ರೈತರ ಕೈಗೆ ಸಿಗದು ಬೆಳೆ ವಿಮೆ: ಏನಿದು ಸಮಸ್ಯೆ?

ಗ್ರಾಮ ಪಂಚಾಯತಿ ಮಟ್ಟದ ಮಳೆ ಮಾಪನ ಕೇಂದ್ರಗಳ ನಿರ್ವಹಣೆಯಲ್ಲಿ ಸರ್ಕಾರದ ನಿರ್ಲಕ್ಷ್ಯ ಮುಂದುವರಿದಿದ್ದು, ಈ ಬಾರಿಯೂ ಹವಾಮಾನ ಆಧಾರಿತ ಬೆಳೆವಿಮೆ ವಿತರಣೆಯಲ್ಲಿ ಗೊಂದಲ ಉಂಟಾಗುವ ಭೀತಿ ಎದುರಾಗಿದೆ. ಕಳೆದ ಸಾಲಿನಲ್ಲಿ ಮಾಪನ ಕೇಂದ್ರಗಳ ದೋಷದಿಂದಾಗಿ ಅನೇಕ ರೈತರು ವಿಮೆಯಿಂದ ವಂಚಿತರಾಗಿದ್ದರು ಅಥವಾ ಅತ್ಯಲ್ಪ ಮೊತ್ತ ಪಡೆದು ಸಂಕಷ್ಟಕ್ಕೀಡಾಗಿದ್ದರು.



ಹವಾಮಾನ ಆಧಾರಿತ ಬೆಳೆವಿಮೆ ವಿತರಣೆಯಲ್ಲಿ ಗೊಂದಲ.ಕೆಲವು ರೈತರಿಗೆ ಅತ್ಯಲ್ಪ ಮೊತ್ತದ ವಿಮೆ ವಿತರಣೆ ವಿವಾದ ತಾರಕ ಕ್ಕೇರಿದೆ.ಸುರಿದ ಮಳೆ ಲೆಕ್ಕಾಚಾರ ಗುರುತಿಸುವ ಸಾಮರ್ಥ್ಯವನ್ನು ಸಾಧನಗಳು ಕಳೆದುಕೊಂಡಿವೆ

ರೈತರಿಗೆ ಬೆಳೆ ವಿಮೆ

ತೀರ್ಥಹಳ್ಳಿ : ಮುಂಗಾರು ಪೂರ್ವದಲ್ಲಿ ಗ್ರಾಮ ಪಂಚಾಯಿತಿವಾರು ಮಳೆ ಮಾಪನ ಕೇಂದ್ರ ನಿರ್ವಹಣೆಗೆ ಸರಕಾರ ಇನ್ನೂ ಮುನ್ನೆಚ್ಚರಿಕೆ ಕ್ರಮ ಆರಂಭಿಸಿಲ್ಲ. ಈ ಕಾರಣ ಕಳೆದ ಸಾಲಿನಲ್ಲಿ ಹವಾಮಾನ ಆಧಾರಿತ ಬೆಳೆವಿಮೆ ವಿತರಣೆಯಲ್ಲಿ ಉಂಟಾದ ಗೊಂದಲ ಈ ವರ್ಷವು ಮುಂದುವರಿಯುವುದು ಬಹುತೇಕ ನಿಚ್ಚಳವಾಗಿದೆ.

ಗ್ರಾ.ಪಂ. ವ್ಯಾಪ್ತಿ ಸ್ಥಾಪನೆಗೊಂಡಿರುವ ಮಳೆ ಮಾಪನ ಕೇಂದ್ರದ ನಿರ್ವಹಣೆ ದೋಷದ ಪರಿಣಾಮ ಬಹಳಷ್ಟು ಸಂಖ್ಯೆಯ ರೈತರು ಬೆಳೆ ವಿಮೆ ನೆರವಿನಿಂದ ವಂಚಿತಗೊಂಡಿದ್ದರು. ಕೆಲವು ರೈತರಿಗೆ ಅತ್ಯಲ್ಪ ಮೊತ್ತದ ವಿಮೆ ವಿತರಣೆ ವಿವಾದ ತಾರಕ ಕ್ಕೇರಿ ಮುಜಗರಕ್ಕೀಡಾಗಿದ್ದರೂ ಸರಕಾರ ಎಚ್ಚರಗೊಂಡಿಲ್ಲ.

ಅತಿಹೆಚ್ಚು ಮಳೆ ಸುರಿಯುವ ತೀರ್ಥಹಳ್ಳಿ ತಾಲೂಕಿನ ಹಲವು ಗ್ರಾ.ಪಂ.ಕಟ್ಟಡದ ಚಾವಣಿಯಲ್ಲಿರುವ ಬಹುತೇಕ ಮಳೆ ಮಾಪನ ಕೇಂದ್ರ ನಿರ್ವಹಣೆ ಇಲ್ಲದೆ ಸೊರಗಿವೆ. ಸುರಿದ ಮಳೆ ಲೆಕ್ಕಾಚಾರ ಗುರುತಿಸುವ ಸಾಮರ್ಥ್ಯವನ್ನು ಸಾಧನಗಳು ಕಳೆದುಕೊಂಡಿವೆ.

ಹವಾಮಾನ ಆಧಾರಿತ ಬೆಳೆವಿಮೆ ಕಾರ‍್ಯಕ್ರಮ ಕೆಲವು ರೈತರ ಕೈ ಹಿಡಿದರೆ ಹಲವರ ಪಾಲಿಗೆ ನಷ್ಟದ ಬಾಬ್ತಾಗಿದೆ. ಸಮರ್ಪಕ ನಿರ್ವಹಣೆಯ ಕೆಲವು ಮಳೆ ಮಾಪನ ಕೇಂದ್ರಗಳು ಮಳೆ ಪ್ರಮಾಣವನ್ನು ಸ್ಪಷ್ಟವಾಗಿ ಗುರುತಿಸಿದ್ದರೂ ರೈತರಿಗೆ ಹಾನಿಗೆ ತಕ್ಕಂತೆ ವಿಮೆ ಮೊತ್ತ ದೊರಕಿಲ್ಲ. ಈ ನಡುವೆ ಅನೇಕ ಗ್ರಾ.ಪಂ. ಚಾವಣಿಯಲ್ಲಿಅಳವಡಿಸಿರುವ ಮಳೆ ಮಾಪನ ಸಾಧನಕ್ಕೆ ಮಳೆ ಬೀಳದಂತೆ ಎಚ್ಚರವಹಿಸಲಾಗಿದೆ. ಕಟ್ಟಡದ ಮೇಲ್ಭಾಗದಲ್ಲಿ ಸಾಧನ ಸ್ಥಾಪಿಸಿ, ಅದರ ಮೇಲೆ ಮಾಡು ನಿರ್ಮಿಸಿ ಆಡಳಿತ ತಾಂತ್ರಿಕವಾಗಿ ಜಾಣ್ಮೆ ಮೆರೆದಿದೆ.

ನವೆಂಬರ್‌ನಲ್ಲಿ ಪರಿಶೀಲನೆ :

ಸುರಿಯುವ ಮಳೆ ಪ್ರಮಾಣವನ್ನು ಗುರುತಿಸುವ ಟೆಲಿಮೆಟ್ರಿಕ್‌ ಮಳೆ ಮಾಪನ ಕೇಂದ್ರ ತಾಲೂಕಿನ ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲಿಸ್ಥಾಪನೆಗೊಂಡಿವೆ. ಆಟೊ ರೀಡಿಂಗ್‌ ಮೂಲಕ ಮಳೆ ಸುರಿಯುವಿಕೆ ಲೆಕ್ಕಾಚಾರವನ್ನು ಗುರುತಿಸುವ ಸಾಮರ್ಥ್ಯ ಮಾಪನ ಕೇಂದ್ರಕ್ಕಿದೆ. ಆದರೆ, ಸರಕಾರದ ದಾಖಲೆಗಳಲ್ಲಿರುವ ಮಾಹಿತಿ ಅನ್ವಯ ಮಳೆ ಮಾಪನ ಕೇಂದ್ರ ಸುಸ್ಥಿತಿಯಲ್ಲಿ ಇಲ್ಲ.

ಮಳೆ ಪ್ರಮಾಣ ಗುರುತಿಸುವ ಸಾಧನ ಸಮರ್ಪಕವಾಗಿ ಕೆಲಸ ಮಾಡುತ್ತಿರುವ ಕುರಿತಾಗಿ ಆಡಳಿತದಲ್ಲಿಯೇ ಸ್ಪಷ್ಟತೆ ಇಲ್ಲ. 2025ರ ನವೆಂಬರ್‌ನಲ್ಲಿಮಳೆ ಮಾಪನ ಕೇಂದ್ರದ ನಿರ್ವಹಣೆಯ ಸಾಮರ್ಥ್ಯವನ್ನು ಪರಿಶೀಲಿಸಲಾಗಿದೆ. ದೋಷ ಇರುವ ಕೇಂದ್ರವನ್ನು ಸರಿ ಇದೆ ಎಂದು ಗುರುತಿಸುವ ಪ್ರಯತ್ನ ಆಡಳಿತದಲ್ಲಿನಡೆದಿದ್ದು, ಇದು ಪ್ರಶ್ನೆಗೆ ಕಾರಣವಾಗಿದೆ.

ಅಂತರ್‌ಜಾಲ ಗುರುತು:

ಬಹುತೇಕ ಕಡೆಗಳಲ್ಲಿಗ್ರಾ.ಪಂ.ಕಟ್ಟಡದ ಚಾವಣಿಯಲ್ಲಿ ಮಳೆ ಪ್ರಮಾಣ ಪತ್ತೆ ಸಾಧನ ಅಳವಡಿಸಲಾಗಿದೆ. ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ವಿಭಾಗ ಮಳೆ ಮಾಪನ ಕೇಂದ್ರದ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದು, ಅಂತರ್‌ಜಾಲ ಮೂಲಕ ಮಳೆ ಪ್ರಮಾಣ ಗುರುತಿಸಲಾಗುತ್ತಿದೆ. ಆದರೆ, ಗ್ರಾ.ಪಂ. ಕಾರ್‍ಯಾಲಲಯದಲ್ಲಿ ಪ್ರತಿದಿನ ಸುರಿದ ಮಳೆ ಪ್ರಮಾಣದ ಕುರಿತಾಗಿ ಮಾಹಿತಿ ದೊರೆಯುವುದಿಲ್ಲ. ಗಾಳಿ ಮಾರ್ಗದಲ್ಲಿ ಗ್ರಾಮಗಳ ಸಂಪರ್ಕ ಅತ್ಯಂತ ಹತ್ತಿರದಲ್ಲಿದ್ದರೂ ಮಳೆ ಸುರಿಯುವ ಪ್ರಮಾಣದಲ್ಲಿಏರುಪೇರಾಗುತ್ತದೆ. ಹೆಚ್ಚು ಮಳೆ ಸುರಿಯುವ ಪ್ರದೇಶದಲ್ಲಿ ಮಳೆಮಾಪನ ಕೇಂದ್ರದ ನಿರ್ವಹಣೆಯಲ್ಲಿನ ಎಡವಟ್ಟು ಮಳೆ ಪ್ರಮಾಣದ ಲೆಕ್ಕಾಚಾರ ಬದಲಾಯಿಸಿದರೂ ಅಚ್ಚರಿ ಇಲ್ಲ.


Previous Post Next Post