ರಾಜ್ಯ ಬಜೆಟ್ 2026-27: ಮದ್ಯ ತೆರಿಗೆಯಿಂದ ರಾಜ್ಯಕ್ಕೆ ಭಾರೀ ಆದಾಯ, ಆದಾಯ ಗುರಿ 45,000 ಕೋಟಿ ರೂ.ಗೆ ಹೆಚ್ಚಿಸಲು ಸರ್ಕಾರ ಚಿಂತನೆ

ಪ್ರಸ್ತುತ ಆರ್ಥಿಕ ವರ್ಷದ ರೂ.40,000 ಕೋಟಿ ಗುರಿಯನ್ನು ಇಲಾಖೆ ಮೀರಿಸುವ ಸಾಧ್ಯತೆ ಇದೆ. ಮಾರ್ಚ್ 2ರ ವೇಳೆಗೆ ಇಲಾಖೆಯು ರೂ.36,500 ಕೋಟಿ ಸಂಗ್ರಹಿಸಿದ್ದು, ಮಾರ್ಚ್ 31ರೊಳಗೆ ಇನ್ನೂ ರೂ.4,000 ರಿಂದ ರೂ.5,000 ಕೋಟಿ ಸಂಗ್ರಹವಾಗುವ ನಿರೀಕ್ಷೆಯಿದೆ.

ಅಬಕಾರಿ ಇಲಾಖೆಯ ಉತ್ತಮ ಆದಾಯ ಸಂಗ್ರಹಣೆಯಿಂದ ಉತ್ಸಾಹಗೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026–27ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಅಬಕಾರಿ ಆದಾಯ ಗುರಿಯನ್ನು ರೂ.40,000 ಕೋಟಿಯಿಂದ ಸುಮಾರು ರೂ.45,000 ಕೋಟಿಗೆ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಪ್ರಸ್ತುತ ಆರ್ಥಿಕ ವರ್ಷದ ರೂ.40,000 ಕೋಟಿ ಗುರಿಯನ್ನು ಇಲಾಖೆ ಮೀರಿಸುವ ಸಾಧ್ಯತೆ ಇದೆ. ಮಾರ್ಚ್ 2ರ ವೇಳೆಗೆ ಇಲಾಖೆಯು ರೂ.36,500 ಕೋಟಿ ಸಂಗ್ರಹಿಸಿದ್ದು, ಮಾರ್ಚ್ 31ರೊಳಗೆ ಇನ್ನೂ ರೂ.4,000 ರಿಂದ ರೂ.5,000 ಕೋಟಿ ಸಂಗ್ರಹವಾಗುವ ನಿರೀಕ್ಷೆಯಿದೆ. ಇದರಿಂದ ಒಟ್ಟು ಆದಾಯ ರೂ.41,000 ಕೋಟಿಗೂ ಹೆಚ್ಚು ತಲುಪುವ ಸಾಧ್ಯತೆ ಇದೆ.

ಆದಾಯ ಗುರಿ ಹೆಚ್ಚಳ ಎಂದರೆ ಮದ್ಯಪಾನ ಹೆಚ್ಚಾಗಿದೆ ಎಂಬುದಲ್ಲ. ಕಳೆದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಮದ್ಯಪಾನದ ಪ್ರಮಾಣ ಸ್ವಲ್ಪ ಕುಸಿದಿದೆಯೆಂದು ಹೇಳಲಾಗುತ್ತಿದೆ.

ಕಳೆದ ವರ್ಷ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾರತೀಯ ಉತ್ಪಾದಿತ ಮದ್ಯ (IML)ದ ಮೊದಲ ನಾಲ್ಕು ಸ್ಲ್ಯಾಬ್‌ಗಳ ಮೇಲೆ ಹೆಚ್ಚುವರಿ ಅಬಕಾರಿ ಸುಂಕವನ್ನು ರೂ.15ರಷ್ಟು ಹೆಚ್ಚಿಸಿದ್ದರು. ಕಡಿಮೆ ಬೆಲೆಯ ಈ ನಾಲ್ಕು ಸ್ಲ್ಯಾಬ್‌ಗಳೇ ರಾಜ್ಯದ ಒಟ್ಟು ಅಬಕಾರಿ ಆದಾಯದ ಸುಮಾರು ಶೇ,80-85 ವರೆಗೆ ಕೊಡುಗೆ ನೀಡುತ್ತವೆ.

ಮದ್ಯ ಮತ್ತು ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಹೆಚ್ಚಳದಿಂದ ಮದ್ಯಪಾನ ಪ್ರಮಾಣದ ಮೇಲೆ ಕೆಲವು ಪರಿಣಾಮ ಕಂಡಿದ್ದರೂ, ರಾಜ್ಯದ ಆದಾಯದಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದೆ.

ಮಾನವ ಉಪಯೋಗದ ಮದ್ಯಪಾನವು ಜಿಎಸ್‌ಟಿ ವ್ಯಾಪ್ತಿಗೆ ಒಳಪಡುವುದಿಲ್ಲ. ಇದರಿಂದ ಅಬಕಾರಿ ಸುಂಕ ಮತ್ತು ವ್ಯಾಟ್ ವಿಧಿಸುವ ಅಧಿಕಾರ ರಾಜ್ಯ ಸರ್ಕಾರಗಳ ಬಳಿಯೇ ಇದೆ. ಇದರಿಂದಾಗಿ ರಾಜ್ಯಗಳಿಗೆ ಆದಾಯ ಮತ್ತು ಹಣಕಾಸಿನ ಸ್ವಾಯತ್ತತೆಯನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತಿದೆ.

2016ರಲ್ಲಿ ಅಬಕಾರಿ ಆದಾಯ ಗುರಿ ರೂ.16,500 ಕೋಟಿ ಮಾತ್ರವಾಗಿತ್ತು. ಈಗ 2026-27ರಲ್ಲಿ ಅದನ್ನು ರೂ.45,000 ಕೋಟಿಗೆ ಹೆಚ್ಚಿಸುವ ಬಗ್ಗೆ ಚರ್ಚೆ ನಡೆಯುತ್ತಿರುವುದು 2016ರಿಂದ ಸುಮಾರು ಶೇ.150 ಏರಿಕೆಯಾಗುವುದನ್ನು ಸೂಚಿಸುತ್ತದೆ.



Previous Post Next Post