Advertisement

SSLC, PUC ಮಾಡಿದವರಿಗೆ ಖಾಲಿ ಇವೆ 93 ಹುದ್ದೆಗಳು, 24 ದಿನದ ಕಾಲಾವಕಾಶ; ಈ ಲಿಂಕ್‌ ಮೂಲಕ ಅರ್ಜಿ ಸಲ್ಲಿಸಿ

ಚಿತ್ರದುರ್ಗ ಶಿಶು ಅಭಿವೃದ್ಧಿ ಯೋಜನೆಯಲ್ಲಿ 93 ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆಗಳಿಗೆ ಮಹಿಳೆಯರಿಂದ ಅರ್ಜಿ ಆಹ್ವಾನ, ಜೂನ್ 8 ಕೊನೆಯ ದಿನ, 7ನೇ ತರಗತಿ ಪಾಸ್ ಕೂಡ ಅರ್ಹ.

ಚಿತ್ರದುರ್ಗ ಜಿಲ್ಲೆಯಲ್ಲಿ ಉದ್ಯೋಗ ಹುಡುಕುತ್ತಿರುವ ಮಹಿಳೆಯರಿಗೆ (Women) ಇದೊಂದು ಸುವರ್ಣ ಅವಕಾಶ. ಚಿತ್ರದುರ್ಗ ಶಿಶು ಅಭಿವೃದ್ಧಿ ಯೋಜನೆಯಡಿ ಅಂಗನವಾಡಿ ಕಂ ಕ್ರೆಷ್ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ (Application) ಸಲ್ಲಿಸಲು ಕೊನೆಯ ದಿನ ಜೂನ್ 8.

93 ಹುದ್ದೆಗಳು ಖಾಲಿ

ಒಟ್ಟು ಖಾಲಿ ಇರುವ ಹುದ್ದೆಗಳ ವಿವರ ನೋಡಿದರೆ ಚಿತ್ರದುರ್ಗದಲ್ಲಿ 15, ಭರಮಸಾಗರದಲ್ಲಿ 14, ಚಳ್ಳಕೆರೆಯಲ್ಲಿ 14, ಹಿರಿಯೂರಿನಲ್ಲಿ 13, ಹೊಳಲ್ಕೆರೆಯಲ್ಲಿ 13, ಹೊಸದುರ್ಗದಲ್ಲಿ 14, ಮತ್ತು ಮೊಳಕಾಲ್ಮುರಿನಲ್ಲಿ 10 ಒಟ್ಟು 93 ಹುದ್ದೆಗಳು ಖಾಲಿ ಇವೆ. ಆಯ್ಕೆಯಾದ ಕಾರ್ಯಕರ್ತೆಯರಿಗೆ ಮಾಸಿಕ ₹5,500 ಮತ್ತು ಸಹಾಯಕಿಯರಿಗೆ ಮಾಸಿಕ ₹3,000 ಗೌರವಧನ ನೀಡಲಾಗುತ್ತದೆ.

7 ನೇ ತರಗತಿ ಪಾಸ್‌ ಆದ್ರೂ ಸಾಕು!

ಅರ್ಹತೆ ವಿಷಯಕ್ಕೆ ಬಂದರೆ, 18 ರಿಂದ 35 ವರ್ಷದೊಳಗಿನ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬಹುದು. ಕಾರ್ಯಕರ್ತೆ ಹುದ್ದೆಗೆ ದ್ವಿತೀಯ ಪಿಯುಸಿ ತೇರ್ಗಡೆಯಾಗಿರಬೇಕು. ಒಂದು ವೇಳೆ ಪಿಯುಸಿ ಅಭ್ಯರ್ಥಿಗಳು ಸಿಗದಿದ್ದರೆ 10ನೇ ತರಗತಿ ಪಾಸಾದವರನ್ನು ಪರಿಗಣಿಸಲಾಗುತ್ತದೆ. ಸಹಾಯಕಿ ಹುದ್ದೆಗೆ ಕನಿಷ್ಠ 10ನೇ ತರಗತಿ ಪಾಸಾಗಿರಬೇಕು. ಅಭ್ಯರ್ಥಿಗಳು ಸಿಗದಿದ್ದರೆ 7ನೇ ತರಗತಿ ಪಾಸಾದವರನ್ನೂ ಪರಿಗಣಿಸಲಾಗುತ್ತದೆ.

ಅರ್ಜಿ ಸಲ್ಲಿಕೆ ಎಲ್ಲಿ?

ಆಸಕ್ತ ಅಭ್ಯರ್ಥಿಗಳು ಚಿತ್ರದುರ್ಗದ ಜಿಲ್ಲಾ ಬಾಲಭವನ ಆವರಣ, ಜಿಲ್ಲಾ ಕ್ರೀಡಾಂಗಣದ ಹತ್ತಿರ, ಚಿತ್ರದುರ್ಗ — 577501 ರಲ್ಲಿರುವ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ತೆರಳಿ ನಿಗದಿತ ಅರ್ಜಿ ನಮೂನೆ ಪಡೆದು, ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿ ಕಚೇರಿಯಲ್ಲಿಟ್ಟಿರುವ ಅರ್ಜಿ ಪೆಟ್ಟಿಗೆಯಲ್ಲಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೂ ಅದೇ ಕಚೇರಿಯನ್ನು ಸಂಪರ್ಕಿಸಬಹುದು. ಗಡುವು ಮುಗಿಯುವ ಮೊದಲೇ ಅರ್ಜಿ ಸಲ್ಲಿಸಿ. ಅವಕಾಶ ತಪ್ಪಿಸಿಕೊಳ್ಳಬೇಡಿ!



Post a Comment

0 Comments