ಹೋಂ ಗಾರ್ಡ್ ನೇಮಕಾತಿ 2026.!10ನೇ ತರಗತಿ ಪಾಸ್ ಆದವರಿಗೆ ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ

ಪ್ರಸ್ತುತ ಇಂದಿನ ಹಿನ್ನೆಲೆ ಕಳೆದ ದಿನ ಹೋಂ ಗಾರ್ಡ್ ನೇಮಕಾತಿ 2026 ಕೇವಲ 10ನೇ ತರಗತಿ ಪಾಸ್ ಆದಂತ ಅಭ್ಯರ್ಥಿಗಳಿಗೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡುತ್ತಿದ್ದಾರೆ. 

ಹೌದು ನೀವೇನಾದರೂ ಈ ಒಂದು ಹೋಂ ಗಾರ್ಡ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದಾದರೆ ಇಂದಿನ ಈ ಒಂದು ಲೇಖನ ನಿಮಗಾಗಿ ಇದೆ ಯಾರು ಕೂಡ ಲೇಖನವನ್ನು ಅರ್ಧಂಬರ್ಧ ಓದಬೇಡಿ ಕೊನೆಯವರೆಗೂ ಓದಿ.

ಪ್ರಸ್ತುತ ಈ ಒಂದು ಹುದ್ದೆಗಳು ಖಾಲಿ ಇರುವುದು ಕರ್ನಾಟಕ ಸರ್ಕಾರದ ಅಧೀನದಲ್ಲಿರುವ ಕಾರವಾರ ಜಿಲ್ಲಾ ಗೃಹರಕ್ಷಕ ದಳದಿಂದ 2026ನೇ ಸಾಲಿಗೆ ಸಂಬಂಧಿಸಿದಂತೆ ಗೃಹರಕ್ಷಕ (Home Guard) ಹುದ್ದೆಗಳಿಗಾಗಿ ಅಧಿಕೃತ ನೇಮಕಾತಿ ಪ್ರಕಟಣೆ ಬಿಡುಗಡೆ ಮಾಡಲಾಗಿದೆ.

 ಈ ನೇಮಕಾತಿಯ ಅಡಿಯಲ್ಲಿ ಒಟ್ಟು 89 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಈ ಪ್ರಕಟಣೆ ವಿಶೇಷವಾಗಿ 10ನೇ ತರಗತಿ (SSLC) ಪಾಸ್ ಆದ ಯುವಕರ ಮತ್ತು ಯುವತಿಯರಿಗಾಗಿ ಅತ್ಯಂತ ಮಹತ್ವದ ಅವಕಾಶವಾಗಿದೆ. ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ, ನೇರವಾಗಿ ಡಾಕ್ಯುಮೆಂಟ್ ಪರಿಶೀಲನೆ ಹಾಗೂ ಸಂದರ್ಶನದ ಆಧಾರದಲ್ಲಿ ಆಯ್ಕೆ ನಡೆಯುವುದು ಈ ನೇಮಕಾತಿಯ ಪ್ರಮುಖ ವಿಶೇಷತೆ ಆಗಿದೆ.

 ಸಂಕ್ಷಿಪ್ತ ನೇಮಕಾತಿ ಅವಲೋಕನ:

ವಿವರ ಮಾಹಿತಿ

ಇಲಾಖೆ / ಸಂಸ್ಥೆ ಕಾರವಾರ ಜಿಲ್ಲಾ ಗೃಹರಕ್ಷಕ ದಳ, ಕರ್ನಾಟಕ ಸರ್ಕಾರ

ಉದ್ಯೋಗ ಪ್ರಕಾರ ರಾಜ್ಯ ಸರ್ಕಾರಿ (ತಾತ್ಕಾಲಿಕ)

ಹುದ್ದೆಯ ಹೆಸರು ಗೃಹರಕ್ಷಕ (Home Guard)

ಒಟ್ಟು ಹುದ್ದೆಗಳು 89

ಕೆಲಸದ ಸ್ಥಳ ಕಾರವಾರ, ಉತ್ತರ ಕನ್ನಡ ಜಿಲ್ಲೆ, ಕರ್ನಾಟಕ

ವೇತನ ಶ್ರೇಣಿ ಮಾಸಿಕ ಗೌರವ ವೇತನ (Honorarium) – ನಿಯಮಾನುಸಾರ

ಅರ್ಜಿ ವಿಧಾನ ಆಫ್‌ಲೈನ್ (ನೇರವಾಗಿ ಕಚೇರಿಗೆ ಸಲ್ಲಿಕೆ)

ಅರ್ಹತೆ 10ನೇ ತರಗತಿ ಪಾಸ್

ವಯೋಮಿತಿ 19 ರಿಂದ 50 ವರ್ಷ

ಕೊನೆಯ ದಿನಾಂಕ 10 ಮಾರ್ಚ್ 2026

ಅಧಿಕೃತ ವೆಬ್‌ಸೈಟ್ https://karnataka.gov.in

ಹುದ್ದೆಗಳ ವಿವರ:

ಈ ನೇಮಕಾತಿಯಲ್ಲಿ ಅಡಿಯಲ್ಲಿ ಒಟ್ಟು 89 ಗೃಹರಕ್ಷಕ ಹುದ್ದೆಗಳು ಲಭ್ಯವಿವೆ. ಹುದ್ದೆಗಳ ವರ್ಗವಾರು ವಿವರವನ್ನು ಅಧಿಕೃತ ಪ್ರಕಟಣೆಯಲ್ಲಿ ಸಂಪೂರ್ಣವಾಗಿ ಪ್ರಕಟಿಸಲಾಗಿಲ್ಲ. ಆದರೂ ಸಾಮಾನ್ಯವಾಗಿ ಸರ್ಕಾರಿ ನಿಯಮಾನುಸಾರ ಕೆಳಗಿನ ವರ್ಗಗಳಿಗೆ ಮೀಸಲಾತಿ ಅನ್ವಯವಾಗುತ್ತದೆ ಗಮನಿಸಬಹುದು ಈ ಕೆಳಗಡೆ ಇದೇ ಮಾಹಿತಿ.

ಸಾಮಾನ್ಯ ವರ್ಗ (General)

ಎಸ್‌ಸಿ (SC)

ಎಸ್‌ಟಿ (ST)

ಓಬಿಸಿ (OBC)

ಮಹಿಳಾ ಅಭ್ಯರ್ಥಿಗಳು

ಮಾಜಿ ಸೈನಿಕರು (Ex-servicemen)

ಅಂಗವಿಕಲ ಅಭ್ಯರ್ಥಿಗಳು (PH)

 ಅರ್ಹತಾ ಮಾನದಂಡಗಳು:

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಯು ಕನಿಷ್ಠ 10ನೇ ತರಗತಿ (SSLC) ಪಾಸ್ ಆಗಿರಬೇಕು.

ಮಾನ್ಯತೆ ಪಡೆದ ಮಂಡಳಿಯಿಂದ ಪಾಸ್ ಆಗಿರಬೇಕು.

ಕನ್ನಡ ಓದು, ಬರವಣಿಗೆ ಹಾಗೂ ಮಾತನಾಡುವ ಸಾಮರ್ಥ್ಯ ಹೊಂದಿರಬೇಕಾಗುತ್ತದೆ.

ವಯೋಮಿತಿ (Age Limit)

ಕನಿಷ್ಠ ವಯಸ್ಸು: 19 ವರ್ಷ

ಗರಿಷ್ಠ ವಯಸ್ಸು: 50 ವರ್ಷ

ವರ್ಗವಾರು ವಯೋಸಡಿಲಿಕೆ (Age Relaxation):

ವರ್ಗ ವಯೋಸಡಿಲಿಕೆ

SC / ST 5 ವರ್ಷ

OBC 3 ವರ್ಷ

ಅಂಗವಿಕಲ ಅಭ್ಯರ್ಥಿಗಳು ಸರ್ಕಾರದ ನಿಯಮಾನುಸಾರ

ಮಾಜಿ ಸೈನಿಕರು ನಿಯಮಾನುಸಾರ

 ವೇತನ ಮತ್ತು ಸೌಲಭ್ಯಗಳು:

ಈ ನೇಮಕಾತಿಯ ಅಡಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಶಾಶ್ವತ ವೇತನ ಮಾಪನದ ಬದಲು ಮಾಸಿಕ ಗೌರವ ವೇತನ ಒದಗಿಸಲಾಗುತ್ತದೆ.

ವೇತನ ವಿವರ:

ಮಾಸಿಕ ಗೌರವ ವೇತನ: ಸರ್ಕಾರಿ ನಿಯಮಾನುಸಾರ

ಕಾರ್ಯದ ಅವಧಿ ಮತ್ತು ಹಾಜರಾತಿಯ ಆಧಾರದ ಮೇಲೆ ಪಾವತಿ ಮಾಡಲಾಗುತ್ತೆ.

ಸೌಲಭ್ಯಗಳು:

ಕರ್ತವ್ಯ ಸಮಯದಲ್ಲಿ ಭದ್ರತಾ ಕಿಟ್ ಮತ್ತು ಯೂನಿಫಾರ್ಮ್

ಸರ್ಕಾರಿ ತರಬೇತಿ

ವಿಪತ್ತು ನಿರ್ವಹಣೆ, ಸಾರ್ವಜನಿಕ ಸುರಕ್ಷತೆ ಮತ್ತು ಪೊಲೀಸ್ ಸಹಕಾರದ ಅನುಭವ

ಭವಿಷ್ಯದಲ್ಲಿ ಸರ್ಕಾರಿ ಅಥವಾ ಭದ್ರತಾ ಕ್ಷೇತ್ರ ಉದ್ಯೋಗಗಳಿಗೆ ಉಪಯುಕ್ತ ಅನುಭವ

ಸಮಾಜ ಸೇವೆಯ ಗೌರವ ಮತ್ತು ಮಾನ್ಯತೆ

ಗಮನಿಸಿ: ಇದು ಶಾಶ್ವತ ಸರ್ಕಾರಿ ಉದ್ಯೋಗವಲ್ಲ, ತಾತ್ಕಾಲಿಕ ಹಾಗೂ ಸೇವಾ ಆಧಾರಿತ ಹುದ್ದೆಯಾಗಿರುತ್ತೆ.

ಅರ್ಜಿ ಶುಲ್ಕ ವಿವರ:

ವರ್ಗ ಶುಲ್ಕ

ಸಾಮಾನ್ಯ ₹0

OBC ₹0

SC / ST ₹0

ಮಹಿಳೆಯರು ₹0

ಯಾವುದೇ ಅರ್ಜಿ ಶುಲ್ಕ ಇಲ್ಲ. ಸಂಪೂರ್ಣ ಉಚಿತ ಅರ್ಜಿ.

ಆಯ್ಕೆ ಪ್ರಕ್ರಿಯೆ:

ಈ ನೇಮಕಾತಿಯಲ್ಲಿ ಯಾವುದೇ ಲಿಖಿತ ಪರೀಕ್ಷೆ ಇಲ್ಲ.

ಆಯ್ಕೆ ಹಂತಗಳು:

ಅರ್ಜಿ ಪರಿಶೀಲನೆ

ಡಾಕ್ಯುಮೆಂಟ್ ಪರಿಶೀಲನೆ (Document Verification)

ವೈಯಕ್ತಿಕ ಸಂದರ್ಶನ (Personal Interview)

ವೈದ್ಯಕೀಯ ತಪಾಸಣೆ (ಅಗತ್ಯವಿದ್ದಲ್ಲಿ)

ಅಂತಿಮ ಮೆರಿಟ್ ಪಟ್ಟಿ

👉 ಶಾರೀರಿಕ ಸಾಮರ್ಥ್ಯ, ಆರೋಗ್ಯ, ಶಿಸ್ತು ಮತ್ತು ವ್ಯಕ್ತಿತ್ವಕ್ಕೆ ಹೆಚ್ಚಿನ ಮಹತ್ವವಾಗಿರುತ್ತೆ.

ಪ್ರಮುಖ ದಿನಾಂಕಗಳು:

ಘಟನೆ ದಿನಾಂಕ

ಪ್ರಕಟಣೆ ಬಿಡುಗಡೆ 11 ಫೆಬ್ರವರಿ 2026

ಅರ್ಜಿ ಆರಂಭ 11 ಫೆಬ್ರವರಿ 2026

ಕೊನೆಯ ದಿನಾಂಕ 10 ಮಾರ್ಚ್ 2026

ಸಂದರ್ಶನ / ಪರಿಶೀಲನೆ ನಂತರ ಪ್ರಕಟಣೆ

 ಹಂತ ಹಂತವಾಗಿ ಅರ್ಜಿ ಸಲ್ಲಿಸುವ ವಿಧಾನ:

ಈ ನೇಮಕಾತಿಗೆ ಆನ್‌ಲೈನ್ ಅರ್ಜಿ ಇಲ್ಲ. ಕಡ್ಡಾಯವಾಗಿ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ನಿಮಗೆ ಕೆಳಗಡೆ ಅರ್ಜಿ ಸಲ್ಲಿಸುವ ವಿವಾಹ ಒದಗಿಸಲಾಗಿದೆ ಗಮನಿಸಿ.

ಅರ್ಜಿ ಸಲ್ಲಿಸುವ ಕ್ರಮ:

ಹಂತ 1: ಕಾರವಾರ ಜಿಲ್ಲೆಯ ಜಿಲ್ಲಾ ಗೃಹರಕ್ಷಕ ದಳ ಕಚೇರಿ, ನವೋದಯ ನಗರ, ಕಾರವಾರ ಗೆ ನೇರವಾಗಿ ಭೇಟಿ ನೀಡಿ.

ಹಂತ 2: ಅರ್ಜಿ ನಮೂನೆಯನ್ನು ಪಡೆಯಿರಿ.

ಹಂತ 3: ಅರ್ಜಿಯನ್ನು ಸಂಪೂರ್ಣವಾಗಿ ಹಾಗೂ ಸ್ಪಷ್ಟವಾಗಿ ಭರ್ತಿ ಮಾಡಿ.

ಹಂತ 4: ಅಗತ್ಯ ದಾಖಲೆಗಳ ಜೆರಾಕ್ಸ್ ಪ್ರತಿಗಳನ್ನು ಲಗತ್ತಿಸಿ.

ಹಂತ 5: ಭರ್ತಿ ಮಾಡಿದ ಅರ್ಜಿಯನ್ನು ಕಚೇರಿಯಲ್ಲಿ ನೇರವಾಗಿ ಸಲ್ಲಿಸಿ.

ಹಂತ 6: ಸಲ್ಲಿಕೆಯ ಸ್ವೀಕೃತಿ ಪಡೆಯಿರಿ.

 ಅಗತ್ಯ ದಾಖಲೆಗಳ ಪಟ್ಟಿ 

SSLC ಅಂಕಪಟ್ಟಿ

ಆಧಾರ್ ಕಾರ್ಡ್

ಜನನ ಪ್ರಮಾಣ ಪತ್ರ

ನಿವಾಸ ಪ್ರಮಾಣ ಪತ್ರ

ಜಾತಿ ಪ್ರಮಾಣ ಪತ್ರ (ಅಗತ್ಯವಿದ್ದಲ್ಲಿ)

ಆದಾಯ ಪ್ರಮಾಣ ಪತ್ರ

ಪಾಸ್‌ಪೋರ್ಟ್ ಗಾತ್ರದ ಫೋಟೋ

ಸಹಿ

ವೈದ್ಯಕೀಯ ಫಿಟ್ನೆಸ್ ಪ್ರಮಾಣ ಪತ್ರ

ಇತರೆ ಅಗತ್ಯ ದಾಖಲೆಗಳು

ಇನ್ನು ಹೆಚ್ಚಿನ ದಾಖಲೆಗಳು ಕೇಳಿದರೆ ಅಗತ್ಯವಾಗಿ ನೀಡಬೇಕು

ನಮ್ಮ ಕೊನೆ ಮಾತು:

ಕಾರವಾರ ಜಿಲ್ಲೆಯಲ್ಲಿ ವಾಸಿಸುವ 10ನೇ ತರಗತಿ ಪಾಸ್ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ಸರ್ಕಾರಿ ಸೇವಾ ಅವಕಾಶವಾಗಿದೆ. ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ ಪ್ರಕ್ರಿಯೆ ನಡೆಯುವುದರಿಂದ, ಉದ್ಯೋಗಾಸಕ್ತರಿಗೆ ವೇಗವಾಗಿ ಅವಕಾಶ ಸಿಗುತ್ತದೆ ಅಂತ ಹೇಳುತ್ತಾ ಇಂದಿನ ಈ ಒಂದು ಲೇಖನ ಇಲ್ಲಿಗೆ ಕೊನೆಗೊಳ್ಳುತ್ತೆ ಈ ಒಂದು ಲೇಖನವನ್ನು ನಿಮ್ಮ ಫ್ರೆಂಡ್ಸ್ ಗಳಿಗೆ ಶೇರ್ ಮಾಡಿ. 

ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು

Important Links Access

ಅಧಿಸೂಚನೆ PDF Click Here

ಅಧಿಕೃತ ವೆಬ್ಸೈಟ್ Click Here


 

Previous Post Next Post