EPFO 3.0: ಪಿಎಫ್‌ ಹಣವನ್ನು ATM, UPI ಮೂಲಕವೇ ಹಿಂಪಡೆಯಬಹುದೇ.. ಯಾರಿಗೇನು ಲಾಭ? ಇಲ್ಲಿದೆ ಮಹತ್ವದ ಮಾಹಿತಿ

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ(EPFO)ಯ ಹೊಸ ಡಿಜಿಟಲ್‌ ಕ್ರಮವಾದ ಇಪಿಎಫ್‌ಒ 3.0 ಸದ್ಯ ಭಾರೀ ಚರ್ಚೆಗೆ ಗ್ರಾಸವಾಗಿರುವ ವಿಷಯವಾಗಿದೆ. ಇಪಿಎಫ್‌ಒ 3.0 ಬ್ಯಾಂಕ್‌ ಖಾತೆಯಂತೆಯೇ ಪಿಎಫ್‌ ಖಾತೆಯಲ್ಲಿನ ಹಣವನ್ನು ಎಟಿಎಂ ಮತ್ತು ಯುಪಿಐ ಮೂಲಕ ಹಿಂಪಡೆಯಲು ಅನುವು ಮಾಡಿಕೊಡುತ್ತದೆ. ಇದರಲ್ಲಿ ಪಿಎಫ್‌ ಕ್ಲೈಮ್‌ಗಳು ತ್ವರಿತವಾಗಿ ಪೂರ್ಣಗೊಳ್ಳಲಿವೆ ಎಂಬಿತ್ಯಾದಿ ವಿಷಯಗಳ ಬಗ್ಗೆ ಚರ್ಚೆ ಜೋರಾಗಿದೆ. ಇದರ ಪ್ರಯೋಜನವೇನು? ಭವಿಷ್ಯ ನಿಧಿ ಸಂಸ್ಥೆಯ ಹೊಸ ಸೇವೆಯಿಂದ ಯಾರಿಗೆ ಹೆಚ್ಚು ಲಾಭವಾಗಲಿದೆ ಎಂದು ತಿಳಿಯೋಣ.

ಇಪಿಎಫ್‌ಒ 3.0ದ ಬಹುದೊಡ್ಡ ನಿರೀಕ್ಷೆ ಎಂದರೆ ಇದು ಭವಿಷ್ಯ ನಿಧಿ ಅರ್ಥಾತ್‌ ಪಿಎಫ್‌ ಖಾತೆ ಬ್ಯಾಂಕ್‌ ಖಾತೆಯಂತೆಯೇ ಪರಿವರ್ತನೆಗೊಳ್ಳಲಿದೆ ಎಂಬುದಾಗಿದೆ. ಇಪಿಎಫ್‌ಒದ ನವೀಕೃತ ಅಪ್ಲಿಕೇಶನ್‌ ಮೂಲಕ ಪಿಎಫ್‌ ಹಿಂಪಡೆಯುವಿಕೆ ವಿಧಾನ ತುಂಬಾ ಸರಳ ಹಾಗೂ ಸುಲಭವಾಗಲಿದೆ ಎನ್ನಲಾಗುತ್ತಿದೆ.  

ಇಪಿಎಫ್‌ಒ 3.0 ಇಪಿಎಫ್‌ ಸದಸ್ಯರಿಗೆ ಕೋರ್-ಬ್ಯಾಂಕಿಂಗ್‌ ಶೈಲಿಯ ಡಿಜಿಟಲ್‌ ವ್ಯವಸ್ಥೆಯನ್ನು ಪರಿಚಯಿಸುವ ಗುರಿ ಹೊಂದಿದ್ದು, ಆಧಾರ್-ಡಿಜಿಟಲ್‌ ವೆರಿಫಿಕೇಶನ್‌ ಸಹಾಯದಿಂದ ಪಿಎಫ್‌ ಕ್ಲೈಮ್‌ ಅನ್ನು ತ್ವರಿತವಾಗಿ ಪ್ರಕ್ರಿಯೆಗೊಳಿಸಲಿದೆ. ಅಲ್ಲದೆ, ಉದ್ಯೋಗ ಬದಲಾವಣೆ ಸಮಯದಲ್ಲಿ ಪಿಎಫ್‌ ಸ್ವಯಂಚಾಲಿತವಾಗಿ ವರ್ಗಾವಣೆಗೊಳ್ಳಲಿದೆ. ಇಪಿಎಫ್‌ಒದ ಈ ಕ್ರಮವು ದೇಶಾದ್ಯಂತ ಸುಮಾರು 8 ಕೋಟಿಗೂ ಹೆಚ್ಚು ಇಪಿಎಫ್‌ಒ ಸದಸ್ಯರಿಗೆ ಪ್ರಯೋಜನವನ್ನು ನೀಡಲಿದೆ.

ಇಪಿಎಫ್‌ಒ 3.0 ಪಿಎಫ್‌ ಕ್ಲೈಮ್ ಸೆಟಲ್‌ಮೆಂಟ್‌ಗಳನ್ನು ವೇಗಗೊಳಿಸುವುದರ ಜೊತೆಗೆ ನೈಜ-ಸಮಯದ ಬ್ಯಾಲೆನ್ಸ್ ಟ್ರ್ಯಾಕಿಂಗ್ ಅನ್ನು ಸಹ ಅನುಮತಿಸುತ್ತದೆ. ಅಲ್ಲದೆ, ಪಿಎಫ್‌ ಹಣವನ್ನು ಇನ್ಮುಂದೆ ಎಟಿಎಂ, ಯುಪಿಐ ಮೂಲಕ ಹಿಂಪಡೆಯಲು ಸಾಧ್ಯವಾಗಲಿದೆ ಎನ್ನಲಾಗುತ್ತಿದ್ದು ಇದು ಇಪಿಎಫ್‌ ಸದಸ್ಯರಿಗೆ ಅಗತ್ಯವಿದ್ದಾಗ ಹಣದ ನೆರವು ಸುಲಭವಾಗಿ ಲಭ್ಯವಾಗುವಂತೆ ಮಾಡುತ್ತದೆ.

ಎಟಿಎಂಗಳ ಮೂಲಕ ಇಪಿಎಫ್‌ ಹಿಂಪಡೆಯುವಿಕೆಯನ್ನು ಸಕ್ರಿಯಗೊಳಿಸುವ ಇಪಿಎಫ್‌ಒದ ಪ್ರಸ್ತಾವಿತ ಕ್ರಮವು ಇಪಿಎಫ್‌ ಸದಸ್ಯರಿಗೆ ಅಗತ್ಯವಿದ್ದಾಗ ತಮ್ಮದೇ ಹಣವನ್ನು ಸುಲಭವಾಗಿ ಪಡೆಯುವಂತೆ ಮಾಡಲು ಅನುವುಮಾಡಿಕೊಡುತ್ತದೆ. ಇದು ಡಿಜಿಟಲೀಕರಣ ಮತ್ತು ಭವಿಷ್ಯ ನಿಧಿಗಳಿಗೆ ಸುಲಭ ಪ್ರವೇಶದ ಕಡೆಗೆ ವ್ಯಾಪಕವಾದ ಒಂದು ಪ್ರಮುಖ ಹೆಜ್ಜೆಯಾಗಿದೆ. 

EPFO 3.0 Latest News

ಇಪಿಎಫ್‌ಒ 3.0 ಪಿಎಫ್‌ ಹಣವನ್ನು ಎಟಿಎಂಗಳು ಅಥವಾ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಹಿಂಪಡೆಯಲು ಅನುವು ಮಾಡಿಕೊಡುವುದರಿಂದ ಇದು ಆಗಾಗ್ಗೆ ಭವಿಷ್ಯ ನಿಧಿ ಹಣ ಹಿಂಪಡೆಯುವಿಕೆಗೆ ಕಾರಣವಾಗಬಹುದು. ಒಟ್ಟಾರೆಯಾಗಿ, ಇಪಿಎಫ್‌ಒ 3.0 ಇಪಿಎಫ್‌ ಸದಸ್ಯರಿಗೆ ಅನುಕೂಲತೆಯನ್ನು ಹೆಚ್ಚಿಸುವುದರ ಜೊತೆಗೆ, ದೀರ್ಘಾವಧಿಯ ನಿವೃತ್ತಿ ಗುರಿಗಳನ್ನು ಗಮನದಲ್ಲಿಟ್ಟುಕೊಂಡು, ಸೌಲಭ್ಯವನ್ನು ಬುದ್ಧಿವಂತಿಕೆಯಿಂದ ಬಳಸುವ ಮತ್ತು ಆರ್ಥಿಕ ಶಿಸ್ತನ್ನು ಕಾಪಾಡಿಕೊಳ್ಳುವ ವ್ಯಕ್ತಿಗಳ ಮೇಲಿನ ಜವಾಬ್ದಾರಿಯನ್ನು ಸಹ ಹೆಚ್ಚಿಸುತ್ತದೆ. ಇದನ್ನು ಸರಿಯಾಗಿ ನಿರ್ವಹಿಸದಿದ್ದರೆ ನಿವೃತ್ತಿ ನಂತರ ಕೈ ಸೇರಬೇಕಿರವ ನಿವೃತ್ತಿ ನಿಧಿ ಕಡಿಮೆಯಾಗಬಹುದು.

Disclaimer: ಈ ಪೋಸ್ಟ್ ಅನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ. ಇತ್ತೀಚಿನ ಮತ್ತು ನಿಖರವಾದ ಮಾಹಿತಿಗಾಗಿ ಅಧಿಕೃತ ಸರ್ಕಾರಿ ವೆಬ್‌ಸೈಟ್‌ಗಳನ್ನು ಸಂಪರ್ಕಿಸಲು ಶಿಫಾರಸು ಮಾಡಲಾಗಿದೆ.  




Previous Post Next Post