೆಯುತ್ತಿದ್ದರೆ, ಮತ್ತೊಂದು ಕಡೆ ಸಬ್ಸಿಡಿ ಪಡೆಯುತ್ತಿರುವ ಉಜ್ವಲ ಯೋಜನೆಯ ಫಲಾನುಭವಿಗಳ ಮೇಲಿನ ಸೌಲಭ್ಯಗಳನ್ನು ಕಡಿಮೆ ಮಾಡುವ ನಿರ್ಧಾರವೂ ಹೊರಬಿದ್ದಿದೆ.

Post a Comment

0 Comments