EPFO News: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO)ಯಲ್ಲಿ ಪಿಎಫ್ (PF) ಖಾತೆ ಹೊಂದಿರುವವರಿಗೆ ಈ ಸಲ ಹೆಚ್ಚಿನ ಪ್ರಮಾಣದ ವಾರ್ಷಿಕ ಬಡ್ಡಿ ಸಿಗುವ ಸಾಧ್ಯತೆಗಳು ಗೋಚರಿಸುತ್ತಿವೆ.
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO)ಯಲ್ಲಿ ಪಿಎಫ್ (PF)ಖಾತೆ ಹೊಂದಿರುವವರಿಗೆ ಇದು ಸಿಹಿ ಸುದ್ದಿ. ಏಕೆಂದರೆ ಪಿಎಫ್ (PF) ಖಾತೆದಾರರಿಗೆ ಈ ವರ್ಷ ಹೆಚ್ಚಿನ ಪ್ರಮಾಣದ ವಾರ್ಷಿಕ ಬಡ್ಡಿ ಸಿಗುವ ಸಾಧ್ಯತೆಗಳಿವೆ. ಅದು ಎಷ್ಟು ಎಂದರೆ ಸುಮಾರು ಶೇಕಡಾ 8.75ರಷ್ಟು. ಇಷ್ಟು ದೊಡ್ಡ ಪ್ರಮಾಣದಲ್ಲಿ ವಾರ್ಷಿಕ ಬಡ್ಡಿ ಹೆಚ್ಚಳವಾದರೆ ತಮ್ಮ ಪಿಎಫ್ ಖಾತೆಯಲ್ಲಿ 5 ಲಕ್ಷ ರೂಪಾಯಿ ಹೊಂದಿರುವವರು ಸುಮಾರು 44,000 ರೂಪಾಯಿಯಷ್ಟು ಬಡ್ಡಿಯನ್ನು ಪಡೆಯಬಹುದಾಗಿದೆ.
ಹೆಚ್ಚು ಹಣ ಇದ್ದಲ್ಲಿ ಅಧಿಕ ಬಡ್ಡಿ:
5 ಲಕ್ಷ ರೂಪಾಯಿ ಹಣ ಇದ್ದರೆ ಸುಮಾರು 44,000 ರೂಪಾಯಿ ಬಡ್ಡಿ ಬರುತ್ತದೆ ಎನ್ನುವುದು ಒಂದು ಅಂದಾಜು ಮಾತ್ರ. 6 ಲಕ್ಷ ರೂಪಾಯಿ ಹಣ ಇದ್ದರೆ 51,000 ರೂಪಾಯಿ ಬಡ್ಡಿ ಸಿಗುತ್ತದೆ. ಹೀಗೆ ಖಾತೆಯಲ್ಲಿ ಎಷ್ಟು ಜಾಸ್ತಿ ಹಣ ಇರುತ್ತದೆಯೋ ಅಷ್ಟೇ ಪ್ರಮಾಣದಲ್ಲಿ ಹೆಚ್ಚಿನ ಬಡ್ಡಿ ಸಿಗುತ್ತದೆ. ಇದರಿಂದಾಗಿ ನಿವೃತ್ತಿ ಉಳಿತಾಯಕ್ಕೆ ಹತ್ತಾರು ಸಾವಿರ ರೂಪಾಯಿಗಳನ್ನು ಸೇರಿಸಲು ಅನುಕೂಲವಾಗುತ್ತದೆ.
ಸದ್ಯ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಸರ್ಕಾರದ ಮುಂದೆ ಇಂಥ ಪ್ರಸ್ತಾವನೆಯನ್ನು ಅಂದರೆ ಇಪಿಎಫ್ ಖಾತೆಯಲ್ಲಿ ಶೇಕಡಾ 8.75ರಷ್ಟು ಬಡ್ಡಿ ನೀಡುವ ಪ್ರಸ್ತಾವನೆಯನ್ನು ಇಟ್ಟಿದೆ ಎಂದು ತಿಳಿದುಬಂದಿದೆ. ಸರ್ಕಾರ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಸಲ್ಲಿಸಿರುವ ಪ್ರಸ್ತಾವನೆಗೆ ಅನುಮೋದನೆ ನೀಡಿದರೆ ಬಳಿಕ ಪರಿಷ್ಕೃತ ಬಡ್ಡಿ ಹಣ ಉದ್ಯೋಗಿಗಳ ಪಿಎಫ್ ಖಾತೆಗೆ ಜಮಾ ಆಗಲಿದೆ. ಜೊತೆಗೆ ಬಡ್ಡಿ ಜಮಾ ಆದ ಬಗ್ಗೆ ಪಿಎಫ್ ಪಾಸ್‌ಬುಕ್‌ಗಳಲ್ಲಿ ಅಟೋಮೆಟಿಕ್ ಆಗಿ ತೋರಿಸುತ್ತದೆ.
ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?
ಪಿಎಫ್ ಖಾತೆ ಹೊಂದಿರುವ ಸದಸ್ಯರು ತಮ್ಮ ಯುನಿವರ್ಸಲ್ ಅಕೌಂಟ್ ನಂಬರ್ (UAN) ಬಳಸಿಕೊಂಡು ಉಮಾಂಗ್ ಅಪ್ಲಿಕೇಶನ್ ಅಥವಾ EPFO ಸದಸ್ಯರ ಪೋರ್ಟಲ್ ಮೂಲಕ ತಮ್ಮ ಖಾತೆಯಲ್ಲಿರುವ ಬ್ಯಾಲೆನ್ಸ್ ಅಮೌಂಟ್ ಮತ್ತು ಹೊಸದಾಗಿ ಜಮಾ ಆಗಿರುವ ಬಡ್ಡಿ ಮೊತ್ತದ ವಿವರಗಳನ್ನು ಚೆಕ್ ಮಾಡಿಕೊಳ್ಳಬಹುದು. ಒಟ್ಟಾರೆಯಾಗಿ ಬಡ್ಡಿ ಮೊತ್ತವು ನಿಮ್ಮ ಪಿಎಫ್ ಬ್ಯಾಲೆನ್ಸ್ ಹಣವನ್ನು ಅವಲಂಬಿಸಿರುತ್ತದೆ. ಇದರಿಂದ ದೀರ್ಘಾವಧಿಯ ನಿವೃತ್ತಿ ಉಳಿತಾಯದ ಹಣವನ್ನು ಹೆಚ್ಚಿಸಬಹುದಾಗಿದೆ.
ಹಣ ಮತ್ತು ಬಡ್ಡಿ ಚೆಕ್ ಮಾಡುವ ಪ್ರಕ್ರಿಯೆಗಳು ಹೇಗಿರುತ್ತವೆ?
* ಪಿಎಫ್ ಖಾತೆದಾರರು ಉಮಾಂಗ್ (UMANG) ಅಪ್ಲಿಕೇಶನ್ ಮೂಲಕ ಲಾಗಿನ್ ಆಗಬೇಕು.
* ಬಳಿಕ ಇಪಿಎಫ್‌ಒ (EPFO) ಸೇವೆಗಳನ್ನು ಹುಡುಕಿ ಮತ್ತು ಆಯ್ಕೆಮಾಡಬೇಕು
* ತಮ್ಮ ಪಾಸ್‌ಬುಕ್ ವೀಕ್ಷಿಸಿ ಆಯ್ಕೆಯ ಮೇಲೆ ಟ್ಯಾಪ್ ಮಾಡಬೇಕು
* ಬಳಿಕ ನಿಗದಿತ ಜಾಗದಲ್ಲಿ UAN ನಮೂದಿಸಬೇಕು
* ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ OTP ನಮೂದಿಸಿ ಅಪ್‌ಲೋಡ್ ಮಾಡಬೇಕು
* ಬಳಿಕ ಪಾಸ್‌ಬುಕ್ ವೀಕ್ಷಿಸಿ ಬ್ಯಾಲೆನ್ಸ್ ಮತ್ತು ಬಡ್ಡಿಯನ್ನು ಚೆಕ್ ಮಾಡಬಹುದು.