ಸಿಬಿಲ್ ಸ್ಕೋರ್ ಅಪ್‌ಡೇಟ್ ಆಗಲು ತಿಂಗಳುಗಟ್ಟಲೆ ಕಾಯುತ್ತಿದ್ದ ಕಾಲ ಇನ್ನು ಮುಗಿಯಿತು. ಬ್ಯಾಂಕ್ ಸಾಲಗಾರರಿಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಕಡೆಯಿಂದ ಬಿಗ್ ರಿಲೀಫ್ ಸಿಕ್ಕಿದ್ದು, ಏಪ್ರಿಲ್ 1ರಿಂದ ಹೊಸ ಕ್ರಾಂತಿಕಾರಕ ನಿಯಮಗಳು ಜಾರಿಗೆ ಬರಲಿವೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
ಸಿಬಿಲ್ ಸ್ಕೋರ್ ಟೆನ್ಷನ್ ಬಿಡಿ! ಏಪ್ರಿಲ್‌ನಿಂದ ಹೊಸ ರೂಲ್ಸ್ ಜಾರಿ; ಗ್ರಾಹಕರಿಗೆ ಸಿಗಲಿದೆ ರಿಲೀಪ್!
ಸಿಬಿಲ್ ಸ್ಕೋರ್ ಅಪ್‌ಡೇಟ್ ಆಗಲು ತಿಂಗಳುಗಟ್ಟಲೆ ಕಾಯುತ್ತಿದ್ದ ಕಾಲ ಇನ್ನು ಮುಗಿಯಿತು. ಬ್ಯಾಂಕ್ ಸಾಲಗಾರರಿಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಕಡೆಯಿಂದ ಬಿಗ್ ರಿಲೀಫ್ ಸಿಕ್ಕಿದ್ದು, ಏಪ್ರಿಲ್ 1ರಿಂದ ಹೊಸ ಕ್ರಾಂತಿಕಾರಕ ನಿಯಮಗಳು ಜಾರಿಗೆ ಬರಲಿವೆ.
ಹೌದು, ಇನ್ನು ಮುಂದೆ ನಿಮ್ಮ ಸಾಲದ ಮರುಪಾವತಿ ವಿವರಗಳು ಕೇವಲ 7 ದಿನಗಳಲ್ಲಿ ಸಿಬಿಲ್ ರಿಪೋರ್ಟ್‌ನಲ್ಲಿ ಅಪ್‌ಡೇಟ್ ಆಗಲಿವೆ. ಅಷ್ಟೇ ಅಲ್ಲ, ಅವಧಿಗಿಂತ ಮೊದಲೇ ಸಾಲ ತೀರಿಸುವವರಿಗೆ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸದಿರಲು ನಿರ್ಧರಿಸಲಾಗಿದ್ದು, ಸಾಮಾನ್ಯ ಗ್ರಾಹಕರಿಗೆ ದೊಡ್ಡ ಮಟ್ಟದ ಆರ್ಥಿಕ ನೆಮ್ಮದಿ ಸಿಗಲಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
ಸಿಬಿಲ್ ಸ್ಕೋರ್ ಅಪ್‌ಡೇಟ್ ಆಗಲು ತಿಂಗಳುಗಟ್ಟಲೆ ಕಾಯುತ್ತಿದ್ದ ಕಾಲ ಇನ್ನು ಮುಗಿಯಿತು. ಬ್ಯಾಂಕ್ ಸಾಲಗಾರರಿಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಕಡೆಯಿಂದ ಬಿಗ್ ರಿಲೀಫ್ ಸಿಕ್ಕಿದ್ದು, ಏಪ್ರಿಲ್ 1ರಿಂದ ಹೊಸ ಕ್ರಾಂತಿಕಾರಕ ನಿಯಮಗಳು ಜಾರಿಗೆ ಬರಲಿವೆ.
ಈ ಸುಧಾರಣೆಗಳಲ್ಲಿ ಅತ್ಯಂತ ಗಮನಾರ್ಹವಾದದ್ದು ಕ್ರೆಡಿಟ್ ಸ್ಕೋರ್ ಅಪ್‌ಡೇಟ್ ಪ್ರಕ್ರಿಯೆ. ಇತ್ತೀಚಿನವರೆಗೆ ಟ್ರಾನ್ಸ್‌ಯೂನಿಯನ್ ಸಿಬಿಲ್ ಸೇರಿ ಕ್ರೆಡಿಟ್ ಬ್ಯೂರೋಗಳು ಸ್ಕೋರ್‌ಗಳನ್ನು ತಿಂಗಳಿಗೊಮ್ಮೆ ಮಾತ್ರ ನವೀಕರಿಸುತ್ತಿದ್ದವು. ಆದರೆ ಹೊಸ ನಿಯಮದ ಪ್ರಕಾರ, ಏಪ್ರಿಲ್ 1ರಿಂದ ಪ್ರತಿ 7 ದಿನಗಳಿಗೊಮ್ಮೆ ಸ್ಕೋರ್ ಅಪ್‌ಡೇಟ್ ಆಗಲಿದೆ. ಅಂದರೆ, ಪ್ರತಿ ತಿಂಗಳ 7, 14, 21 ಮತ್ತು 28ರಂದು ನಿಮ್ಮ ಕ್ರೆಡಿಟ್ ಪ್ರೊಫೈಲ್ ಪರಿಷ್ಕೃತವಾಗುತ್ತದೆ.
ಇದರಿಂದ ಸಾಲ ತೀರಿಸುವಲ್ಲಿ ನಿಯಮಿತವಾಗಿರುವವರಿಗೆ ದೊಡ್ಡ ಲಾಭವಾಗಲಿದೆ. ತಮ್ಮ ಕ್ರೆಡಿಟ್ ಸ್ಕೋರ್ ಸುಧಾರಿಸಲು ಪ್ರಯತ್ನಿಸುತ್ತಿರುವವರಿಗೆ ಅವರ ಉತ್ತಮ ಹಣಕಾಸು ಶಿಸ್ತಿನ ಪರಿಣಾಮಗಳು ಈಗ ವೇಗವಾಗಿ ಗೋಚರಿಸಲಿವೆ. ಆದರೆ ಮತ್ತೊಂದೆಡೆ, ಯಾವುದೇ ವಿಳಂಬ ಅಥವಾ ತಪ್ಪಿದ ಪಾವತಿಗಳೂ ತಕ್ಷಣವೇ ಸ್ಕೋರ್ ಮೇಲೆ ಪರಿಣಾಮ ಬೀರುವುದರಿಂದ ಸಾಲಗಾರರು ಹೆಚ್ಚು ಜಾಗರೂಕರಾಗಿರಬೇಕಾಗುತ್ತದೆ.
ಈ ಸುಧಾರಣೆಗಳಲ್ಲಿ ಅತ್ಯಂತ ಗಮನಾರ್ಹವಾದದ್ದು ಕ್ರೆಡಿಟ್ ಸ್ಕೋರ್ ಅಪ್‌ಡೇಟ್ ಪ್ರಕ್ರಿಯೆ. ಇತ್ತೀಚಿನವರೆಗೆ ಟ್ರಾನ್ಸ್‌ಯೂನಿಯನ್ ಸಿಬಿಲ್ ಸೇರಿ ಕ್ರೆಡಿಟ್ ಬ್ಯೂರೋಗಳು ಸ್ಕೋರ್‌ಗಳನ್ನು ತಿಂಗಳಿಗೊಮ್ಮೆ ಮಾತ್ರ ನವೀಕರಿಸುತ್ತಿದ್ದವು. ಆದರೆ ಹೊಸ ನಿಯಮದ ಪ್ರಕಾರ, ಏಪ್ರಿಲ್ 1ರಿಂದ ಪ್ರತಿ 7 ದಿನಗಳಿಗೊಮ್ಮೆ ಸ್ಕೋರ್ ಅಪ್‌ಡೇಟ್ ಆಗಲಿದೆ. ಅಂದರೆ, ಪ್ರತಿ ತಿಂಗಳ 7, 14, 21 ಮತ್ತು 28ರಂದು ನಿಮ್ಮ ಕ್ರೆಡಿಟ್ ಪ್ರೊಫೈಲ್ ಪರಿಷ್ಕೃತವಾಗುತ್ತದೆ.
ನಾಮಿನಿ ವ್ಯವಸ್ಥೆಯಲ್ಲೂ ಮಹತ್ವದ ಬದಲಾವಣೆ ಮಾಡಲಾಗಿದೆ. ಏಪ್ರಿಲ್ 1ರಿಂದ ಗ್ರಾಹಕರು ತಮ್ಮ ಬ್ಯಾಂಕ್ ಖಾತೆಗಳು ಮತ್ತು ಲಾಕರ್‌ಗಳಿಗೆ ಗರಿಷ್ಠ ನಾಲ್ಕು ನಾಮಿನಿಗಳನ್ನು ಸೇರಿಸಬಹುದು. ಇದರಿಂದ ಆಸ್ತಿ ಹಸ್ತಾಂತರ ಪ್ರಕ್ರಿಯೆ ಸುಲಭವಾಗುವುದರ ಜೊತೆಗೆ ಅನಿರೀಕ್ಷಿತ ಸಂದರ್ಭಗಳಲ್ಲಿ ಕಾನೂನುಬದ್ಧ ಉತ್ತರಾಧಿಕಾರಿಗಳಿಗೆ ತೊಂದರೆ ಕಡಿಮೆಯಾಗಲಿದೆ.
ಇದಕ್ಕೂ ಹೊರತಾಗಿ ಚಿನ್ನದ ಲೋಹದ ಸಾಲಗಳಿಗೆ ಸಂಬಂಧಿಸಿದ ನಿಯಮಗಳಲ್ಲಿ ಸಹ ಸಡಿಲಿಕೆ ನೀಡಲಾಗಿದೆ. ಆಭರಣ ವ್ಯಾಪಾರಿಗಳಿಗೆ ನೀಡಲಾಗುವ ಚಿನ್ನದ ಸಾಲಗಳ ಮರುಪಾವತಿ ಅವಧಿಯನ್ನು 180 ದಿನಗಳಿಂದ 270 ದಿನಗಳಿಗೆ ವಿಸ್ತರಿಸಲಾಗಿದೆ. ಇದರಿಂದ ಅವರ ನಗದು ಹರಿವು ಸುಧಾರಿಸಿ ವ್ಯಾಪಾರದಲ್ಲಿ ಸ್ಥಿರತೆ ತರಲು ಸಹಾಯವಾಗಲಿದೆ.