ಇದು ಪೋಸ್ಟ್ ಆಫೀಸ್ ಸೂಪರ್ ಸ್ಕೀಮ್: 20 ಲಕ್ಷ ಹೂಡಿಕೆ ಮಾಡಿ, 40 ಲಕ್ಷ ರೂ.ವಾಪಸ್ ಪಡೆಯಿರಿ!; ಯಾವುದು ಆ ಯೋಜನೆ

ಕಡಿಮೆ ಹೂಡಿಕೆ ಮಾಡಿ ಹೆಚ್ಚು ಸಂಪಾದನೆ ಮಾಡಲು ನೀವು ಬಯಸುತ್ತೀರಾ?- ಹಾಗಾದರೆ ಈ ಯೋಜನೆ ಸೂಪರ್ ಆಯ್ಕೆ ಆಗಬಹುದು.

ಅನೇಕ ಜನರು ಅಪಾಯವಿಲ್ಲದೇ ಕಡಿಮೆ ಉಳಿತಾಯದೊಂದಿಗೆ ಹೆಚ್ಚಿನ ಲಾಭವನ್ನು ನೀಡುವ ಯೋಜನೆಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ಆದರೆ, ಅವರು ಯಾವುದರಲ್ಲಿ ಹೂಡಿಕೆ ಮಾಡಬೇಕು ಎಂಬ ಗೊಂದಲದಲ್ಲಿರುತ್ತಾರೆ. ಅಂತಹ ಜನರಿಗೆ ಒಂದು ಅದ್ಭುತ ಯೋಜನೆ ಇದೆ. ಅದುವೇ ಕಿಸಾನ್ ವಿಕಾಸ್ ಪತ್ರ. ವಾಸ್ತವವಾಗಿ ಈ ಯೋಜನೆ ಬಹಳ ಹಿಂದಿನಿಂದಲೂ ಜಾರಿಯಲ್ಲಿದೆ. ಆದರೆ, ಈ ಯೋಜನೆ ಬಗ್ಗೆ ಅನೇಕರಿಗೆ ಸರಿಯಾದ ತಿಳಿವಳಿಕೆ ಇಲ್ಲ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣವು, ಅದರ ಅವಧಿ ಮುಕ್ತಾಯದ ನಂತರ ದ್ವಿಗುಣಗೊಳ್ಳುತ್ತದೆ. ಬಡ್ಡಿಯೂ ಹೆಚ್ಚಾಗಿಯೇ ಇರುತ್ತದೆ. ಈ ಯೋಜನೆಗೆ ಸೇರಲು ಯಾರು ಅರ್ಹರು? ಎಷ್ಟು ಹೂಡಿಕೆ ಮಾಡಬೇಕು? ಹೇಗೆ ಅರ್ಜಿ ಸಲ್ಲಿಸಬೇಕು? ಎಲ್ಲವನ್ನೂ ನಾವು ನಿಮಗೆ ವಿವರವಾಗಿ ತಿಳಿಸಿಕೊಡುತ್ತೇವೆ.

ಕೇಂದ್ರ ಸರ್ಕಾರವು 1988 ರಲ್ಲಿ ಕಿಸಾನ್ ವಿಕಾಸ್ ಪತ್ರ ಯೋಜನೆಯನ್ನು ಸಣ್ಣ ಉಳಿತಾಯ ಪ್ರಮಾಣಪತ್ರ ಯೋಜನೆಯಾಗಿ ಪ್ರಾರಂಭಿಸಿತು. ದೀರ್ಘಾವಧಿಯ ಹೂಡಿಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಇದನ್ನು ಅಂದು ಜಾರಿಗೆ ತರಲಾಗಿತ್ತು. ಈಗಲೂ ಅದನ್ನು ಮುಂದುವರೆಸಿಕೊಂಡು ಹೋಗಲಾಗುತ್ತಿದೆ.

ವಿಶೇಷವಾಗಿ ಆಹಾರ ಧಾನ್ಯಗಳಲ್ಲಿ ಇದನ್ನು ಹೂಡಿಕೆ ಮಾಡಲಾಗುತ್ತದೆ. ಅದಕ್ಕಾಗಿಯೇ ಇದನ್ನು ಕಿಸಾನ್ ವಿಕಾಸ್ ಪತ್ರ ಎಂದು ಹೆಸರಿಸಲಾಯಿತು. ಈ ಯೋಜನೆಯಲ್ಲಿ ರೈತರಿಗೆ ಮಾತ್ರವಲ್ಲದೇ ಎಲ್ಲ ಅರ್ಹ ನಾಗರಿಕರಿಗೂ ಹೂಡಿಕೆ ಮಾಡಲು ಅವಕಾಶ ನೀಡಲಾಗಿದೆ. ಇದಕ್ಕಾಗಿಯೇ ಮಾರ್ಗಸೂಚಿಗಳನ್ನು ಕೂಡಾ ರೂಪಿಸಲಾಗಿದೆ. ಇದರಲ್ಲಿ ಹೂಡಿಕೆ ಮಾಡುವವರಿಗೆ ಮಾರುಕಟ್ಟೆಗಳ ಏರಿಳಿತಗಳ ಅವಶ್ಯಕತೆ ಇರುವುದಿಲ್ಲ. ಅದರ ಬಗ್ಗೆ ಅವರು ಯೋಚಿಸುವ ಅಗತ್ಯವೂ ಇಲ್ಲ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದವರಿಗೆ ಖಚಿತವಾದ ಲಾಭ ಅವರ ಕೈ ಸೇರುತ್ತದೆ. ಈ ಯೋಜನೆಯು ದೇಶದ ಎಲ್ಲಾ ಬ್ಯಾಂಕುಗಳು ಮತ್ತು ಅಂಚೆ ಕಚೇರಿಗಳಲ್ಲಿ ಲಭ್ಯವಿದೆ.

ಈ ಯೋಜನೆಯ ಬಗೆಗಿನ ಹೆಚ್ಚಿನ ವಿವರಗಳು:

ಕಿಸಾನ್ ವಿಕಾಸ್ ಪತ್ರ ಯೋಜನೆಗೆ ಸೇರಲು ಬಯಸುವವರು ಭಾರತದ ನಾಗರಿಕರಾಗಿರಬೇಕು. ಅಲ್ಲದೇ 18 ವರ್ಷಗಳನ್ನು ಪೂರ್ಣಗೊಳಿಸಿದವರು ಈ ಯೋಜನೆ ಅನ್ವಯ ಹೂಡಿಕೆಗೆ ಅರ್ಹತೆ ಪಡೆದುಕೊಳ್ಳುತ್ತಾರೆ.ಒಬ್ಬ ವ್ಯಕ್ತಿಯು ತನ್ನ ಹೆಸರಿನಲ್ಲಿ ಎಷ್ಟು ಬೇಕಾದರೂ ಖಾತೆಗಳನ್ನು ತೆರೆಯಬಹುದು. ಅಲ್ಲದೇ ಮೂರು ಜನರು ಜಂಟಿ ಖಾತೆಯನ್ನು ತೆರೆಯಬಹುದು. ಪೋಷಕರು ಅಥವಾ ಪೋಷಕರೇ ತಮ್ಮ ಅಪ್ರಾಪ್ತ ಮಕ್ಕಳ ಹೆಸರಿನಲ್ಲಿ ಖಾತೆಯನ್ನು ತೆರೆಯಬಹುದು.ಇಲ್ಲಿ ನೀವು ಕನಿಷ್ಠ 1,000 ರೂ. ಹೂಡಿಕೆಯಿಂದ ನೀವು ನಿಮ್ಮ ಪಯಣವನ್ನು ಆರಂಭಿಸಬಹುದು. ಇಲ್ಲಿ ಹೂಡಿಕೆ ಮಾಡಲು ಯಾವುದೇ ಗರಿಷ್ಠ ಮಿತಿಯಿಲ್ಲ. ಆದರೆ, ಠೇವಣಿ 50,000 ರೂಪಾಯಿ ಮೀರಿದರೆ, ವ್ಯಕ್ತಿಯು ಪ್ಯಾನ್ ವಿವರಗಳನ್ನು ಒದಗಿಸಬೇಕಾಗುತ್ತದೆ. ನೀವು 10 ಲಕ್ಷಕ್ಕಿಂತ ಹೆಚ್ಚು ಹೂಡಿಕೆ ಮಾಡಲು ಬಯಸಿದರೆ, ನೀವು ಪೇ ಸ್ಲಿಪ್‌ಗಳು, ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು, ಐಟಿಆರ್ ದಾಖಲೆಗಳಂತಹ ಆದಾಯ ಪುರಾವೆ ದಾಖಲೆಗಳನ್ನು ಒದಗಿಸಬೇಕಾಗುತ್ತದೆ.ಕಿಸಾನ್ ವಿಕಾಸ್ ಪತ್ರದಲ್ಲಿ ಬಡ್ಡಿದರವು ಪ್ರತಿ ವರ್ಷ ಬದಲಾಗುತ್ತದೆ. ಪ್ರಸ್ತುತ 2025-26ರ ಹಣಕಾಸು ವರ್ಷದ ಬಡ್ಡಿದರವು ಶೇ 7.5 ರಷ್ಟಿದೆ.ಈ ಯೋಜನೆಯ ಅವಧಿಯು ಕಾಲಕಾಲಕ್ಕೆ ಬದಲಾಗುತ್ತದೆ. ಪ್ರಸ್ತುತ, ಮುಕ್ತಾಯದ ಅವಧಿ 115 ತಿಂಗಳುಗಳು. ಅಂದರೆ, ನಿಮ್ಮ ಠೇವಣಿ ದಿನಾಂಕದಿಂದ 9 ವರ್ಷ ಮತ್ತು 7 ತಿಂಗಳ ನಂತರ ಯೋಜನೆಯ ಅವಧಿ ಮುಗಿಯುತ್ತದೆ. ಆಗ ನೀವು ನಿಮ್ಮ ಹಣವನ್ನು ವಾಪಸ್ ಪಡೆದುಕೊಳ್ಳಬಹುದು.ಏಕ ಅಥವಾ ಜಂಟಿ ಖಾತೆದಾರರು ಸಾವನ್ನಪ್ಪಿದರೆ, ನ್ಯಾಯಾಲಯದ ಆದೇಶಗಳ ಪ್ರಕಾರ ಠೇವಣಿಗಳನ್ನು ಮುಂಚಿತವಾಗಿ ಹಿಂಪಡೆಯಲು ಕಿಸಾನ್ ವಿಕಾಸ್ ಪತ್ರ ಯೋಜನೆಯಲ್ಲಿ ಅವಕಾಶವಿದೆ. ಆದಾಗ್ಯೂ ಅಲ್ಲಿಯವರೆಗೆ ಗಳಿಸಿದ ಬಡ್ಡಿಯನ್ನು ಮಾತ್ರ ಪಾವತಿಸಲಾಗುತ್ತದೆ.ಖಾತೆದಾರರು ಅನಿರೀಕ್ಷಿತವಾಗಿ ಮರಣಹೊಂದಿದರೆ, ಖಾತೆಯನ್ನು ನಾಮಿನಿ ಅಥವಾ ಕಾನೂನುಬದ್ಧ ಉತ್ತರಾಧಿಕಾರಿಗಳಿಗೆ ವರ್ಗಾಯಿಸಲಾಗುತ್ತದೆ. ಇದು ಜಂಟಿ ಖಾತೆಯಾಗಿದ್ದರೆ, ಅದನ್ನು ಎರಡನೇ ಪಾಲುದಾರರಿಗೆ ನಿಯೋಜಿಸಲಾಗುತ್ತದೆ.KVP ಯಲ್ಲಿ ಮಾಡಿದ ಠೇವಣಿಗಳಿಗೆ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಇದನ್ನು ಅಡಮಾನ ಇಡಬಹುದು ಮತ್ತು ಸಾಲಗಳನ್ನು ಪಡೆಯಬಹುದು. ಸಾಲದ ಮೇಲಿನ ಬಡ್ಡಿದರವೂ ಕಡಿಮೆ ಇರಬಹುದು.

ನೀವು ಹೂಡಿಕೆ ಮಾಡಿದರೆ ನಿಮಗೆ ಎಷ್ಟು ಹಣ ಸಿಗುತ್ತದೆ?:

ಈ ಯೋಜನೆಯ ಮೂಲಕ ಹೂಡಿಕೆ ಮಾಡಿದರೆ ಅದು ನಿರ್ದಿಷ್ಟ ಅವಧಿಯಲ್ಲಿ ದ್ವಿಗುಣವಾಗುತ್ತದೆ. ಉದಾಹರಣೆಗೆ, ನೀವು 50,000ರೂ. ಹೂಡಿಕೆ ಮಾಡಿದರೆ 115 ತಿಂಗಳ ನಂತರ ನಿಮ್ಮ ಖಾತೆಯಲ್ಲಿ 1 ಲಕ್ಷ ರೂ. ಜಮಾ ಆಗುತ್ತದೆ. ಅದೇ ರೀತಿ ನೀವು 20 ಲಕ್ಷ ರೂ. ಹೂಡಿಕೆ ಮಾಡಿದರೆ, ನಿಮಗೆ 40 ಲಕ್ಷ ರೂ. ಸಿಗುತ್ತದೆ. ಆದ್ದರಿಂದ ನೀವು ಯಾವುದೇ ಅಪಾಯವಿಲ್ಲದೇ ಹೂಡಿಕೆ ಮಾಡಿ, ನಿಮ್ಮ ಹಣವನ್ನು ದುಪ್ಪಟ್ಟು ಮಾಡಿಕೊಳ್ಳಬಹುದು.


Previous Post Next Post