ಬಿಪಿಎಲ್ ಕಾರ್ಡ್‌ ಬಳಕೆದಾರರಿಗೆ ಅಕ್ಕಿ ಜೊತೆ ನೀಡುವ ಇಂದಿರಾ ಕಿಟ್‌ನಲ್ಲಿ ಏನೇನ್‌ ಇರುತ್ತೆ ಗೊತ್ತಾ?

By SVR Creations

Indira Food Kit 2026; ಇಷ್ಟು ದಿನ ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಡಿ (AnnaBhagya Yojane) ಅಕ್ಕಿ ಮಾತ್ರ ಕೊಡುತ್ತಿತ್ತು. ಇದೀಗ ಇಂದಿರಾ ಕಿಟ್ (Indira Kit) ಮೂಲಕ ಇನ್ನೂ ಕೆಲ ಅಗತ್ಯ ವಸ್ತುಗಳನ್ನು ನೀಡುತ್ತಿದೆ. ಇದಕ್ಕೆ ನೀವು ಅರ್ಹರಾ ಇಲ್ಲವಾ ಎನ್ನುವುದನ್ನು ಚೆಕ್ ಮಾಡಿಕೊಳ್ಳಿ. ಇಲ್ಲದಿದ್ದರೆ, ನೀವು ಅರ್ಹರಾಗಿದ್ದಾರೆ ಅಜ್ಜಿ ಸಲ್ಲಿಸಿ.

AnnaBhagya Yojane Indira Food Kit 2026: ರಾಜ್ಯ ಸರ್ಕಾರ ಹೊಸ ವರ್ಷಕ್ಕೆ ಹೊಸ ರೀತಿಯ ಉಡುಗೊರೆಯನ್ನು ನೀಡುತ್ತಿದೆ. ಅನ್ನಭಾಗ್ಯ ಯೋಜನೆಯಡಿ (AnnaBhagya Yojane) ಅಕ್ಕಿ ಮಾತ್ರ ನೀಡುತ್ತಿದ್ದ ರಾಜ್ಯ ಸರ್ಕಾರ (Karnataka Govt) ಮುಂದಿನ ತಿಂಗಳಿನಿಂದ ಇಂದಿರಾ ಕಿಟ್ (Indira Kit) ಮೂಲಕ ಇನ್ನಿತರ ಅಗತ್ಯ ಅಡುಗೆ ಸಾಮಾನುಗಳನ್ನು ನೀಡಲಿದೆ. ಹಾಗಾಗಿ ಇದು ರಾಜ್ಯದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ನಿಜವಾದ ಅರ್ಥದ ಹೊಸ ವರ್ಷದ ಉಡುಗೊರೆಯಾಗಿದೆ. 

ಇಂದಿರಾ ಕಿಟ್ ಮೂಲಕ ಯಾವ್ಯಾವ ಪದಾರ್ಥಗಳನ್ನು ನೀಡಲಾಗುತ್ತದೆ?

ಇಲ್ಲಿಯವರೆಗೆ ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್‌ (BPL) ಕುಟುಂಬದ ಸದಸ್ಯರನ್ನು ಲೆಕ್ಕಹಾಕಿ ತಲಾ 5 ಕೆಜಿ ಅಕ್ಕಿ ಕೊಡಲಾಗುತ್ತಿತ್ತು. ಇದೀಗ ಕೇವಲ ಅಕ್ಕಿ ತಿನ್ನುವುದರಿಂದ ಪೌಷ್ಟಿಕಾಂಶದ ಕೊರತೆ ಉಂಟಾಗಬಹುದು, ಪೌಷ್ಟಿಕತೆ ಹೆಚ್ಚಿಸುವುದು ಕೂಡ ಬಹಳ ಅಗತ್ಯ ಎನ್ನುವುದನ್ನು ಮನಗೊಂಡು ಅಕ್ಕಿಯ ಜೊತೆ ಇಂದಿರಾ ಕಿಟ್ ಮೂಲಕ ಇತರೆ ಅಡುಗೆ ಸಾಮಾನುಗಳನ್ನು ನೀಡಲಿದೆ. ಇಂದಿರಾ ಕಿಟ್‌ನಲ್ಲಿ 1 ಕೆಜಿ ಉತ್ತಮ ಗುಣಮಟ್ಟದ ಬೇಳೆ, 1 ಕೆಜಿ ಸಕ್ಕರೆ, 1 ಕೆಜಿ ಅಯೋಡಿನ್ ಯುಕ್ತ ಉಪ್ಪು ಹಾಗು ಮೊದಲಿನಂತೆ 5 ಕೆಜಿ ಅಕ್ಕಿಯನ್ನು ನೀಡಲಿದೆ. 

ಇಂದಿರಾ ಕಿಟ್ ನಿಂದ ಎಷ್ಟು ಜನರಿಗೆ ಲಾಭ?

ಇಂದಿರಾ ಕಿಟ್ ನೀಡುವುದರಿಂದ ರಾಜ್ಯದ ಸುಮಾರು 1.26 ಕೋಟಿ ಬಿಪಿಎಲ್ ಕುಟುಂಬಗಳಿಗೆ ನೇರವಾಗಿ ಲಾಭವಾಗಲಿದೆ. ಇದರಿಂದ ಬಡವರು, ರೈತರು ಮತ್ತು ಕಾರ್ಮಿಕರಿಗೆ ಅಡುಗೆ ಮನೆ ಖರ್ಚು ಕಮ್ಮಿಯಾಗುತ್ತದೆ. ಅವರ ಗಳಿಕೆ ಹಣವನ್ನು ಅವರು ಬೇರೆ ಯಾವುದಕ್ಕಾದರೂ ಬಳಸಿಕೊಳ್ಳಲು ಅನುಕೂಲವಾಗುತ್ತದೆ. 

ಇಂದಿರಾ ಕಿಟ್ ಅನ್ನು ಯಾವಾಗಿನಿಂದ ವಿತರಣೆ ಮಾಡಲಾಗುತ್ತದೆ?

ಆಹಾರ ಸಚಿವ ಕೆಎಚ್ ಮುನಿಯಪ್ಪ (Food Minister KH Muniyappa) ಅವರು ನೀಡಿರುವ ಮಾಹಿತಿಯ ಪ್ರಕಾರ, 2026ರ ಜನವರಿ ಅಥವಾ ಫೆಬ್ರವರಿ ತಿಂಗಳಿನಿಂದ ರಾಜ್ಯಾದ್ಯಂತ ಇಂದಿರಾ ಕಿಟ್ ವಿತರಣೆಯ ಕೆಲಸ ಶುರುವಾಗಲಿದೆ. ಈಗಾಗಲೇ ರಾಜ್ಯ ಸರ್ಕಾರ ಇಂದಿರಾ ಕಿಟ್ ವಿತರಣೆಗಾಗಿ ಅಗತ್ಯ ತಯಾರಿ ಮಾಡಿಕೊಂಡಿದೆ. ಟೆಂಡರ್ ಪ್ರಕ್ರಿಯೆಗಳು ಅಂತಿಮ ಹಂತದಲ್ಲಿದ್ದು ಶೀಘ್ರದಲ್ಲೇ ಹತ್ತಿರದ ನ್ಯಾಯಬೆಲೆ ಅಂಗಡಿಗಳಲ್ಲಿ ಇಂದಿರಾ ಕಿಟ್ ಸಿಗಲಿದೆ. 

ನೀವು ಇಂದಿರಾ ಕಿಟ್ ಪಡೆಯಲು ಅರ್ಹರಾ?

ಇತ್ತೀಚೆಗೆ ಅಕ್ರಮವಾಗಿ ಪಡೆದಿದ್ದ ಬಿಪಿಎಲ್ ಕಾರ್ಡ್‌ಗಳನ್ನು (BPL Card) ರಾಜ್ಯ ಸರ್ಕಾರ ರದ್ದು ಮಾಡಿತ್ತು. ಇದರಿಂದ ಕೆಲ ಅರ್ಹ ಫಲಾನುಭವಿಗಳಲ್ಲೂ ನಾವು ಇಂದಿರಾ ಕಿಟ್ ಪಡೆಯಲು ಅರ್ಹರೋ ಅಲ್ಲವೋ? ಫಲಾನುಭವಿಗಳ ಪಟ್ಟಿಯಲ್ಲಿ ನಮ್ಮ ಹೆಸರು ಇದೆಯೋ ಇಲ್ಲವೋ ಎನ್ನುವ ಗೊಂದಲ ಮತ್ತು ಆತಂಕ ಉಂಟಾಗಿತ್ತು. ಅಂಥವರು ಈಗಲೇ ಅದನ್ನು ಪರಿಹರಿಸಿಕೊಳ್ಳುವುದು ಒಳ್ಳೆಯದು. 

ಇಂದಿರಾ ಕಿಟ್ ಪಡೆಯಲು ಏನು ಮಾಡಬೇಕು? 

ಮೊದಲಿಗೆ ನಿಮ್ಮ ತಾಲೂಕಿನ ತಹಶೀಲ್ದಾರ್ ಕಚೇರಿಗೆಹೋಗಿ ಮರುಪರಿಶೀಲನೆಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ 15 ದಿನಗಳೊಳಗೆ ಅಧಿಕಾರಿಗಳು ನಿಮ್ಮ ಮನೆಗೆ ಭೇಟಿ ನೀಡಿ ಪರಿಶೀಲಿಸುತ್ತಾರೆ. ನೀವು ಇಂದಿರಾ ಕಿಟ್ ಪಡೆಯಲು ಅರ್ಹರೆಂದು ದೃಢಪಟ್ಟರೆ ತಕ್ಷಣವೇ ನಿಮ್ಮ ಬಿಪಿಎಲ್ ಕಾರ್ಡ್ ಮರುಸ್ಥಾಪನೆಯಾಗುತ್ತದೆ. ಒಂದೊಮ್ಮೆ ನೀವು ಐಷಾರಾಮಿ ಕಾರು ಅಥವಾ ದೊಡ್ಡ ಆಸ್ತಿ ಹೊಂದಿದ್ದು ಬಿಪಿಎಲ್ ಕಾರ್ಡ್ ಬಳಸುತ್ತಿದ್ದರೆ ಆಗ ಕಟ್ಟುನಿಟ್ಟಿನ ಕ್ರಮವನ್ನು ಎದುರಿಸಬೇಕಾಗುತ್ತದೆ.