ಮಹಿಳೆಯರಿಗೆ ಗುಡ್ ನ್ಯೂಸ್! ಉದ್ಯೋಗ ಪ್ರಾರಂಭಿಸಲು ಕೇಂದ್ರದಿಂದ ₹1.5 ಲಕ್ಷ ಸಹಾಯಧನ! Udyogini Yojana

By SVR Creations

ಮಹಿಳೆಯರಿಗೆ ತಮ್ಮ ಕಾಲ ಮೇಲೆ ತಾವು ನಿಲ್ಲಬೇಕೆಂಬ ಆಸೆ ಇರುತ್ತದೆ ಅದೇ ರೀತಿ ಏನಾದರೂ ಒಂದು ಉದ್ಯೋಗವನ್ನು ಮಾಡಿ ನಾವು ಕೂಡ ಸಮಾಜದಲ್ಲಿ ಮುಂಬರಬೇಕು ಎಂಬ ಮಹದಾಕಾಂಕ್ಷೆ ಎಲ್ಲಾ ಮಹಿಳೆಯರ ಮನಸ್ಸಲ್ಲಿ ಇದ್ದೇ ಇರುತ್ತದೆ. ಹೀಗೆ ಆಲೋಚಿಸುವ ಎಲ್ಲಾ ಮಹಿಳೆಯರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್, ಏಕೆಂದರೆ ಮಹಿಳೆಯರು ತಮ್ಮ ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾವೆಲ್ಲ ಅರ್ಹತೆಗಳು ಇರಬೇಕು?

ಮತ್ತು ಸಹಾಯಧನ ಎಷ್ಟು ಸಿಗಲಿದೆ? ಹಾಗೂ ಅಜ್ಜಿ ಹೇಗೆ ಸಲ್ಲಿಸುವುದು? ಈ ಎಲ್ಲಾ ವಿವರಗಳನ್ನು ಈ ಕೆಳಗಿನ ಲೇಖನದಲ್ಲಿ ನೀಡಲಾಗಿದೆ ಪೂರ್ತಿಯಾಗಿ ಓದಿರಿ ಸ್ನೇಹಿತರೆ ಹಾಗೂ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ.

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು ಏನು?

ಈ ಯೋಜನೆಗೆ ಅರ್ಜಿ ಸಲ್ಲಿಸುವಂತಹ ಮಹಿಳೆಯರು ಕಡ್ಡಾಯವಾಗಿ ನಮ್ಮ ಭಾರತದ ಖಾಯಂ ನಿವಾಸಿಗಳಾಗಿರಬೇಕು.

ಅದೇ ರೀತಿ ಅರ್ಜಿ ಸಲ್ಲಿಸುವಂತಹ ಅರ್ಹ ಮಹಿಳೆಯರಿಗೆ ಕನಿಷ್ಠ ವರ್ಷ 18 ರಿಂದ ಹಿಡಿದು ಗರಿಷ್ಠ ವರ್ಷ 55 ವರ್ಷದ ಒಳಗಿನ ಎಲ್ಲಾ ಮಹಿಳೆಯರು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು.

ಅರ್ಜಿ ಸಲ್ಲಿಸುವಂತಹ ಮಹಿಳೆಯರ ಬ್ಯಾಂಕ್ ಖಾತೆಯು ಕಡ್ಡಾಯವಾಗಿ ಅವರ ಆಧಾರ್ ಕಾರ್ಡಿಗೆ ಲಿಂಕ್ ಆಗಿರಬೇಕು.

ಅದೇ ರೀತಿ ಅರ್ಜಿ ಸಲ್ಲಿಸುವಂತಹ ಮಹಿಳೆಯರ ಕುಟುಂಬದ ವಾರ್ಷಿಕ ಆದಾಯವು 1.5 ಲಕ್ಷಕ್ಕಿಂತ ಕಡಿಮೆ ಇರಬೇಕು.

ವಿಧವೆಯರಿಗೆ ಹಾಗೂ ಅಂಗವಿಕಲತೆಯುಳ್ಳ ಮಹಿಳೆಯರಿಗೆ ಮೊದಲ ಆದ್ಯತೆ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಏನು?

ಈ ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸುವಂತಹ ಮಹಿಳೆಯರು ಕಡ್ಡಾಯವಾಗಿ ಈ ಕೆಳಗಿನ ಎಲ್ಲಾ ದಾಖಲೆಗಳನ್ನು ಹೊಂದಿರಬೇಕು.

ಆಧಾರ್ ಕಾರ್ಡ್

ವೋಟರ್ ಐಡಿ (Voter ID)

ಪಾಸ್ಪೋರ್ಟ್ ಸೈಜ್ ಫೋಟೋ (Photo)

ಆದಾಯ ಪ್ರಮಾಣ ಪತ್ರ

ಜಾತಿ ಪ್ರಮಾಣ ಪತ್ರ

ಬ್ಯಾಂಕ್ ಪಾಸ್ ಬುಕ್

ನೀವು ಮಾಡುವ ಉದ್ಯೋಗದ ಸಂಪೂರ್ಣ ವಿವರ ಹೊಂದಿರುವ ರಿಪೋರ್ಟ್ ಸಲ್ಲಿಸಬೇಕು!

ನೀವು ಯಾವ ಉದ್ಯೋಗವನ್ನು ಪ್ರಾರಂಭಿಸಬೇಕೆಂದು ಅಂದುಕೊಂಡಿದ್ದೀರಾ ಆ ಉದ್ಯೋಗದ ಬಗ್ಗೆ ಸಂಪೂರ್ಣ ಮಾಹಿತಿ ಇರುವಂತಹ ರಿಪೋರ್ಟನ್ನು ನೀವು ಅರ್ಜಿಯ ಜೊತೆ ಸಲ್ಲಿಕೆ ಮಾಡಬೇಕು.

ಅದೇ ರೀತಿ ನೀವು ಮಾಡುತ್ತಿರುವ ಉದ್ಯೋಗಕ್ಕೆ ಯಾವೆಲ್ಲ ಸಲಕರಣೆಗಳು ಬೇಕು ಹಾಗೂ ಮಷೀನ್ ಗಳು ಮತ್ತು ಯಾವಲ್ಲ ಉಪಕರಣಗಳು ಬೇಕು ಮತ್ತು ಅದಕ್ಕೆ ಎಷ್ಟು ಖರ್ಚಾಗುತ್ತದೆ ಎಂದು ತಿಳಿಸಬೇಕು.

ಟ್ರೈನಿಂಗ್ ಅಥವಾ ನಿಮಗೆ ಆ ಉದ್ಯೋಗದ ಅನುಭವ ಇರುವ ಎಕ್ಸ್ಪೀರಿಯನ್ಸ್ ಸರ್ಟಿಫಿಕೇಟ್ (Experience Certificate) ಅನ್ನು ಸಲ್ಲಿಸಬೇಕು.

ಸಹಾಯಧನ ಎಷ್ಟು ಸಿಗಲಿದೆ?

ಎಸ್ಸಿ/ಎಸ್‌ಟಿ SC/ST ಮಹಿಳೆಯರಿಗೆ:

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದಂತಹ ಎಲ್ಲ ಮಹಿಳೆಯರಿಗೆ ಸುಮಾರು: 1 ಲಕ್ಷದಿಂದ 2 ಲಕ್ಷದವರೆಗೆ ಸಹಾಯಧನ ಸಿಗಲಿದೆ.

ಇದರಲ್ಲಿ ಸುಮಾರು 50% ಸಬ್ಸಿಡಿಯನ್ನು ಕೇಂದ್ರ ಸರ್ಕಾರದಿಂದ ನೀಡಲಾಗುತ್ತದೆ.

OBC (ಒಬಿಸಿ) ಅಥವಾ ಸಾಮಾನ್ಯ ವರ್ಗದ ಮಹಿಳೆಯರಿಗೆ:

ಸಾಮಾನ್ಯ ವರ್ಗಕ್ಕೆ ಸೇರಿರುವಂತಹ ಮಹಿಳೆಯರಿಗೆ ಸುಮಾರು: 3 ಲಕ್ಷದವರೆಗೆ ಸಹಾಯಧನ ಸಿಗಲಿದೆ.

ಇದರಲ್ಲಿ ಸುಮಾರು 50% ನಷ್ಟು ಸಬ್ಸಿಡಿ ಅನ್ನು ಕೇಂದ್ರ ಸರ್ಕಾರದಿಂದ ನೀಡಲಾಗುತ್ತದೆ.

ಈ ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಈ ಯೋಜನೆಗೆ ಅರ್ಜಿ ಸಲ್ಲಿಸಲು ಆಸಕ್ತಿ ಇರುವಂತಹ ಮಹಿಳೆಯರು ಆನ್ಲೈನ್ನಲ್ಲಿಯೇ ನಾವು ಕೆಳಗೆ ತಿಳಿಸಿರುವಂತೆ ಸರಳವಾಗಿ ತಮ್ಮ ಅರ್ಜಿಯನ್ನು ಸಲ್ಲಿಸಬಹುದು:

ಮೊದಲನೆಯದಾಗಿ ತಮ್ಮ ಹತ್ತಿರದಲ್ಲಿರುವ (ಗ್ರಾಮ ಒನ್) ಅಥವಾ (ಬೆಂಗಳೂರು ಒನ್) ನಂತಹ ಅಥವಾ ಕಂಪ್ಯೂಟರ್ ಸೆಂಟರ್ ಗೆ / ಯಾವುದೇ ಒಂದು ಸಹಾಯ ಕೇಂದ್ರಕ್ಕೆ ಹೋಗಿ ಅಲ್ಲಿ ನಿಮ್ಮ ಅರ್ಜಿಯನ್ನು “ಸೇವಾ ಸಿಂಧು” ಸರ್ಕಾರದ ಅಧಿಕೃತ ವೆಬ್ಸೈಟ್ನ ಮೂಲಕ ತಮ್ಮ ಅರ್ಜಿಯನ್ನು ಸಲ್ಲಿಸಬಹುದು.