ಹುಬ್ಬಳ್ಳಿ ಮಧುರಾ ಕಾಲೋನಿಯಲ್ಲಿ RSS ಸೇವಾ ಗತಿವಿಧಿ ಉತ್ತರ ಕರ್ನಾಟಕ ಪ್ರಾಂತ ದೇಸಿ ಗೀರ್ ಸಾಹಿವಾಲ್ಹಳ್ಳಿಕಾರ್ ಅಮೃತ್ ಮಹಲ್ ಮಲ್ನಾಡ್ ಗಿಡ್ಡ ಹಾಲು 85 ರೂ ಲೀಟರ್‌ಗೆ ಮಾರಾಟ ಆರಂಭ.
ಹಾಲಿನ ಮಾರುಕಟ್ಟೆಯಲ್ಲಿ (Milk Market) ಈಗ ಹೊಸ ಸಂಚಲನ! ಜರ್ಸಿ ಮತ್ತು ಪ್ಯಾಕೆಟ್ ಹಾಲಿನ ಅಬ್ಬರದ ನಡುವೆ, ಜನಸಾಮಾನ್ಯರ (Comman People) ಆರೋಗ್ಯದ ದೃಷ್ಟಿಯಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಈಗ ನೇರವಾಗಿ ಹಾಲಿನ ವ್ಯವಹಾರಕ್ಕೆ ಇಳಿದಿದೆ. ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ 'ದೇಸಿ ಹಸುಗಳ ಹಾಲು' ವಿತರಣಾ ಕೇಂದ್ರಕ್ಕೆ ಆರ್‌ಎಸ್‌ಎಸ್ ಚಾಲನೆ ನೀಡಿದ್ದು, ಜನರ ಆರೋಗ್ಯ ರಕ್ಷಣೆಯೇ ಈ ಯೋಜನೆಯ (Project) ಮೂಲ ಮಂತ್ರವಾಗಿದೆ.
85 ರೂಪಾಯಿಗೆ ಲೀಟರ್ ಹಾಲು: ಏನಿದರ ವಿಶೇಷ?
ಮಾರುಕಟ್ಟೆಯಲ್ಲಿ ಸಿಗುವ ಸಾಮಾನ್ಯ ಹಾಲಿಗಿಂತ ಭಿನ್ನವಾಗಿರುವ ಈ ದೇಸಿ ಹಾಲಿಗೆ ಪ್ರತಿ ಲೀಟರ್‌ಗೆ 85 ರೂ. ನಿಗದಿಪಡಿಸಲಾಗಿದೆ. ಒಂದು ವೇಳೆ ನೀವು ಮನೆ ಬಾಗಿಲಿಗೆ (ಡೋರ್ ಡೆಲಿವರಿ) ಪಡೆಯಬೇಕೆಂದರೆ ಹೆಚ್ಚುವರಿ 5 ರೂ. ಸೇರಿ ಒಟ್ಟು 90 ರೂ. ನೀಡಬೇಕಾಗುತ್ತದೆ. ಸದ್ಯಕ್ಕೆ ಈ ಯೋಜನೆಗೆ ಭರ್ಜರಿ ಬೇಡಿಕೆ ವ್ಯಕ್ತವಾಗುತ್ತಿದ್ದು, ಆರಂಭಿಕ ಹಂತದಲ್ಲಿ ಒಬ್ಬರಿಗೆ ಗರಿಷ್ಠ 1 ಲೀಟರ್ ಮಾತ್ರ ನೀಡಲು ನಿರ್ಧರಿಸಲಾಗಿದೆ.
ಯಾವೆಲ್ಲಾ ತಳಿಗಳ ಹಾಲು ಲಭ್ಯ?
ಆರ್‌ಎಸ್‌ಎಸ್‌ನ 'ಸೇವಾ ಗತಿವಿಧಿ ಉತ್ತರ ಕರ್ನಾಟಕ ಪ್ರಾಂತ' ವತಿಯಿಂದ ಹಮ್ಮಿಕೊಂಡಿರುವ ಈ ಯೋಜನೆಯಲ್ಲಿ ಶ್ರೇಷ್ಠ ತಳಿಗಳಾದ:
ಗೀರ್ ಮತ್ತು ಸಾಹಿವಾಲ್
ಹಳ್ಳಿಕಾರ್ ಮತ್ತು ಅಮೃತ್ ಮಹಲ್
ಮಲ್ನಾಡ್ ಗಿಡ್ಡ
ಈ ದೇಸಿ ಹಸುಗಳ ಹಾಲನ್ನು ನೇರವಾಗಿ ಗೋಶಾಲೆಗಳಿಂದ ಸಂಗ್ರಹಿಸಿ ಜನರಿಗೆ ತಲುಪಿಸಲಾಗುತ್ತಿದೆ. ಪ್ಯಾಕೆಟ್ ಹಾಲಿಗಿಂತ ಈ ಹಾಲು ಹೆಚ್ಚು ಪೌಷ್ಟಿಕಾಂಶಯುಕ್ತವಾಗಿದ್ದು, ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಸಂಘದ ಮುಖ್ಯ ಉದ್ದೇಶವಾಗಿದೆ.