ಕರ್ನಾಟಕದ ನಾಗರಿಕರು ಪ್ರಸ್ತುತ ರಜಾ ದಿನಗಳನ್ನು ನೀವು ದಕ್ಷಿಣ ಭಾರತದ ಪ್ರಮುಖ ಸ್ಥಳಗಳಲ್ಲಿ, ವೈವಿಧ್ಯಮಯದಿಂದ ಕೂಡಿತ ತಾಣಗಳಲ್ಲಿ ಕಳೆಯಬಹುದಾಗಿದೆ. ನಿಮಗಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ನಿಗಮ (KSTDC)ವು ಅದ್ಭುತ ಟೂರ್ ಪ್ಯಾಕೇಜ್ ನೀಡುತ್ತಿದೆ. ಈ ಪ್ಯಾಕೇಜ್ ಆಯ್ಕೆ ಮಾಡಿದರೆ ನೀವು ಐತಿಹಾಸಿಕ ಮತ್ತು ವಿಶಿಷ್ಟ ಶೈಲಿ ದೇವಾಲಯಗಳು, ಸ್ಮಾರಕ, ಬಾಯಲ್ಲಿ ನೀರೂರಿಸುವ ಭಕ್ಷ್ಯಗಳನ್ನು ಸವಿಯಬಹುದು. ಈ ಮೂಲಕ 2026 ಬೇಸಿಗೆಯನ್ನು (Summer 2026) ಕುಟುಂಬ, ಮಕ್ಕಳೊಂದಿಗೆ ಅರ್ಥಪೂರ್ಣವಾಗಿ ಕಳೆಯಬಹುದು. ಈ ಟೂರ್ ಪ್ಯಾಕೇಜ್‌ನ ವಿಶೇಷತೆ, ಒಬ್ಬರಿಗೆ ಟಿಕೆಟ್ ದರ, ಭೇಟಿ ಸ್ಥಳ, ಬೆಂಗಳೂರಿನಿಂದ ಹೊರಡುವ ಸಮಯ ಸ್ಥಳ ವಿವರ ಇಲ್ಲಿದೆ.
ಬೆಂಗಳೂರಿನಿಂದ ದಕ್ಷಿಣ ಭಾರತದ ಪ್ರಮುಖ ಪ್ರವಾಸಿ ಸ್ಥಳಗಳಿಗೆ ತೆರಳುವವರಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಎ/ಸಿ ಡಿಲಕ್ಸ್ ಕೋಚ್ ಮೂಲಕ ನಿಗಮ ಪ್ರವಾಸಿಗರನ್ನು ಕರೆದೊಯ್ಯಲಿದೆ. ದಕ್ಷಿಣ ರಾಜ್ಯಗಳಲ್ಲಿ ಅಲಂಕೃತ ದೇವಾಲಯಗಳು, ಸಾಂಸ್ಕೃತಿಕ ಸ್ಮಾರಕಗಳು, ಆಯುರ್ವೇದ ಚಿಕಿತ್ಸೆಗಳ ಪದ್ಧತಿ ಕುರಿತು ತಿಳವಳಿಕೆ, ಬಾಯಲ್ಲಿ ನೀರೂರಿಸುವ ಭಕ್ಷ್ಯಗಳಿಂದ ಹೆಸರುವಾಸಿಯಾಗಿದೆ.
KSTDC Summer Tour 2026
ರಾಜವಂಶಸ್ಥರ ಕಾಲದಲ್ಲಿ ನಿರ್ಮಿಸಲಾದ ಭವ್ಯ ದೇವಾಲಯಗಳು, ಗಿರಿ ಶಿಖರಗಳಿಗೆ. ಇಲ್ಲಿಗೆ ಅಪಾರ ಪ್ರವಾಸಿಗರು ಭಕ್ತರು ಮತ್ತು ಕಲೆಯ ಆರಾಧಕರು ಆಗಾಗ ಭೇಟಿ ನೀಡುತ್ತಲೇ ಇರುತ್ತಾರೆ. ಮಾತ್ರವಲ್ಲದೇ ಹಸಿರ ಹೊದಿಕೆ ದಟ್ಟ ಕಾಡು, ಕಡಲತೀರಗಳು, ಸೊಂಪಾದ ಗಿರಿಧಾಮಗಳು, ಅದ್ಭುತ ಜಲಪಾತಗಳು ಇವೆ
ಕೇರಳ ಪ್ರವಾಸಿ ತಾಣಗಳು ಹೆಚ್ಚು ಪ್ರಸಿದ್ಧಿ ಪಡೆದಿವೆ. ಕೇರಳದ ಮಸಾಲೆ ಮತ್ತು ಸಾಗರದ ಸರ್ಫ್ ಜೊತೆಗೆ ಸಮಯ ಕಳೆಯಲು ಇದು ಉತ್ತಮ ಸಮಯ. ಚೋಳ ರಾಜವಂಶದಲ್ಲಿ ನಿರ್ಮಿಸಲಾದ ದೇವಾಲಯಗಳು ಇಲ್ಲಿವೆ. ಸೌಂದರ್ಯ, ಸಮಸ್ಕೃತಿ, ಆಹಾರ, ಆಚಾರ, ವಿಚಾರಗಳಲ್ಲಿ ದಕ್ಷಿಣ ಭಾರತದ ರಾಜ್ಯಗಳು ಹೆಸರುವಾಸಿ. ಈ ಭಾಗಗಳನ್ನು ಕಣ್ತುಂಬಿಕೊಳ್ಳುವುದೇ ಸುಂದರ ಅನುಭವ.
ಭೇಟಿಯ ಸ್ಥಳಗಳು ಯಾವುವು?
ಪ್ರಸ್ತುತ ಈ ಪ್ಯಾಕೇಜ್‌ನಲ್ಲಿ 'ಮಧುರೈ, ರಾಮೇಶ್ವರಂ, ಸುಚಿಂದ್ರಮ್ ಮತ್ತು ಕನ್ಯಾಕುಮಾರಿ' ಸ್ಥಳಗಳಿಗೆ ಭೇಟಿ ನೀಡಲಾಗುತ್ತದೆ. ಇಲ್ಲಿನ ಎಲ್ಲಾ ಪ್ರಮುಖ ತಾಣಗಳಿಗೆ ಭೇಟಿ ನೀಡಲು, ಅಲ್ಲಿ ಒಂದಷ್ಟು ಸಮಯ ಕಳೆಯಲು ಅವಕಾಶ ನೀಡಲಾಗುತ್ತದೆ.
ಸೂಕ್ತ ರೂಮ್ ವ್ಯವಸ್ಥೆ
ಹೋಟೆಲ್ ಗೀತನ್ ರೆಸಿಡೆನ್ಸಿ ತಿರುನ್ನಲರ್, ಹೋಟೆಲ್ ರಾಜಧಾನಿ ಮಧುರೈ, ಹೋಟೆಲ್ ರಾಮೇಶ್ವರಂ ಗ್ರ್ಯಾಂಡ್, ಗೋಪಿನಿವಾಸ್ ಗ್ರ್ಯಾಂಡ್, ಸೆವೆನ್ ಹಿಲ್ಸ್ ತ್ರಿವೇಂದ್ರಮ್, ನಂದಿನಿ ಟೂರಿಸ್ಟ್ ಹೋಮ್ ಗುರುಯಾಯೂರ್, ಎಸ್ ವಿ ಇಂಟರ್‌ನ್ಯಾಷನಲ್ ಕೊಡೈಕೆನಲ್ ಅಥವಾ ಅಂತಹುದೇ ಹೋಟೆಲ್‌ಗಳಲ್ಲಿ ಉಳಿಯಲು ವ್ಯವಸ್ಥೆ ಮಾಡಲಾಗಿರುತ್ತದೆ.
ಬೆಂಗಳೂರಿನಿಂದ ಪ್ರತಿ 2, 4ನೇ ಶನಿವಾರ ಬಸ್ ಸಂಚಾರ
ಒಟ್ಟು 09 ದಿನಗಳ ಟ್ರಿಪ್ ಇದಾಗಿರಲಿದೆ. ಎಂಟು ರಾತ್ರಿಗೆ ವಸತಿ ಊಟದ ವ್ಯವಸ್ಥೆಯು ಈ ಪ್ಯಾಕೇಜ್‌ನಲ್ಲಿ ಒಳಗೊಂಡಿರುತ್ತದೆ. ಪ್ರತಿ ಎರಡನೇ ಮತ್ತು ನಾಲ್ಕನೇ ಶನಿವಾರ ಬೆಂಗಳೂರಿನ ಯಶವಂತಪುರ ಬಿಎಂಟಿಸಿ ಬಸ್ ನಿಲ್ದಾಣ/ಕೆಎಸ್‌ಟಿಡಿಸಿ ಕಚೇರಿಯಿಂದ ಬೆಳಗ್ಗೆ 6 ಗಂಟೆಗೆ ಬಸ್ ಹೊರಡುತ್ತದೆ.
ಪ್ರವಾಸ ಮಾರ್ಗ, ಸ್ಥಳ ಭೇಟಿ-ವಸತಿ ಸಮಯ ಡಿಟೇಲ್ಸ್
ಮೊದಲ ದಿನ: ಯಶವಂತಪುರ BMTC ಬಸ್ ನಿಲ್ದಾಣ ಬಸ್ ನಿರ್ಗಮಿಸುತ್ತದೆ. 11.00 ಗಂಟೆಗೆ ತಿರುವಣ್ಣಾಮಲೈಗೆ ತೆರಳುತ್ತದೆ. ಮಧ್ಯಾಹ್ನ 12.30 ಅರುಣಾಚಲೇಶ್ವರ ದೇವರ ದರ್ಶನ, ಬಳಿಕ ಮಧ್ಯಾಹ್ನ 12.30 ರಿಂದ 01.15 ಮಧ್ಯಾಹ್ನ ತಿರುವಣ್ಣಾಮಲೈನಲ್ಲಿ ಊಟ ಬಳಿಕ ಚಿದಂಬರಂಗೆ ನಿರ್ಗಮನ. ಸಂಜೆ 4.30 ರಿಂದ 05.30 ರವರೆಗೆ ನಟರಾಜನ ದರ್ಶನ. ಸಂಜೆ 05.30 ರಿಂದ 07.30ಕ್ಕೆ ಶನೀಶ್ವರ ದೇವರ ದರ್ಶನ, ತಿರುನಲ್ಲಾರ್ ಮತ್ತು ಹೋಟೆಲ್‌ನಲ್ಲಿ ನಿಲುಗಡೆ.
ಎರಡನೇ ದಿನ: ಬೆಳಗ್ಗೆ 5.30 ತಿರುನಲ್ಲಾರ್ ನಿಂದ ನಿರ್ಗಮನ, ಬೆಳಗ್ಗೆ 7.30ರಿಂದ 08.45 ಕುಂಭಕೋಣಂ, ಕುಂಭೇಶ್ವರ ದರ್ಶನ ಬಳಿಕ ಅಲ್ಲಿಯೇ ಉಪಹಾರ, ಬೆಳಗ್ಗೆ 08.45 ತಂಜಾವೂರಿಗೆ ತೆರಳುವುದು, 10 ರಿಂದ 11ಗಂಟೆಗೆ ಭಗವಾನ್ ಬೃಹದೀಶ್ವರ ದರ್ಶನ, ಬೆಳಗ್ಗೆ 11ಕ್ಕೆ ಶ್ರೀರಂಗಂಗೆ ನಿರ್ಗಮಿಸುವುದು, ಮಧ್ಯಾಹ್ನ 12.30ರಿಂದ 02.30 ಭಗವಾನ್ ರಂಗನಾಥಸ್ವಾಮಿ ದರ್ಶನ ಬಳಿಕ ಅಲ್ಲಿಯೇ ಊಟದ ವ್ಯವಸ್ಥೆ ಇರುತ್ತದೆ. ಮಧ್ಯಾಹ್ನ 02.30 ಮಧುರೈಗೆ ನಿರ್ಗಮಿಸುವುದು, ಸಂಜೆ 05.30 ಮಧುರೈ- ಮೀನಾಕ್ಷಿ ಸುಂದರೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ಕೊಟ್ಟು ರಾತ್ರಿ ಅಲ್ಲಿನ ಹೋಟೆಲ್‌ನಲ್ಲಿ ತಂಗುವುದು.
ಮೂರನೇ ದಿನ: ಬೆಳಗ್ಗೆ 08.30 ಮಧುರೈನಿಂದ ನಿರ್ಗಮಿಸುವುದು, ಬೆಳಗ್ಗೆ 11.30 ರಿಂದ ಮಧ್ಯಾಹ್ನ 12 ಗಂಟೆ ರಾಮೇಶ್ವರಂಗೆ ಆಗಮನ ಹೋಟೆಲ್‌ಗೆ ಚೆಕ್ ಇನ್, ಮಧ್ಯಾಹ್ನ 12.00 ಸಮುದ್ರ ಸ್ನಾನ ಮತ್ತು 21 ಪವಿತ್ರ ಬಾವಿ ಸ್ನಾನ ಬಳಿಕ ತ್ತು ರಾಮನಾಥ ದೇವರ ದರ್ಶನ ಮಾಡಿ ರಾತ್ರಿ ಅಲ್ಲಿಯೇ ಉಳಿಯುವುದು.
ನಾಲ್ಕನೇ ದಿನ: ಬೆಳಗ್ಗೆ 5ರಿಂದ 6 ಗಂಟೆಯೊಳಗೆ ಸ್ಪಾತಿಕಲಿಂಗ ದರ್ಶನ, ಅಲ್ಲಿಂದ 6 ಗಂಟೆಗೆ ತಿರುಚಂದೂರಿಗೆ ನಿರ್ಗಮನ, ಬೆಳಗ್ಗೆ 11- 12.30ಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಅಲ್ಲಿಯೇ ಊಟ ಮಾಡುವುದು. ಮಧ್ಯಾಹ್ನ 1 ಕನ್ಯಾಕುಮಾರಿಗೆ ನಿರ್ಗಮಿಸುವುದು, ಸಂಜೆ 4.15 ರಿಂದ 6 ಸೂರ್ಯಾಸ್ತದ ನೋಟ, ಕನ್ಯಕಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಹೋಟೆಲ್‌ನಲ್ಲಿ ರಾತ್ರಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗುವುದು.
ಐದನೇ ದಿನ: ಬೆಳಗ್ಗೆ 06.00 ರಿಂದ 07.00 ರವರೆಗೆ ಸೂರ್ಯೋದಯ ಮತ್ತು ಉಪಹಾರ
ಬೆಳಗ್ಗೆ 07.45 ರಿಂದ 09.45 ರವರೆಗೆ ವಿವೇಕಾನಂದ ಶಿಲಾ ಸ್ಮಾರಕಕ್ಕೆ ಭೇಟಿ
ಬೆಳಗ್ಗೆ 09.45 ರವರೆಗೆ ಸುಚೀಂದ್ರಕ್ಕೆ ನಿರ್ಗಮನ
ಬೆಳಗ್ಗೆ 10.15 ರಿಂದ 11.30 ರವರೆಗೆ ಸಾತು ಮಲಯ ದೇವರ ದರ್ಶನ
ಬೆಳಗ್ಗೆ 11.30 ರಿಂದ 12.30 ರವರೆಗೆ ಊಟದ ವಿರಾಮ
ಬೆಳಗ್ಗೆ 12.30 ರಿಂದ ಕೋವಲಂ ಬೀಚ್‌ಗೆ ನಿರ್ಗಮನ
ಮಧ್ಯಾಹ್ನ 03.30 ರಿಂದ 04.30 ರವರೆಗೆ ಕೋವಲಂ ಬೀಚ್‌ಗೆ ಭೇಟಿ
ಸಂಜೆ 04.30 ರವರೆಗೆ ತಿರುವನಂತಪುರಕ್ಕೆ ನಿರ್ಗಮನ
ಸಂಜೆ 05.30 ರಿಂದ 06.30 ರವರೆಗೆ ಅನಂತ ಪದ್ಮನಾಭ ದೇವಸ್ಥಾನದ ದರ್ಶನ
ಸಂಜೆ 06.30 ರವರೆಗೆ ಹೋಟೆಲ್‌ನಲ್ಲಿ ರಾತ್ರಿ ವಸತಿ ವ್ಯವಸ್ಥೆ.
ಆರನೇ ದಿನ: ಬೆಳಗ್ಗೆ 05.30 ಕ್ಕೆ ಕಲಾಡಿಗೆ ನಿರ್ಗಮನ, ದಾರಿಯಲ್ಲಿ ಉಪಹಾರ
ಮಧ್ಯಾಹ್ನ 12.30 ಕ್ಕೆ ಕಲಾಡಿಗೆ ಆಗಮನ (ಮಾರ್ಗದಲ್ಲಿ ಊಟ)
ಮಧ್ಯಾಹ್ನ 12.30 ರಿಂದ 01.00 ಕ್ಕೆ ಆದಿ ಶಂಕರಾಚಾರ್ಯ ಆಶ್ರಮ (ಜನ್ಮಸ್ಥಳ), ಕಲಾಡಿಗೆ ಭೇಟಿ ನೀಡಿ - ಊಟದ ವಿರಾಮ
ಸಂಜೆ 05.30ಕ್ಕೆ ಗುರುವಾಯೂರಿಗೆ ಆಗಮನ, ಭಗವಾನ್ ಗುರುವಾಯೂರಪ್ಪನ ದರ್ಶನ ಮತ್ತು ರಾತ್ರಿ ಅಲ್ಲಿಯೇ ವಸತಿ.
ಏಳನೇ ದಿನ: ಬೆಳಗ್ಗೆ 06.30 ಕ್ಕೆ ಪಳನಿಗೆ ನಿರ್ಗಮನ ಮತ್ತು ದಾರಿಯಲ್ಲಿ ಉಪಹಾರ ಮಧ್ಯಾಹ್ನ 12.30 - ಮಧ್ಯಾಹ್ನ 02.30 ಕ್ಕೆ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಸ್ಥಾನ ಭೇಟಿ, ಪಳನಿ ದರ್ಶನ ಮತ್ತು ಊಟದ ವಿರಾಮದ ಬಳಿಕ ಸಂಜೆ 05.30 ಕ್ಕೆ ಕೊಡೈಕೆನಾಲ್ ತಲುಪಿ ಅಲ್ಲಿಯೇ ವಸತಿ ಮಾಡುವುದು.
ಎಂಟನೇ ದಿನ: ಬೆಳಗ್ಗೆ 09.00 ರಿಂದ ಸಂಜೆ 05.30 ರವರೆಗೆ ಪಿಲ್ಲರ್ ರಾಕ್, ಗ್ರೀನ್ ವ್ಯಾಲಿ ವ್ಯೂ, ಕೋಕರ್ಸ್ ವಾಕ್, ಬ್ರ್ಯಾಂಟ್ಸ್ ಪಾರ್ಕ್ (ಲಂಚ್), ಕುದುರೆ ಸವಾರಿ, ಸೈಕ್ಲಿಂಗ್, ಕೊಡೈ ಸರೋವರದಲ್ಲಿ ದೋಣಿ ವಿಹಾರಕ್ಕೆ ಭೇಟಿ ನೀಡಿ, ನಂತರ ಸಂಜೆ 06.00 ರಿಂದ ಬೆಂಗಳೂರಿಗೆ ನಿರ್ಗಮಿಸುವುದು, ರಾತ್ರಿ 08.00 ರಿಂದ ರಾತ್ರಿ 08.45 ರವರೆಗೆ ದಿಂಡಿಗಲ್ - ಭೋಜನ ಮುಗಿಸಿಕೊಂಡು ಬೆಂಗಳೂರಿನತ್ತ ಹೊರಡುವುದು. ಬೆಳಗ್ಗೆ 6 ಗಂಟೆಗೆ ರಾಜಧಾನಿ ತಲುಪುತ್ತದೆ.
ಟೂರ್ ಟಿಕೆಟ್ ದರ ಎಷ್ಟು?
* ಒಬ್ಬರಿಗೆ ; 24,425 ರೂಪಾಯಿ
* ಇಬ್ಬರಿಗೆ: ತಲಾ 17,275 ರೂಪಾಯಿ
* ಮೂವರಿಗೆ: ತಲಾ 16,175 ರೂಪಾಯಿ
ಬುಕಿಂಗ್ ಹೇಗೆ?
ಇಲ್ಲಿ ನೀಡಲಾಗಿರುವ ಪ್ರವಾಸೋದ್ಯಮ ನಿಗಮದ ಅಧಿಕೃತ ಜಾಲತಾಣದ ಲಿಂಕ್ https://kstdc.co/tour_packages/best-of-south-india/ ಮೂಲಕ ಬುಕ್ ಮಾಡಬಹುದು.
ರಾಜ್ಯ, ಕೇಂದ್ರ ಮತ್ತು ಪಿಎಸ್‌ಯು ಉದ್ಯೋಗಿಗಳಿಗೆ ಪ್ರವಾಸಿ ತಾಣಗಳು ಮತ್ತು ಎಲ್‌ಟಿಸಿ ಸೌಲಭ್ಯಗಳ ಬಗ್ಗೆ ಮಾಹಿತಿ ತಿಳಿಸಲು ಉತ್ತಮ ಗೈಡ್ ಸಹ ನಿಯೋಜಿಸಲಾಗುತ್ತದೆ. ಅವರು ಟೂರ್ ಮುಗಿಯುವವರೆಗೂ ನಿಮ್ಮ ಜೊತೆಗಿದ್ದು, ತಾಣ ಮಾಹಿತಿ ತಿಳಲಿದ್ದಾರೆ.