ಎಸೆಸೆಲ್ಸಿ ಉತ್ತೀರ್ಣಗೊಂಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮೀಫ್ ವತಿಯಿಂದ ಪಿಯುಸಿ ಶಿಕ್ಷಣಕ್ಕೆ ಉಚಿತ ಅವಕಾಶ

ಪ್ರಸಕ್ತ ಶ್ಯೆಕ್ಷಣಿಕ ವರ್ಷದಲ್ಲಿ ಎಸೆಸ್ಸೆಲ್ಸಿಯಲ್ಲಿ ತೇರ್ಗಡೆಗೊಂಡ ಪ್ರತಿಭಾವಂತ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗಾಗಿ ದ.ಕ. ಜಿಲ್ಲೆಯ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳು ಪ್ರಥಮ ಪಿಯುಸಿಗೆ ಉಚಿತ ಸೀಟುಗಳ ಕೊಡುಗೆಯನ್ನು ನೀಡಿದೆ.



*ಯೆನೆಪೋಯ ಪಿಯು ಕಾಲೇಜು-ಜೆಪ್ಪಿನಮೊಗರು: (ಸೈನ್ಸ್ ಮತ್ತು ಕಾಮರ್ಸ್): ಪ್ರತೀ ವಿದ್ಯಾ ಸಂಸ್ಥೆಯ ಎಸೆಸೆಲ್ಸಿ ಯಲ್ಲಿ ಅತ್ಯಧಿಕ ಅಂಕಗಳಿಸಿದ ಓರ್ವ ವಿದ್ಯಾರ್ಥಿಗೆ (ನೀಟ/ಸಿಇಟಿ ತರಬೇತಿ ಸಹಿತ) ಉಚಿತ ಸೀಟು. ಪ್ರತೀ ವಿದ್ಯಾ ಸಂಸ್ಥೆಯ ಅತ್ಯಧಿಕ ಅಂಕ ಗಳಿಸಿದ ಉಡುಪಿ, ಕೊಡಗು,ಚಿಕ್ಕಮಗಳೂರು,ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸಹಿತ 10 ಸೀಟುಗಳು. ಪ್ರತೀ ವಿದ್ಯಾಸಂಸ್ಥೆಯ ಅತ್ಯಧಿಕ ಅಂಕ ಗಳಿಸಿ ದ್ವಿತೀಯ ಸ್ಥಾನ ಪಡೆದ ಶೇ.96ಕ್ಕಿಂತ ಅಧಿಕ ಅಂಕ ಗಳಿಸಿದ ಓರ್ವ ವಿದ್ಯಾರ್ಥಿಗೆ (ನೀಟ್/ಸಿಇಟಿ ತರಬೇತಿ ಸಹಿತ) ಉಚಿತ ಸೀಟು ನೀಡಲಾಗುವುದು.

* ಬರಕಾ ವಿದ್ಯಾ ಸಂಸ್ಥೆ-ಅಡ್ಯಾರ್ : (ಸೈನ್ಸ್ ಮತ್ತು ಕಾಮರ್ಸ್) ಪ್ರತೀ ವಿದ್ಯಾ ಸಂಸ್ಥೆಯ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಅತ್ಯಧಿಕ ಅಂಕಗಳಿಸಿ ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆದ ಓರ್ವ ವಿದ್ಯಾರ್ಥಿಗೆ ಉಚಿತ ಸೀಟು.

*ಶೆಫರ್ಡ್ಸ್ ಶಾಹೀನ್ ವಿದ್ಯಾ ಸಂಸ್ಥೆ ಅರ್ಕುಳ:(ಸೈನ್ಸ್): ಎಸೆಸ್ಸೆಲ್ಸಿಯಲ್ಲಿ 600ಕ್ಕಿಂತ ಹೆಚ್ಚು ಅಂಕಗಳಿಸಿದ 20 ವಿದ್ಯಾರ್ಥಿಗಳಿಗೆ (ನೀಟ್/ಜೆಇಇ ಸಹಿತ) ಉಚಿತ ಸೀಟುಗಳು. ಎಸೆಸ್ಸೆಲ್ಸಿಯಲ್ಲಿ 600ಕ್ಕಿಂತ ಹೆಚ್ಚು ಅಂಕ ಗಳಿಸಿದ ಆರ್ಥಿಕವಾಗಿ ತೀರಾ ಹಿಂದುಳಿದ ಬಡ ಮುಸ್ಲಿಂ ವಿದ್ಯಾರ್ಥಿಗಳಿಗೆ ದ.ಕ. ಹೊರತು ಪಡಿಸಿ ಮೀಫ್ ವ್ಯಾಪ್ತಿಗೆ ಒಳಪ ಡುವ ಉಡುಪಿ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಜಿಲ್ಲೆಗಳು ಮತ್ತು ಸರಕಾರಿ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಉಚಿತ ಹಾಸ್ಟೆಲ್ ಸೌಲಭ್ಯದೊಂದಿಗೆ ಒಟ್ಟು 10 ಸೀಟುಗಳು.ಇದನ್ನೂ ಓದಿ BITಯಲ್ಲಿ ಸಸ್ಟೈನಬಲ್ ಎನರ್ಜಿ ಐಡಿಯಾಥಾನ್ 2026: 17 ತಂಡಗಳು ಭಾಗಿ

*ಅಲ್ ಫುರ್ಖಾನ್ ಇಸ್ಲಾಮಿಕ್ ಪಿಯು ಕಾಲೇಜು ಮೂಡುಬಿದಿರೆ : (ಸೈನ್ಸ್ ಮತ್ತು ಕಾಮರ್ಸ್) ಪ್ರತೀ ವಿದ್ಯಾ ಸಂಸ್ಥೆಯ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಅಧಿಕ ಅಂಕಗಳಿಸಿದ ಓರ್ವ ವಿದ್ಯಾರ್ಥಿಗೆ ಉಚಿತ ಸೀಟು. ಹಾಫಿಝ್ ವಿದ್ಯಾರ್ಥಿಯಾಗಿದ್ದಲ್ಲಿ ಶೇ.80ಕ್ಕಿಂತ ಅಧಿಕ ಅಂಕಗಳಿಸಿದ 25 ವಿದ್ಯಾರ್ಥಿಗಳಿಗೆ ಉಚಿತ ಸೀಟುಗಳು.

*ಕಣಚೂರ್ ವಿದ್ಯಾ ಸಂಸ್ಥೆ-ದೇರಳಕಟ್ಟೆ :(ಆರ್ಟ್ಸ್ ಮತ್ತು ಸೈನ್ಸ್) ಎಸೆಸ್ಸೆಲ್ಸಿಯಲ್ಲಿ ಶೇ.97ಕ್ಕಿಂತ ಹೆಚ್ಚು ಅಂಕ ಪಡೆದವರಿಗೆ ಹಾಸ್ಟೆಲ್ ಸಹಿತ 10 ಪಿಯುಸಿ ಸೀಟುಗಳು. ಎಸೆಸ್ಸೆಲ್ಸಿಯಲ್ಲಿ ಕನಿಷ್ಠ ಶೇ.50 ಅಂಕಗಳು ಹಾಗೂ ಗಣಿತ ಅಥವಾ ವಿಜ್ಞಾನ ವಿಷಯಗಳಲ್ಲಿ ಶೇ.95 ಮತ್ತು ಅದಕ್ಕಿಂತ ಹೆಚ್ಚು ಅಂಕಗಳು ಪಡೆದ ಗ್ರಾಮೀಣ ಪ್ರದೇಶ, ಕನ್ನಡ ಮಾಧ್ಯಮ, ಆರ್ಥಿಕವಾಗಿ ಹಿಂದುಳಿದ ಹಾಗೂ ಅನಾಥ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸಹಿತ 10 ಪಿಯುಸಿ ಸೀಟುಗಳು. ಎಸೆಸ್ಸೆಲ್ಸಿಯಲ್ಲಿ ಶೇ.90 ಮತ್ತು ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸಹಿತ 20 ಪಿಯು ಸೀಟುಗಳು.ಇದನ್ನೂ ಓದಿ ಕಡಬ| ಕುಮಾರಧಾರಾ ನದಿಯಲ್ಲಿ ಮುಳುಗಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ

* ಕುನಿಲ್ ವಿದ್ಯಾ ಸಂಸ್ಥೆ-ನಾಟೆಕಲ್ (ಸೈನ್ಸ್ ಮತ್ತು ಕಾಮರ್ಸ್) ಎಸೆಸ್ಸೆಲ್ಸಿಯಲ್ಲಿ ಶೇ.90ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ 10 ಸೀಟುಗಳು.

*ಅರ್ಹತೆ: ಈ ಎಲ್ಲಾ ಶರ್ತಗಳಿಗೆ ಒಳಪಟ್ಟು ಉಚಿತ ಸೀಟುಗಳನ್ನು ಪಡೆಯಲು ಮೀಫ್ ವ್ಯಾಪ್ತಿಗೆ ಒಳಪಡುವ ವಿದ್ಯಾ ಸಂಸ್ಥೆ ಮತ್ತು ಸರಕಾರಿ ವಿದ್ಯಾ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಅರ್ಹರಾಗಿರುತ್ತಾರೆ. ಅರ್ಜಿ ನಮೂನೆ ಯನ್ನು ಮೀಫ್ ಕಚೇರಿಯಿಂದ ಪಡೆದು ಶಾಲಾ ಮುಖ್ಯಸ್ಥರ ದೃಢೀಕರಣದೊಂದಿಗೆ ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯ ಒಳಗಾಗಿ ಪಡೆದು ಎ.30ರೊಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಮೀಫ್ ಕಚೇರಿಯ ಮೊ.ಸಂ: 8792115666/8431990966ನ್ನು ಸಂಪರ್ಕಿಸಬಹುದು ಎಂದು ಮೀಫ್ ಕೇಂದ್ರ ಸಮಿತಿಯ ಅಧ್ಯಕ್ಷ ಮೂಸಬ್ಬ ಪಿ.ಬ್ಯಾರಿ ಜೋಕಟ್ಟೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Previous Post Next Post